ಅಂತರರಾಷ್ಟ್ರೀಯ ಕಿರುಚಿತ್ರೋತ್ಸವವು ತನ್ನ 16ನೇ ಆವೃತ್ತಿಯೊಂದಿಗೆ ಮರಳಿದ್ದು, ಆಗಸ್ಟ್ 14 ರಿಂದ 16 ರವರೆಗೆ ಬೆಂಗಳೂರಿನ ಏಳು ಸ್ಥಳಗಳಲ್ಲಿ 5,000 ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಒಟ್ಟು ಗೂಡಿಸಲು ಸಜ್ಜಾಗಿದೆ.
ಬೆಂಗಳೂರು: ಭಾರತದ ಅತಿ ದೊಡ್ಡ ಮತ್ತು ಏಕೈಕ ಆಸ್ಕರ್-ಮಾನ್ಯತೆ (Oscar-accredited) ಪಡೆದ ಕಿರುಚಿತ್ರೋತ್ಸವವಾದ 'ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ' (BISFF), ತನ್ನ 16ನೇ ಆವೃತ್ತಿಯನ್ನು 2026 ರ ಆಗಸ್ಟ್ 14 ರಿಂದ 16 ರವರೆಗೆ (ಆನ್‌ಲೈನ್‌ನಲ್ಲಿ: ಆಗಸ್ಟ್ 06 ರಿಂದ 16) ಬೆಂಗಳೂರಿನ ಆರಕ್ಕೂ ಹೆಚ್ಚು ಸ್ಥಳಗಳಲ್ಲಿ ಆಯೋಜಿಸಲಿದೆ.
ಈ ಚಿತ್ರೋತ್ಸವವು 5,000ಕ್ಕೂ ಹೆಚ್ಚು ಪ್ರತಿನಿಧಿಗಳು, 1,000 ಕ್ಕೂ ಹೆಚ್ಚು ಚಲನಚಿತ್ರ ನಿರ್ಮಾ ಪಕರು ಹಾಗೂ ಕಲಾವಿದರನ್ನು ಒಟ್ಟುಗೂಡಿಸಲಿದ್ದು, 100ಕ್ಕೂ ಹೆಚ್ಚು ದೇಶಗಳಿಂದ 11 ವಿವಿಧ ಕಿರುಚಿತ್ರ ವಿಭಾಗಗಳಲ್ಲಿ ದಾಖಲೆಯ 3,340 ಪ್ರವೇಶಗಳನ್ನು (Submissions) ಪಡೆದುಕೊಂಡಿದೆ.
ತನ್ನ ಸ್ಪರ್ಧಾತ್ಮಕ ವಿಭಾಗವನ್ನು ಹತ್ತು ಸಿನಿಮಾ ರಂಗಗಳಿಗೆ ವಿಸ್ತರಿಸಿರುವ BISFF 2026, ಆಸ್ಕರ್ ಅರ್ಹತೆ ಪಡೆಯುವ ಪ್ರಮುಖ ಮೂರು ವಿಭಾಗಗಳನ್ನು (ಅಂತರರಾಷ್ಟ್ರೀಯ, ಭಾರತೀಯ ಮತ್ತು ಅನಿಮೇಷನ್) ಒಳಗೊಂಡಿದೆ.
ಇದನ್ನೂ ಓದಿ: Bangalore News: ಎಪಿಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ ಸಿ.ಎ ಡಾ. ವಿಷ್ಣು ಭರತ್ ಆಲಂಪಳ್ಳಿ ಪುನರಾಯ್ಕೆ
ಇದರೊಂದಿಗೆ ಈ ವರ್ಷ ಎರಡು ಹೊಸ ವಿಭಾಗಗಳನ್ನು ಪರಿಚಯಿಸುತ್ತಿದೆ:
• AI (ಮಷೀನ್ ಮೇಡ್ ಮೂವೀಸ್): ಸಂಪೂರ್ಣವಾಗಿ ಅಥವಾ ಭಾಗಶಃ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ನಿರ್ಮಿಸಲಾದ ಚಿತ್ರಗಳಿಗಾಗಿ ಒಂದು ಅದ್ಭುತ ಸ್ಪರ್ಧಾತ್ಮಕ ವೇದಿಕೆ.
• ಡ್ಯಾನ್ಸಿಂಗ್ ಲೆನ್ಸ್ (Dancing Lens): ನೃತ್ಯ ಸಂಯೋಜನೆ ಮತ್ತು ಛಾಯಾಗ್ರಹಣಗಳು ಒಂದಕ್ಕೊಂದು ಬೆರೆತು ಹೋಗುವ ವಿಶಿಷ್ಟ ಸಿನಿಮಾ ಕಲೆಯಾಗಿರುವ 'ಸ್ಕ್ರೀನ್‌ಡ್ಯಾನ್ಸ್' ಅನ್ನು ಇದರಲ್ಲಿ ಸಂಭ್ರಮಿಸಲಾಗುತ್ತದೆ.
ಮುಂಬರುವ ಈ ಆವೃತ್ತಿಯ ಕುರಿತು ಮಾತನಾಡಿದ BISFF ಸಂಸ್ಥಾಪಕರು ಮತ್ತು ಕಲಾತ್ಮಕ ನಿರ್ದೇಶಕರಾದ ಆನಂದ್ ವರದರಾಜ್ ಅವರು, "ಹದಿನಾರು ವರ್ಷಗಳ ಹಿಂದೆ, ಯುವ ಪ್ರತಿಭೆಗಳಿಗೆ ತಮ್ಮ ಆರಂಭಿಕ ಕೆಲಸಗಳನ್ನು ಪ್ರದರ್ಶಿಸಲು ಮತ್ತು ಗಂಭೀರವಾದ ವಿಮರ್ಶೆ-ಪ್ರತಿಕ್ರಿಯೆಗಳನ್ನು ಪಡೆಯಲು ಒಂದು ನೈಜ ವೇದಿಕೆಯ ಅಗತ್ಯವಿದೆ ಎಂದು ಭಾವಿಸಿದ ಚಲನಚಿತ್ರ ನಿರ್ಮಾಪಕರು ಮತ್ತು ಕ್ಯುರೇಟರ್‌ಗಳ ಸಣ್ಣ ಗುಂಪಿನಿಂದ BISFF ಆರಂಭವಾಯಿತು.
ನಾವು ಕೇವಲ 30 ಚಿತ್ರಗಳೊಂದಿಗೆ ಪ್ರಾರಂಭಿಸಿದ್ದೆವು. ಇಂದು ನಮಗೆ 3,000 ಕ್ಕೂ ಹೆಚ್ಚು ಪ್ರವೇಶ ಗಳು ಬರುತ್ತಿವೆ ಮತ್ತು ಇಲ್ಲಿ ಪಾಲ್ಗೊಂಡ ಹಳೆಯ ವಿದ್ಯಾರ್ಥಿಗಳು (Alumni) ಆಸ್ಕರ್ ಪ್ರಶಸ್ತಿಗಳನ್ನು ಗೆಲ್ಲುತ್ತಿದ್ದಾರೆ. ಕಿರುಚಿತ್ರಗಳನ್ನು ಗಂಭೀರವಾಗಿ ಪರಿಗಣಿಸುವುದರ ಶಕ್ತಿ ಇದು. ಇಂದಿನ ಅತ್ಯಂತ ಪ್ರಮುಖ ಹಾಗೂ ಉತ್ಕೃಷ್ಟ ಸಿನಿಮಾ ಮೂವತ್ತು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಜೀವಂತ ವಾಗಿರುತ್ತದೆ ಎಂಬುದನ್ನು ಅರಿತಿರುವ ಪ್ರತಿಯೊಬ್ಬರನ್ನು ಈ ಆವೃತ್ತಿಯು ಒಟ್ಟು ಗೂಡಿಸುತ್ತದೆ," ಎಂದರು.
BISFF 2026 ರ ಪ್ರಮುಖ ಆಶಯ (Theme) 'ACT' (ಆಕ್ಟ್) ಆಗಿದ್ದು, ಇದನ್ನು ಮೂರು ಆಜ್ಞೆಗಳಾಗಿ ವಿಂಗಡಿಸಲಾಗಿದೆ: ಮಾಡು (Do), ಪ್ರದರ್ಶಿಸು (Perform), ವರ್ತಿಸು (Behave). ಇದು ಪ್ರತಿಯೊಬ್ಬ ಚಲನಚಿತ್ರ ನಿರ್ಮಾಪಕರಿಗೂ ನೀಡುವ ನೇರ ಸವಾಲಾಗಿದೆ: ಸಿನಿಮಾ ಎನ್ನುವುದು ನಿಷ್ಕ್ರಿಯವಲ್ಲ. ಕ್ಯಾಮೆರಾ ಹಿಡಿಯುವ ನಿರ್ಮಾಪಕರಿಂದ, ತನದಲ್ಲದ ಜೀವನವನ್ನು ಬದುಕುವ ನಟನಿಂದ ಮತ್ತು ಚಿತ್ರಮಂದಿರದಿಂದ ಹೊರಬರುವಾಗ ಬದಲಾಗಿ ಹೊರನಡೆಯುವ ಪ್ರೇಕ್ಷಕರಿಂದ ಇದು ಕ್ರಿಯೆ ಯನ್ನು (Action) ಬಯಸುತ್ತದೆ.
ಜಗತ್ತಿಗೆ ಈಗ ನಿಮ್ಮ ಚಿತ್ರದ ಅಗತ್ಯವಿದೆ. ಭಾರತದಲ್ಲೇ BISFF ಅಂತಹ ಏಕೈಕ ಚಲನಚಿತ್ರೋತ್ಸವ ವಾಗಿದ್ದು, ಇಲ್ಲಿ ಗೆಲ್ಲುವ ಸ್ಪರ್ಧಾತ್ಮಕ ಚಿತ್ರಕ್ಕೆ ನೇರವಾಗಿ ಅಕಾಡೆಮಿ ಪ್ರಶಸ್ತಿಗಳ (ಆಸ್ಕರ್) ಹಾದಿ ಸುಗಮವಾಗುತ್ತದೆ. ಈ ಹಿಂದೆ ಇಲ್ಲಿ ಜಯಗಳಿಸಿ ಆಸ್ಕರ್ ಮನ್ನಣೆ ಪಡೆದ ಚಿತ್ರಗಳಲ್ಲಿ ಐ ಆಮ್ ನಾಟ್ ಎ ರೋಬೋಟ್ (ವಿಜೇತ, 2025), ಆನ್ ಐರಿಶ್ ಗುಡ್‌ಬೈ (ವಿಜೇತ, 2023), ಐಸ್ ಮರ್ಚೆಂಟ್ಸ್ (ನಾಮನಿರ್ದೇಶನ, 2023), ದಿ ಡ್ರೆಸ್ (ನಾಮನಿರ್ದೇಶನ, 2022), ಮತ್ತು ಫೀಲಿಂಗ್ ಥ್ರೂ (ನಾಮ ನಿರ್ದೇಶನ, 2021) ಸೇರಿವೆ.
ಈ ವರ್ಷ BISFF ದಾಖಲೆಯ 3,340 ಪ್ರವೇಶಗಳನ್ನು ಸ್ವೀಕರಿಸಿದೆ - ಇವುಗಳಲ್ಲಿ ಅಂತರರಾಷ್ಟ್ರೀಯ ವಿಭಾಗದಿಂದ 1,726, ಭಾರತದಿಂದ 756, ಕರ್ನಾಟಕದಿಂದ 306, ಅನಿಮೇಷನ್‌ನಲ್ಲಿ 284 ಮತ್ತು ಕ್ವೀರ್ (Queer), AI ಫಿಲ್ಮ್ ಹಾಗೂ ಸ್ಕ್ರೀನ್‌ಡ್ಯಾನ್ಸ್ ವಿಭಾಗಗಳಲ್ಲಿ ತಲಾ 118 ಪ್ರವೇಶಗಳು ಸೇರಿವೆ. ಭೌತಿಕವಾಗಿ ನಡೆಯುವ ಈ ಚಲನಚಿತ್ರೋತ್ಸವವು ಬೆಂಗಳೂರಿನ ಆರು ಪ್ರಮುಖ ಸ್ಥಳಗಳಲ್ಲಿ ಆಯೋಜನೆಗೊಳ್ಳಲಿದೆ: ಸುಚಿತ್ರ ಫಿಲ್ಮ್ ಸೊಸೈಟಿ (3 ಸ್ಕ್ರೀನ್‌ಗಳು), ಆರ್‌ವಿ ಯೂನಿವರ್ಸಿಟಿ (2 ಸ್ಕ್ರೀನ್‌ಗಳು), ಲಿಟ್‌ಸ್ಕೂಲ್, ಅಲಯನ್ಸ್ ಫ್ರಾನ್ಸಿಸ್, ಗೋಥೆ ಇನ್‌ಸ್ಟಿಟ್ಯೂಟ್ ಮ್ಯಾಕ್ಸ್ ಮುಲ್ಲರ್ ಭವನ, ಇಂಡಿಯನ್ ಹೆರಿಟೇಜ್ ಅಕಾಡೆಮಿ.
ಚಿತ್ರ ಪ್ರದರ್ಶನಗಳಷ್ಟೇ ಅಲ್ಲದೆ, BISFF 2026 ಮೂರು ಪ್ರಮುಖ ಉದ್ಯಮ ಆಧಾರಿತ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದೆ: • ಡಿಸ್ಕವರಿ ಫಿಲ್ಮ್ ಮಾರ್ಕೆಟ್ (DFM) ಮತ್ತು ಪ್ರೊಡ್ಯೂಸರ್ ಬಜಾರ್: ಇದು 100 ಕ್ಕೂ ಹೆಚ್ಚು ಚಲನಚಿತ್ರ ನಿರ್ಮಾಪಕರನ್ನು 50 ಕ್ಕೂ ಹೆಚ್ಚು ಖರೀದಿದಾರರು, OTT ವೇದಿಕೆಗಳು, ವಿತರಕರು, ಪ್ರಸಾರಕರು ಮತ್ತು ಹಣಕಾಸು ಹೂಡಿಕೆದಾರರೊಂದಿಗೆ ಪಿಚಿಂಗ್ ಸೆಷನ್‌ಗಳು, ಖಾಸಗಿ ಸಭೆಗಳು ಹಾಗೂ ಒಪ್ಪಂದಗಳ ಘೋಷಣೆಗಾಗಿ ಜೋಡಿಸುತ್ತದೆ.
• ದಿ ಎಕೋಸ್ ಫಿಲ್ಮ್ ಸ್ಕೂಲ್ ಕಾನ್ಫರೆನ್ಸ್: ಆರ್‌ವಿ ಯೂನಿವರ್ಸಿಟಿ ಸಹಯೋಗದೊಂದಿಗೆ ನಡೆಯುವ ಈ ಸಮ್ಮೇಳನವು ಸಿನಿಮಾ ಮತ್ತು ಮಾಧ್ಯಮ ಅಧ್ಯಯನದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ವೃತ್ತಿಪರರನ್ನು ಒಂದು ವೇದಿಕೆಗೆ ತರುತ್ತದೆ. • ಪ್ಯಾನೆಲ್ ಚರ್ಚೆಗಳು, ಕಾರ್ಯಾಗಾರಗಳು ಮತ್ತು ಮಾಸ್ಟರ್‌ಕ್ಲಾಸ್‌ಗಳು: ಚಿತ್ರೋದ್ಯಮದ ಹಿರಿಯ ಗಣ್ಯರು ಇವುಗಳನ್ನು ಮುನ್ನಡೆಸಲಿದ್ದಾರೆ. ಈ ಹಿಂದೆ ಶೂಜಿತ್ ಸಿರ್ಕಾರ್, ಶ್ರೀರಾಮ್ ರಾಘವನ್, ನಾಸಿರುದ್ದೀನ್ ಶಾ ಮತ್ತು ಮಹೇಶ್ ನಾರಾಯಣನ್ ಅವರಂತಹ ಪ್ರಮುಖರು ಇದರಲ್ಲಿ ಭಾಗವಹಿಸಿದ್ದರು.