ಬೆಂಗಳೂರು: ಭಾರತದ ಚಲನಶೀಲ ಗ್ರಾಹಕರನ್ನು ತಲುಪುವ ನಿಟ್ಟಿನಲ್ಲಿ ವಿಶ್ವದ ಮುಂಚೂಣಿಯ ಲೈಟಿಂಗ್ ಕಂಪನಿ ಸಿಗ್ನಿಫೈ (ಯೂರೋನೆಕ್ಸ್ಟ್: ಲೈಟ್) ಬೆಂಗಳೂರಿನಲ್ಲಿ ಹೊಸ ಮೂರು ಫಿಲಿಪ್ಸ್ ಸ್ಮಾರ್ಟ್ ಲೈಟ್ ಹಬ್ಸ್ (ಎಸ್.ಎಲ್.ಎಚ್.) ಅನ್ನು ಅದ್ಧೂರಿಯಾಗಿ ಉದ್ಘಾಟಿಸಿದೆ. ಒಂದೇ ದಿನ ಪ್ರಾರಂಭವಾದ ಈ ಪ್ರಮುಖ ನಗರದಾದ್ಯಂತ ಸೇರ್ಪಡೆಗಳು ಗ್ರಾಹಕರು, ವಾಸ್ತುಶಿಲ್ಪಿಗಳು ಮತ್ತು ಒಳಾಂಗಣ ವಿನ್ಯಾಸಕಾರರಿಗೆ ಆವಿಷ್ಕಾರಕ ಮತ್ತು ತಲ್ಲೀನಗೊಳಿಸುವ ಲೈಟಿಂಗ್ ಅನುಭವಗಳಿಗೆ ಸಿಗ್ನಿಫೈ ಬದ್ಧತೆಯನ್ನು ಎತ್ತಿ ತೋರಿಸಿದೆ.
ಗ್ರಾಹಕರು ಹೆಚ್ಚಾಗಿ ಪ್ರೀಮಿಯಂ, ವಿನ್ಯಾಸಪ್ರೇರಿತ ಮತ್ತು ಸ್ಮಾರ್ಟ್ ಲೈಟಿಂಗ್ ಪರಿಹಾರಗಳಿಗೆ ಆಕರ್ಷಿತರಾಗುತ್ತಿರುವುದರಿಂದ ಬೆಂಗಳೂರು ಪ್ರಮುಖ ಮಾರುಕಟ್ಟೆಯಾಗಿ ಹೊರಹೊಮ್ಮಿದೆ. ಭಾರತದ ಆವಿಷ್ಕಾರ ಮತ್ತು ಐಟಿ ರಾಜಧಾನಿಯಾಗಿ ಸ್ಮಾರ್ಟ್ ಹೋಮ್ ಆಟೊಮೇಷನ್ ನ ಪ್ರಾರಂಭಿಕ ಅಳವಡಿಕೆದಾರರಾಗಿ ಬೆಂಗಳೂರು ತಂತ್ರಜ್ಞಾನ ಬಳಕೆಯ ಗ್ರಾಹಕರನ್ನು ಹೆಚ್ಚಾಗಿ ಹೊಂದಿದೆ ಮತ್ತು ಆಧುನಿಕ, ಅಲಂಕಾರಿಕ ವಿನ್ಯಾಸಕ್ಕೆ ಬಲವಾದ ಮೌಲ್ಯ ನೀಡುತ್ತದೆ. ಈ ಜನಸಂಖ್ಯಾ ಸನ್ನದ್ಧತೆಯು ಬೆಂಗಳೂರಿನ ವೃದ್ಧಿಸುತ್ತಿರುವ ರಿಯಲ್ ಎಸ್ಟೇಟ್ ಮಾರುಕಟ್ಟೆ ಯೊಂದಿಗೆ ಸೇರಿ ನಮ್ಮ ಮೂರು ಬಿಡುಗಡೆಗೆ ಅತ್ಯಂತ ಸೂಕ್ತ, ಹೆಚ್ಚಿನ ಪರಿಣಾಮದ ಮಾರುಕಟ್ಟೆ ಯಾಗಿದೆ.
ಇದನ್ನೂ ಓದಿ: Bangalore News: ಜನವರಿ 3 ರಿಂದ 9 ರವರೆಗೆ ಬೃಹತ್ ಕೃತಕ ಕಾಲು, ಕ್ಯಾಲಿಪರ್ ಹಾಗೂ ಮುಂಗೈ ಜೋಡಣಾ ಶಿಬಿರ
ಸಿಗ್ನಿಫೈ ಗ್ರೇಟರ್ ಇಂಡಿಯಾದ ಹೆಡ್ ಆಫ್ ಕನ್ಸೂಮರ್ ಬಿಸಿನೆಸ್ ಮುಖ್ಯಸ್ಥ ಸಿ. ಅರುಣ್ ಕುಮಾರ್, “ಬೆಂಗಳೂರು ಕಾರ್ಯ ನಿರ್ವಹಣೆ ಮತ್ತು ಆವಿಷ್ಕಾರಕ ವಿನ್ಯಾಸ ಎರಡನ್ನೂ ಬಯಸುವ ಗ್ರಾಹಕರಿಂದ ಪ್ರೇರಿತವಾದ ಪ್ರಮುಖ ಮಾರುಕಟ್ಟೆಯಾಗಿ ಮುಂದುವರಿದಿದೆ. ನಮಗೆ ಭಾರತದಾದ್ಯಂತ ಈಗ 328 ಮಳಿಗೆಗಳಿವೆ, ಮೂರು ಹೊಸ ಫಿಲಿಪ್ಸ್ ಸ್ಮಾರ್ಟ್ ಲೈಟ್ ಹಬ್ ಗಳ ಏಕಕಾಲದ ಪ್ರಾರಂಭದಿಂದ ಗ್ರಾಹಕರು, ವಾಸ್ತುಶಿಲ್ಪಿಗಳು ಮತ್ತು ಒಳಾಂಗಣ ವಿನ್ಯಾಸಕರಿಗೆ ನಮ್ಮ ಸ್ಮಾರ್ಟ್ ಮತ್ತು ಅಲಂಕಾರಿಕ ಲೈಟಿಂಗ್ ಪೋರ್ಟ್ ಫೋಲಿಯೊದಲ್ಲಿ ಪರಿವರ್ತನೀಯ ಸಾಮರ್ಥ್ಯ ವನ್ನು ನಿಜಕ್ಕೂ ಆವಿಷ್ಕರಿಸಬಹುದಾಗಿದ್ದು ಅತ್ಯಾಧುನಿಕ ಪರಿಹಾರಗಳನ್ನು ಒದಗಿಸಲು ನಮ್ಮ ಬದ್ಧತೆಯನ್ನು ಮರು ದೃಢೀಕರಿಸಿದೆ” ಎಂದರು.
ಬೆಂಗಳೂರಿನ ಪ್ರಮಖ ತಾಣಗಳಲ್ಲಿರುವ ಈ ಮಳಿಗೆಗಳು ವಿಸ್ತಾರ ಶ್ರೇಣಿಯ ಸ್ಮಾರ್ಟ್, ಕನೆಕ್ಟೆಡ್ ಮತ್ತು ಅಲಂಕಾರಿಕ ದೀಪಗಳ ವಿಸ್ತಾರ ಶ್ರೇಣಿಯ ಎಕ್ಸ್ ಪೀರಿಯೆನ್ಸ್ ಸೆಂಟರ್ ಕೂಡಾ ಹೊಂದಿದೆ. ಈ ಮಳಿಗೆಗಳನ್ನು ಗ್ರಾಹಕರ ಗೃಹ ಲೈಟಿಂಗ್ ಅಗತ್ಯಗಳಿಗೆ ಪೂರಕವಾಗಿ ವಿನ್ಯಾಸಗೊಳಿಸಲಾಗಿದ್ದು ಅದರಲ್ಲಿ ಶಾಂಡೆಲಿಯರ್ಸ್, ವಾಲ್ ಲೈಟ್ಸ್, ಫ್ಲೋರ್ ಲ್ಯಾಂಪ್ಸ್ ಮತ್ತು ಟ್ರಾಕ್ ಲೈಟ್ಸ್ ಅಲ್ಲದೆ ಫಂಕ್ಷನಲ್ ಲೈಟ್ಸ್ ಆದ ಮಾಡ್ಯುಲರ್ ಸಿಒಬಿ, ಡೌನ್ ಲೈಟರ್ಸ್, ಮ್ಯಾಗ್ನೆಟಿಕ್ ಟ್ರ್ಯಾಕ್ ಗಳು, ಪ್ಯಾನೆಲ್ ಗಳು ಮತ್ತು ಸ್ಪಾಟ್ ಗಳಿವೆ.
ಈ ಮಳಿಗೆಯಲ್ಲಿ ನಮ್ಮ ಸ್ಮಾರ್ಟ್ ಲೈಟಿಂಗ್ ಪರಿಹಾರಗಳಾದ ವಿಝ್ ಹೊಂದಿದೆ ಮತ್ತು ಸ್ಮಾರ್ಟ್ ಸೇವೆಗಳಿದ್ದು ಅದು ಗ್ರಾಹಕರಿಗೆ ಸಂಪರ್ಕಿತ ಲೈಟಿಂಗ್ ನೀಡುತ್ತವೆ, ಇದರಿಂದ ಅವರು ಹೆಚ್ಚು ಅನುಕೂಲ ಮತ್ತು ಸುಲಭದಲ್ಲಿ ಪ್ರತಿನಿತ್ಯದ ಕ್ಷಣಗಳನ್ನು ಆನಂದಿಸಬಹುದು. ಹೆಚ್ಚುವರಿಯಾಗಿ ಈ ಮಳಿಗೆಯು ವಿಶೇಷವಾದ ಇಕೊಲಿಂಕ್ ಬಿ.ಎಲ್.ಡಿ.ಸಿ.ಫ್ಯಾನ್ ಶ್ರೇಣಿ ಮತ್ತು ಫಿಲಿಪ್ಸ್ ಇಲ್ಯುಮಿನ್ ಏರ್ ಎಲ್.ಇ.ಡಿ. ಲೈಟ್ ಅನ್ನು ಫ್ಯಾನ್ ನೊಂದಿಗೆ ಹೊಂದಿದ್ದು ಅದು ವಿದ್ಯುತ್ ದಕ್ಷತೆ ಮತ್ತು ಆಧುನಿಕ ಮನೆಗಳಿಗೆ ಸ್ಟೈಲಿಷ್ ಆಯ್ಕೆಗಳನ್ನು ನೀಡುತ್ತದೆ.
ಸ್ಟೋರ್ 1: ಎರಡನೇ ಮಹಡಿ, ಸಮಿರ್ ಎಂಟರ್ಪ್ರೈಸಸ್, ವೈಟ್ ಫೀಲ್ಡ್ ಮುಖ್ಯರಸ್ತೆ, ಸ್ವಸ್ಥ ಆಸ್ಪತ್ರೆ ಎದುರು, ಪಾಮ್ ಮೀಡೋಸ್, ವೈಟ್ ಫೀಲ್ಡ್, ಬೆಂಗಳೂರು, 560066
ಸ್ಟೋರ್ 2: ಹೋಮ್ ಕಾನ್ಸೆಪ್ಟ್ಸ್, ಎರಡನೇ ಮಹಡಿ 1ನೇ ಮುಖ್ಯರಸ್ತೆ, ಸುಂದರ ನಗರ, ಮತ್ತಿಕೆರೆ, ಬೆಂಗಳೂರು ನಗರ- 560054
ಸ್ಟೋರ್ 3: ನೆಲಮಹಡಿ, ಅಮ್ರೊಇಂಟೀರಿಯೊ (ಮಮತಾ ಎಂಟರ್ಪ್ರೈಸಸ್), 3ನೇ ಹಂತ, ನಂ.235/ಎ, ಹೊಸೂರು ರಸ್ತೆ, ಟೋಟಲ್ ಎಲ್.ಪಿ.ಜಿ. ಗ್ಯಾಸ್ ಸ್ಟೇಷನ್ ಪಕ್ಕ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ, ಬೆಂಗಳೂರು 560099.
ಈ ಮಹತ್ತರ ಸಂದರ್ಭವು ಸ್ಮಾರ್ಟ್ ಲೈಟಿಂಗ್ ತಂತ್ರಜ್ಞಾನದಲ್ಲಿ ಆವಿಷ್ಕಾರಗಳನ್ನು ಪ್ರದರ್ಶಿಸುವ ಮತ್ತು ಉದ್ಯಮದಲ್ಲಿ ಮುಂಚೂಣಿಯದಾಗಿ ಸಿಗ್ನಿಫೈ ಸ್ಥಾನವನ್ನು ಮರು ದೃಢೀಕರಿಸುತ್ತದೆ.