ಬೆಂಗಳೂರು: ಕಾಂಗ್ರೆಸ್ ಸರ್ಕಾರ ಸೃಷ್ಟಿಸಿರುವ ಜಿಬಿಎ (Greater Bengaluru Authority) ಸಂಪೂರ್ಣವಾಗಿ ಸ್ಥಳೀಯ ಸಂಸ್ಥೆಗಳ ಅಧಿಕಾರ ಕಿತ್ತುಕೊಳ್ಳುವ ಪ್ರಾಧಿಕಾರ ಎಂದು ಶಾಸಕ ಎಸ್.ಆರ್. ವಿಶ್ವನಾಥ್ (SR Vishwanath) ಆರೋಪಿಸಿದ್ದಾರೆ. ಬಿಜೆಪಿ (BJP) ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಪ್ರಾರಂಭದಿಂದಲೇ ಬೆಂಗಳೂರು ಇಬ್ಬಾಗವಾಗಬಾರದು; ಅದು ಒಂದಾಗಿರಬೇಕು ಎಂದು ಜಿಬಿಎ ತಿದ್ದುಪಡಿ 74ಕ್ಕೆ ವಿರೋಧವಾಗಿ ಪ್ರತೀ ಸಭೆಗಳಲ್ಲಿ ನಾವು ತಿಳಿಸುತ್ತಾ ಬಂದಿದ್ದೇವೆ. ಆದರೆ ಇಂದು ಕಾಂಗ್ರೆಸ್ಸಿನವರು, ಬಿಜೆಪಿ ಶಾಸಕರು ಸಭೆಗಳಲ್ಲಿ ಬಂದಿದ್ದರು ಮತ್ತು ಮಾತನಾಡಿದರು. ಪ್ರಸ್ತುತ ಅವರು ವಿರೋಧ ಮಾಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಸರ್ಕಾರ ಒಂದು ಸಮಿತಿ ಮಾಡಿದಾಗ ಅದರ ಸಾಧಕ- ಭಾದಕಗಳನ್ನು ನಾವು ನೋಡಬೇಕಾಗುತ್ತದೆ. ಆ ವಿಚಾರಕ್ಕೆ ನಾವು ಸಭೆಗಳಿಗೆ ಹೋಗಿದ್ದೆವು ಮತ್ತು ಅಸೆಂಬ್ಲಿಯಲ್ಲಿಯೂ ನಾವು ಪ್ರಶ್ನಿಸಿದ್ದೇವೆ ಎಂದು ತಿಳಿಸಿದರು.
ಜಿಬಿಎ ಪ್ರಥಮ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದರು. ಯಾವುದೇ ಸಭೆಯ ಕುರಿತು ಪತ್ರಿಕೆಯಲ್ಲಿ ಜಾಹೀರಾತು ನೀಡಿರುವುದನ್ನು ನಾನು ನೋಡಿರಲಿಲ್ಲ ಎಂದು ಹೇಳಿದರು. ಜಿಬಿಎ ಮಾಡಿದರೂ ಒಂದು ಶಾಸಕರಿಂದ ಮತ್ತು ಮತ್ತೊಂದು ಶಾಸಕರಿಗೆ ಜಿಬಿಎ ವಿಂಗಡಣೆ ಆಗಬಾರದು ಎಂದು ತಿಳಿಸಿದ್ದೆವು. ಪ್ರಸ್ತುತ ಶಾಸಕರಿಗೆ ಎರಡೆರಡು ಕಡೆ ಸಭೆಗೆ ಹಾಜರಾಗಲು ಸೂಚಿಸಿದ್ದಾರೆ. ಇದು ಎಷ್ಟು ಸಮಂಜಸ ಎಂದು ಅವರು ಪ್ರಶ್ನಿಸಿದರು.
ಚುನಾವಣಾ ಬೂತ್‌ಗಳನ್ನು ಎರಡೆರಡು ವಾರ್ಡ್‍ಗಳಿಗೆ ವಿಂಗಡಣೆ ಮಾಡಿದ್ದಾರೆ. ಕಾಂಗ್ರೆಸ್ ಜಿಬಿಎ ಮಾಡಿರುವ ಉದ್ದೇಶವೆಂದರೆ ಬೆಂಗಳೂರು ಮಹಾನಗರ ಚುನಾವಣೆ ಮಾಡಿದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಇದನ್ನು ಒಡೆದು ಒಂದೆರಡಾದರು ನಾವು ಗೆಲ್ಲಬೇಕು ಎಂದು ಜಿಬಿಎ ಮಾಡಿದ್ದಾರೆ ಎಂದು ಆರೋಪಿಸಿದರು.
ಈ ಸುದ್ದಿಯನ್ನೂ ಓದಿ | R Ashok: ಜಿಬಿಎ: ಯೋಜನೆಗಳನ್ನು ಮುಖ್ಯಮಂತ್ರಿಯೇ ಅನುಮೋದಿಸುವ ಮನೆಹಾಳು ಕೆಲಸ ಮಾಡುತ್ತಿದ್ದಾರೆ: ಆರ್.ಅಶೋಕ್ ಕಿಡಿ
ಜಿಬಿಎನಲ್ಲಿ ಪುಲಕೇಶಿ ನಗರವನ್ನು ಯಲಹಂಕಕ್ಕೆ ಸೇರಿಸಿದ್ದಾರೆ. ಎರಡು ಕ್ಷೇತ್ರವನ್ನು ಸೇರಿಸಿ 50 ಜನಕ್ಕೆ ಜಿಬಿಎ ಮಾಡಿದ್ದಾರೆ. ರಾಜಕೀಯ ತೆವಲಿಗೆ ಜಿಬಿಎ ಮಾಡಿದ್ದು, ಬೆಂಗಳೂರು ಅಭಿವೃದ್ಧಿಗೋಸ್ಕರ ಮಾಡಿರುವುದಿಲ್ಲ ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಆರೋಪಿಸಿದ್ದಾರೆ.