ಬೆಂಗಳೂರು: ವಿಶ್ವ ಮಹಿಳಾ ದಿನದಂದು 93.5 ರೆಡ್ ಎಫ್‌ಎಂ ನೇತೃತ್ವದಲ್ಲಿ ಮಿಯಾ ಬೈ ತಾನಿಷ್ಕ್ ಮತ್ತು ಓರಿಯನ್ ವೆಂಪವರ್ ಸಮಾಜದ ವಿವಿಧ ಕ್ಷೇತ್ರಗಳ ಸಾಧಕಿಯರಿಗೆ ರೆಡ್ ದಿವಸ್ ಪ್ರಶಸ್ತಿ 2026 ಅನ್ನು ನೀಡಿ ಗೌರವಿಸಲಿದೆ. ಮಾ..8ರಂದು ರಾಜಾಜಿನಗರದ ಓರಿಯನ್ ಮಾಲ್‌ನಲ್ಲಿ ಈ ಅದ್ದೂರಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಚಿತ್ರನಟಿ ಹರಿಪ್ರಿಯಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: Karnataka Budget 2026: ಕಾರವಾರಕ್ಕೆ ಹೈಟೆಕ್ ಸ್ಪರ್ಶ: ಕೊನೆಗೂ ಈಡೇರಿತು 'ಸೂಪರ್ ಸ್ಪೆಷಾಲಿಟಿ' ಕನಸು
‘ವ್ಯಾಪಾರ, ಸಾಮಾಜಿಕ ಪ್ರಭಾವ, ಕ್ರೀಡೆ, ಮನರಂಜನೆ, ತಂತ್ರಜ್ಞಾನ, ಉದ್ಯಮಶೀಲತೆ ಸೇರಿದಂತೆ ವಿವಿಧ ಕ್ಷೇತ್ರಗಳ 40ಕ್ಕೂ ಅಧಿಕ ಅಸಾಧಾರಣ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ನೀಡಲಿದ್ದೇವೆ.
93.5 ರೆಡ್ ಎಫ್‌ಎಂ ಮುಂದಾಳತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ’ ಎಂದು ಕೆಎಎಲ್ ರೇಡಿಯೋ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಕೆ. ಶಿವ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.