ದಿನ 22 ಕಿಮೀ ನಡೆದ ಕಮಲ ಪಡೆ, ಡೊಳ್ಳು ಬಾರಿಸಿ ವಿಜಯೇಂದ್ರ ಚಾಲನೆ, ಹೆಜ್ಜೆ ಹಾಕಿದ ಸಾವಿರಾರು ಜನ
ಬೆಂಗಳೂರು: ರಾಜ್ಯ ಸರಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ ಆರಂಭಿಸಿರುವ ಪಾದಯಾತ್ರೆಗೆ ಸ್ಥಳೀಯ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಿಜೆಪಿ ನಾಯಕರೊಂದಿಗೆ ಎರಡನೇ ದಿನ ಸಾವಿರಾರು ಮಂದಿ ಹೆಜ್ಜೆ ಹಾಕಿದರು. ರಾಯಚೂರಿನ ಲಿಂಗಸೂಗೂರಿನಿಂದ ಬಳ್ಳಾರಿಯವರೆಗೆ ನಡೆಯುತ್ತಿರುವ ಪಾದಯಾತ್ರೆಯ 2ನೇ ದಿನವಾದ ಬುಧವಾರ 22 ಕಿ.ಮೀ. ದೂರ ನಡೆಯ ಲಾಯಿತು.
ಮಸ್ಕಿಯ ಸಂತೆಕೆಲ್ಲೂರಿನಿಂದ ಬುಧವಾರ ಪಾದಯಾತ್ರೆ ಆರಂಭಿಸಿ ಗುಡುದೂರಿನಲ್ಲಿ ನಿಲ್ಲಿಸ ಲಾಗಿದೆ. ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರ, ಕಮಿಷನ್ ದಂಧೆ, ರೈತ ವಿರೋಧಿ ನೀತಿಗಳು, ಬರ ನಿರ್ವಹಣೆ ಯಲ್ಲಿನ ವೈಫಲ್ಯ ಹಾಗೂ ದಲಿತ-ಹಿಂದುಳಿದ ಮತ್ತು ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಮೀಸಲಾದ ಅನುದಾನದ ದುರ್ಬಳಕೆಯನ್ನು ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಪಾದಯಾತ್ರೆ ಸೆ.10ರವರೆಗೆ ನಡೆಯಲಿದೆ.
ಉರಿಯುವ ಬಿಸಿಲನ್ನೂ ಲೆಕ್ಕಿಸದೇ ವಿಜಯೇಂದ್ರ, ಮಾಜಿ ಸಚಿವ ಶ್ರೀರಾಮುಲು ಸೇರಿದಂತೆ ಹಲವು ನಾಯಕರು ಹಾಗೂ ಸಾವಿರಾರು ಕಾರ್ಯಕರ್ತರು ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ, ಸರಕಾರದ ವೈಫಲ್ಯಗಳನ್ನು ಪ್ರಸ್ತಾಪಿ ಸುತ್ತಾ ಹೆಜ್ಜೆಹಾಕಿದರು. ಎರಡನೇ ದಿನದ ಪಾದಯಾತ್ರೆಗೆ ವಿಜಯೇಂದ್ರ ಡೊಳ್ಳು ಬಾರಿಸಿ ಚಾಲನೆ ನೀಡಿದರೆ, ಡೊಳ್ಳಿನ ಸದ್ದಿಗೆ ಮಾಜಿ ಸಚಿವ ಬಿ.ಶ್ರೀರಾಮು ಲು ಮತ್ತು ರಾಜುಗೌಡ ಅವರು ಹೆಜ್ಜೆ ಹಾಕಿ ಕಾರ್ಯಕರ್ತರಿಗೆ ಉತ್ಸಾಹ ತುಂಬಿಸಿದರು.
ಮಹಿಳೆಯರು ಹಾಗೂ ವೃದ್ಧರು ಸಂತೆಕಲ್ಲೂರಿನ ಮಾರ್ಗವಾಗಿ ಅಂಕುಶ ದೊಡ್ಡಿ, ಮುದ್ದಬಳ ಕ್ರಾಸ್ ಮಸ್ಕಿ ಮಾರ್ಗವಾಗಿ ಹೆಜ್ಜೆ ಹಾಕಿದರು. ಶಾಸಕ ಮಾನಪ್ಪ ವಜ್ಜಲ, ಡಾ.ಶಿವರಾಜ ಪಾಟೀಲ, ಪ್ರತಾಪ ಗೌಡ ಪಾಟೀಲ, ರಾಜುಗೌಡ ಸೇರಿ ಅನೇಕರು ಇದ್ದರು.ಈ ವೇಳೆ ವಿಜಯೇಂದ್ರ ಅವರು ದಾರಿಯಲ್ಲಿ ಬರುವ ಹೊಲಗಳಿಗೆ ಭೇಟಿ ನೀಡಿ ಬರ ಸಮಸ್ಯೆಗಳ ಬಗ್ಗೆ ರೈತರೊಂದಿಗೆ ಚರ್ಚೆ ನಡೆಸಿದರು. ಇದರೊಂದಿಗೆ ಮಧ್ಯಾಹ್ನ ಭೋಜನ ಸಮಯ ದಲ್ಲಿ ದಲಿತ ಸಮುದಾಯದ ಮುಖಂಡ ರೊಂದಿಗೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ದಲಿತರಿಗೆ ಆಗಿರುವ ಅನ್ಯಾಯ, ಅದನ್ನು ಸರಿಪಡಿಸಲು ಆಗಬೇಕಿರುವ ಕ್ರಮದ ಬಗ್ಗೆ ಸಂವಾದ ನಡೆಸಿದರು.
2ನೇ ದಿನ ನಡೆದಿದ್ದು
2ನೇ ದಿನವಾದ ಬುಧವಾರ ಮಸ್ಕಿಯ ಸಂತೆಕೆಲ್ಲೂರಿನಿಂದ ಪಾದಯಾತ್ರೆ ಆರಂಭ
ವಿಜಯೇಂದ್ರ, ಶ್ರೀರಾಮುಲು ಜೊತೆಗೂಡಿದ ರಾಜುಗೌಡ, ಮಾನಪ್ಪ ವಜ್ಜಲ್
ಹೊಲಗಳಿಗೆ ಭೇಟಿ, ರೈತರೊಂದಿಗೆ ಸಂವಾದ, ಬರದ ಸಮಸ್ಯೆಗಳ ಬಗ್ಗೆ ಮಾತುಕತೆ
ಮಾರ್ಗಮಧ್ಯೆ ದಲಿತ ನಾಯಕರೊಂದಿ ಗೆ ಸಂವಾದ ನಡೆಸಿದ ಬಿಜೆಪಿ ನಾಯಕರು
ದಲಿತರಿಗೆ ಮೀಸಲಿರುವ ಹಣ ದುರು ಪಯೋಗವಾಗಲು ಬಿಡಲ್ಲ: ಶಪಥ
![]()
ಬಿಜೆಪಿ ಆರಂಭಿಸಿರುವ ಪಾದಯಾತ್ರೆ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಭಯ ಹುಟ್ಟಿಸಿದೆ. ಉತ್ತರ ಕರ್ನಾಟಕ ಎಲ್ಲಿದೆ ಎಂದೇ ಮರೆತಿದ್ದ ಮುಖ್ಯಮಂತ್ರಿಗಳು ಬೆಂಗಳೂರಿನ ಎಸಿ ಕೊಠಡಿಯಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ಮಾಡುತ್ತಿದ್ದರು. ಮೊದಲಿಗೆ ಅವರು ಬರಪೀಡಿತ ಸ್ಥಳಗಳಿಗೆ ಭೇಟಿ ಸಹ ನೀಡಿರಲಿಲ್ಲ. ಬಿಜೆಪಿ ಪಾದಯಾತ್ರೆ ಆರಂಭಿಸುತ್ತಿದ್ದಂತೆ ಬರಪೀಡಿತ ತಾಲೂಕುಗಳ ಎರಡನೇ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ