ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿಶೇಷ ಪರಿಸ್ಕೃತ ಅಂತಿಮ ಮತಪಟ್ಟಿ ಇಂದು ಪ್ರಕಟ

ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪೂರ್ಣ ಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಮಂಗಳವಾರ ಪ್ರಕಟಿಸ ಲಾಗುತ್ತದೆ. ಇದರ ಪರಿಣಾಮ ಜಿಬಿಎ ಸೇರಿದಂತೆ ಸ್ಥಳೀಯ ಆಡಳಿತ ಚುನಾವಣೆಗೆ ರಂಗೇರಲಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜೂನ್ 20ರಂದು ಆರಂಭಗೊಂಡಿದ್ದ ಎಸ್‌ಐಆರ್ ಪ್ರಕ್ರಿಯೆಯಡಿ ಮತದಾರರ ಪಟ್ಟಿಯಲ್ಲಿನ ಹೆಸರುಗಳನ್ನು ಪರಿಶೀಲಿಸಲಾಗಿತ್ತು.

ಬೆಂಗಳೂರು: ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪೂರ್ಣಗೊಂಡಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಮಂಗಳವಾರ ಪ್ರಕಟಿಸ ಲಾಗುತ್ತದೆ. ಇದರ ಪರಿಣಾಮ ಜಿಬಿಎ ಸೇರಿದಂತೆ ಸ್ಥಳೀಯ ಆಡಳಿತ ಚುನಾವಣೆಗೆ ರಂಗೇರಲಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜೂನ್ 20ರಂದು ಆರಂಭಗೊಂಡಿದ್ದ ಎಸ್‌ಐಆರ್ ಪ್ರಕ್ರಿಯೆಯಡಿ ಮತದಾರರ ಪಟ್ಟಿಯಲ್ಲಿನ ಹೆಸರುಗಳನ್ನು ಪರಿಶೀಲಿಸಲಾಗಿತ್ತು.

ಮ್ಯಾಪಿಂಗ್ ಆಗದವರು ಹಾಗೂ ವೈಪರೀತ್ಯಗಳು ಎಂಬ ವರ್ಗಗಳ ಅಡಿಯಲ್ಲಿ ಗುರುತಿಸಲಾದ ಮತದಾರ ರಿಗೆ ನೋಟಿಸ್‌ಗಳನ್ನು ನೀಡಲಾಗಿತ್ತು. ರಾಜ್ಯಾ ದ್ಯಂತ ನೋಟಿಸ್‌ಗಳನ್ನು ಸಿದ್ಧಪಡಿಸಿ ಸಂಬಂಧಪಟ್ಟ ಮತದಾರರಿಗೆ ತಲುಪಿಸಲಾಗಿದ್ದು, ವಿಚಾರಣಾ ಪ್ರಕ್ರಿಯೆಯನ್ನೂ ಪೂರ್ಣಗೊಳಿಸ ಲಾಗಿದೆ. ಆಗ 24ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. ಬಳಿಕ ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಪಟ್ಟಿಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿತ್ತು.

ಈ ಅವಧಿಯಲ್ಲಿ ಹೊಸ ಮತದಾರರ ಸೇರ್ಪಡೆ, ಹೆಸರುಗಳ ತಿದ್ದುಪಡಿ ಹಾಗೂ ಅನರ್ಹ ಮತದಾರರ ಹೆಸರು ಕೈಬಿಡುವಂತೆ ಕೋರಿ ಫಾರ್ಮ್-6 ಮತ್ತು ಫಾರ್ಮ್-7ರ ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ನೋಟಿಸ್‌ಗಳ ವಿಚಾರಣೆ ಹಾಗೂ ಹಕ್ಕು-ಆಕ್ಷೇಪಣೆಗಳ ವಿಲೇವಾರಿ ಪೂರ್ಣ ಗೊಂಡಿರುವ ಹಿನ್ನೆಲೆಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲು ಚುನಾವಣಾ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಅಂತಿಮ ಪಟ್ಟಿಯಲ್ಲಿ ಮತದಾರರ ಹೆಸರುಗಳ ಸೇರ್ಪಡೆ, ತಿದ್ದುಪಡಿ ಮತ್ತು ಕೈಬಿಡುವಿಕೆ ಸೇರಿದಂತೆ ಪರಿಷ್ಕರಣೆಯ ನಂತರದ ವಿವರಗಳು ಲಭ್ಯವಾಗಲಿವೆ.

ಇದನ್ನೂ ಓದಿ: SIR in Karnataka: ಹುಬ್ಬಳ್ಳಿಯ ತಮ್ಮ ನಿವಾಸದಲ್ಲೇ SIRನಲ್ಲಿ ಭಾಗಿಯಾಗಿ ಪ್ರೇರಣೆಯಾದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

43.82 ಲಕ್ಷ ಮತದಾರರಿಗೆ ನೋಟಿಸ್: ಎಸ್ ಐಆರ್ ಪ್ರಕ್ರಿಯೆಯ ವೇಳೆ ರಾಜ್ಯದಲ್ಲಿ ಸುಮಾರು 4.50 ಕೋಟಿ ಮತದಾರರ ಪೈಕಿ 43.82 ಲಕ್ಷ ಜನರಿಗೆ ತಾಂತ್ರಿಕ ಲೋಪಗಳ ಹಿನ್ನೆಲೆಯಲ್ಲಿ ನೋಟೀಸ್ ನೀಡಲಾಗಿತ್ತು. ಈ ಎಲ್ಲಾ ನೋಟಿಸ್‌ಗಳ ವಿಚಾರಣೆ ಪೂರ್ಣಗೊಂಡಿದೆ.

ಪ್ರಸ್ತುತ ರಾಜ್ಯದಲ್ಲಿ ಒಟ್ಟು 5.54 ಕೋಟಿ ಮತದಾರರ ಪೈಕಿ ಎಸ್‌ಐಆರ್ ನಂತರ ಪಟ್ಟಿಯಲ್ಲಿ 4.65 ಕೋಟಿ ಮತದಾರರು ಉಳಿದಿದ್ದಾರೆ. ಆಯೋಗದ ಅಂದಾಜಿನ ಪ್ರಕಾರ, ಈ ಪ್ರಕ್ರಿಯೆಯಿಂದ ಸುಮಾರು 85 ರಿಂದ 95 ಲಕ್ಷ ಮತಗಳು ಅಳಿಸಲ್ಪಡುವ ಸಾಧ್ಯತೆ ಇದೆ.

ಅತೀ ಹೆಚ್ಚು ವಿವಾದ ಸೃಷ್ಟಿಸಿದ ಫಾರ್ಮ್ 7: ಇನ್ನು ಈ ಅವಧಿಯಲ್ಲಿ ಮತದಾರರು ಮತ್ತು ರಾಜಕೀಯ ಪಕ್ಷಗಳಿಂದ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಸಲ್ಲಿಕೆಯಾಗಿವೆ. ಫಾರ್ಮ್ 7ಕ್ಕೆ ಒಟ್ಟು 2,28,917 ಅರ್ಜಿಗಳು ಬಂದಿದ್ದು, ಇದು ಅತಿ ಹೆಚ್ಚು ವಿವಾದ ಸೃಷ್ಟಿಸಿದ ಫಾರ್ಮ್ ಆಗಿದೆ. ಫಾರ್ಮ್ 6ಕ್ಕೆ 10,42,863 ಅರ್ಜಿಗಳು, ಫಾರ್ಮ್ 6 ‘ಎ’ಗೆ 4840 ಅರ್ಜಿಗಳು ಹಾಗೂ ಫಾರ್ಮ್ 8ಕ್ಕೆ 13,10,841 ಅರ್ಜಿಗಳು ಆಯೋಗಕ್ಕೆ ತಲುಪಿವೆ.

ಒಟ್ಟಾರೆಯಾಗಿ ಫಾರ್ಮ್ 6, 6ಎ,7 ಮತ್ತು 8 ಸೇರಿ 25,87,461 ಅರ್ಜಿಗಳು ಸಲ್ಲಿಕೆಯಾಗಿವೆ. ಬಿಎಲ್‌ಎ ಗಳು ನೋಟಿಸ್ ನೀಡಿ ಸರಿಯಾದ ಮಾಹಿತಿ ಸಂಗ್ರಹಿಸಿದ್ದು, ಈ ಅರ್ಜಿಗಳ ವಿಲೇವಾರಿ ಯೂ ಪೂರ್ಣಗೊಂಡಿದೆ. ಎಸ್ ಐಆರ್ ಪ್ರಕ್ರಿಯೆಯು ಮತದಾರರ ಪಟ್ಟಿಯನ್ನು ನವೀಕರಿಸುವ ಮತ್ತು ಶುದ್ಧೀಕರಿಸುವ ಉದ್ದೇಶದಿಂದ ನಡೆಸಲಾಯಿತು. ಆರಂಭದಿಂದಲೇ ಕೆಲವು ವಿವಾದಗಳು ಎದುರಾಗಿದ್ದರೂ, ಆಯೋಗವು ನಿಗದಿತ ಕಾಲಮಿತಿಯೊಳಗೆ ಪ್ರಕ್ರಿಯೆ ಮುಕ್ತಾಯಗೊಳಿಸಿದೆ. ಬಿಡುಗಡೆಯಾಗುವ ಅಂತಿಮ ಕರಡು ಪಟ್ಟಿಯು ರಾಜ್ಯದ ಮುಂದಿನ ಚುನಾವಣೆಗಳಿಗೆ ಮುಖ್ಯ ಆಧಾರವಾಗಲಿದೆ.

ಮತದಾರರು ಏನು ಮಾಡಬೇಕು?: ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಲು ಆಯೋಗದ ಅಧಿಕೃತ ವೆಬ್‌ಸೈಟ್ ಅಥವಾ ಸಂಬಂಧಿತ ಕಚೇರಿಗಳಿಗೆ ಭೇಟಿ ನೀಡಬಹುದು. ಸೇರ್ಪಡೆ ಅಥವಾ ರದ್ದತಿ ಬಗ್ಗೆ ಯಾವುದೇ ಆಕ್ಷೇಪಣೆ ಇದ್ದಲ್ಲಿ ನಿಗದಿತ ಅವಧಿ ಯೊಳಗೆ ಸಲ್ಲಿಸುವ ಅವಕಾಶವೂ ಇರುತ್ತದೆ.

ಜಿಬಿಎ ವ್ಯಾಪ್ತಿಯ ಚುನಾವಣಾ ಸಿದ್ದತೆಗಳಿಗೆ ಮತ್ತಷ್ಟು ವೇಗ?

ಎಸ್‌ಐಆರ್ ಪ್ರಕ್ರಿಯೆಗೂ ಮುನ್ನ ಬೆಂಗಳೂರಿನಲ್ಲಿ ಸುಮಾರು 1.04 ಕೋಟಿ ಮತದಾರರಿದ್ದರು ಎಂದು ಅಂದಾಜಿಸಲಾಗಿತ್ತು. ಆದರೆ, ಪರಿಷ್ಕರಣೆ ಬಳಿಕ ಸಿದ್ಧಪಡಿಸಲಾದ ಹೊಸ ಪಟ್ಟಿಯಲ್ಲಿ ಸುಮಾರು 60 ಲಕ್ಷ ಮತದಾರರ ಹೆಸರುಗಳು ಮಾತ್ರ ಉಳಿದಿವೆ ಎಂದು ಅಧಿಕಾರಿಗಳ ಮಾಹಿತಿ ಉಲ್ಲೇಖಿಸಲಾಗಿದೆ. ಹಳೆಯ ಮತದಾರರ ಪಟ್ಟಿಗೆ ಹೋಲಿಸಿದರೆ ಹೊಸ ಪಟ್ಟಿಯಲ್ಲಿ ಮತದಾರರ ಸಂಖ್ಯೆ ಗಣನೀಯವಾಗಿ ಕಡಿಮೆ ಯಾಗಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ. ಮತದಾರರ ವಿವರಗಳ ಪರಿಶೀಲನೆ, ಸ್ಥಳಾಂತರ, ಮೃತಪಟ್ಟವರ ಹೆಸರುಗಳ ತೆರವು ಹಾಗೂ ದಾಖಲೆಗಳಲ್ಲಿನ ವ್ಯತ್ಯಾಸಗಳ ಹಿನ್ನೆಲೆಯಲ್ಲಿ ಈ ಬದಲಾವಣೆ ಸಂಭವಿಸಿರಬಹುದಾದರೂ, ಮತದಾರರ ಸಂಖ್ಯೆ ಯಲ್ಲಿನ ಇಳಿಕೆಗೆ ನಿಖರ ಕಾರಣಗಳು ಮತ್ತು ಅಽಕೃತ ಅಂಕಿಅಂಶಗಳು ಅಂತಿಮ ಪಟ್ಟಿ ಪ್ರಕಟವಾದ ಬಳಿಕವೇ ಸ್ಪಷ್ಟವಾಗಬೇಕಿದೆ.

ರಾಜಕೀಯ ಪಕ್ಷಗಳ ಚಿತ್ತ ಅಂತಿಮ ಪಟ್ಟಿಯತ್ತ

ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪಾಲಿಕೆಗಳ ಚುನಾವಣೆ ನಡೆಯಬೇಕಿರುವುದರಿಂದ ಅಂತಿಮ ಮತದಾರರ ಪಟ್ಟಿ ರಾಜಕೀಯ ಪಕ್ಷಗಳಿಗೆ ಮಹತ್ವದ್ದಾಗಿದೆ. ವಾರ್ಡ್‌ವಾರು ಮತದಾರರ ಸಂಖ್ಯೆ ಯಲ್ಲಿನ ಬದಲಾವಣೆ, ಹೆಸರುಗಳ ಸೇರ್ಪಡೆ ಮತ್ತು ಕೈಬಿಟ್ಟಿರುವ ಮತದಾ ರರ ವಿವರಗಳು ಚುನಾವಣಾ ಲೆಕ್ಕಾಚಾರದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ವಿವಿಧ ಪಕ್ಷಗಳ ಮುಖಂಡರು ಹೊಸ ಪಟ್ಟಿಯತ್ತ ಗಮನಹರಿಸಿದ್ದಾರೆ. ಅಂತಿಮ ಮತದಾರರ ಪಟ್ಟಿ ಪ್ರಕಟವಾದ ಬಳಿಕ ಮತದಾರರ ಒಟ್ಟು ಸಂಖ್ಯೆ, ವಾರ್ಡ್‌ವಾರು ವಿವರಗಳು ಹಾಗೂ ಪರಿಷ್ಕರಣೆ ಸಂದರ್ಭದಲ್ಲಿ ಕೈಬಿಟ್ಟ ಮತ್ತು ಸೇರ್ಪಡೆಗೊಂಡ ಹೆಸರುಗಳ ಕುರಿತು ಸ್ಪಷ್ಟ ಚಿತ್ರಣ ದೊರೆಯಲಿದೆ. ಈ ಮಾಹಿತಿಯು ಮುಂಬರುವ ಜಿಬಿಎ ಚುನಾವ ಣೆಯ ಸಿದ್ಧತೆಗಳಿಗೆ ನಿರ್ಣಾಯಕವಾಗಲಿದೆ.