ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸ್ವಿಗ್ಗಿ, ಜೊಮ್ಯಾಟೋಗೆ ಬೆಂಗಳೂರಲ್ಲಿ ನಿಷೇಧ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆನ್‌ಲೈನ್ ಫುಡ್ ಡೆಲಿವರಿ ದೈತ್ಯ ಸಂಸ್ಥೆಗಳಾದ ಸ್ವಿಗ್ಗಿ, ಜೊಮ್ಯಾಟೊಗಳಿಂದ ಹೋಟೆಲ್‌ಗಳಿಗೆ ತೀವ್ರ ನಷ್ಟವಾಗುತ್ತಿದೆ. ಆ.15ರೊಳಗೆ ಇದನ್ನು ಸ್ವಿಗ್ಗಿ- ಜೊಮ್ಯಾಟೊಗಳು ಸರಿಪಡಿಸದಿದ್ದರೆ, ಅವೆರಡರ ಸೇವೆಯನ್ನೇ ನಗರದಲ್ಲಿ ಬಂದ್ ಮಾಡಿಸ ಲಾಗುತ್ತದೆ. ಇಲ್ಲವೇ ಆಪ್‌ಗಳನ್ನೇ ಬಂದ್ ಮಾಡಿಸಲಾಗುತ್ತದೆ.ಇಂತಹದ್ದೊಂದು ಗಂಭೀರ ಎಚ್ಚರಿಕೆಯನ್ನು ‘ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ’ ನೀಡಿದೆ.

ನೀತಿಗಳಿಂದ ಕೋಟ್ಯಂತರ ರು. ನಷ್ಟ : ಹೋಟೆಲ್‌ಗಳ ಸಂಘ

ಆ.15ರೊಳಗೆ ನೀತಿ ಸರಿಪಡಿಸಿ, ಇಲ್ಲ ಸೇವೆ ಬಂದ್: ಎಚ್ಚರಿಕೆ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಆನ್‌ಲೈನ್ ಫುಡ್ ಡೆಲಿವರಿ ದೈತ್ಯ ಸಂಸ್ಥೆ ಗಳಾದ ಸ್ವಿಗ್ಗಿ, ಜೊಮ್ಯಾಟೊ ಗಳಿಂದ ಹೋಟೆಲ್‌ಗಳಿಗೆ ತೀವ್ರ ನಷ್ಟವಾಗುತ್ತಿದೆ. ಆ.15ರೊಳಗೆ ಇದನ್ನು ಸ್ವಿಗ್ಗಿ- ಜೊಮ್ಯಾಟೊಗಳು ಸರಿಪಡಿಸದಿದ್ದರೆ, ಅವೆರಡರ ಸೇವೆಯನ್ನೇ ನಗರದಲ್ಲಿ ಬಂದ್ ಮಾಡಿಸ ಲಾಗುತ್ತದೆ. ಇಲ್ಲವೇ ಆಪ್‌ಗಳನ್ನೇ ಬಂದ್ ಮಾಡಿಸಲಾಗುತ್ತದೆ.ಇಂತಹದ್ದೊಂದು ಗಂಭೀರ ಎಚ್ಚರಿಕೆಯನ್ನು ‘ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ’ ನೀಡಿದೆ.

ಇದನ್ನೂ ಓದಿ: Swiggy Headquarters: ಬೆಂಗಳೂರಿನ ವೈಟ್‌ಫೀಲ್ಡ್‌ಗೆ ಪ್ರಧಾನ ಕಚೇರಿ ಸ್ಥಳಾಂತರಿಸಿದ 'ಸ್ವಿಗ್ಗಿ'; ಪರಿಸರ ಸ್ನೇಹಿ ನೂತನ ಕ್ಯಾಂಪಸ್‌ನ ವಿಶೇಷತೆಗಳೇನು?

ಆರೋಪಗಳೇನು?

1 ಹೋಟೆಲ್ ಮಾಲೀಕರ ಗಮನಕ್ಕೆ ತರದೆ ಸ್ವಿಗ್ಗಿ ಆಪ್‌ನಲ್ಲಿ ಆಫರ್ ಘೋಷಣೆ. ಆಫರ್‌ನ ಹೆಚ್ಚುವರಿ ಹಣ ಹೋಟೆಲ್‌ಗಳೇ ಭರಿಸಬೇಕಿದೆ.

2 ಗ್ರಾಹಕರು ಕ್ಯಾನ್ಸಲ್ ಮಾಡಿದ ತಿನಿಸಿನ ಹಣ ಕೊಡುವುದಿಲ್ಲ. ತಿನಿಸೂ ಮರಳಿ ಸಿಗುವುದಿಲ್ಲ. ಅದನ್ನು ಡೆಲಿವರಿ ಬಾಯ್‌ಗಳೇ ತಿನ್ನುತ್ತಿದ್ದಾರೆ.

3 ಬಿಲ್ ಮೊತ್ತದಲ್ಲಿ ಶೇ.25ರಿಂದ 30ರಷ್ಟು ಕಮಿಷನ್ ಹಣ ಕಡಿತ. ಬಲವಂತವಾಗಿ ಹೋಟೆಲ್‌ ಗಳಿಗೆ ಜಾಹೀರಾತು ವೆಚ್ಚಗಳ ಹೇರಿಕೆ.

4 ಆನ್‌ಲೈನ್ ಫುಡ್ ಆರ್ಡರ್‌ಗಳು ಗ್ರಾಹಕರ ಜೇಬಿಗೂ ತುಟ್ಟಿ, ಹೋಟೆಲ್‌ಗಳಿಗೂ ನಷ್ಟ. ಸರಕಾರ ಕೂಡಲೇ ಮಧ್ಯಪ್ರವೇಶಿಸಬೇಕು.