ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸತತ ಮೂರು ಬಾರಿ ಗರ್ಭಪಾತದ ಬಳಿಕ ಜನಿಸಿದ್ದ 0.6 ಕೆಜಿ ಶಿಶುವಿನ ಯಶಸ್ವಿ ಆರೈಕೆ

ಜನನದ ವೇಳೆ 0.6 ಕೆಜಿ ತೂಕವಿದ್ದ ಮಗು ಈಗ 1.6 ಕೆಜಿ ತೂಕ ಹೊಂದಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆ ಸ್ಪರ್ಶ್‌ ಆಸ್ಪತ್ರೆಗೆ ಬಂದಾಗ, ತಾಯಿ ಮತ್ತು ಮಗುವಿನ ಜೀವಕ್ಕೂ ಅಪಾಯ ಉಂಟಾಗಬಹುದಾದ ಗಂಭೀರ ಆರೋಗ್ಯ ಸ್ಥಿತಿ ಪತ್ತೆಯಾಯಿತು. ಅವರು ದೀರ್ಘಕಾಲದ ಸ್ವಯಂಪ್ರತಿರೋಧಕ ಕಾಯಿಲೆಯಾದ ಸಿಸ್ಟಮಿಕ್‌ ಲೂಪಸ್‌ ಎರಿಥೆಮಾಟೋಸಸ್‌ (ಎಸ್‌ಎಲ್‌ಇ) ಮತ್ತು ಇಮ್ಯೂನ್‌ ಥ್ರೋಬೋ ಸೈಟೋಪೆನಿಕ್‌ ಪರ್ಪುರಾ (ಐಟಿಪಿ) ಸಮಸ್ಯೆಯಿಂದ ಬಳಲುತ್ತಿದ್ದರು

ಬೆಂಗಳೂರು: ಮೂರು ಬಾರಿ ಸತತ ಗರ್ಭಪಾತ ಹಾಗೂ ಅತೀ ಕಡಿಮೆ ಪ್ಲೇಟ್‌ಲೆಟ್‌ ಸಮಸ್ಯೆ ಯಿಂದಾಗಿ ತಾಯಿಯಾಗುವ ಆಸೆಯನ್ನೇ ಕಳೆದುಕೊಂಡಿದ್ದ ಹಾಸನದ ಮಹಿಳೆಗೆ ಯಶಸ್ವಿಯಾಗಿ ಹೆರಿಗೆ ಮಾಡಿಸುವಲ್ಲಿ ಸ್ಪರ್ಶ್‌ ಆಸ್ಪತ್ರೆ ಯಶವಂತಪುರದ ವೈದ್ಯರು ಯಶಸ್ವಿಯಾಗಿದ್ದಾರೆ.

ಅಲ್ಲದೆ, ಜನನದ ವೇಳೆ 0.6 ಕೆಜಿ ತೂಕವಿದ್ದ ಮಗು ಈಗ 1.6 ಕೆಜಿ ತೂಕ ಹೊಂದಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮಹಿಳೆ ಸ್ಪರ್ಶ್‌ ಆಸ್ಪತ್ರೆಗೆ ಬಂದಾಗ, ತಾಯಿ ಮತ್ತು ಮಗುವಿನ ಜೀವಕ್ಕೂ ಅಪಾಯ ಉಂಟಾಗಬಹುದಾದ ಗಂಭೀರ ಆರೋಗ್ಯ ಸ್ಥಿತಿ ಪತ್ತೆಯಾಯಿತು. ಅವರು ದೀರ್ಘಕಾಲದ ಸ್ವಯಂಪ್ರತಿರೋಧಕ ಕಾಯಿಲೆಯಾದ ಸಿಸ್ಟಮಿಕ್‌ ಲೂಪಸ್‌ ಎರಿಥೆಮಾಟೋಸಸ್‌ (ಎಸ್‌ಎಲ್‌ಇ) ಮತ್ತು ಇಮ್ಯೂನ್‌ ಥ್ರೋಬೋ ಸೈಟೋಪೆನಿಕ್‌ ಪರ್ಪುರಾ (ಐಟಿಪಿ) ಸಮಸ್ಯೆಯಿಂದ ಬಳಲುತ್ತಿದ್ದರು. ಇದರಿಂದ ಪ್ಲೇಟ್‌ಲೆಟ್‌ ಸಂಖ್ಯೆ ತೀವ್ರವಾಗಿ ಕಡಿಮೆಯಾಗಿದ್ದು, ಗರ್ಭಧಾರಣೆ ಅತ್ಯಂತ ಅಪಾಯಕಾರಿಯಾಗಿತ್ತು.

ಇದನ್ನೂ ಓದಿ: World Day Against Child Labor: ಕನ್ನಡ ಭವನದಲ್ಲಿ ಜೂ.12ರಂದು ವಿಶ್ವಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ

ಮಹಿಳೆಯ ಸ್ಥಿತಿಯನ್ನು ಗಮನಿಸಿ ಪ್ರಸೂತಿ ತಜ್ಞೆ ಡಾ.ಪದ್ಮಲತಾ, ಕೀಲುರೋಗ ತಜ್ಞೆ ಡಾ. ವಿನಯಾ, ರಕ್ತತಜ್ಞ ಡಾ. ಮಹೇಶ್‌ ಮತ್ತು ಭ್ರೂಣ ವೈದ್ಯಕೀಯ ತಜ್ಞೆ ಡಾ.ಲತಾ ಅವರನ್ನೊಳ ಗೊಂಡ ಬಹುವಿಭಾಗೀಯ ವೈದ್ಯರ ತಂಡ ಚಿಕಿತ್ಸೆ ಆರಂಭಿಸಿತು. 17ನೇ ವಾರದಲ್ಲಿ ನಡೆಸಿದ ಆಮ್ನಿಯೋಸೆಂಟೆಸಿಸ್‌ ಪರೀಕ್ಷೆಯಲ್ಲಿ ಭ್ರೂಣದ ವರ್ಣತಂತುಗಳು ಸಾಮಾನ್ಯವಾಗಿರುವುದು ದೃಢಪಟ್ಟಿತು. ಆದರೆ 25ನೇ ವಾರದ ಸ್ಕ್ಯಾನ್‌ನಲ್ಲಿ ಭ್ರೂಣಕ್ಕೆ ತೀವ್ರ ರಕ್ತಹೀನತೆ ಮತ್ತು ಹೃದಯ ವೈಫಲ್ಯದ ಅಪಾಯ ಕಂಡುಬಂದಿತು.

ವೈದ್ಯರು ತಕ್ಷಣ ಗರ್ಭದಲ್ಲಿರುವ ಮಗುವಿಗೆ ಇಂಟ್ರಾ ಯುಟಿರೀನ್‌ ಟ್ರಾನ್ಸ್‌ಫ್ಯೂಷನ್‌ ಮೂಲಕ ರಕ್ತ ವರ್ಗಾಯಿಸಿದರು. ನಂತರ ಪ್ಲೇಟ್‌ಲೆಟ್‌ ಕುಸಿತ ನಿಯಂತ್ರಣಕ್ಕಾಗಿ ಐವಿಐಜಿ ಚಿಕಿತ್ಸೆ ನೀಡಲಾಯಿತು. ಏಳನೇ ತಿಂಗಳಲ್ಲಿ ಮತ್ತೊಮ್ಮೆ ರಕ್ತ ವರ್ಗಾವಣೆ ಮಾಡಲಾಯಿತು.

“ಈ ಪ್ರಕರಣ ಅತ್ಯಂತ ಅಪಾಯಕಾರಿಯಾಗಿತ್ತು. ಹಿಂದಿನ ಗರ್ಭಪಾತಗಳ ಹಿನ್ನೆಲೆ ಕಾರಣದಿಂದ ರೋಗಿಗೆ ಮಾನಸಿಕ ಧೈರ್ಯ ನೀಡುವುದೂ ಮುಖ್ಯವಾಗಿತ್ತು. ಬಹುವಿಭಾಗೀಯ ತಂಡದ ಎಚ್ಚರಿಕೆ ಯ ಚಿಕಿತ್ಸೆಯಿಂದ 34 ವಾರಗಳ ಬಳಿಕ ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಕಾಪಾಡಲು ಸಾಧ್ಯವಾಯಿತು,” ಎಂದು ಡಾ. ಪದ್ಮಲತಾ ಹೇಳಿದರು. ಹೆರಿಗೆಯ ನಂತರ ನವಜಾತ ಶಿಶು ತಜ್ಞ ಡಾ. ಅರುಣ್‌ ಅವರ ನೇತೃತ್ವದಲ್ಲಿ ಮಗುವಿಗೆ ಎನ್‌ಐಸಿಯುವಿನಲ್ಲಿ ಆರೈಕೆ ನೀಡಲಾಯಿತು.