ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Sumangali Seva Ashrama: ಡಾ.ಸುಶೀಲಮ್ಮ ಇಡೀ ಹೆಬ್ಬಾಳ ಕ್ಷೇತ್ರಕ್ಕೆ ಮಹಾತಾಯಿ ಇದ್ದಂತೆ: ಸುಮಂಗಲಿ ಸೇವಾಶ್ರಮ ನಾಡಿನ ಹೆಮ್ಮೆ: ಬೈರತಿ ಸುರೇಶ್

ಸುಶೀಲಮ್ಮ ಮತ್ತು ಅವರ ತಂಡ ನಡೆಸುತ್ತಿರುವ ಈ ಕಾರ್ಯದಿಂದಾಗಿ ಸಾವಿರಾರು ಹೆಣ್ಣು ಮಕ್ಕಳು ಇಂದು ಸಮಾಜದಲ್ಲಿ ತಲೆ ಎತ್ತಿ ನಡೆದಾಡಿ ಸ್ವಾವಲಂಬಿ ಜೀವನ ಸಾಗಿಸುವಂತಾಗಿದೆ. ಈ ಕಾರಣ ದಿಂದಲೇ ಸುಶೀಲಮ್ಮ ಅವರು ಕೇವಲ ಆಶ್ರಮ ವಾಸಿಗಳಿಗೆ ತಾಯಿಯಲ್ಲ, ಇಡೀ ಹೆಬ್ಬಾಳ ಕ್ಷೇತ್ರದ ಮಹಾತಾಯಿಯಾಗಿದ್ದಾರೆ ಎಂದು ಬಣ್ಣಿಸಿದರು.

ಬೆಂಗಳೂರು: ಹೆಬ್ಬಾಳದಲ್ಲಿ ಅಬಲೆಯರ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿರುವ ಸುಮಂಗಲಿ ಸೇವಾಶ್ರಮ ನಮ್ಮ ನಾಡಿನ ಹೆಮ್ಮೆಯ ಸಂಸ್ಥೆಯಾಗಿದೆ ಎಂದು ಹೆಬ್ಬಾಳ ಕ್ಷೇತ್ರದ ಶಾಸಕರೂ ಆಗಿರುವ ಸಾರಿಗೆ ಸಚಿವ ಬೈರತಿ ಸುರೇಶ್(Byrati Suresh) ಹೇಳಿದ್ದಾರೆ.

ಹೆಬ್ಬಾಳದಲ್ಲಿರುವ ಸುಮಂಗಲಿ ಸೇವಾ ಆಶ್ರಮ(Sumangali Seva Ashrama)ದಲ್ಲಿ ಏರ್ಪಡಿಸಿದ್ದ ಆಶ್ರಮದ ಸಲಹೆಗಾರರಾದ ಎನ್.ಶ್ರೀದೇವಿ ಅವರು ರಚಿಸಿರುವ ವಿಸ್ಪರ್ಸ್ ಆಫ್ ವಿಸ್ಡಮ್ (Whispers of Wisdom) ಮತ್ತು ಟಾಯ್ಸ್ & ಗೇಮ್ಸ್(Toys & Games) ಎಂಬ ಎರಡು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದವರು, ಅನಾಥ ಹೆಣ್ಣು ಮಕ್ಕಳನ್ನು ಪೋಷಣೆ ಮಾಡುವ ಮೂಲಕ ಅವರಿಗೆ ಪುನರ್ಜನ್ಮ ನೀಡುವ ಮಹತ್ಕಾರ್ಯ ವನ್ನು ಪದ್ಮಶ್ರೀ ಪುರಸ್ಕೃತ(Padma Shri) ರಾದ ಡಾ.ಎಸ್.ಜಿ.ಸುಶೀಲಮ್ಮ ನೇತೃತ್ವದ ಆಶ್ರಮ ಮಾಡುತ್ತಿದೆ ಎಂದು ಶ್ಲಾಘಿಸಿದರು.

ಇದನ್ನೂ ಓದಿ: Bangalore News: ಅಂಬೇಡ್ಕರ್ ಅವರನ್ನು ವ್ಯಕ್ತಿಯಾಗಿ ಅಲ್ಲ, ಸಿದ್ಧಾಂತವಾಗಿ ನೋಡಬೇಕು: ಕೋಡಿ ರಂಗಪ್ಪ ಕರೆ

ಸುಶೀಲಮ್ಮ ಮತ್ತು ಅವರ ತಂಡ ನಡೆಸುತ್ತಿರುವ ಈ ಕಾರ್ಯದಿಂದಾಗಿ ಸಾವಿರಾರು ಹೆಣ್ಣು ಮಕ್ಕಳು ಇಂದು ಸಮಾಜದಲ್ಲಿ ತಲೆ ಎತ್ತಿ ನಡೆದಾಡಿ ಸ್ವಾವಲಂಬಿ ಜೀವನ ಸಾಗಿಸುವಂತಾಗಿದೆ. ಈ ಕಾರಣದಿಂದಲೇ ಸುಶೀಲಮ್ಮ ಅವರು ಕೇವಲ ಆಶ್ರಮ ವಾಸಿಗಳಿಗೆ ತಾಯಿಯಲ್ಲ, ಇಡೀ ಹೆಬ್ಬಾಳ ಕ್ಷೇತ್ರದ ಮಹಾತಾಯಿಯಾಗಿದ್ದಾರೆ ಎಂದು ಬಣ್ಣಿಸಿದರು.

ಈ ಸೇವಾಶ್ರಮ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಇಲ್ಲಿ ಆಶ್ರಯ ಪಡೆಯುತ್ತಿರುವವರ ಸಂಖ್ಯೆಯೂ ಅಧಿಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಶ್ರಮಕ್ಕೆ ಅಗತ್ಯವಿರುವ ಎಲ್ಲಾ ನೆರವನ್ನು ನೀಡಲು ನಮ್ಮ ಸರ್ಕಾರ ಮತ್ತು ಶಾಸಕನಾಗಿ ನಾನು ಬದ್ಧವಾಗಿದ್ದೇವೆ ಎಂದು ಸಚಿವರು ಭರವಸೆ ನೀಡಿದರು.

WhatsApp Image 2026-10-09 at 15.49.07 Sevashrama2

ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್(Thavar Chand Gehlot), ಶಿವರಾತ್ರೀ ದೇಶೀಕೇಂದ್ರ ಸ್ವಾಮೀಜಿ, ಸಾರಿಗೆ ಸಚಿವ ಬೈರತಿ ಸುರೇಶ್, ಮಾಜಿ ಸಚಿವೆ ರಾಣಿ ಸತೀಶ್, ಡಾ.ಸಿ.ಸೋಮಶೇಖರ್, ಡಾ.ಸುಶೀಲಮ್ಮ ಮತ್ತು ಎನ್. ಶ್ರೀದೇವಿ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ರಾಜ್ಯಪಾಲರನ್ನು ಕೊಂಡಾಡಿದ ಬೈರತಿ ಸುರೇಶ್

ಸಮಾರಂಭದಲ್ಲಿ ಉಪಸ್ಥಿತರಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ವ್ಯಕ್ತಿತ್ವ, ನಡೆ ನುಡಿಯ ಬಗ್ಗೆ ಸಾರಿಗೆ ಸಚಿವ ಬೈರತಿ ಸುರೇಶ್ ಮುಕ್ತ ಮನಸಿನಿಂದ ಕೊಂಡಾಡಿದರು.

ನಮ್ಮೆಲ್ಲರಿಗೂ ಹಿರಿಯರಾಗಿರುವ ರಾಜ್ಯಪಾಲರು ಲೋಕಭವನಕ್ಕೆ ಹೋಗುವ ಯಾವುದೇ ಪಕ್ಷದ ಮುಖಂಡರಾಗಲೀ ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುತ್ತಾರೆ. ಅವರು ಯಾವುದೇ ರೀತಿಯ ಬೇಧಭಾವ ಮಾಡುವುದಿಲ್ಲ ಎಂದು ಹೊಗಳಿದರು.

ಅವರು ನೀಡುವ ಆತಿಥ್ಯವನ್ನು ಸ್ವೀಕರಿಸುವುದೇ ಒಂದು ರೀತಿಯಲ್ಲಿ ಖುಷಿಯನ್ನು ನೀಡುತ್ತದೆ. ಗೆಹ್ಲೋಟ್ ಸಾಹೇಬ್ರು ರಾಜ್ಯಕ್ಕೆ ಆಗಮಿಸಿದ್ದ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳಿಗೆ ಇವರ ಹೆಸರು ಬೈರತಿ ಸುರೇಶ್. ಮಂತ್ರಿಯಾಗಿದ್ದಾರೆ, ನಮ್ಮ ಹುಡುಗನ ರೀತಿ ಎಂದು ಪರಿಚಯ ಮಾಡಿ ಕೊಡುವ ಮೂಲಕ ತಮ್ಮ ಮುತ್ಸದ್ಧಿತನವನ್ನು ತೋರಿರುವುದು ಅತ್ಯಂತ ಸಂತೋಷದ ಸಂಗತಿ ಯಾಗಿದೆ ಎಂದರು.

ಗೆಹ್ಲೋಟ್ ಅವರು ನಮ್ಮ ರಾಜ್ಯದಲ್ಲಿ ಕಳೆದ 5 ವರ್ಷಗಳಿಂದ ರಾಜ್ಯಪಾಲರಾಗಿ ಅಧಿಕಾರ ದಲ್ಲಿದ್ದಾರೆ. ನನ್ನ ವೈಯಕ್ತಿಕ ಅಭಿಪ್ರಾಯವೆಂದರೆ ಇಂತಹ ಹಿರಿಯ ಮುತ್ಸದ್ಧಿ ಇನ್ನೂ 10 ವರ್ಷ ಗಳ ಕಾಲ ನಮ್ಮ ರಾಜ್ಯದ ಸೇವೆನ್ನು ಮಾಡಲಿ ಎಂಬುದಾಗಿದೆ. ಏಕೆಂದರೆ, ಅವರಂತಹ ಸ್ನೇಹ ಮಯಿ ರಾಜ್ಯಪಾಲರು ಅತ್ಯಂತ ವಿರಳ ಎಂದು ಬೈರತಿ ಸುರೇಶ್ ಬಣ್ಣಿಸಿದರು.