ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Darshan: ಒಂದೆಡೆ ದರ್ಶನ್‌ಗೆ ಸಿಗದ ಸೌಲಭ್ಯ, ಇನ್ನೊಂದೆಡೆ ರೌಡಿ ಬರ್ತ್‌ಡೇಗೆ ಸೇಬಿನ ಹಾರ: ಇದು ಪರಪ್ಪನ ಅಗ್ರಹಾರ!

Actor Darshan: ಒಂದು ಕಡೆ ನಟ ದರ್ಶನ್‌ಗೆ ಕೆಲವು ಸೌಲಭ್ಯಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗುತ್ತಿಲ್ಲ. ಇನ್ನೊಂದು ಕಡೆ ಕೊಲೆ ಆರೋಪಿ, ರೌಡಿಶೀಟರ್‌ ಸೀನ ಕೇಕ್‌ ಕತ್ತರಿಸಿ, ಸೇಬಿನ ಹಾರ ಹಾಕಿಸಿಕೊಂಡು ಬರ್ತ್‌ಡೇ ಆಚರಿಸಿಕೊಂಡಿದ್ದಾನೆ. ಈ ಘಟನೆಯ ಫೋಟೋ- ವಿಡಿಯೋ ವೈರಲ್‌ ಆಗಿದದು, ನಟ ದರ್ಶನ್‌ ವಕೀಲರಿಗೆ ಅಸ್ತ್ರವಾಗಲಿವೆ.

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder case) ಪ್ರಕರಣದಲ್ಲಿ ಆರೋಪಿಯಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ (Parappana Agrahara) ನಟ ದರ್ಶನ್ (Actor Darshan) , ತಮಗೆ ಕೆಲವು ಮೂಲ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದರು. ಕೋರ್ಟ್‌ನಲ್ಲಿ ಕೂಡ ಅವರ ಈ ಮನವಿಗೆ ಪುರಸ್ಕಾರ ಸಿಗದೆ, ವಿಚಾರಣೆ ಮುಂದೆ ಹೋಗಿದೆ. ಆದರೆ ಇದೀಗ, ರೌಡಿ ಶೀಟರ್‌ (Rowdy Sheeter) ಒಬ್ಬಾತ ಜೈಲಿನ ಒಳಗಡೆ ಭರ್ಜರಿಯಾಗಿ ಬರ್ತ್‌ಡೇ ಪಾರ್ಟಿ ಮಾಡಿಕೊಂಡು, ಸೇಬಿನ ಹಾರ ಕೂಡ ಹಾಕಿಸಿಕೊಂಡಿರುವುದು ವಿಡಿಯೋ ಸಮೇತ ವೈರಲ್‌ ಆಗಿದೆ.

ನಟೋರಿಯಸ್ ರೌಡಿಶೀಟರ್ ಶೀನಿವಾಸ್ ಅಲಿಯಾಸ್ ಗುಬ್ಬಚ್ಚಿ ಸೀನ ಜೈಲಲ್ಲೇ ಭರ್ಜರಿಯಾಗಿ ಬರ್ತ್ಡೇ ಸೆಲಬ್ರೇಟ್ ಮಾಡಿಕೊಂಡಿದ್ದಾನೆ. ಆ್ಯಪಲ್ ಹಾರ ಹಾಕಿಕೊಂಡು ಜೈಲಿನ ಬ್ಯಾರಕ್‌ನಲ್ಲಿ ಕೇಕ್ ಕಟ್ ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಈತ ಕೊಲೆ ಕೇಸ್‌ನಲ್ಲಿ ಜೈಲು ಸೇರಿರುವ ನಟೋರಿಯಸ್ ರೌಡಿಶೀಟರ್. ಈತನ ಬರ್ತ್ಡೇ ಪಾರ್ಟಿಯ ವಿಡಿಯೋ, ಪೋಟೋಗಳನ್ನು ಈತನ ಶಿಷ್ಯರು ಮೊಬೈಲ್‌ನಲ್ಲಿ ತೆಗೆದುಕೊಂಡು ಸೋಷಿಯಲ್ ಮೀಡಿಯಾದಲ್ಲಿಯೂ ಪೋಸ್ಟ್ ಮಾಡಿಕೊಂಡಿದ್ದಾರೆ. ಜೈಲಿನಿಂದಲೇ ವಿಡಿಯೋ, ಪೋಟೋ ಪೋಸ್ಟ್ ಆಗಿವೆ.

ಇದನ್ನೂ ಓದಿ: Actor Darshan: ಸವಲತ್ತು ಕೋರಿದ ದರ್ಶನ್‌ ಅರ್ಜಿ 9ಕ್ಕೆ ಮುಂದೂಡಿಕೆ, ʼಉಮೇಶ್‌ ರೆಡ್ಡಿಗೆ ಕೊಟ್ಟ ಸೌಲಭ್ಯ ದರ್ಶನ್‌ಗೆ ಏಕಿಲ್ಲ?ʼ ಎಂದ ವಕೀಲರು

ಈ ಹಿಂದೆ ದರ್ಶನ್‌ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ನಟ ಅಲ್ಲಿನ ರೌಡಿ ಶೀಟರ್‌ಗಳ ಜೊತೆ ಕುಳಿತು ಹರಟೆ ಹೊಡೆಯುತ್ತಿದ್ದುದು, ಸಿಗರೇಟ್ ಸೇದುತ್ತಿದ್ದುದು ಕಂಡುಬಂದು ಭಾರಿ ಚರ್ಚೆಯಾಗಿತ್ತು. ಇದು ವೈರಲ್‌ ಆದ ಬಳಿಕ ಜೈಲಾಧಿಕಾರಿಗಳು ಗಡಬಡಿಸಿ ಕ್ರಮಗಳನ್ನು ಕೈಗೊಂಡು, ಇದಕ್ಕೆಲ್ಲ ಬ್ರೇಕ್ ಹಾಕಲಾಗಿದೆ ಎಂದು ಸಮಜಾಯಿಷಿ ನೀಡಿದ್ದರು. ಸುಪ್ರೀಂ ಕೋರ್ಟ್‌ ಕೂಡ ಈ ವಿಚಾರದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ಅದರೆ ಇದೀಗ ಮತ್ತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಮುಂದುವರಿದಿರುವುದು ಕಂಡುಬಂದಿದೆ.

ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ADGP ದಯಾನಂದ್ ಅವರು ಇತ್ತೀಚೆಗೆ ಪರಪ್ಪನ ಅಗ್ರಹಾರಕ್ಕೆ ಬಂದು ಎಲ್ಲವನ್ನೂ ಖುದ್ದಾಗಿ ಪರಿಶೀಲನೆ ಮಾಡಿ ಹೋದ ನಂತರವೂ ಈ ಘಟನೆ ನಡೆದಿದೆ. ಸೌಲಭ್ಯ ಕೋರಿರುವ ದರ್ಶನ್ ಲಾಯರ್​ಗೆ ಈ ಘಟನೆ ಅಸ್ತ್ರವಾಗಬಹುದು ಎನ್ನಲಾಗಿದೆ. ಈಗಾಗಲೇ ದರ್ಶನ್ ಕಡೆಯಿಂದ ವಕೀಲ ಸುನೀಲ್ ಅವರು ಅರ್ಜಿ ಸಲ್ಲಿಸಿದ್ದು, ಜೈಲಿನ ಮೂಲ ಸೌಲಭ್ಯಗಳ ಬಗ್ಗೆ ಆಕ್ಷೇಪಿಸಿದ್ದರು. ಅಷ್ಟೇ ಅಲ್ಲದೆ ಕೋರ್ಟ್ ಸೂಚನೆ ಕೊಟ್ಟರೂ ಕೂಡಾ ಜೈಲು ಅಧಿಕಾರಿಗಳು ಯಾವುದೇ ಸೌಲಭ್ಯ ನೀಡುತ್ತಿಲ್ಲ ಎಂದು ಆರೋಪಿಸಿದ್ದರು.

ಹರೀಶ್‌ ಕೇರ

View all posts by this author