ಬೆಂಗಳೂರು, ಫೆ.16: ಮಹದೇವಪುರದ (bengaluru) ಹಳೆಹಳ್ಳಿ ರಸ್ತೆಯಲ್ಲಿ ಭೀಕರ ಅಪಘಾತ (Road accident) ಸಂಭವಿಸಿದ್ದು, ಅಪ್ಪ-ಅಮ್ಮನ ಜೊತೆ ಬೈಕ್ನಲ್ಲಿ ಬರ್ತಿದ್ದ 2 ವರ್ಷದ ಕಂದಮ್ಮ (child death) ಸಾವನ್ನಪ್ಪಿದೆ. ದೇವಸ್ಥಾನಕ್ಕೆ ಹೋಗಿ ವಾಪಸ್ ಬರ್ತಿದ್ದ ಬೈಕ್ ಸವಾರನಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಬೈಕ್ನಲ್ಲಿ ಮುಂದೆ ಕೂತಿದ್ದ ಮಗು ಕೆಳಗೆ ಬಿದ್ದಿದ್ದು, ಮತ್ತೊಂದು ಕಾರು ಮಗುವಿನ ಮೇಲೆಯೇ ಹರಿದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ.
ದೇವರ ದರ್ಶನ ಮುಗಿಸಿ ಬೈಕ್ನಲ್ಲಿ ವಾಪಸ್ ಬರುವಾಗ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಕೆಳಗೆ ಬಿದ್ದ ಎರಡು ವರ್ಷದ ಕಂದಮ್ಮನ ತಲೆ ಮೇಲೆಯೇ ಕಾರು ಹರಿದ ಪರಿಣಾಮ ಎರಡು ವರ್ಷದ ತ್ರಿಶೂಲ್ ಸಾವನ್ನಪ್ಪಿದ್ದಾನೆ. ನಿನ್ನೆ ಮಹಾಶಿವರಾತ್ರಿ ದಿನ ಸಂಜೆ 5.30ಕ್ಕೆ ಈ ಭೀಕರ ಅಪಘಾತ ಸಂಭವಿಸಿದ್ದು, ಕಣ್ಮುಂದೆಯೇ ಮಗು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲೂ ಸೆರೆಯಾಗಿದೆ.
ತ್ರಿಶೂಲ್ ತಂದೆ-ತಾಯಿ ಉಜ್ಜಯಿನಿಗೆ ಹೋಗಿದ್ದರು. ವಾಪಾಸ್ ಬರುವಾಗ ಮಗುವನ್ನು ಬೈಕಿನಲ್ಲಿ ಮುಂದೆ ಕೂರಿಸಿಕೊಂಡು ಬಂದಿದ್ರು. ಹಿಂದೆಯಿಂದ ಕಾರು ಡಿಕ್ಕಿ ಹೊಡೆದಾಗ ಮಗು ಕೆಳಗಡೆ ಬಿದ್ದಿದೆ. ಈ ವೇಳೆ ಮಗುವಿನ ಮೇಲೆ ಇನ್ನೊಂದು ಕಾರು ಹರಿದಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮಹದೇವಪುರದಲ್ಲಿ ಆಮೆಗತಿಯಲ್ಲಿ ರಸ್ತೆ ದುರಸ್ತಿ ನಡೆಯುತ್ತಿದ್ದು, ರಸ್ತೆ ಹದಗೆಟ್ಟ ಹಿನ್ನೆಲೆ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ.
Student Self Harming: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಶಾಲಾ ಕಟ್ಟಡದಿಂದ ಜಿಗಿದು ಆತ್ಮಹತ್ಯೆ
ಮಹದೇವಪುರ ವಿಧಾನಸಭಾ ಕ್ಷೇತ್ರ ಹಳೇಹಳ್ಳಿ ಪಂಚಾಯತ್ ವತಿಯಿಂದ ನಡೆಯುತ್ತಿರುವ ರಸ್ತೆ ಕಾಮಗಾರಿ ವಿಳಂಬದಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ. ಕಳೆದ 6 ತಿಂಗಳಿಂದ ರಸ್ತೆ ದುರಸ್ತಿ ಕಾಮಗಾರಿ ಕಾರ್ಯ ನಡೆದಿದ್ದು, ರಸ್ತೆ ಅವಸ್ಥೆ ಬಗ್ಗೆ ಪದೇ ಪದೇ ದೂರು ಕೊಟ್ಟು ಸ್ಥಳೀಯರು ಹೈರಾಣಾಗಿದ್ದಾರಂತೆ.
ಹೋಟೆಲ್ ಉದ್ಘಾಟನೆ ವೇಳೆ ಹೃದಯಾಘಾತದಿಂದ ಸಾವು
ದಾವಣಗೆರೆ: ಖಾಸಗಿ ಹೋಟೆಲ್ ಉದ್ಘಾಟನಾ ಕಾರ್ಯಕ್ರಮದ ವೇಳೆ ಹೃದಯಾಘಾತಕ್ಕೊಳಗಾಗಿ (Heart Attack) ಯುವಕ ಸಾವನ್ನಪ್ಪಿರುವ ಘಟನೆ ದಾವಣಗೆರೆ (Davanagere) ಜಿಲ್ಲೆ ಜಗಳೂರು ಪಟ್ಟಣದಲ್ಲಿ ನಡೆದಿದೆ. ಸುಭಾನ್ (25) ಮೃತ ಯುವಕ.
ಖಾಸಗಿ ಹೋಟೆಲ್ ಕಾರ್ಯಕ್ರಮಕ್ಕೆ ನೆನಪಿರಲಿ ಪ್ರೇಮ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು. ಈ ವೇಳೆ ಊಟಕ್ಕೆ ಕೂತಿದ್ದಾಗ ಹೃದಯಾಘಾತವಾಗಿದೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಯುವಕ ಕೊನೆಯುಸಿರೆಳೆದಿದ್ದಾನೆ. ಘಟನೆ ಸಂಬಂಧ ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.