ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹುಟ್ಟಿನಿಂದಲೇ ಇದ್ದ ಹೃದಯ ಸಂಬಂಧಿ ಕಾಯಿಲೆಯಿಂದ ಪೇಸ್‌ಮೇಕರ್ ಅಳವಡಿಸಿಕೊಂಡಿದ್ದ ಗರ್ಭಿಣಿಗೆ ಯಶಸ್ವಿ ಹೆರಿಗೆ

ಮೊದಲ ಬಾರಿಗೆ ತಾಯಿಯಾಗುತ್ತಿದ್ದ ಯುವತಿ ಹುಟ್ಟಿನಿಂದಲೇ ಹೃದಯ ಸಂಬಂಧಿ ಕಾಯಿಲೆ ಯಿಂದ ಬಳಲುತ್ತಿದ್ದರು. ಬಾಲ್ಯದಲ್ಲೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರಿಗೆ, ಹೃದಯ ಬಡಿತದ ಸಮಸ್ಯೆಯಿಂದಾಗಿ ಶಾಶ್ವತ ಪೇಸ್‌ಮೇಕರ್ ಅಳವಡಿಸಲಾಗಿತ್ತು. ಗರ್ಭಧಾರಣೆಯ ವೇಳೆ ಗರ್ಭಕೋಶ ದಲ್ಲಿ ‘ಪ್ಲಾಸೆಂಟಲ್ ಲ್ಯಾಕುನೆ’ ಎಂಬ ಅಸಹಜತೆ ಪತ್ತೆಯಾಗಿದ್ದು, ಹೆರಿಗೆಯ ವೇಳೆ ತೀವ್ರ ರಕ್ತಸ್ರಾವ ವಾಗುವ ಅಪಾಯವಿತ್ತು.

ಬೆಂಗಳೂರು: ಹುಟ್ಟಿನಿಂದಲೇ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಾ, ಪೇಸ್‌ಮೇಕರ್ ಅಳವಡಿಸಿಕೊಂಡಿದ್ದ 21 ವರ್ಷದ ಗರ್ಭಿಣಿಗೆ ಯಶವಂತಪುರದ ಸ್ಪರ್ಶ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಅತ್ಯಂತ ಅಪಾಯಕಾರಿಯಾಗಿದ್ದ ಈ ಪ್ರಕರಣದಲ್ಲಿ ತಾಯಿ ಮತ್ತು ಮಗು ಇಬ್ಬರೂ ಸುರಕ್ಷಿತ ವಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಮೊದಲ ಬಾರಿಗೆ ತಾಯಿಯಾಗುತ್ತಿದ್ದ ಯುವತಿ ಹುಟ್ಟಿನಿಂದಲೇ ಹೃದಯ ಸಂಬಂಧಿ ಕಾಯಿಲೆ ಯಿಂದ ಬಳಲುತ್ತಿದ್ದರು. ಬಾಲ್ಯದಲ್ಲೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರಿಗೆ, ಹೃದಯ ಬಡಿತದ ಸಮಸ್ಯೆಯಿಂದಾಗಿ ಶಾಶ್ವತ ಪೇಸ್‌ಮೇಕರ್ ಅಳವಡಿಸಲಾಗಿತ್ತು. ಗರ್ಭಧಾರಣೆಯ ವೇಳೆ ಗರ್ಭಕೋಶದಲ್ಲಿ ‘ಪ್ಲಾಸೆಂಟಲ್ ಲ್ಯಾಕುನೆ’ ಎಂಬ ಅಸಹಜತೆ ಪತ್ತೆಯಾಗಿದ್ದು, ಹೆರಿಗೆಯ ವೇಳೆ ತೀವ್ರ ರಕ್ತಸ್ರಾವವಾಗುವ ಅಪಾಯವಿತ್ತು.

ಇದನ್ನೂ ಓದಿ:Bangalore News: ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದಲ್ಲಿ ಅದ್ದೂರಿ ಕಾರ್ಯಕ್ರಮ: ಡಾ.ಟಿ.ಎಸ್.ಸತ್ಯವತಿ ಅವರಿಗೆ ಸನ್ಮಾನ ಹಾಗೂ ಕೈಲಾಸ ಮಾನಸ ಸರೋವರ ದರ್ಶನ

ಈ ಹಿನ್ನೆಲೆಯಲ್ಲಿ ಸ್ಪರ್ಶ್ ಆಸ್ಪತ್ರೆಯಲ್ಲಿ ಪ್ರಸೂತಿ, ಹೃದ್ರೋಗ, ಅರಿವಳಿಕೆ, ನವಜಾತ ಶಿಶು ವಿಭಾಗ ಹಾಗೂ ಹೃದಯ ತಾಂತ್ರಿಕ ತಜ್ಞರ ಬಹುಶಿಸ್ತೀಯ ತಂಡ ರಚಿಸಲಾಯಿತು. ಸಮಗ್ರ ಹೃದಯ ತಪಾಸಣೆ ಬಳಿಕ ಬೆನ್ನುಹುರಿ ಅರಿವಳಿಕೆ ನೀಡಿ ಯೋಜಿತ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸ ಲಾಯಿತು. ಶಸ್ತ್ರಚಿಕಿತ್ಸೆಯ ವೇಳೆ ಪೇಸ್‌ಮೇಕರ್ ಕಾರ್ಯನಿರ್ವಹಣೆಯನ್ನು ಗಮನಿಸಲು ವಿಶೇಷ ತಂತ್ರಜ್ಞರನ್ನು ಆಪರೇಷನ್ ಥಿಯೇಟರ್‌ನಲ್ಲಿಯೇ ನಿಯೋಜಿಸಲಾಗಿತ್ತು.

ನಿರೀಕ್ಷೆಯಂತೆ ಶಸ್ತ್ರಚಿಕಿತ್ಸೆ ವೇಳೆ ತೀವ್ರ ರಕ್ತಸ್ರಾವ ಎದುರಾದರೂ, ವೈದ್ಯರು ತ್ವರಿತ ಕ್ರಮಗಳಿಂದ ಅದನ್ನು ನಿಯಂತ್ರಿಸಿದರು. ಯುವತಿ 2.9 ಕೆ.ಜಿ. ತೂಕದ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದರು.

ಸ್ಪರ್ಶ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಸ್ಪೂರ್ತಿ ಚಂದ್ರಕಾಂತ್ ಮಾತನಾಡಿ, “ಹೃದಯ ಸಮಸ್ಯೆಯಿರುವ ಗರ್ಭಿಣಿಯರಿಗೆ ನಿಖರ ಯೋಜನೆ, ನಿರಂತರ ನಿಗಾ ಮತ್ತು ವಿಭಾಗಗಳ ನಡುವಿನ ಸಮನ್ವಯ ಅತ್ಯಗತ್ಯ. ಸಿಸೇರಿಯನ್ ಶಸ್ತ್ರಚಿಕಿತ್ಸೆಯ ವೇಳೆ ನಿರೀಕ್ಷೆಯಂತೆಯೇ ಪ್ಲಾಸೆಂಟದ ಅಸಹಜತೆಯಿಂದಾಗಿ ಬಾಣಂತಿಗೆ ತೀವ್ರ ರಕ್ತಸ್ರಾವ ಎದುರಾಯಿತು. ಆದರೆ, ಈ ಬಗ್ಗೆ ಮೊದಲೇ ಅರಿತಿದ್ದ ಪ್ರಸೂತಿ ತಜ್ಞರ ತಂಡವು ತ್ವರಿತವಾಗಿ ಕಾರ್ಯಪ್ರವೃತ್ತವಾಗಿ ಸುಧಾರಿತ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಕ್ರಮಗಳನ್ನು ಕೈಗೊಂಡಿತು. ಬಾಣಂತಿಯ ಆರೋಗ್ಯ ಸ್ಥಿತಿ ಯನ್ನು ಸ್ಥಿರವಾಗಿ ಕಾಯ್ದುಕೊಳ್ಳುವ ಮೂಲಕ ರಕ್ತಸ್ರಾವವನ್ನು ಯಶಸ್ವಿಯಾಗಿ ನಿಯಂತ್ರಿಸ ಲಾಯಿತು.

ಇಷ್ಟೆಲ್ಲಾ ಸವಾಲುಗಳ ನಡುವೆಯೂ ೨.೯ ಕೆ.ಜಿ. ತೂಕದ ಆರೋಗ್ಯವಂತ ಗಂಡು ಮಗುವಿಗೆ ಯುವತಿ ಜನ್ಮ ನೀಡುವಲ್ಲಿ ವೈದ್ಯರು ಯಶಸ್ವಿಯಾದರು. ಶಸ್ತ್ರಚಿಕಿತ್ಸೆಯ ನಂತರದ ದಿನಗಳಲ್ಲಿ ತಾಯಿ ಮತ್ತು ಮಗು ಇಬ್ಬರೂ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಉತ್ತಮ ಆರೋಗ್ಯ ದೊಂದಿಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.