ಬೆಂಗಳೂರು, ಡಿ.26: ಬೆಂಗಳೂರಿನಲ್ಲಿ (Bengaluru) ಮತ್ತೊಂದು ಭೀಕರವಾದ ಅಪಘಾತ (Road Accident) ಸಂಭವಿಸಿದ್ದು, ಮರಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ನಾಲ್ವರಿಗೆ ಗಂಭೀರವಾದ ಗಾಯಗಳಾಗಿವೆ. ದುರ್ಘಟನೆ ಬೆಂಗಳೂರಿನ ನೆಲಮಂಗಲ ತಾಲೂಕಿನ ತೋಟಗೇರಿ ಕ್ರಾಸ್‌ನಲ್ಲಿ ಸಂಭವಿಸಿದೆ. ಗೌರಿಬಿದನೂರು ಮೂಲದ ಹರೀಶ್ (39) ಹಾಗೂ ವೀರಭದ್ರ (80) ಸಾವನ್ನಪ್ಪಿದ್ದಾರೆ.
ಕಾರಿನಲ್ಲಿ ಇದ್ದ ಗೌರಮ್ಮ, ಮೈತ್ರಿ, ಸಿರಿ ಹಾಗೂ ವಂದನಾಗೆ ಗಂಭೀರವಾದ ಗಾಯಗಳಾಗಿದ್ದು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಾಸರಹಳ್ಳಿಯಲ್ಲಿ ಗೌರಿಬಿದನೂರು ಮೂಲದ ಕುಟುಂಬ ವಾಸವಿತ್ತು. ಮೃತ ಹರೀಶ್ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಜಮೀನು ನೋಡಿಕೊಂಡು ವಾಪಸ್ ಆಗುವಾಗ ಈ ಒಂದು ಅಪಘಾತ ಸಂಭವಿಸಿದೆ. ಘಟನೆ ಕುರಿತಂತೆ ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಕಾರು ಪಲ್ಟಿ, ಯುವಕ ಸಾವು, ಯುವತಿ ಗಂಭೀರ
ಮಂಡ್ಯ : ಕೆಆರ್ ಪೇಟೆ ತಾಲೂಕಿನಲ್ಲಿ ಭೀಕರವಾದ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ಹಾಕಲಾಗಿದ್ದ ರಾಗಿ ಒಕ್ಕಣೆ ಮೇಲೆ ಸಾಗಿ ಕಾರು ಪಲ್ಟಿಯಾಗಿದ್ದು, ಕಾರಿನಲ್ಲಿ ಇದ್ದ ಇಬ್ಬರಲ್ಲಿ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಕೆಆರ್ ಪೇಟೆ ತಾಲೂಕಿನ ಅಶೋಕನಗರದಲ್ಲಿ ಈ ಅಪಘಾತ ಸಂಭವಿಸಿದೆ. ಮೃತ ಯುವಕನನ್ನು ಪ್ರಜ್ವಲ್ (19) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ 26 ವರ್ಷದ ಕಾವ್ಯ ಎಂಬಾಕೆಯ ಸ್ಥಿತಿ ಗಂಭೀರವಾಗಿದೆ. ಕೆಆರ್ ಪೇಟೆ ಗ್ರಾಮಾಂತರ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದ್ದು, ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಚಿತ್ರದುರ್ಗ ದುರಂತ ; ಗಂಭೀರವಾಗಿ ಗಾಯಗೊಂಡಿದ್ದ ಬಸ್ ಚಾಲಕ ರಫೀಕ್ ಸಾವು