ಬೆಂಗಳೂರು: ನೇಮಕಾತಿಯಲ್ಲಿ ಹಗರಣ ಪ್ರಕರಣ ಸಂಬಂಧ ಕೆಪಿಎಸ್‌ಸಿ ಕೇಂದ್ರ ಕಚೇರಿಯ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಇಲ್ಲೇ ಅತಿ ದೊಡ್ಡ ಅಕ್ರಮ ನಡೆದಿರುವುದು ಪತ್ತೆಯಾಗಿದೆ. ಕೆಪಿಎಸ್‌ಸಿ ಪರೀಕ್ಷೆಯ ಒಎಂಆರ್ ಶೀಟ್‌ಗಳನ್ನು ಸ್ಕ್ಯಾನ್ ಮಾಡಿರುವ ಸಂಗ್ರಹಿಸಿಟ್ಟಿ ರುವ ಹಾರ್ಡ್ ಡಿಸ್ಕೇ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕೆಪಿಎಸ್‌ಸಿ ಪರೀಕ್ಷೆ ಪ್ರಾರಂಭ ಆಗುವಾಗ ಸ್ಟ್ರಾಂಗ್ ರೂಮ್ ತೆರೆಯಬೇಕು.
ಪ್ರಶ್ನೆಪತ್ರಿಕೆ ಒಎಂಆರ್ ಶೀಟ್ ಇಡುವಾಗ 247 ಸಿಸಿಟಿವಿ ಕಣ್ಗಾವಲು ಇಡಬೇಕು. ಕೆಪಿಎಸ್‌ಸಿ ಸ್ಟ್ರಾಂಗ್ ರೂಮ್‌ನಲ್ಲಿ ಸಿಸಿ ಟಿವಿ ಇದೆ. ಆದರೆ ದತ್ತಾಂಶ (ಮಾಹಿತಿ) ಅಳಿಸಿ ಹೋಗಿದೆ. ಸ್ಟ್ರಾಂಗ್ ರೂಮ್ ನ ಸಿಸಿಟಿವಿ ಡೇಟಾ ಸಂಗ್ರಹ ಮಾಡಿ ಇಡಬೇಕು. ಪರೀಕ್ಷೆ ಮುಗಿದ ವರ್ಷದ ತನಕ ಡೇಟಾ ಇಟ್ಟಿರಬೇಕು. ಯಾವುದೇ ಆರೋಪ ಕೇಳಿ ಬರದೆ ಇದ್ದರೆ ಡೇಟಾ ಡಿಲೀಟ್ ಮಾಡಬಹುದು. ಆದರೆ ಬರೀ 6 ತಿಂಗಳ ಡೇಟಾ ಕೂಡ ಸಂಗ್ರಹ ಮಾಡಿ ಇಟ್ಟಿಲ್ಲ.
ಇದನ್ನೂ ಓದಿ: KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ; ಎಲ್ಲಾ 329 ಅಭ್ಯರ್ಥಿಗಳಿಗೆ ವಿಚಾರಣೆಗೆ ಹಾಜರಾಗುವಂತೆ CID ನೋಟೀಸ್!
ಇದೀಗ ಕೆಪಿಎಸ್‌ಸಿಯಲ್ಲಿ ಮತ್ತೊಂದು ಅಕ್ರಮ ಬಯಲಾಗಿದ್ದು, ಒಎಂಆರ್ ಶೀಟ್‌ಗಳ ಸ್ಕ್ಯಾನ್ ಮಾಡಿರುವ ಹಾರ್ಡ್ ಡಿಸ್ಕ್ ನಾಪತ್ತೆಯಾಗಿದೆ ಪರೀಕ್ಷೆ ಮುಗಿದ ಮೇಲೆ ಎಲ್ಲಾ ಒಎಂಆರ್ ಶೀಟ್ ಸ್ಕ್ಯಾನ್ ಮಾಡಲಾಗುತ್ತದೆ. ಆದರೆ ಪಶು ವೈದ್ಯಾಧಿಕಾರಿ ನೇಮಕಾತಿಯ ಹಾರ್ಡ್ ಡಿಸ್ಕ್ ನಾಪತ್ತೆ ಯಾಗಿದೆ. ಇದರಿಂದ ಅತೀದೊಡ್ಡ ಅಕ್ರಮ ಕೇಂದ್ರ ಕಚೇರಿಯಲ್ಲಿಯೇ ನಡೆದಿರುವುದು ಸಾಬೀ ತಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಒಎಂಆರ್ ಶೀಟ್‌ಗಳನ್ನು ತಿರುಚಿರುವುದು ಸ್ಪಷ್ಟವಾಗಿದೆ.
ಮುಂದುವರಿದಿರುವ ವಿಚಾರಣೆ: ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಸಂಬಂಧ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ಸೇರಿ 10 ಸದಸ್ಯರು, 45 ಅಧಿಕಾರಿಗಳು, ಸಿಬ್ಬಂದಿಗೂ ಸಿಐಡಿ ಅದಾಗಲೇ ನೋಟಿಸ್ ನೀಡಿ ವಿಚಾರಣೆಗೆ ಬರಲು ಸೂಚಿಸಿದೆ.
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮನೆ, ಕಚೇರಿಗೂ ನೋಟಿಸ್ ಅಂಟಿಸಲಾಗಿದೆ. ಉತ್ತೀರ್ಣಗೊಂಡ 329 ಅಭ್ಯರ್ಥಿಗಳಿಗೂ ನೋಟಿಸ್ ಜಾರಿ ಮಾಡಲಾಗಿದ್ದು, ಸಿಐಡಿಯಿಂದ ನಿತ್ಯ 10 ಅಭ್ಯರ್ಥಿಗಳ ಹೇಳಿಕೆ ದಾಖಲು ನಡೆಯುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳ ಒಎಂಆರ್ ಪ್ರತಿ ಕೂಡ ಜಪ್ತಿ ಮಾಡಲಾಗಿದ್ದು, 3 ಕೇಂದ್ರಗಳ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದು, ಎಫ್ಎಸ್‌ಎಲ್‌ಗೆ ಕಳುಹಿಸಲಾಗಿದೆ.
ಏನಿದು ಕರ್ಮಕಾಂಡ?
ಕೆಪಿಎಸ್‌ಸಿ ಹಗರಣ ಹಲವು ದಶಕ ಗಳಿಂದಲೇ ರಾಜ್ಯವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ, ಈಗ ಮತ್ತೆ ತಲೆಬೇನೆ
ಇತ್ತೀಚೆಗೆ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಭಾರೀ ಅಕ್ರಮ ಪತ್ತೆ, ಸಿಐಡಿ, ಇಡಿ ಯಿಂದ ರಾಜ್ಯದ ಹಲವೆಡೆ ತನಿಖೆ
ಮಾಜಿ ಕಾರ್ಯದರ್ಶಿ ಜ್ಞಾನೇಂದ್ರ ಕುಮಾರ್, ಸದಸ್ಯೆ ಶಾಂತಾ ಹೊಸಮನಿ ಮನೆಯಲ್ಲೂ ದಾಖಲೆ ಗಾಗಿ ತಪಾಸಣೆ
ಇದೀಗ ಬೆಂಗಳೂರಿನ ಕೆಪಿಎಸ್‌ಸಿ ಕೇಂದ್ರ ಕಚೇರಿಯಲ್ಲೇ ಒಎಂಆರ್ ಶೀಟ್ ನಾಪತ್ತೆ, ಜನರಿಗೆ ಆಘಾತ