ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಶ್ರೀಗಂಧ ಮರಗಳ್ಳತನ ತಡೆಗೆ ತಂತ್ರಜ್ಞಾನಕ್ಕೆ ಮೊರೆ

ಶ್ರೀಗಂಧ ಬೆಳೆಯುವುದನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೆಎಸ್‌ಡಿಎಲ್ ಹೊಸ ಪುರಸ್ಕಾರಗಳನ್ನು ಘೋಷಿ ಸಿದೆ. ಕೆಎಸ್‌ಡಿಎಲ್‌ಗೆ ಅತಿ ಹೆಚ್ಚು ಶ್ರೀಗಂಧ ಪೂರೈಸಿದ ನಾಲ್ವರು ರೈತರನ್ನು ಗುರುತಿಸಿ, ಜೂನ್ 4ರಂದು (ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ) ವಿಶೇಷ ಪ್ರಶಸ್ತಿ ನೀಡಿ ಸನ್ಮಾನಿಸ ಲಾಗುವುದು. ಶ್ರೀಗಂಧ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕಳ್ಳತನದ ಬಗ್ಗೆ ನಿಖರ ಮಾಹಿತಿ ನೀಡಿದ ಸಾರ್ವಜನಿಕರನ್ನು ಕೂಡ ಇದೇ ಸಂದರ್ಭದಲ್ಲಿ ಪುರಸ್ಕರಿಸ ಲಾಗುವುದು.

ಮರಗಳ್ಳತನ ತಡೆಯುವ ತಂತ್ರಜ್ಞಾನವಿದ್ದರೆ ಸಂಪರ್ಕಿಸಿ: ಸಚಿವ ಎಂ.ಬಿ. ಪಾಟೀಲ

ಶ್ರೀಗಂಧ ಬೆಳೆಯಲು ರೈತರಿಗೆ ಪ್ರೋತ್ಸಾಹ, ಆರ್ಥಿಕ ನೆರವು, ಪ್ರಶಸ್ತಿಗಳ ಘೋಷಣೆ

ಬೆಂಗಳೂರು: ಮೈಸೂರು ಸ್ಯಾಂಡಲ್ ಉತ್ಪನ್ನ ಉತ್ಪಾದನಾ ಘಟಕವನ್ನು ವಿಜಯಪುರದಲ್ಲಿ ಆರಂಭಿಸಲು ರಾಜ್ಯ ಸರಕಾರ ಮುಂದಾದ ಬೆನ್ನಲ್ಲಿಯೇ ರಾಜ್ಯದಲ್ಲಿ ಶ್ರೀಗಂಧ ಮರಗಳ ಕಳ್ಳತನ ವನ್ನು ತಡೆಯುವುದಕ್ಕೆ ಹೆಚ್ಚಿನ ನಿಗಾವಹಿಸಿದೆ. ಈ ಹಿನ್ನೆಲೆಯಲ್ಲಿ ಶ್ರೀಗಂಧ ಮರಗಳ್ಳತನ ತಡೆಯುವುದಕ್ಕೆ ರಾಜ್ಯದ ಯಾವುದೇ ರೈತರು ಅಥವಾ ತಂತ್ರಜ್ಞರು ಉತ್ತಮ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದರೆ ಕೂಡಲೇ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತವನ್ನು ಸಂಪರ್ಕಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮನವಿ ಮಾಡಿದ್ದಾರೆ.

ಈ ಬಗ್ಗೆ ಮಹಿತಿ ಹಂಚಿಕೊಂಡಿರುವ ಅವರು, ರಾಜ್ಯದ ಹೆಮ್ಮೆಯ ಲಾಂಛನವಾಗಿರುವ ‘ಮೈಸೂರು ಸ್ಯಾಂಡಲ್ ಸೋಪ್’ ತಯಾರಿಕೆಗೆ ಶ್ರೀಗಂಧವೇ ಜೀವಾಳ. ಆದರೆ ದಶಕಗಳಿಂದ ಶ್ರೀಗಂಧದ ಬೆಳೆಗಾರರನ್ನು ಕಾಡುತ್ತಿರುವ ಅತಿದೊಡ್ಡ ಸಮಸ್ಯೆ ಎಂದರೆ ಮರಗಳ ಕಳ್ಳತನ. ಈ ಸವಾಲನ್ನು ಎದುರಿಸಲು ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ ಈಗ ಸಾರ್ವಜನಿಕರ ಮೊರೆ ಹೋಗಿದೆ. ಶ್ರೀಗಂಧದ ಮರಗಳ ಕಳ್ಳತನ ತಡೆಯಲು ಸುಧಾರಿತ ತಂತ್ರಜ್ಞಾನ ಅಥವಾ ಉಪಕರಣ ಗಳನ್ನು ಅಭಿವೃದ್ಧಿಪಡಿಸಿದವರಿಗೆ ಕೆಎಸ್‌ಡಿಎಲ್ ವೇದಿಕೆ ಕಲ್ಪಿಸಿಕೊಡಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Shishir Hegde Column: ಮಕ್ಕಳು ಹೆತ್ತವರ ಮುಂದೆ ಏಕೆ ಸುಳ್ಳು ಹೇಳುತ್ತಾರೆ ?

ತಾಂತ್ರಿಕ ಪರಿಹಾರಗಳಿಗೆ ಮುಕ್ತ ಆಹ್ವಾನ: ಶ್ರೀಗಂಧದ ಮರಗಳನ್ನು ಕಳ್ಳರಿಂದ ರಕ್ಷಿಸಲು ಆಧುನಿಕ ತಂತ್ರeನದ ಅಗತ್ಯವಿದೆ ಎಂದು ಮನಗಂಡಿರುವ ಸರ್ಕಾರ, ರೈತರು, ವಿಜ್ಞಾನಿಗಳು, ಸ್ಟಾರ್ಟಪ್‌ಗಳು ಅಥವಾ ಸಂಶೋಧನಾ ಸಂಸ್ಥೆಗಳಿಂದ ಹೊಸ ಆಲೋಚನೆಗಳನ್ನು ಆಹ್ವಾನಿಸಿದೆ.

ತಂತ್ರಜ್ಞಾನದ ಪ್ರಾತ್ಯಕ್ಷಿಕೆ: ಯಾರೇ ಆಗಲಿ ಶ್ರೀಗಂಧದ ಮರಗಳ ಕಳ್ಳತನ ತಡೆಗೆ ಪರಿಣಾಮಕಾರಿ ತಂತ್ರeನದ ಮಾಹಿತಿ ಹೊಂದಿದ್ದರೆ ಅವರು ಕೆಎಸ್‌ಡಿಎಲ್ ಅನ್ನು ಸಂಪರ್ಕಿಸಬಹುದು. ಸಂಸ್ಥೆಯ ಮುಂದೆ ಆ ತಂತ್ರeನದ ಪ್ರಾತ್ಯಕ್ಷಿಕೆ ನೀಡಲು ಅವಕಾಶ ನೀಡಲಾಗುವುದು. ಒಂದು ವೇಳೆ ಆ ತಂತ್ರ ಜ್ಞಾನವು ಸೂಕ್ತವೆಂದು ಕಂಡುಬಂದರೆ, ಅದರ ಅನುಷ್ಠಾನಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಕೆಎಸ್‌ಡಿಎಲ್ ಭರಿಸಲಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಶ್ರೀಗಂಧ ಬೆಳೆಯುವುದನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೆಎಸ್‌ಡಿಎಲ್ ಹೊಸ ಪುರಸ್ಕಾರಗಳನ್ನು ಘೋಷಿಸಿದೆ. ಕೆಎಸ್‌ಡಿಎಲ್‌ಗೆ ಅತಿ ಹೆಚ್ಚು ಶ್ರೀಗಂಧ ಪೂರೈಸಿದ ನಾಲ್ವರು ರೈತರನ್ನು ಗುರುತಿಸಿ, ಜೂನ್ 4ರಂದು (ನಾಲ್ವಡಿ ಕೃಷ್ಣರಾಜ ಒಡೆಯರ್ ಜನ್ಮದಿನ) ವಿಶೇಷ ಪ್ರಶಸ್ತಿ ನೀಡಿ ಸನ್ಮಾನಿಸ ಲಾಗುವುದು. ಶ್ರೀಗಂಧ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾದ ಪೊಲೀಸ್ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಕಳ್ಳತನದ ಬಗ್ಗೆ ನಿಖರ ಮಾಹಿತಿ ನೀಡಿದ ಸಾರ್ವಜನಿಕರನ್ನು ಕೂಡ ಇದೇ ಸಂದರ್ಭದಲ್ಲಿ ಪುರಸ್ಕರಿಸಲಾಗುವುದು.

ದಶಕಗಳ ಸಮಸ್ಯೆಗೆ ತಾಂತ್ರಿಕ ಮದ್ದು

ಶ್ರೀಗಂಧದ ಅಕ್ರಮ ಕಟಾವು ತಡೆಯಲು ಕಠಿಣ ಕಾನೂನುಗಳಿದ್ದರೂ ಶಿಕ್ಷೆಯ ಪ್ರಮಾಣ ಕಡಿಮೆ ಇರುವುದರಿಂದ ಕಳ್ಳತನ ಮುಂದುವರಿದಿದೆ. ಇದರಿಂದ ರೈತರು ಶ್ರೀಗಂಧ ಬೆಳೆಸಲು ಭಯ ಪಡು ತ್ತಿದ್ದಾರೆ. ರೈತರಿಗೆ ಕೇವಲ ಆರ್ಥಿಕ ಲಾಭವಲ್ಲದೆ, ಅವರಿಗೆ ರಕ್ಷಣೆಯ ಭರವಸೆ ನೀಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

ಬೆಳೆಗಾರರಿಗೆ ಆರ್ಥಿಕ ನೆರವು

ಕಳೆದ 3 ವರ್ಷಗಳಲ್ಲಿ ಕೆಎಸ್‌ಡಿಎಲ್ ರಾಜ್ಯದಾದ್ಯಂತ ರೈತರಿಂದ ಒಟ್ಟು 174.5 ಮೆಟ್ರಿಕ್ ಟನ್ ಶ್ರೀಗಂಧವನ್ನು ಖರೀದಿಸಿದೆ. ಇದಕ್ಕಾಗಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 6.08 ಕೋಟಿ ರು.ಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಮಧ್ಯವರ್ತಿಗಳ ಕಾಟವಿಲ್ಲದೆ ರೈತರಿಗೆ ನೇರ ಮಾರುಕಟ್ಟೆ ಕಲ್ಪಿಸಿಕೊಡಲಾಗಿದೆ. ಶ್ರೀಗಂಧದ ಉಳಿವಿಗೆ ಮತ್ತು ಬೆಳವಣಿಗೆಗೆ ಕೆಎಸ್‌ಡಿಎಲ್ ಕೈಗೊಂಡಿರುವ ಈ ಕ್ರಾಂತಿಕಾರಿ ನಿರ್ಧಾರವು ಕೇವಲ ಉದ್ದಿಮೆಗೆ ಮಾತ್ರವಲ್ಲದೆ, ಕೃಷಿ ಕ್ಷೇತ್ರಕ್ಕೂ ಹೊಸ ಚೈತನ್ಯ ನೀಡಲಿದೆ.