ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೀಸಲು ಪಟ್ಟಿ ಪ್ರಕಟ: ಮಹಿಳೆಯರಿಗೆ ಹೆಚ್ಚು ಸೀಟು: ತಾಪಂ, ಜಿಪಂ ಎಲೆಕ್ಷನ್‌ʼಗೆ ಕೊನೆಗೂ ಸಿದ್ಧತೆ ಆರಂಭ

ರಾಜ್ಯದ 31 ಜಿಲ್ಲೆಗಳ ಎಲ್ಲಾ ತಾಲೂಕು ಪಂಚಾಯಿತಿಗಳಿಂದ ಒಟ್ಟು 3656 ಸ್ಥಾನಗಳಿವೆ. ಒಟ್ಟು 3656 ಸ್ಥಾನಗಳ ಪೈಕಿ ಅರ್ಧಕ್ಕಿಂತ ಹೆಚ್ಚು, ಅಂದರೆ 1905 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಕೊನೆಗೂ ರಾಜ್ಯ ಸರಕಾರ ಮುಂದಾಗಿದ್ದು, ಇದಕ್ಕೆ ಪೂರ್ವ ಸಿದ್ಧತೆಗಳನ್ನು ಸಹ ಮಾಡಿಕೊಳ್ಳುತ್ತಿದೆ.

ಬೆಂಗಳೂರು: ರಾಜ್ಯದಲ್ಲಿ ಬಹುದಿನಗಳಿಂದ ಬಾಕಿ ಉಳಿದಿರುವ ತಾಲೂಕು ಪಂಚಾಯಿತಿ ಚುನಾವಣೆಗಳಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದ ಎಲ್ಲಾ 31 ಜಿಲ್ಲೆಗಳ ತಾಲೂಕು ಪಂಚಾಯಿತಿಗಳ ಸದಸ್ಯ ಸ್ಥಾನಗಳ ಮೀಸಲು ಪಟ್ಟಿಯನ್ನು ಪ್ರಕಟಿಸಿದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾ ಯತ್ ರಾಜ್ ಅಧಿನಿಯಮ 1993ರ ಪ್ರಕರಣ 123ರಡಿ ಸರಕಾರವು ಈ ಅಧಿಸೂಚನೆಯನ್ನು ಹೊರಡಿಸಿದೆ. ಈ ಹಿಂದೆ ಹೊರಡಿಸಲಾಗಿದ್ದ ಅಧಿಸೂಚನೆ ಗಳನ್ನು ರದ್ದುಪಡಿಸಿ, ಹೊಸದಾಗಿ ಪ್ರವರ್ಗವಾರು ಮತ್ತು ಮಹಿಳಾ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ.

ರಾಜ್ಯದ 31 ಜಿಲ್ಲೆಗಳ ಎಲ್ಲಾ ತಾಲೂಕು ಪಂಚಾಯಿತಿಗಳಿಂದ ಒಟ್ಟು 3656 ಸ್ಥಾನಗಳಿವೆ. ಒಟ್ಟು 3656 ಸ್ಥಾನಗಳ ಪೈಕಿ ಅರ್ಧಕ್ಕಿಂತ ಹೆಚ್ಚು, ಅಂದರೆ 1905 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಕೊನೆಗೂ ರಾಜ್ಯ ಸರಕಾರ ಮುಂದಾ ಗಿದ್ದು, ಇದಕ್ಕೆ ಪೂರ್ವ ಸಿದ್ಧತೆಗಳನ್ನು ಸಹ ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ: Panchayat Season 5: ʻಪಂಚಾಯತ್ 5’ ರಿಲೀಸ್ ಡೇಟ್ ಬಿಗ್‌ ಅಪ್‌ಡೇಟ್

ಇದಕ್ಕೆ ಪೂರಕವೆಂಬಂತೆ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ನ ವರ್ಗವಾರು ಮೀಸಲಿರಿಸಿದ ಸ್ಥಾನಗಳ ಅಧಿಸೂಚನೆ ಪ್ರಕಟಿಸಿದೆ. ರಾಜ್ಯದಲ್ಲಿ ಒಟ್ಟು 1129 ಜಿಲ್ಲಾ ಪಂಚಾಯಿತಿ ಸ್ಥಾನಗಳಿದ್ದು, ಈ ಪೈಕಿ ಪರಿಶಿಷ್ಟ ಜಾತಿ 225, ಪರಿಶಿಷ್ಟ ಪಂಗಡಕ್ಕೆ 102 ಸ್ಥಾನ ಮೀಸಲು ಸ್ಥಾನಗಳಿವೆ. ಇನ್ನು ಹಿಂದುಳಿದ ವರ್ಗ ಎಲ್ಲಾ 183, ಹಿಂದುಳಿದ ವರ್ಗ ಬಿ 43 ಸ್ಥಾನ ಸಾಮಾನ್ಯ ವರ್ಗಕ್ಕೆ 576 ಸ್ಥಾನ ಮೀಸಲಿವೆ. ಇದರಲ್ಲಿ ಇದೀಗ ರಾಜ್ಯ ಸರಕಾರ ವರ್ಗವಾರು ಮೀಸಲು ಪ್ರಕಟಣೆ ಹೊರಡಿಸಿದೆ.

ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿಗಳ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲು ಪೂರ್ಣಗೊಂಡಿದ್ದು, ಪ್ರಾಥಮಿಕ ಕರಡು ಅಧಿಸೂಚನೆ ಹೊರ ಬೀಳಲಿದೆ. ನಮ್ಮ ಸರಕಾರ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಬದ್ಧವಾಗಿದ್ದು, ಕ್ಷೇತ್ರ ಪುನರ್ ವಿಂಗಡಣೆ ಮತ್ತು ಮೀಸಲಾತಿ ನಿಗದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ.

ಪ್ರಾಥಮಿಕ ಕರಡು ಅಧಿಸೂಚನೆ ಹೊರಡಿಸಿದ ತರುವಾಯ ಆಕ್ಷೇಪಣೆ ಸಲ್ಲಿಕೆಗೆ 10 ದಿನಗಳ ಕಾಲಾವಕಾಶ ನೀಡಲಾಗುವುದು. ನಂತರ ರಾಜ್ಯ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸ ಲಾಗುವುದು. ಚುನಾವಣೆ ನಡೆಸುವ ಜವಾಬ್ದಾರಿ ಆಯೋಗ ನಿರ್ವಹಿಸುತ್ತದೆ ಎಂದರು.

ಪ್ರವರ್ಗವಾರು ರಾಜ್ಯದ ಒಟ್ಟು ಹಂಚಿಕೆ

ಎಸ್‌ಸಿ: 733 (ಮಹಿಳೆಯರಿಗೆ 429)

ಎಸ್‌ಟಿ: 374 (ಮಹಿಳೆಯರಿಗೆ 287)

ಹಿಂದುಳಿದ ವರ್ಗ ‘ಅ’ : 508 (ಮಹಿಳೆಯರಿಗೆ 306)

ಹಿಂದುಳಿದ ವರ್ಗ ‘ಬ’ : 111 (ಮಹಿಳೆಯರಿಗೆ 64)

ಸಾಮಾನ್ಯ : 1910 (ಮಹಿಳೆಯರಿಗೆ 819)