ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

73 ವರ್ಷದ ಮಹಿಳೆಯ ಎದೆಯಲ್ಲಿ ಪತ್ತೆಯಾಗಿದ್ದ ಉದರದ ಅಂಗಾಂಗಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಮಹಿಳೆಯ ದೇಹದಲ್ಲಿನ ಈ ಸಂಕೀರ್ಣ ಸ್ವರೂಪದ ಆರೋಗ್ಯ ಸಮಸ್ಯೆಗೆ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಯ ಲ್ಯಾಪರೊಸ್ಕೋಪಿಕ್ ಮತ್ತು ಜಠರಗರುಳಿನ ಶಸ್ತ್ರಚಿಕಿತ್ಸಕ ಡಾ. ಪ್ರಣವ್ ಹೊನ್ನಾವರ ಶ್ರೀನಿವಾಸನ್ ಮತ್ತು ಅವರ ಶಸ್ತ್ರಚಿಕಿತ್ಸಾ ತಂಡವು ನಡೆಸಿದ ಕಡಿಮೆ ನೋವಿನ ಸುಲಭದ ಶಸ್ತ್ರಚಿಕಿತ್ಸೆ ಮೂಲಕ ಈ ಸಂಕೀರ್ಣ ಬಗೆಯ ಆರೋಗ್ಯ ಸಮಸ್ಯೆಯನ್ನು ಯಶಸ್ವಿ ಯಾಗಿ ಗುಣಪಡಿಸಲಾಗಿದೆ.

ಟೈಪ್ IV ಹಿಯಾಟಲ್ ಹರ್ನಿಯಾ ಒಂದು ಅಪರೂಪದ ಸ್ಥಿತಿಯಾಗಿದ್ದು, ಇದು ಎಲ್ಲಾ ಬಗೆಯ ಹಿಯಾಟಲ್ ಹರ್ನಿಯಾ ಪ್ರಕರಣಗಳಲ್ಲಿ ಶೇ.5ಕ್ಕಿಂತ ಕಡಿಮೆ ಇರಲಿದೆ

ಬೆಂಗಳೂರು: ಅತ್ಯಂತ ಅಪರೂಪದ ಪ್ರಕರಣದಲ್ಲಿ, ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಯ ವೈದ್ಯರು 73 ವರ್ಷದ ಮಹಿಳೆಯಲ್ಲಿ ಕಂಡುಬಂದಿದ್ದ ಅಪರೂಪದ ಟೈಪ್ IV ಹಿಯಾಟಲ್ ಹರ್ನಿಯಾ (Type IV Hiatal Hernia ) ಆರೋಗ್ಯ ಸಮಸ್ಯೆಗೆ ಯಶಸ್ವಿ ಚಿಕಿತ್ಸೆ ನೀಡಿದ್ದಾರೆ.

ಎದೆಗೂಡನ್ನು ಹೊಟ್ಟೆಯ ಭಾಗದಿಂದ ಬೇರ್ಪಡಿಸುವ, ಉಸಿರಾಟಕ್ಕೆ ಸಹಾಯ ಮಾಡುವ ಮುಖ್ಯ ಸ್ನಾಯುವಿನಲ್ಲಿ (ಡಯಾಫ್ರಾಮ್‌) ವಿಸ್ತರಿಸಿದ ತೆರೆಯುವಿಕೆಯ ಮೂಲಕ ಕಿಬ್ಬೊಟ್ಟೆಯ ಅಂಗಗಳು ಎದೆಯ ಟೊಳ್ಳು ಭಾಗಕ್ಕೆ ವಲಸೆ ಹೋಗಿರುವುದು ಈ ಮಹಿಳೆ ಯಲ್ಲಿ ಕಂಡುಬಂದಿತ್ತು.

ಮಹಿಳೆಯ ದೇಹದಲ್ಲಿನ ಈ ಸಂಕೀರ್ಣ ಸ್ವರೂಪದ ಆರೋಗ್ಯ ಸಮಸ್ಯೆಗೆ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಯ ಲ್ಯಾಪರೊಸ್ಕೋಪಿಕ್ ಮತ್ತು ಜಠರಗರುಳಿನ ಶಸ್ತ್ರಚಿಕಿತ್ಸಕ ಡಾ. ಪ್ರಣವ್ ಹೊನ್ನಾವರ ಶ್ರೀನಿವಾಸನ್ ಮತ್ತು ಅವರ ಶಸ್ತ್ರಚಿಕಿತ್ಸಾ ತಂಡವು ನಡೆಸಿದ ಕಡಿಮೆ ನೋವಿನ ಸುಲಭದ ಶಸ್ತ್ರಚಿಕಿತ್ಸೆ ಮೂಲಕ ಈ ಸಂಕೀರ್ಣ ಬಗೆಯ ಆರೋಗ್ಯ ಸಮಸ್ಯೆಯನ್ನು ಯಶಸ್ವಿಯಾಗಿ ಗುಣಪಡಿಸಲಾಗಿದೆ.

ಇದನ್ನೂ ಓದಿ:Health Tips: ಮೆಮೊರಿ ಪವರ್‌ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸಿಂಪಲ್‌ ಟಿಪ್ಸ್‌

ರೋಗಿ ಪಲ್ಲವಿ ಕುಮಾರಿ (ಹೆಸರು ಬದಲಾಯಿಸಲಾಗಿದೆ) 3 ತಿಂಗಳಿನಿಂದ ನಿರಂತರ ಹೊಟ್ಟೆ ನೋವು, ವಾಂತಿ, ಹಸಿವು ಆಗದಿರುವಿಕೆ ಮತ್ತು ಉಸಿರಾಟದ ಸಮಸ್ಯೆಯಿಂದ ತೊಂದರೆ ಅನುಭವಿಸುತ್ತಿದ್ದರು. ಕಾಯಿಲೆ ಪತ್ತೆ ಹಾಗೂ ಚಿಕಿತ್ಸೆ ಉದ್ದೇಶಕ್ಕೆ ಅವರನ್ನು ನಾಗರಬಾವಿಯ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಮಗ್ರ ಸ್ವರೂಪದ ವೈದ್ಯಕೀಯ ತಪಾಸಣೆ ನಂತರ, ಮಹಿಳೆಗೆ ಅಪರೂಪದ ಮತ್ತು ಗಂಭೀರ ಸ್ವರೂಒದ ಟೈಪ್ IV ಪ್ಯಾರಾಇಸೊಫೇಸಿಯಲ್ ಹರ್ನಿಯಾ ಇರುವುದು ಪತ್ತೆಯಾಯಿತು.

ಇದು ಹೊಟ್ಟೆ, ಮೇದೋಜ್ಜೀರಕ ಗ್ರಂಥಿಯ ಭಾಗ, ದೊಡ್ಡ ಕರುಳು ಮತ್ತು ಗುಲ್ಮ ಪೂರೈಸುವ ರಕ್ತನಾಳಗಳು ಸೇರಿದಂತೆ ಕಿಬ್ಬೊಟ್ಟೆಯ ಬಹು ಅಂಗಗಳು ಎದೆಯ ಟೊಳ್ಳು ಭಾಗದಲ್ಲಿ ಸೇರಿಕೊಂಡಿದ್ದ ಸ್ಥಿತಿಯಾಗಿದೆ. ರೋಗಿಯ ಎರಡೂ ಶ್ವಾಸಕೋಶಗಳ ಸುತ್ತಲೂ ದ್ರವ ಶೇಖರಣೆಯಾಗಿತ್ತು. ಜೊತೆಗೆ ಹೃದಯ ಕಾಯಿಲೆ, ಹೈಪೋಥೈರಾಯ್ಡಿಸಮ್ ಮತ್ತು ಉಸಿರಾಟದ ತೊಂದರೆಗಳು ಸೇರಿದಂತೆ ವಿವಿಧ ಸಮಸ್ಯೆಗಳಿಂದ ಮಹಿಳೆ ಬಳಲುತ್ತಿದ್ದರು.

ರೋಗಿಯ ವಯಸ್ಸು, ಆಂಜಿಯೊಪ್ಲ್ಯಾಸ್ಟಿ ಇತಿಹಾಸ ಮತ್ತು ದುರ್ಬಲಗೊಂಡಿರುವ ಶ್ವಾಸಕೋಶಗಳ ಕಾರ್ಯವೈಖರಿಯ ಕಾರಣಕ್ಕೆ ಶಸ್ತ್ರಚಿಕಿತ್ಸೆ ನಡೆಸುವುದು ಅಪಾಯಕಾರಿ ನಡೆಯಾಗಿತ್ತು. ಇಂತಹ ತೀವ್ರವಾದ ಹಿಯಾಟಲ್ ಹರ್ನಿಯಾ, ಉಸಿರಾಟದ ತೊಂದರೆಗಳು, ಜೀರ್ಣಕಾರಿ ತೊಡಕುಗಳು ಚಿಕಿತ್ಸೆಯನ್ನು ದೀರ್ಘ ಮತ್ತು ಸವಾಲಿನದ್ದಾಗಿ ಮಾಡಿದ್ದವು. ಈ ಪ್ರತಿಕೂಲತೆಗಳ ನಡುವೆಯೂ ಡಾ. ಪ್ರಣವ್ ನೇತೃತ್ವದ ವೈದ್ಯರು, ಶ್ವಾಸಕೋಶಶಾಸ್ತ್ರಜ್ಞರು, ಹೃದ್ರೋಗ ತಜ್ಞರು ಮತ್ತು ಗ್ಯಾಸ್ಟ್ರೊಎಂಟರಾಲಜಿಸ್ಟ್‌ಗಳನ್ನು ಒಳಗೊಂಡ ವಿವಿಧ ತಜ್ಞ ವೈದ್ಯರ ತಂಡದ ಜೊತೆ ವಿವರವಾಗಿ ಸಮಾಲೋಚನೆ ಮತ್ತು ಮೌಲ್ಯಮಾಪನ ನಡೆಸಿದ ನಂತರ, ಅಂಗಗಳನ್ನು ಅವುಗಳ ನಿಗದಿತ ಸ್ಥಾನದಲ್ಲಿ ಮರುಸ್ಥಾಪಿಸಲು ಮತ್ತು ಎದೆಗೂಡ ನ್ನು ಹೊಟ್ಟೆಯ ಭಾಗದಿಂದ ಬೇರ್ಪಡಿಸುವ, ಉಸಿರಾಟಕ್ಕೆ ಸಹಾಯ ಮಾಡುವ ಮುಖ್ಯ

ಸ್ನಾಯುವಿನಲ್ಲಿನ (ಡಯಾಫ್ರಾರ್ಮ್‌) ದೋಷ ಸರಿಪಡಿಸಲು ನಿರ್ಧಾರಕ್ಕೆ ಬರಲಾಗಿತ್ತು. ಕಡಿಮೆ ನೋವಿನ ಸುಲಭದ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಲಾಗಿತ್ತು.

ಬೆಂಗಳೂರಿನ ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಯ ಲ್ಯಾಪರೊಸ್ಕೋಪಿಕ್ ಮತ್ತು ಜಠರಗರುಳಿನ ಶಸ್ತ್ರಚಿಕಿತ್ಸಕ ಡಾ.ಪ್ರಣವ್ ಹೊನ್ನಾವರ ಶ್ರೀನಿವಾಸನ್ ಅವರು ಈ ಅಪರೂಪದ ವೈದ್ಯಕೀಯ ಪ್ರಕರಣದ ವಿವರಗಳನ್ನು ನೀಡಿದ್ದಾರೆ. "ಇದು ಹೆಚ್ಚು ಅಪಾಯದ ಶಸ್ತ್ರಚಿಕಿತ್ಸೆಯ ಪ್ರಕರಣವಾಗಿತ್ತು. ಸಾಮಾನ್ಯ ಅರಿವಳಿಕೆ ನೀಡಿ ಹರ್ಮಿನೇಟೆಡ್‌ ಅಂಗಾಂಗಗಳನ್ನು ಕಿಬ್ಬೊಟ್ಟೆಯ ಟೊಳ್ಳು ಭಾಗದಲ್ಲಿ ಮತ್ತೆ ಇರಿಸ ಲಾಯಿತು. ಎದೆಗೂಡನ್ನು ಹೊಟ್ಟೆಯ ಭಾಗದಿಂದ ಬೇರ್ಪಡಿಸುವ, ಉಸಿರಾಟಕ್ಕೆ ಸಹಾಯ ಮಾಡುವ ಮುಖ್ಯ ಸ್ನಾಯುವಿನಲ್ಲಿನ (ಡಯಾಫ್ರಾರ್ಮ್‌)ನಲ್ಲಿನ ತೆರೆದ ಭಾಗವನ್ನು ಜಾಲರಿ ಬಳಸಿ ಮುಚ್ಚಲಾಯಿತು. ಈ ಸಮಸ್ಯೆ ಮರುಕಳಿಸುವುದನ್ನು ತಡೆಗಟ್ಟಲು ಮತ್ತು ಆಮ್ಲ ಹಿಮ್ಮುಖ ಹರಿವು ನಿಯಂತ್ರಿಸಲು ನಿಸ್ಸೆನ್ ಫಂಡೊಪ್ಲಿಕೇಷನ್ ಎಂಬ ಹೆಚ್ಚುವರಿ ಶಸ್ತ್ರ ಚಿಕಿತ್ಸೆ ನಡೆಸಲಾಯಿತುʼ ಎಂದು ವಿವರಿಸಿದ್ದಾರೆ.

ಯಶಸ್ವಿ ಶಸ್ತ್ರ ಚಿಕಿತ್ಸೆ ನಂತರ, ರೋಗಿಗೆ ನಿರಂತರ ಸಕಾರಾತ್ಮಕ ವಾಯುಮಾರ್ಗ ಒತ್ತಡ (ಸಿಪಿಎಪಿ) ಒದಗಿಸಲಾಗಿತ್ತು. ಸ್ಥಿರ ಆರೋಗ್ಯ ಸ್ಥಿತಿಯಲ್ಲಿ ಒಂದು ವಾರದೊಳಗೆ ಮನೆಗೆ ಕಳಿಸಲಾಯಿತು.

ಕಡಿಮೆಯಾದ ರಕ್ತದ ಹರಿವು ಸಹ ಪರಿಣಾಮ ಬೀರಿತ್ತು. "ಗುಲ್ಮದ (ಸ್ಪ್ಲೀನ್‌) ಒಂದು ಭಾಗವು ಆರೋಗ್ಯ ಸ್ಥಿತಿಯನ್ನು ಹೆಚ್ಚು ಸಂಕೀರ್ಣಗೊಳಿಸುತ್ತದೆ. ಜಾಗತೂಕತೆಯಿಂದ ನಿರ್ವಹಿಸಿದ ಶಸ್ತ್ರಚಿಕಿತ್ಸೆ ಮತ್ತು ಸಮನ್ವಯದ ವಿವಿಧ ಬಗೆಯ ಕಾಳಜಿ ಮೂಲಕ, ನಾವು ಅಂಗಗಳನ್ನು ಸುರಕ್ಷಿತವಾಗಿ ಮರುಸ್ಥಾಪಿಸಲು, ಡಯಾಫ್ರಾಮ್ ಸರಿಪಡಿಸಲು ಮತ್ತು ರೋಗಿಯ ಆರೋಗ್ಯ ಸ್ಥಿರಗೊಳಿಸಲು ಸಾಧ್ಯವಾಯಿತುʼ ಎಂದು ಹೇಳಿದ್ದಾರೆ.

ʼವಿಶೇಷವಾಗಿ ಮೇಲ್ನೋಟಕ್ಕೆ ಸುಲಭವಾಗಿ ಗುರುತಿಸಲಿಕ್ಕಾಗದ ಸಂಕೀರ್ಣ ಸ್ವರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವಯಸ್ಸಾದ ರೋಗಿಗಳಲ್ಲಿ, ಆರಂಭದಲ್ಲಿಯೇ ಕಾಯಿಲೆ ಗುರುತಿಸುವ ಮತ್ತು ಸಕಾಲದಲ್ಲಿ ಶಸ್ತ್ರಚಿಕಿತ್ಸೆ ನಡೆಸುವುದು ತುಂಬ ಮಹತ್ವದ ಪಾತ್ರ ನಿರ್ವಹಿಸುತ್ತದೆʼ ಎಂದು ಡಾ. ಪ್ರಣವ್ ಅವರು ಹೇಳಿದ್ದಾರೆ.

ತಮ್ಮ ಅನುಭವ ಹಂಚಿಕೊಂಟಿರುವ, ರೋಗಿಯು "ಆರಂಭದಲ್ಲಿ, ಗಂಭೀರ ಉಸಿರಾಟದ ಸಮಸ್ಯೆಗಳನ್ನು ಅನುಭವಿಸುತ್ತಿದ್ದ ಕಾರಣ ನಾನು ತುಂಬಾ ಚಿಂತಿತಳಾಗಿದ್ದೆ ಹಾಗೂ ಭಯಭೀತಳಾಗಿದ್ದೆ. ನನ್ನ ಕೆಲವು ಕಿಬ್ಬೊಟ್ಟೆಯ ಅಂಗಗಳು ನನ್ನ ಎದೆಗೆ ಸ್ಥಳಾಂತರ ಗೊಂಡಿವೆ ಎಂದು ವೈದ್ಯರು ವಿವರಿಸಿದಾಗ, ನಾನು ತುಂಬ ಆತಂಕಗೊಂಡಿದ್ದೆ. ನನಗೆ ದಿಕ್ಕು ತೋಚದಂತಾಗಿತ್ತು. ನಾಗರಭಾವಿಯ ಫೋರ್ಟಿಸ್ ಆಸ್ಪತ್ರೆಯ ವೈದ್ಯಕೀಯ ತಂಡವು ನನಗೆ ಧೈರ್ಯ ತುಂಬಿತು. ಹೆಚ್ಚಿನ ಕಾಳಜಿ ಮತ್ತು ಆತ್ಮವಿಶ್ವಾಸದಿಂದ ನನಗೆ ಮಾರ್ಗ ದರ್ಶನ ನೀಡಿತು. ಅವರ ಚಿಕಿತ್ಸೆಗೆ ಧನ್ಯವಾದಗಳು, ನಾನು ಈಗ ಚೆನ್ನಾಗಿ ಚೇತರಿಸಿಕೊಂಡಿ ದ್ದೇನೆ. ನನ್ನ ಸಾಮಾನ್ಯ ದಿನಚರಿಯನ್ನು ಪುನರಾರಂಭಿಸಿದ್ದೇನೆ." ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಾಗರಭಾವಿ ಫೋರ್ಟಿಸ್ ಆಸ್ಪತ್ರೆಯ ಫೆಸಿಲಿಟಿ ಡೈರೆಕ್ಟರ್‌ ರತೀಫ್ ನಾಯಕ್ ಅವರು ಮಾತನಾಡಿ, "ಹೆಚ್ಚಿನ ಆರೋಗ್ಯ ಅಪಾಯ ಹೊಂದಿರುವ ರೋಗಿಗಳಲ್ಲಿಯೂ ಸಹ, ಸಂಕೀರ್ಣವಾದ ಎದೆ ಹಾಗೂ ಉದರ ಸಂಬಂಧಿತ (ಥೊರಕೊಅಬ್ಡೊಮಿನಲ್‌) ಸಮಸ್ಯೆ ಗಳಿಗೆ ಚಿಕಿತ್ಸೆ ನೀಡುವಲ್ಲಿ ಸುಧಾರಿತ ಲ್ಯಾಪರೊಸ್ಕೋಪಿಕ್ ತಂತ್ರಗಳು ಪ್ರಮುಖ ಪಾತ್ರ ವಹಿಸುತ್ತವೆ.

ನಾಗರಬಾವಿ ಫೋರ್ಟಿಸ್ ಆಸ್ಪತ್ರೆಯಲ್ಲಿ , ಸಂಕೀರ್ಣ ಪ್ರಕರಣಗಳನ್ನು ಗರಿಷ್ಠ ನಿಖರತೆ ಮತ್ತು ತ್ವರಿತ ಚೇತರಿಕೆಯೊಂದಿಗೆ ನಿರ್ವಹಿಸಲು ನಾವು ಕಡಿಮೆ ನೋವಿನ ಸುಲಭದ ಶಸ್ತ್ರಚಿಕಿತ್ಸೆಯಲ್ಲಿ ನಮ್ಮ ಪರಿಣತಿಯನ್ನು ಬಲಪಡಿಸುತ್ತಿದ್ದೇವೆ. ಸೂಕ್ಷ್ಮ ಹಾಗೂ ಜಾಗರೂ ಕತೆಯ ಯೋಜನೆ ಮತ್ತು ಸಮನ್ವಯತೆಯ ವೈದ್ಯಕೀಯ ವಿಧಾನದೊಂದಿಗೆ, ಇಂತಹ ಸವಾಲಿನ ಪ್ರಕರಣಗಳನ್ನು ಸುರಕ್ಷಿತವಾಗಿ ನಿರ್ವಹಿಸಬಹುದು ಮತ್ತು ಉತ್ತಮ ಫಲಿತಾಂಶ ಗಳನ್ನು ಖಚಿತಪಡಿಸಿಕೊಳ್ಳಬಹುದುʼ ಎಂದು ಹೇಳಿದ್ದಾರೆ.