ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Road Rage: ರಾಜಧಾನಿಯಲ್ಲಿ ರೋಡ್‌ ರೇಜ್‌, ಬಾನೆಟ್‌ ಮೇಲೆ ಗೂಡ್ಸ್‌ ಚಾಲಕನ ಎಳೆದೊಯ್ದ ಕಾರು ಚಾಲಕ!!

ಗಾಡಿ ಟಚ್ ಆಗಿದ್ದಕ್ಕೆ ಗಲಾಟೆ ಶುರುವಾಗಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ವಾಗ್ವಾದ ನಡೆಸುತ್ತಾ ಗೂಡ್ಸ್ ಚಾಲಕ ಕಾರಿನ ಬ್ಯಾನೆಟ್ ಮೇಲೆ ಕುಳಿತಿದ್ದಾನೆ. ಈ ಸಂದರ್ಭದಲ್ಲಿ ಗೂಡ್ಸ್‌ ಚಾಲಕ ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಗೊತ್ತಾಗಿದೆ. ಸಿಟ್ಟಿನಿಂದ ಕಾರು ಚಾಲಕ ಹಾಗೆಯೇ ಕಾರು ಚಲಾಯಿಸಿ, ಗೂಡ್ಸ್ ಚಾಲಕನನ್ನು ಎಳೆದೊಯ್ದಿದ್ದಾನೆ.

ರೋಡ್‌ ರೇಜ್‌ ಪ್ರಕರಣ

ಬೆಂಗಳೂರು, ಫೆ.12: ರಾಜಧಾನಿ (Bengaluru) ನಗರದಲ್ಲಿ ಒಂದಾದ ಮೇಲೊಂದು ರೋಡ್ ರೇಜ್ (Road Rage) ಪ್ರಕರಣಗಳು ನಡೆಯುತ್ತಿವೆ. ಇದೀಗ ಗಾಡಿ ಟಚ್ ಆಗಿದ್ದಕ್ಕೆ ರೊಚ್ಚಿಗೆದ್ದ ಕಾರು ಚಾಲಕನೊಬ್ಬ ಗೂಡ್ಸ್ ಚಾಲಕನನ್ನು ಬಾನೆಟ್‌ ಮೇಲೆ ಎಳೆದೊಯ್ದಿದಿರುವ ಘಟನೆ ನಡೆದಿದೆ.

ಬೆಂಗಳೂರಿನ ಹೆಚ್‌ಎಎಲ್‌ನಲ್ಲಿ (HAL) ಬುಧವಾರ (ಡಿ.11) ಮಧ್ಯಾಹ್ನ 12:45ರ ಸುಮಾರಿಗೆ ರೋಡ್ ರೇಜ್ ನಡೆದಿದೆ. ಕೆಎ 03 ಎನ್‌ಎನ್ 4501 ನೋಂದಣಿಯ ಮಾರುತಿ ಸುಜುಕಿ ಎಸ್‌ಐ6 ಕಾರು ಚಾಲಕ ದುರ್ವರ್ತನೆ ತೋರಿದ್ದಾನೆ. ಗಾಡಿ ಟಚ್ ಆಗಿದ್ದಕ್ಕೆ ಗಲಾಟೆ ಶುರುವಾಗಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ವಾಗ್ವಾದ ನಡೆಸುತ್ತಾ ಗೂಡ್ಸ್ ಚಾಲಕ ಕಾರಿನ ಬ್ಯಾನೆಟ್ ಮೇಲೆ ಕುಳಿತಿದ್ದಾನೆ. ಈ ಸಂದರ್ಭದಲ್ಲಿ ಗೂಡ್ಸ್‌ ಚಾಲಕ ಸಹ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಗೊತ್ತಾಗಿದೆ.

ಸಿಟ್ಟಿನಿಂದ ಕಾರು ಚಾಲಕ ಹಾಗೆಯೇ ಕಾರು ಚಲಾಯಿಸಿ, ಗೂಡ್ಸ್ ಚಾಲಕನನ್ನು ಎಳೆದೊಯ್ದಿದ್ದಾನೆ. ವ್ಯಕ್ತಿ ಕಿರುಚಾಡಿದ್ರೂ ಕಾರು ನಿಲ್ಲಿಸದೇ ಒಂದು ಕಿಲೋಮೀಟರ್ ತನಕ ಎಳೆದುಕೊಂಡು ಹೋಗಿದ್ದಾನೆ. ಘಟನೆಯ ದೃಶ್ಯವನ್ನು ಅಲ್ಲಿಯೇ ಇದ್ದ ಇನ್ನೋರ್ವ ಕಾರು ಚಾಲಕ ವಿಡಿಯೋ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Double Murder: ಬೆಂಗಳೂರಿನಲ್ಲಿ ಟೆಕ್ಕಿಯಿಂದ ಹಣಕಾಸಿಗಾಗಿ ತಂದೆ- ತಾಯಿಯ ಹತ್ಯೆ

ಹರೀಶ್‌ ಕೇರ

View all posts by this author