ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತನಿಷ್ಕ್‌'ನಿಂದ ವಜ್ರಾಭರಣಗಳ ಸಂಗ್ರಹ ಸೋಲ್ಸ್ ಇನ್ ಸಿಂಫನಿ ಬಿಡುಗಡೆ

ಆಧುನಿಕ ಮಹಿಳೆಯರ ನಡುವಿನ ಆತ್ಮೀಯತೆ ಮತ್ತು ಸ್ನೇಹದಿಂದ ಸ್ಫೂರ್ತಿ ಪಡೆದ ಈ ಸಂಗ್ರಹವು, ಆ ಭಾವನೆಗಳನ್ನು ಅತ್ಯಾಧುನಿಕ ಆಭರಣಗಳಾಗಿ ಪರಿವರ್ತಿಸಿದೆ. ಸೊಗಸಾದ ವಿನ್ಯಾಸಗಳು ಮತ್ತು ಬಹು ಮುಖಿ ಶೈಲಿಗಳು ಈ ಆಭರಣಗಳ ವೈಶಿಷ್ಟ್ಯವಾಗಿದ್ದು, ಇವು ಒಗ್ಗಟ್ಟು ಮತ್ತು ಮಹಿಳೆಯರ ಜೀವನವನ್ನು ಶ್ರೀಮಂತಗೊಳಿಸುವ ಬಂಧಗಳನ್ನು ಪ್ರತಿಬಿಂಬಿಸುತ್ತವೆ.

ಬೆಂಗಳೂರು: ಟಾಟಾ ಸಮೂಹದ ಭಾರತದ ಮುಂಚೂಣಿ ಆಭರಣ ಬ್ರ್ಯಾಂಡ್ ಆಗಿರುವ ತನಿಷ್ಕ್, ತನ್ನ ಹೊಚ್ಚ ಹೊಸ ನೈಸರ್ಗಿಕ ವಜ್ರದ ಆಭರಣಗಳ ಸಂಗ್ರಹ ಸೋಲ್ಸ್ ಇನ್ ಸಿಂಫನಿ ಅನ್ನು ಅನಾವರಣಗೊಳಿಸಿದೆ. 100% ನೈಸರ್ಗಿಕ ವಜ್ರಗಳು ಮತ್ತು ನೈಸರ್ಗಿಕ ರತ್ನಗಳಿಂದ ಸಿದ್ಧಪಡಿಸಲಾದ ಈ ಸಂಗ್ರಹವು, ಇಂದಿನ ಮಹಿಳೆಯರ ಜೀವನವನ್ನು ರೂಪಿಸುವ ವಿಶೇಷ ಸಂಬಂಧಗಳು, ಮರೆಯ ಲಾಗದ ಅನುಭವಗಳು ಮತ್ತು ಅರ್ಥಪೂರ್ಣ ಸ್ನೇಹಬಂಧವನ್ನು ಸಂಭ್ರಮಿಸಲು ರೂಪಿಸಲಾಗಿದೆ.

ನೈಸರ್ಗಿಕ ವಜ್ರದ ಆಭರಣಗಳ ಬಗ್ಗೆ ಗ್ರಾಹಕರಲ್ಲಿ ಆಸಕ್ತಿ ಹೆಚ್ಚುತ್ತಿರುವ ಬೆನ್ನಲ್ಲೇ, ತನಿಷ್ಕ್ ತನ್ನ ಅಪ್ರತಿಮ ಕಲಾಕುಶಲತೆ ಮತ್ತು ಸಮಕಾಲೀನ ವಿನ್ಯಾಸಗಳ ಮೂಲಕ ಈ ವಿಭಾಗದಲ್ಲಿ ತನ್ನ ನಾಯಕತ್ವವನ್ನು ಮತ್ತಷ್ಟು ಬಲಪಡಿಸಿದೆ. ಸೋಲ್ಸ್ ಇನ್ ಸಿಂಫನಿ ಸಂಗ್ರಹವನ್ನು ದೈನಂದಿನ ಕ್ಷಣಗಳು, ಆಪ್ತ ಕೂಟಗಳು ಮತ್ತು ವಿಶೇಷ ಸಂದರ್ಭಗಳಲ್ಲಿ ಸುಲಭವಾಗಿ ಧರಿಸಬಹುದಾದ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಆಧುನಿಕ ಮಹಿಳೆಯರ ನಡುವಿನ ಆತ್ಮೀಯತೆ ಮತ್ತು ಸ್ನೇಹದಿಂದ ಸ್ಫೂರ್ತಿ ಪಡೆದ ಈ ಸಂಗ್ರಹವು, ಆ ಭಾವನೆಗಳನ್ನು ಅತ್ಯಾಧುನಿಕ ಆಭರಣಗಳಾಗಿ ಪರಿವರ್ತಿಸಿದೆ. ಸೊಗಸಾದ ವಿನ್ಯಾಸಗಳು ಮತ್ತು ಬಹುಮುಖಿ ಶೈಲಿಗಳು ಈ ಆಭರಣಗಳ ವೈಶಿಷ್ಟ್ಯವಾಗಿದ್ದು, ಇವು ಒಗ್ಗಟ್ಟು ಮತ್ತು ಮಹಿಳೆಯರ ಜೀವನವನ್ನು ಶ್ರೀಮಂತಗೊಳಿಸುವ ಬಂಧಗಳನ್ನು ಪ್ರತಿಬಿಂಬಿಸುತ್ತವೆ.

ಇದನ್ನೂ ಓದಿ: Tanishq: ಆಧುನಿಕ ಸ್ಫೂರ್ತಿಗಾಗಿ ನೈಸರ್ಗಿಕ ವಜ್ರಗಳ ಅಭಿವ್ಯಕ್ತಿ 'ಎಲಾನ್' ಅನಾವರಣಗೊಳಿಸಿದ ತನಿಷ್ಕ್

ಖ್ಯಾತ ಚಲನಚಿತ್ರ ನಿರ್ದೇಶಕ ಸುಜಿತ್ ಸರ್ಕಾರ್ ಅವರು ಈ ಸಂಗ್ರಹದ ಟಿವಿ ಜಾಹೀರಾತನ್ನು ನಿರ್ದೇಶಿಸಿದ್ದಾರೆ. ಇದು ಆಧುನಿಕ ಸ್ನೇಹ ಮತ್ತು ಮಹಿಳೆಯೊಬ್ಬಳು ತಾನಾಗಿಯೇ ಇರುವಾಗ ಹೊಂದಿರುವ ಶಾಂತತೆ ಮತ್ತು ಆತ್ಮವಿಶ್ವಾಸವನ್ನು ಸುಂದರವಾಗಿ ಬಿಂಬಿಸುತ್ತದೆ.18 ಕ್ಯಾರೆಟ್ ಚಿನ್ನದಲ್ಲಿ ಅರಳಿರುವ ಈ ಆಭರಣ ಸಂಗ್ರಹವು, ಸಾಂಪ್ರದಾಯಿಕ ಕಲಾ ಪರಂಪರೆಯನ್ನು ಆಧುನಿಕ ದೃಷ್ಟಿಕೋನದಲ್ಲಿ ಮರುರೂಪಿಸಿದೆ.

ಆಭರಣಗಳ ಆಕರ್ಷಕ ವಿನ್ಯಾಸ, ಸೂಕ್ಷ್ಮತೆ ಮತ್ತು ವರ್ಣರಂಜಿತ ಶೈಲಿಯು ಇದರ ವೈಶಿಷ್ಟ್ಯವಾಗಿದೆ. ಈ ಶ್ರೇಣಿಯು ಜಟಿಲವಾದ ಓಪನ್‌ ವರ್ಕ್ ಪ್ಯಾಟರ್ನ್‌ ಗಳು, ಸೊಗಸಾದ ರೂಪಗಳು, ಜ್ಯಾಮಿತೀಯ ಚೌಕಟ್ಟುಗಳು, ಆಕರ್ಷಕ ಲ್ಯಾಟಿಸ್ (ಜಾಲರಿ) ವಿವರಗಳು ಮತ್ತು ಹೂವು ಹಾಗೂ ಬೀಸಣಿಗೆಯಿಂದ ಸ್ಫೂರ್ತಿ ಪಡೆದ ಶಿಲ್ಪಕಲಾ ವಿನ್ಯಾಸಗಳನ್ನು ಒಳಗೊಂಡಿದೆ.

ಅತ್ಯಂತ ನಿಖರವಾದ ವಜ್ರದ ಜೋಡಣೆ, ಪದರಗಳ ಮೆಟಲ್ ಕ್ರಾಫ್ಟ್‌ ಮನ್‌ ಶಿಪ್ ಹಾಗೂ ಕುಶನ್, ಪಿಯರ್ (ಪಿಯರ್ ಹಣ್ಣಿನ ಆಕಾರ), ಓವಲ್ (ಅಂಡಾಕಾರ), ಎಮರಾಲ್ಡ್ ಮತ್ತು ರೌಂಡ್- ಕಟ್ ಮಾದರಿಯ ನೈಸರ್ಗಿಕ ರತ್ನಗಳ ಮಿಶ್ರಣವು ಪ್ರತಿ ವಿನ್ಯಾಸಕ್ಕೂ ಜೀವಕಳೆಯನ್ನು ಒದಗಿಸಿದೆ. ತನಿಷ್ಕ್‌ ನ ಬಿಳಿ ನೈಸರ್ಗಿಕ ವಜ್ರಗಳನ್ನು ವಿವಿಧ ರತ್ನಗಳೊಂದಿಗೆ ಸಂಯೋಜಿಸಲಾಗಿದ್ದು, ಇವು ಇಡೀ ಸಂಗ್ರಹಕ್ಕೆ ಆಳ, ವಿಭಿನ್ನತೆ ಮತ್ತು ಆಕರ್ಷಕ ನೋಟವನ್ನು ನೀಡುತ್ತವೆ.ಈ ಪ್ರಚಾರ ಅಭಿಯಾನಕ್ಕಾಗಿ ಇದೇ ಮೊದಲ ಬಾರಿಗೆ ಬಾಲಿವುಡ್ ನಟಿಯರಾದ ಅನನ್ಯಾ ಪಾಂಡೆ, ಸುಶ್ಮಿತಾ ಸೇನ್ ಮತ್ತು ರಾಧಿಕಾ ಆಪ್ಟೆ ಅವರು ಒಂದೆಡೆ ಸೇರಿದ್ದಾರೆ. ವಿಭಿನ್ನ ವ್ಯಕ್ತಿತ್ವ ಮತ್ತು ದೃಷ್ಟಿಕೋನ ಗಳನ್ನು ಪ್ರತಿನಿಧಿಸುವ ಈ ಮೂವರು ಮಹಿಳೆಯರು, ಪರಸ್ಪರ ಗೌರವ, ಸ್ವೀಕಾರ ಮತ್ತು ಹಂಚಿಕೊಂಡ ಸಂತೋಷದ ಮೂಲಕ ಆಧುನಿಕ ಸ್ನೇಹಬಂಧವನ್ನು ಸುಂದರವಾಗಿ ಬಿಂಬಿಸಿದ್ದಾರೆ.

ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಸುಜಿತ್ ಸರ್ಕಾರ್ ನಿರ್ದೇಶನದ ಈ ಜಾಹೀರಾತು ಅಭಿಯಾನವು, ಮಹಿಳೆಯರು ಪರಸ್ಪರ ಬೆಂಬಲವಾಗಿ ನಿಂತಾಗ ಮತ್ತು ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿದಾಗ ಹೇಗೆ ಒಟ್ಟಾಗಿ ಇನ್ನಷ್ಟು ಪ್ರಕಾಶಮಾನವಾಗಿ ಹೊಳೆಯುತ್ತಾರೆ ಎಂಬ ಪರಿಕಲ್ಪನೆಯನ್ನು ಅತ್ಯಂತ ಆಪ್ತ ಹಾಗೂ ಸಹಜವಾದ ಕ್ಷಣಗಳ ಮೂಲಕ ಸೆರೆ ಹಿಡಿದಿದೆ.

ನೂತನ ಸಂಗ್ರಹದ ಬಿಡುಗಡೆಯ ಕುರಿತು ಮಾತನಾಡಿದ ತನಿಷ್ಕ್ ಸಂಸ್ಥೆಯ ಚೀಫ್ ಮಾರ್ಕೆಟಿಂಗ್ ಆಫೀಸರ್ ಪೆಲ್ಕಿ ತ್ಶೆರಿಂಗ್ ಅವರು, "ತನಿಷ್ಕ್‌ ನಲ್ಲಿ ನಾವು ಯಾವಾಗಲೂ ಮಹಿಳೆಯ ಜೀವನದ ವಿವಿಧ ಆಯಾಮಗಳನ್ನು ಮತ್ತು ಅವಳ ವ್ಯಕ್ತಿತ್ವವನ್ನು ರೂಪಿಸುವ ಸಂಬಂಧಗಳನ್ನು ಗೌರವಿಸುತ್ತಾ ಬಂದಿದ್ದೇವೆ. ಸೋಲ್ಸ್ ಇನ್ ಸಿಂಫನಿ ಮೂಲಕ ನಾವು ಭ್ರಾತೃತ್ವವನ್ನು ಸಂಭ್ರಮಿಸುವ ಹೊಸ ರೂಪವನ್ನು ಅನಾವರಣಗೊಳಿಸಲು ಬಯಸಿದ್ದೇವೆ. ಈ ಸಂಗ್ರಹವು ಕೇವಲ ಸಂಪ್ರದಾಯಬದ್ಧವಾದುದಲ್ಲ, ಬದಲಾಗಿ ಸಮಾನ ಮೌಲ್ಯಗಳು ಮತ್ತು ಪರಸ್ಪರ ಮೆಚ್ಚುಗೆಯನ್ನು ತೋರುವ ಸಂಗ್ರಹವಾಗಿದೆ. ಇಂದಿನ ಮಹಿಳೆಯರು ವಯಸ್ಸು, ಹಿನ್ನೆಲೆ ಮತ್ತು ಜೀವನದ ಹಂತಗಳನ್ನು ಮೀರಿ ಅರ್ಥಪೂರ್ಣ ಬಾಂಧವ್ಯಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ.

ಒಬ್ಬರ ಯಶಸ್ಸನ್ನು ಮತ್ತೊಬ್ಬರು ಸಂಭ್ರಮಿಸುವ ಮತ್ತು ಪರಸ್ಪರ ವ್ಯಕ್ತಿತ್ವವನ್ನು ಗೌರವಿಸುವ ಸುಂದರ ವಾತಾವರಣ ನಿರ್ಮಿಸುತ್ತಿದ್ದಾರೆ. ಈ ಅಭಿಯಾನವು ಅಂತಹ ಸ್ನೇಹದ ವಿಕಸಿತ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಅನನ್ಯಾ, ಸುಶ್ಮಿತಾ ಮತ್ತು ರಾಧಿಕಾ - ಈ ಮೂವರು ಮಹಿಳೆಯರು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ನೈಜತೆ ಮತ್ತು ಮುಕ್ತ ಅಭಿವ್ಯಕ್ತಿಯನ್ನು ಪ್ರತಿನಿಧಿಸುತ್ತಾರೆ. ಮಹಿಳೆಯರು ಪರಸ್ಪರ ಬೆಂಬಲಿಸಿದಾಗ, ಅವರು ಒಟ್ಟಾಗಿ ಇನ್ನಷ್ಟು ಪ್ರಕಾಶ ಮಾನವಾಗಿ ಹೊಳೆಯುತ್ತಾರೆ ಎಂಬ ಪರಿಕಲ್ಪನೆಯನ್ನು ನಾವು ಈ ಮೂಲಕ ಸಂಭ್ರಮಿಸುತ್ತಿದ್ದೇವೆ" ಎಂದು ತಿಳಿಸಿದರು.ತನಿಷ್ಕ್ ನೈಸರ್ಗಿಕ ವಜ್ರಗಳ ಸೋಲ್ಸ್ ಇನ್ ಸಿಂಫನಿ ಸಂಗ್ರಹವು ಈಗ ಎಲ್ಲಾ ತನಿಷ್ಕ್ ಮಳಿಗೆಗಳಲ್ಲಿ ಹಾಗೂ ಆನ್‌ ಲೈನ್‌ ನಲ್ಲಿ ಲಭ್ಯವಿದೆ. ದೈನಂದಿನ ಬಳಕೆ, ಅರ್ಥಪೂರ್ಣ ಕ್ಷಣಗಳು ಮತ್ತು ವಿಶೇಷ ಆಚರಣೆಗಳಿಗಾಗಿಯೇ ಈ ವಜ್ರದ ಆಭರಣಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.