ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‌ಸರ್ವರ್ ಸಮಸ್ಯೆ: ನೋಂದಣಿ ಸ್ಥಗಿತ

ಸರ್ವರ್ ಸಮಸ್ಯೆಯಿಂದ ಇ- ಖಾತೆಯೂ ಸಿಗುತ್ತಿಲ್ಲ. ಇದ ರೊಂದಿಗೆ ತಮ್ಮದೇ ಖಾತೆಯಲ್ಲಿ ಆಗಿರುವ ಲೋಪದೋಷವನ್ನು ಸರಿಪಡಿಸಿಕೊಳ್ಳಲು ಆಗದೇ ತೀವ್ರ ಸಮಸ್ಯೆಯನ್ನು ಸಾರ್ವಜನಿಕರು ಅನುಭವಿಸು ತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಸರ್ವರ್ ಸಮಸ್ಯೆ ಎನ್ನುವ ಹಾರಿಕೆ ಉತ್ತರ ನೀಡುತ್ತಿದ್ದಾರೆ ಹೊರತು, ತಾಂತ್ರಿಕವಾಗಿ ಆಗುತ್ತಿರುವ ಸಮಸ್ಯೆಗಳೇನು ಎನ್ನುವ ಸ್ಪಷ್ಟನೆಯನ್ನು ನೀಡುತ್ತಿಲ್ಲ

ಆಸ್ತಿ ಮಾಹಿತಿಯಲ್ಲಿ ಪಾರದರ್ಶಕತೆ ತರಲು ಹೊರಟ ಸಾಫ್ಟ್‌ʼವೇರ್‌ಗೆ ಸಹಕರಿಸದ ಸರ್ವರ್

ಆರು ತಿಂಗಳಿನಿಂದ ಪ್ರಯತ್ನಿಸುತ್ತಿದ ರೂ ಖಾತೆ ಬದಲಾಗುತ್ತಿಲ್ಲ: ಸಾರ್ವಜನಿಕರ ಆಕ್ರೋಶ

ಬೆಂಗಳೂರು: ಆಸ್ತಿ ವರ್ಗಾವಣೆ, ಮಾರಾಟದಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಸಿದ್ಧವಾಗಿ ರುವ ಸಾಫ್ಟ್‌ʼವೇರ್ ತಂತ್ರಜ್ಞಾನದಿಂದಲೇ ಇದೀಗ ರಾಜ್ಯದ ಜನರಿಗೆ ಸಮಸ್ಯೆಯಾಗಿದೆ. ಸರ್ವರ್ ಸಮಸ್ಯೆ ಯಿಂದ ಖಾತೆ ಕ್ಯಾತೆಯಲ್ಲಿ ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ. ಖಾತೆ ವರ್ಗಾವಣೆ, ತಿದ್ದುಪಡಿ ಅಥವಾ ಮಾರಾಟ ಮಾಡಿದ ಆಸ್ತಿಯ ಖಾತೆ ವರ್ಗಾವಣೆಯನ್ನು ತಂತ್ರಾಜ್ಞಾನಾಧಾರಿ ತವಾಗಿ ಮಾಡಲಾಗಿದೆ. ಆದರೆ ತಂತ್ರಾಂಶವನ್ನು ಅಪ್ ಡೇಟ್ ಮಾಡಿರುವುದರಿಂದ ಸರ್ವರ್ ಕೈಕೊಡುತ್ತಿರುವ ದೂರು ರಾಜ್ಯಾದ್ಯಂತ ಕೇಳಿಬರುತ್ತಿದೆ. ಇದರಿಂದಾಗಿ ನೊಂದಣಿ ಪ್ರಕ್ರಿಯೆಯೇ ಸಂಪೂರ್ಣ ನೆಲಕಚ್ಚಿದೆ.

ಸರ್ವರ್ ಸಮಸ್ಯೆಯಿಂದ ಇ- ಖಾತೆಯೂ ಸಿಗುತ್ತಿಲ್ಲ. ಇದ ರೊಂದಿಗೆ ತಮ್ಮದೇ ಖಾತೆಯಲ್ಲಿ ಆಗಿರುವ ಲೋಪದೋಷವನ್ನು ಸರಿಪಡಿಸಿಕೊಳ್ಳಲು ಆಗದೇ ತೀವ್ರ ಸಮಸ್ಯೆಯನ್ನು ಸಾರ್ವಜನಿ ಕರು ಅನುಭವಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಸರ್ವರ್ ಸಮಸ್ಯೆ ಎನ್ನುವ ಹಾರಿಕೆ ಉತ್ತರ ನೀಡುತ್ತಿದ್ದಾರೆ ಹೊರತು, ತಾಂತ್ರಿಕವಾಗಿ ಆಗುತ್ತಿರುವ ಸಮಸ್ಯೆಗಳೇನು ಎನ್ನುವ ಸ್ಪಷ್ಟನೆಯನ್ನು ನೀಡುತ್ತಿಲ್ಲ.

ಮನೆಯ ಯಜಮಾನಿಯ ನಿಧನ ದಿಂದ ಮನೆಯವರಿಗೆ ವರ್ಗಾವಣೆಯಾಗಿದ್ದ ಖಾತೆಯಲ್ಲಿ ಚಿತ್ರವನ್ನು ಬದಲಾಯಿಸಲು ಸುಮಾರು ಆರು ತಿಂಗಳುಗಳಿಂದ ಪ್ರಯತ್ನಿಸಿದರೂ, ಖಾತೆ ತಿದ್ದುಪಡಿ ಯಾಗಿಲ್ಲ. ಈ ಬಗ್ಗೆ ಹಲವು ಬಾರಿ ಮೇಲಧಿಕಾರಿಗಳ, ಸರಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ವಾಗಿಲ್ಲ ಎನ್ನುವ ಬೇಸರವನ್ನು ಬೆಂಗಳೂರಿನ ನಿವಾಸಿಯೊಬ್ಬರು ಹೊರ ಹಾಕಿದ್ದಾರೆ. ಇನ್ನು ಕೆಲವೊಮ್ಮೆ ಖಾತೆ ಬದಲಾವಣೆಗೆ ಎಲ್ಲ ಪ್ರಕ್ರಿಯೆ ಪೂರ್ಣಗೊಂಡು, ಒಟಿಪಿ ಹಾಕಲು ಪ್ರಯತ್ನಿಸಿದರೆ ಒಟಿಪಿ ಬರುವುದೇ ಇಲ್ಲ.

ಇದನ್ನೂ ಓದಿ: Server Outrage: ವಾಟ್ಸಾಪ್‌, ಇನ್‌ಸ್ಟಾ, ಫೇಸ್‌ಬುಕ್‌ ಸರ್ವರ್‌ ಡೌನ್‌- ಕ್ಷಮೆಯಾಚಿಸಿದ ಮೆಟಾ

ಮೂರು ನಿಮಿಷದಲ್ಲಿ ಒಟಿಪಿ ಹಾಕಬೇಕು ಎನ್ನುವ ನಿಯಮವಿದ್ದರೂ, ಕೆಲವೊಮ್ಮೆ ವಾರ ಗಳು ಕಳೆದ ಬಳಿಕ ಒಟಿಪಿ ಬಂದಿರುವ ಉದಾಹರ ಣೆಗಳಿವೆ. ತಂತ್ರಜ್ಞಾನವನ್ನು ಅಪ್‌ಡೇಟ್ ಮಾಡಿದ ಬಳಿಕ ಈ ಸಮಸ್ಯೆ ತೀವ್ರವಾಗಿದೆ. ಈ ಬಗ್ಗೆ ಸರಕಾರ ಕೂಡಲೇ ಗಮನಹರಿಸಬೇಕಿದೆ ಎನ್ನುವ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಈ ಹಿಂದೆ ಖಾತೆ ಬದಲಾವಣೆ ಅರ್ಜಿಗೆ ಸಂಬಂಧಿಸಿ ದಂತೆ ಆಸ್ತಿ ನೋಂದಣಿಯಾದ ಏಳು ದಿನಗಳ ನೋಟಿಸ್ ಅವಧಿಯಲ್ಲಿ ಯಾವುದೇ ಆಕ್ಷೇಪಣೆ ಸಲ್ಲಿಕೆಯಾಗದಿದ್ದರೆ ಸ್ವಯಂಚಾಲಿ ತವಾಗಿ ಖಾತೆ ಬದಲಾವಣೆಯಾಗುವ, ಸ್ವಯಂ ಚಾಲಿತ ಮ್ಯುಟೇಷನ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿತ್ತು. ಆದರೆ ಮೂಲ ಸರ್ವರ್ʼನಲ್ಲಿಯೇ ಸಮಸ್ಯೆ ಇರುವುದರಿಂದ ಇದ್ಯಾವುದು ಸಾಧ್ಯವಾಗುತ್ತಿಲ್ಲ ಎನ್ನುವ ಆರೋಪವನ್ನು ಸಾರ್ವಜನಿಕರು ಮಾಡುತ್ತಿದ್ದಾರೆ.

ಸರಕಾರದ ಖಜಾನೆಗೆ ಖೋತಾ

ಇನ್ನು ಖಾತೆಗಳ ತಿದ್ದುಪಡಿಯಾಗದೇ ಹೋದರೆ, ರಾಜ್ಯದಲ್ಲಿ ರಿಜಿಸ್ಟ್ರೇಷನ್ ಪ್ರಕ್ರಿಯೆ ಪೂರ್ಣ ವಾಗುವುದಿಲ್ಲ. ಇದರಿಂದಾಗಿ ಸರಕಾರಕ್ಕೆ ಬರುವ ನೊಂದಣಿ ಶುಲ್ಕದಲ್ಲಿ ಭಾರಿ ಪ್ರಮಾಣದಲ್ಲಿ ಖೋತಾ ಆಗಲಿದೆ. ಖಾತೆಗಾಗಿ ತಿಂಗಳುಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೂ ಭಾರಿ ಹೊಡೆತ ಬೀಳುತ್ತಿಲ್ಲ ಎನ್ನುವ ಆತಂಕವನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಹೊರ ಹಾಕುತ್ತಿದ್ದಾರೆ.

ಅಧಿಕಾರಿಗಳಿಂದ ಅದೇ ರಾಗ

ಖಾತೆ ಬದಲಾವಣೆ, ಖಾತೆಯಲ್ಲಿನ ತಿದ್ದುಪಡಿ ಸೇರಿದಂತೆ ಯಾವುದೇ ಪ್ರಕ್ರಿಯೆ ಮಾಡಬೇಕೆಂದರೂ ಇ-ಸ್ವತ್ತು ತಂತ್ರಾಂಶದ ಮೂಲಕವೇ ಮಾಡಬೇಕು. ಆದರೆ ಸರ್ವರ್ ಸಮಸ್ಯೆ ಸದಾ ಇರುವುದರಿಂದ ಯಾವುದೇ ಕಾರ್ಯಗಳಾಗುತ್ತಿಲ್ಲ ಎನ್ನುವ ಮಾತುಗಳನ್ನು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ತಾಂತ್ರಿಕ ಸಮಸ್ಯೆಯ ಕಾರಣಕ್ಕೆ ಸಾರ್ವಜನಿಕರು ನಿತ್ಯ ಅಲೆದಾ ಡುವ ಸ್ಥಿತಿ ಉಂಟಾಗಿದೆ. ಸರ್ವರ್ ಸಮಸ್ಯೆ ಬಗೆಹರಿಯುವ ತನಕ ಈ ಗೊಂದಲಕ್ಕೆ ಮುಕ್ತಿಯಿಲ್ಲ ಎಂದು ಸ್ವತಃ ಅಧಿಕಾರಿಗಳೇ ಹೇಳುತ್ತಿದ್ದಾರೆ.