ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಿಒಪಿ ಗಣಪತಿ. ಕ್ಯಾರೆ ಎನ್ನದ ಸಂಘಟನೆ

ಜಿಲ್ಲೆಯಲ್ಲಿ ಕೂಡ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿರುವುದು ಸಂತೋಷದ ಸಂಗತಿ. ಆದರೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವೊಂದರಲ್ಲಿಯೇ ಸುಮಾರು 650ಕ್ಕೂ ಹೆಚ್ಚು ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು ಇವುಗಳನ್ನು ವೈಜ್ಞಾನಿಕವಾಗಿ ವಿಸರ್ಜನೆ ಮಾಡುವುದು ಜಿಲ್ಲಾಡಳಿತಕ್ಕೆ ಸವಾಲಿನ ಕೆಲಸವಾಗಿದೆ.

ಪಿಒಪಿ ಗಣಪತಿ. ಕ್ಯಾರೆ ಎನ್ನದ ಸಂಘಟನೆ

-

Ashok Nayak Ashok Nayak Aug 29, 2025 7:44 PM

ಮುನಿರಾಜು ಎಂ. ಅರಿಕೆರೆ, ಚಿಕ್ಕಬಳ್ಳಾಪುರ

ಯುವಜನತೆಗೆ ಗಣೇಶೋತ್ಸವ ಭರ್ಜರಿ ವೇದಿಕೆ

ಚಿಕ್ಕಬಳ್ಳಾಪುರ ಕ್ಷೇತ್ರವೊಂದರಲ್ಲೇ 650 ಮೂರ್ತಿಗಳು

ಭಕ್ತಿ ಶ್ರದ್ಧೆಗಳ ಗುಂಗಿನಲ್ಲಿ ಎಚ್ಚರ ತಪ್ಪಿದರೂ ಅಪಾಯ

ಜಿಲ್ಲಾಡಳಿತಕ್ಕೆ ಗಣಪತಿಯ ವಿಸರ್ಜನೆಯೇ ಸವಾಲು

ದೇಶಾದ್ಯಂತ ಗಶೇಶ ಚತುರ್ಥಿಯನ್ನು ಭಕ್ತಿಭಾವ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮನೆ, ಗಲ್ಲಿ, ಓಣಿ, ಮಠ ಮಂದಿರಗಳಲ್ಲಿ, ಸಾರ್ವನಿಕ ಸ್ಥಳಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ,ಅರ್ಚನೆಯೊಂದಿಗೆ ಗಣೇಶೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ.

ಭರ್ಜರಿ ಉತ್ಸವ

ಜಿಲ್ಲೆಯಲ್ಲಿ ಕೂಡ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿರುವುದು ಸಂತೋಷದ ಸಂಗತಿ. ಆದರೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರವೊಂದರಲ್ಲಿಯೇ ಸುಮಾರು 650ಕ್ಕೂ ಹೆಚ್ಚು ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು ಇವುಗಳನ್ನು ವೈಜ್ಞಾನಿಕವಾಗಿ ವಿಸರ್ಜನೆ ಮಾಡುವುದು ಜಿಲ್ಲಾಡಳಿತಕ್ಕೆ ಸವಾಲಿನ ಕೆಲಸವಾಗಿದೆ.

ಪಿಒಪಿ ಗಣಪತಿ ಹಾವಳಿ

ಜಿಲ್ಲಾಡಳಿತ ಮತ್ತು ಪರಿಸರ ಇಲಾಖೆ ಪಿಒಪಿ ಗಣಪತಿ ಪ್ರತಿಷ್ಠಾಪನೆ ಬೇಡವೆಂದು ಪರಿಪರಿಯಾಗಿ ಎಚ್ಚರಿಕೆ ನೀಡಿದರೂ, ಕ್ಯಾರೆ ಎನ್ನದ ಹಲವಾರು ಗಣಪತಿ ಸೇವಾ ಸಂಸ್ಥೆಗಳು ೧೦-೧೫ ಅಡಿಯಷ್ಟು ಬೃಹತ್ ಗಾತ್ರದ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸುತ್ತಿರುವುದು ಪರಿಸರ ಮಾಲಿನ್ಯ ಮತ್ತು ಜಲಮೂಲಗಳ ದೃಷ್ಟಿಯಲ್ಲಿ ನೋಡಿದರೆ ಆತಂಕ ಪಡುವ ಸಂಗತಿಯೇ ಸರಿ.

ಕೆರೆಗಳ ಹೂಳು ಗೋಳು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾವಿರಾರು ಕೆರೆಕುಂಟೆಗಳಿದ್ದರೂ ನದಿ ನಾಲೆಯ ಆಶ್ರಯವಿಲ್ಲದ ಬರಡು ಜಿಲ್ಲೆ ಎಂಬ ಅಪಖ್ಯಾತಿಗೆ ದಶಕಗಳ ಕಾಲದಿಂದ ಒಳಗಾದ ಜಿಲ್ಲೆ. ಅಂತರ್ಜಲವೇ ಇಲ್ಲಿನ ಜನತೆ ಜೀವನಾಡಿ. ಇಂತಲ್ಲಿ ಇರುವ ಕೆರೆಗಳು ಹೂಳು ತುಂಬಿಕೊಂಡು ತಮ್ಮ ಮೂಲ ಸ್ವರೂಪವನ್ನು ಕಳೆದುಕೊಂಡಿವೆ. ಸಣ್ಣ ಮಳೆಯಾದರೂ ಕೆರೆಗಳು ಕೋಡಿಬೀಳುತ್ತವೆ. ಒಮ್ಮೆ ಕೋಡಿ ಬಿದ್ದರೆ ಆರು ತಿಂಗಳಾದರೂ ಇಲ್ಲಿನ ನೀರು ಪಶು ಪಕ್ಷಿ ಜನಜಾನುವಾರುಗಳಿಗೆ ದಾಹ ನೀಗಿಸುತ್ತಿದ್ದ ಕಾಲ ಮರೆಯಾಗಿ ಒಂದೆರಡು ತಿಂಗಳಿಗೆ ಕೆರೆಯ ಒಡಲು ಬರಿದಾಗುತ್ತಿರುವುದು ಸುಳ್ಳಲ್ಲ.

ವಿಸರ್ಜನೆಯೇ ಸವಾಲು

ಜಿಲ್ಲೆಯಲ್ಲಿ ಶುದ್ದ ಕುಡಿಯುವ ನೀರಿಗೆ ಹಾಹಾಕಾರವಿದ್ದು ಅಂತರ್ಜಲದ ಮೇಲೆ ಆಧಾರವಾಗಿರುವ ಪರಿಸ್ಥಿತಿ ಇದ್ದರೂ ಸಾವಿರಾರು ಸಂಖ್ಯೆಯಲ್ಲಿ ಗಣಪತಿ ಮೂರ್ತಿಗಳನ್ನು ಭಕ್ತಿಗಿಂತ ಹೆಚ್ಚಾಗಿ ಪ್ರತಿಷ್ಠಾಪಿಸಿರುವುದು ಪೂಜಾಧಿ ಧಾರ್ಮಿಕ ಕಾರ್ಯಕ್ರಮಗಳ ನಂತರ ಅವುಗಳನ್ನು ಜೀವಜಲದ ಅಕ್ಷಯ ಪಾತ್ರೆಗಳಂತಿರುವ ಕೆರೆಕುಂಟೆಗಳಿಗೆ ಕೊಂಡೊಯ್ದು ವಿಸರ್ಜಿಸಿದರೆ ಅದರ ಒಡಲು ಏನಾಗುತ್ತದೆ? ಎಂಬುದನ್ನು ಯುವಜನತೆಗೆ ಅರ್ಥ ಮಾಡಿಸುವ ಅವಶ್ಯಕತೆಯಿದೆ.

ಗಣಪನ ಆರಾಧನೆ

ಯುವಜನತೆ ತಾವೇ ಮುಂದೆ ನಿಂತು ಗಣಪನ ಆರಾಧನೆಗೆ ತೊಡಗಿರುವುದನ್ನು ಕಾಣಬಹುದು. ಸಂತೋಷ ಸಂಭ್ರಮದಂತೆ ಸ್ನೇಹ ಸೌರ್ಹಾದತೆ, ಏಕತೆಗೆ ಕಾರಣವಾಗುವ ಗೌರಿಗಣೇಶ ಹಬ್ಬವು ಅಲ್ಲಲ್ಲಿ ಕೋಮುಗಲಭೆಗೂ ಕಾರಣವಾಗುವುದನ್ನು ಅಲ್ಲಗಳೆಯುವಂತಿಲ್ಲ.ಇಂತಲ್ಲಿ ಕಾನೂನು ಸುವ್ಯವಸ್ಥೆಯ ಪರಿಪಾಠವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲಿಲ್ಲ ಎಂದರೆ ಸಾಕು ಅಪಾಯಕ್ಕೆ ಆಹ್ವಾನ ನೀಡಿದಂತೆ ಆಗಿರುವ ಸಾಕಷ್ಟು ಉದಾಹರಣೆಗಳು ಕಣ್ಣಮುಂದಿವೆ.

ಪ್ಲಾಸ್ಟಿಕ್ ಮಂಟಪ

ಈ ಬಾರಿ ನಗರವೂವ ಸೇರಿ ಜಿಲ್ಲೆಯಾದ್ಯಂತ ಬಹುತೇಕ ಗಣಪತಿ ಸೇವಾ ಸಂಘಟನೆಗಳು ಗಣಪತಿ ಮಂಟಪಗಳನ್ನು ಪ್ಲಾಸ್ಟಿಕ್ ಟಾರ್ಪಲ್ ಬಳಸಿ ನಿರ್ಮಿಸಲಾಗಿದೆ. ಮಂಟಪ ಚೆನ್ನಾಗಿರಲೆಂದು ಬಟ್ಟೆ ಪೇಪರ್ ಬಳಸಿ ಅಲಂಕಾರ ಮಾಡಿದಂತೆ ಇದಕ್ಕೆ ಪ್ರಖರ ಬೆಳಕು ಚೆಲ್ಲುವ ಲೈಟ್‌ಗಳನ್ನೂ ಜೋಡಿ ಸಲಾಗಿದೆ. ಇದಕ್ಕೆ ಬೇಕಾದ ವಿದ್ಯುತ್ತನ್ನು ನೇರವಾಗಿ ವಿದ್ಯುತ್ ಕಂಬಗಳಿಂದಲೇ ಬಳಸಿಕೊಳ್ಳು ತ್ತಿರುವುದರಿಂದ ಅಪಾಯವನ್ನು ಅಲ್ಲಗಳೆಯುವಂತಿಲ್ಲ.ಮೇಲಾಗಿ ನಗರದ ಉದ್ದಗಲಕ್ಕೂ ಬೀದಿ ಬೀದಿಗಳಲ್ಲಿ,ರಸ್ತೆಯ ಇಕ್ಕೆಲಗಳಲ್ಲಿ ಮಾಡಿರುವ ವಿದ್ಯುತ್ ದೀಪಾಲಂಕಾರವೂ ಆಪಾಯಕ್ಕೆ ಆಹ್ವಾನ ನೀಡಿದಂತಿದೆ. ಬೆಸ್ಕಾಂ ಅಽಕಾರಿಗಳು ಇವುಗಳ ಮೇಲೆ ಹದ್ದಿನ ಕಣ್ಣಿಡದಿದ್ದರೆ ಅಪಾಯದ ಸಂಭವ ಅಲ್ಲಗಳೆಯುವಂತಿಲ್ಲ.

ಉಚಿತ ವಿತರಣೆಯ ಗತ್ತು

ಚಿಕ್ಕಬಳ್ಳಾಪುರ ನಗರದ ೩೧ ವಾರ್ಡುಗಳಲ್ಲಿ ಗಲ್ಲಿಗಲ್ಲಿಗೊಂದರಂತೆ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ. ಒಂದೆಡೆ ಭಗತ್ಸಿಂಗ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಂದೀಪ್‌ರೆಡ್ಡಿ, ನಗರ ಸೇರಿದಂತೆ ತಾಲೂಕಿನ ಹಳ್ಳಿಗಳಿಗೆ ಗಣಪತಿ ಮೂರ್ತಿಗಳನ್ನು ಉಚಿತವಾಗಿ ವಿತರಣೆ ಮಾಡಿದರೆ,ನಾವೇನು ಕಮ್ಮಿ ಎಂಬಂತೆ ಸಂಸದ ಸುಧಾಕರ್, ಶಾಸಕ ಪ್ರದೀಪ್ ಈಶ್ವರ್ ಕೂಡ ಮೂರ್ತಿಗಳನ್ನು ಯುವಕ ಸಂಘಗಳಿಗೆ ಉಚಿತವಾಗಿ ಿತರಣೆ ಮಾಡಿರುವುದೇ ಈ ಬಾರಿ ಸಾವಿರಾರು ಮೂರ್ತಿಗಳು ಪ್ರತಿಷ್ಠಾಪನೆ ಮಾಡಲು ಕಾರಣವಾಗಿದೆ ಎನ್ನಲಾಗುತ್ತಿದೆ.

ಎತ್ತರದ ಮೂರ್ತಿಗಳು

ಇದೇ ಮೊದಲ ಬಾರಿಗೆ ನಗರದ ಹತ್ತಾರು ಕಡೆ ೧೫ ಅಡಿಗೂ ಹೆಚ್ಚಿನ ಎತ್ತರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ವಾಪಸಂದ್ರ, ಮುನ್ಸಿಪಲ್ ಬಡಾವಣೆ,ಮಹಾಕಾಳಿ ದೇವಾಲಯ, ರೈಲ್ವೇಸ್ಟೇಷನ್ ರಸ್ತೆ, ತರಕಾರಿ ಮಾರುಕಟ್ಟೆ,ಪ್ರಶಾಂತ್ ನಗರ ಸೇರಿ ಹಲವೆಡೆ ಆಳೆತ್ತರದ ಬೃಹತ್ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಇವುಗಳ ಎತ್ತರದಷ್ಟು ಆಳದ ಕೆರೆಗಳೇ ಜಿಲ್ಲೆಯಲ್ಲಿ ಇಲ್ಲವಾಗಿದೆ. ಇರುವ ಕೆರೆಗಳಲ್ಲಿ ಈ ಮೂರ್ತಿಗಳನ್ನು ಹಾಗೆಯೇ ಮುಳುಗಿಸಲಾಗದು,ಬದಲಿಗೆ ಮಲಗಿಸಿ ವಿಸರ್ಜನೆ ಮಾಡಬೇಕಾದ ಪರಿಸ್ಥಿತಿಯಿದ್ದು ಇವು ನೀರಿನಲ್ಲಿ ಕರಗಲು ಕನಿಷ್ಟ ವಾರವಾದರೂ ಬೇಕಾಗುತ್ತದೆ. ಇದನ್ನು ಸ್ಥಳಿಯ ನಗರಾಡಳಿತ ಯಾವ ರೀತಿ ನಿಭಾಯಿಸುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.

ಎಚ್ಚರ ಅಗತ್ಯ

ನೆರೆಯ ಹೈದರಾಬಾದಿನಲ್ಲಿ ಬುಧವಾರ ಗಣಪತಿ ಮೂರ್ತಿಗೆ ವಿದ್ಯುತ್‌ತಂತಿಗೆ ತಾಗಿ ೧೫ ಮಂದಿ ಏಕಕಾಲಕ್ಕೆ ಜೀವ ಚೆಲ್ಲಿದ ಪ್ರಸಂಗ ದೇಶವನ್ನು ಬೆಚ್ಚಿಬೀಳಿಸಿದೆ. ಹಾಗೇ ಗಣೇಶೋತ್ಸವಕ್ಕೆ ಮುಂದಾಗಿರುವ ಯುವಜನತೆಗೆ ತಕ್ಕ ಪಾಠದಂತಿದೆ.

ಕಾಳಜಿಯಿರಲಿ

ಇತ್ತೀಚಿನ ದಿನಗಳಲ್ಲಿ ಗಣೇಶೋತ್ಸವ ಆಚರಣೆಗಳು ಧಾರ್ಮಿಕ ಆವರಣದಿಂದ ದೂರ ಸರಿದು, ವೈಭವದ ಆಚರಣೆಗೆ ಮತ್ತು ಪ್ರದರ್ಶನಕ್ಕೆ ಒತ್ತು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂಬ ಮಾತುಗಳಿಗೆ ಬರವಿಲ್ಲ.ಪರಿಸರಕ್ಕೆ ಹಾನಿಯಾಗದಂತೆ,ಸಾರ್ವಜನಿಕರಿಗೆ ತೊಂದರೆಯಾಗ ದಂತೆ ಆಚರಣೆಗೆ ಒತ್ತು ನೀಡುವುದು ಎಲ್ಲರ ಕರ್ತವ್ಯವಾಗಬೇಕಿದೆ.ಅಬ್ಬರದ ಸಂಗೀತ, ಕಿವಿ ಗಡಚಿಕ್ಕುವ ಪಟಾಕಿಗಳ ಸಿಡಿತ,ಬಾಣ ಬಿರುಸುಗಳ ಹಾರಾಟ,ಹಾಡು ಕುಣಿತಗಳ ಮೇಲಾಟವೇ ಮೇಳೈಸಿ, ಜನತೆಗೆ ಕಿರಿಕಿರಿಯಾಗದಂತೆ ನೋಡಿಕೊಳ್ಳುವ ಕಾಳಜಿ ತೋರುವುದು ಅಗತ್ಯ.

ಪ್ರತಿ ವರ್ಷದಂತೆ ಈ ಬಾರಿಯು ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಸಂದರ್ಭದಲ್ಲಿ ಸಾರ್ವಜನಿಕರು ಪ್ಲಾಸ್ಟರ್ ಆ- ಪ್ಯಾರಿಸ್ (ಪಿ.ಒ.ಪಿ) ಮತ್ತು ಬಣ್ಣದ ವಿಗ್ರಹಗಳನ್ನು ಸ್ಥಾಪಿಸಿ, ಪೂಜಿಸಿದ ನಂತರ ಕೆರೆ/ಬಾವಿ ಹಾಗೂ ಇನ್ನಿತರೆ ನೈಸರ್ಗಿಕ ಜಲಮೂಲಗಳಿಗೆ ವಿಸರ್ಜಿಸುವುದು ವಾಡಿಕೆ. ಇದರಿಂದಾಗಿ ನೈಸರ್ಗಿಕ ಜಲಮೂಲಗಳು ಕಲುಷಿತಗೊಂಡು ರಾಸಾಯನಿಕ ಗುಣಗಳು ಮಾರ್ಪಟ್ಟು ಪರಿಸರದ ಮೇಲೆ ಪರಿಣಾಮ ಉಂಟಾಗುವುದಲ್ಲದ ಜಲಚರಗಳ ಜೀವಕ್ಕೆ ಅಪಾಯವಾಗುತ್ತದೆ. ಅಲ್ಲದೆ ಸಾರ್ವಜನಿಕ ಆರೋಗ್ಯಕ್ಕೂ ಧಕ್ಕೆ ಉಂಟಾಗುತ್ತದೆ. ಆದ್ದರಿಂದ ಸಾರ್ವಜನಿಕರು ಕೆಲವು ಉಪ ಕ್ರಮಗಳನ್ನು ಅನುಸರಿಸಿ ಪರಿಸರ ಸ್ನೇಹಿ ಗೌರಿಗಣೇಶ ಹಬ್ಬ ಆಚರಿಸಿ ನೈಸರ್ಗಿಕ ಜಲ ಸಂಪನ್ಮೂಲಗಳನ್ನು ಸಂರಕ್ಷಿಸಲು ಸಹಕರಿಸಬೇಕಾಗಿ ಕೋರಿದೆ.

*

ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ಬಣ್ಣ ಲೇಪಿತವಾದ ಗಣಪತಿಗಳನ್ನು ತಯಾರಿಸಬಾರದು, ಮಾರಾಟ ಮಾಡಬಾರದು. ಬಣ್ಣ ಲೇಪಿತ ಗಣಪನ ವಿಸರ್ಜನೆ ಕೂಡ ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಐ.ಪಿ.ಎಸ್ ಸೆಕ್ಷನ್ ೧೮೬೦ ರ ಪ್ರಕಾರ ಕ್ರಮ ತೆಗೆದುಕೊಳ್ಳ ಲಾಗುವುದು.

-ಪಿ.ಎನ್.ರವೀಂದ್ರ ಜಿಲ್ಲಾಽಕಾರಿ ಚಿಕ್ಕಬಳ್ಳಾಪುರ