Sankranti Shopping 2026: ಎಲ್ಲೆಡೆ ಸಂಕ್ರಾಂತಿಯ ಭರ್ಜರಿ ಶಾಪಿಂಗ್
Sankranti Shopping: ವರ್ಷದ ಮೊದಲ ಹಬ್ಬ ಸಂಕ್ರಾಂತಿಯ ಶಾಪಿಂಗ್ ಎಲ್ಲೆಡೆ ಭರ್ಜರಿಯಾಗಿ ನಡೆಯುತ್ತಿದೆ. ಹಬ್ಬಕ್ಕೆ ಅಗತ್ಯವಿರುವ ಎಳ್ಳು-ಬೆಲ್ಲ, ಸಕ್ಕರೆ ಅಚ್ಚಿನ ಪ್ಯಾಕೆಟ್‌ಗಳು, ಡಿಸೈನರ್ ಬಾಕ್ಸ್‌ಗಳು, ಸಿಂಗಾರಕ್ಕಿಡುವ ಮಣ್ಣಿನ ಕುಡಿಕೆಗಳು ಸೇರಿದಂತೆ ಟ್ರೆಡಿಷನಲ್ ಉಡುಗೆ-ತೊಡುಗೆಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಈ ಕುರಿತಂತೆ ಇಲ್ಲಿದೆ ವರದಿ.
ವರ್ಷದ ಮೊದಲ ಹಬ್ಬ ಸಂಕ್ರಾಂತಿಯ ಶಾಪಿಂಗ್ ಎಲ್ಲೆಡೆ ಭರ್ಜರಿಯಾಗಿ ನಡೆಯುತ್ತಿದೆ. ಹಬ್ಬದ ಶಾಪಿಂಗ್ ಕೇವಲ ಎಥ್ನಿಕ್ ವೇರ್‌ಗಳ ಖರೀದಿಗೆ ಸೀಮಿತವಾಗಿಲ್ಲ! ಬದಲಿಗೆ ಹಬ್ಬಕ್ಕೆ ಅಗತ್ಯವಿರುವ ಎಳ್ಳು-ಬೆಲ್ಲ, ಸಕ್ಕರೆ ಅಚ್ಚಿನ ಪ್ಯಾಕೆಟ್‌ಗಳು, ಡಿಸೈನರ್ ಬಾಕ್ಸ್‌ಗಳು, ಸಿಂಗಾರಕ್ಕಿಡುವ ಮಣ್ಣಿನ ಕುಡಿಕೆಗಳು ಸೇರಿದಂತೆ ನಾನಾ ಅಲಂಕಾರಿಕ ಸಾಮಗ್ರಿಗಳು ಮಾರಾಟವಾಗುತ್ತಿವೆ ಎನ್ನುತ್ತಾರೆ ಮಾರಾಟಗಾರರು.
ಸಂಕ್ರಾಂತಿಗೆ ಎಥ್ನಿಕ್‌ವೇರ್ಸ್
ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಟ್ರೆಡಿಷನಲ್ ಲುಕ್ ನೀಡುವ ಟ್ರೆಡಿಷನಲ್ ಲೆಹೆಂಗಾ, ಸೀರೆ, ಲಂಗ-ದಾವಣಿ ಬಂದಿವೆ. ಪುರುಷರ ಹಾಗೂ ಚಿಣ್ಣರಿಗೂ ಬಗೆಬಗೆಯ ಕಲರ್‌ಫುಲ್ ಎಥ್ನಿಕ್‌ವೇರ್‌ಗಳು ಬಿಡುಗಡೆಗೊಂಡಿವೆ.
ಹೋಮ್‌ಮೇಡ್ ಎಳ್ಳು-ಬೆಲ್ಲದ ರೆಡಿ ಪ್ಯಾಕೆಟ್ಸ್
ಹೋಮ್‌ಮೇಡ್ ಹಾಗೂ ಅರ್ಗಾನಿಕ್‌ನ ಎಳ್ಳು-ಬೆಲ್ಲದ ರೆಡಿ ಪಾಕೆಟ್‌ಗಳು ದೊರೆಯುತ್ತಿವೆ. ಜಯನಗರ, ಮಲ್ಲೇಶ್ವರ, ಗಾಂಧೀಬಜಾರ್, ಬಸವನಗುಡಿಯ ಅಂಗಡಿಗಳಲ್ಲಿ ಮಾತ್ರವಲ್ಲ, ಬ್ಲಿಂಕ್ಇಟ್, ಬಿಗ್ ಬಾಸ್ಕೆಟ್, ಇನ್ಸ್ಟಾ ಮಾರ್ಟ್‌ನಂತಹ ಆನ್‌ಲೈನ್ ಶಾಪ್‌ಗಳು ಕೂಡ ಹಬ್ಬ ಆಚರಿಸುವವರ ಮನೆ ಬಾಗಿಲಿಗೆ ಇವೆಲ್ಲವನ್ನು ಡಿಲೆವರಿ ನೀಡುತ್ತಿವೆ.
ಅಲಂಕಾರಿಕ ಸಾಮಗ್ರಿಗಳು
ಹಬ್ಬದ ಸಿಂಗಾರಕ್ಕೆ ಬಳಸುವ ಮಡಿಕೆ-ಕುಡಿಕೆಗಳು, ವೆರೈಟಿ ಹೂಗಳು ಮಾತ್ರವಲ್ಲ, ಪದೇ ಪದೇ ಬಳಸಬಹುದಾದ ಬಣ್ಣಬಣ್ಣದ ಆರ್ಟಿಫಿಶಿಯಲ್ ತೋರಣ-ಹೂಗಳು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ.
ಕಲರ್ ಇಲ್ಲದ ಸಕ್ಕರೆ ಅಚ್ಚು
ಇತ್ತೀಚೆಗೆ ಕಲರ್ ಇಲ್ಲದ ಸಕ್ಕರೆ ಅಚ್ಚಿನ ಪ್ಯಾಕೆಟ್‌ಗಳು ಸಿಗುತ್ತಿವೆ. ಇನ್ನು, ಪ್ರಿಸರ್ವೆಟಿವ್ಸ್ ಬಳಸದಂತವು, ಡಯಾಬಿಟೀಸ್ ಇರುವವರು ರುಚಿ ನೋಡಬಹುದಾದಂತಹ ಸ್ವಿಟ್ ಬಳಸದ ರೆಡಿಮೇಡ್ ಸಕ್ಕರೆ ಅಚ್ಚುಗಳು ದೊರೆಯುತ್ತಿವೆ.
ಡಿಸೈನರ್ ಗಿಫ್ಟ್ ಐಟಂಗಳು
ಎಳ್ಳು-ಬೆಲ್ಲ ಹಂಚುವ ಪುಟ್ಟ ಪುಟ್ಟ ಡಿಸೈನರ್ ಬಾಕ್ಸ್‌ಗಳು ಸೇರಿದಂತೆ ನಾನಾ ಬಗೆಯ ಅತ್ಯಾಕರ್ಷಕ ಐಟಂಗಳು ಕೂಡ ಈ ಬಾರಿ ಮಾರಾಟ ಹೆಚ್ಚಿಸಿಕೊಂಡಿವೆ.