ಬೆಂಗಳೂರು: ಬ್ರಾಹ್ಮಣ ವಿವಿಧ ಸಂಘಟನೆಗಳು ಬೆಂಗಳೂರು, ಕೌಶಿಕ ಸಂಕೇತಿ ಸಂಘ, ಮಂಗಳ ಸೂತ್ರ ಫೌಂಡೇಶನ್, ಸಪ್ತಪದಿ ಫೌಂಡೇಶನ್ ಟ್ರಸ್ಟ್, ಮೈಸೂರು ಸಹಕಾರದೊಂದಿಗೆ ರಾಜ್ಯಮಟ್ಟದ ಬ್ರಾಹ್ಮಣ ವಧು-ವರಾನ್ವೇಷಣ ಸಮಾವೇಶ ಆಗಸ್ಟ್ 2ರಂದು ಹಮ್ಮಿಕೊಳ್ಳಲಾಗಿದೆ.
ಸಮಾವೇಶ ಹಾಗೂ ಕಲ್ಯಾಣ ಪ್ರಾಪ್ತಿಗಾಗಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವವನ್ನು "ಕೌಶಿಕ ಸಂಕೇತಿ ಭವನ" 6ನೇ ಮುಖ್ಯರಸ್ತೆ, 4ನೇ ಕ್ರಾಸ್,ಕೆಂಗೇರಿ ಸ್ಯಾಟಲೈಟ್ ಟೌನ್, ಕೆಂಗೇರಿಯಲ್ಲಿ ನಡೆಯಲಿದೆ. ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ಆಯೋಜಿಸಲಾಗಿದೆ.
ವಧು-ವರ ಸಮಾವೇಶವನ್ನು ಮಾಜಿ ಸಚಿವರು, ಯಶವಂತಪುರ ಕ್ಷೇತ್ರದ ಶಾಸಕರಾದ ಎಸ್.ಟಿ. ಸೋಮಶೇಖರ್ ರವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಹಿರಿಯ ಉಪಾಧ್ಯಕ್ಷರಾದ ಆರ್.ಲಕ್ಷ್ಮಿಕಾಂತ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಎ.ಎನ್.ರಾಮಚಂದ್ರ ಸುಧೀಂದ್ರ ಕುಮಾರ್ ಹೆಚ್.ಎಸ್.ರಮೇಶ್, ಕೇಶವಯ್ಯ, ಕಿರಣ್ ಕುಮಾರ್, ಜಯತೀರ್ಥ ಮುಂತಾದವರು ಭಾಗವಹಿಸಿದ್ದಾರೆ. ಆಸಕ್ತರು ಪೋಸ್ಟ್ ಕಾರ್ಡ್ ಸೈಜ್ ಫೋಟೋ, ಬಯೋಡೇಟಾ, ಜಾತಕದೊಂದಿಗೆ ಭಾಗವಹಿಸಬಹುದು.