ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Namma Metro: 2026ರಲ್ಲಿ ನೀಲಿ ಮಾರ್ಗದ ಮೊದಲ ಹಂತದ ಉದ್ಘಾಟನೆ ?

ಕೆಐಎ ಸಂಪರ್ಕಿಸುವ ನಮ್ಮ ಮೆಟ್ರೋದ 58.19 ಕಿ.ಮೀ ವಿಸ್ತೀರ್ಣದ ನೀಲಿ ಮಾರ್ಗವನ್ನು 2 ಹಂತದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮೊದಲನೇ ಹಂತ 2 ಎ ಇದು ಸಿಲ್ಕ್ ಬೋರ್ಡ್‌ನಿಂದ ಕೆ.ಆರ್ ಪುರಕ್ಕೆ ಮತ್ತು 2 ಬಿ ಕೆಆರ್ ಪುರದಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುತ್ತದೆ. ಒಟ್ಟು 31 ನಿಲ್ದಾಣ ಇದೆ.

2026ರಲ್ಲಿ ನೀಲಿ ಮಾರ್ಗದ ಮೊದಲ ಹಂತದ ಉದ್ಘಾಟನೆ  ?

Profile Ashok Nayak Apr 15, 2025 9:36 AM

ಬೆಂಗಳೂರು: ನಮ್ಮ ಮೆಟ್ರೋದ ನೀಲಿ ಮಾರ್ಗದ ಮೊದಲ ಹಂತವು 2026ರಲ್ಲಿ ಉದ್ಘಾಟನೆ ಯಾಗುವ ನಿರೀಕ್ಷೆಯಿದ್ದು, ಸೆಂಟ್ರಲ್ ಸಿಲ್ಕ್ ಬೋರ್ಡ್‌ ನಿಂದ ಕೆಆರ್ ಪುರಕ್ಕೆ ಹೊರ ವರ್ತುಲ ರಸ್ತೆಯ ಮೂಲಕ ಈ ಮಾರ್ಗವು ಸಂಪರ್ಕಿಸುತ್ತದೆ. 18 ಕಿ.ಮೀ ಉದ್ದದ ಈ ಮಾರ್ಗವು ಜನದಟ್ಟಣೆ ಹೆಚ್ಚಿರುವ ಪ್ರದೇಶದಲ್ಲಿ ಹಾದು ಹೋಗಲಿದ್ದು, ಹೊರ ವರ್ತುಲ ರಸ್ತೆ ಮತ್ತು ನಗರದ ಅತ್ಯಂತ ಪ್ರಮುಖ ಐಟಿ ಕಾರಿಡಾರ್‌ಗಳಲ್ಲಿ ಈ ಮಾರ್ಗವು ಸಾಗಲಿದೆ. ಮುಂದಿನ ವರ್ಷ ಜೂನ್ ವೇಳೆಗೆ ಕೆಆರ್‌ಪುರ ಸಿಲ್ಕ್ ಬೋರ್ಡ್ ನಡುವಿನ ಮಾರ್ಗ ಆರಂಭಿಸಲು ಮೆಟ್ರೋ ನಿಗಮ ಮುಂದಾಗಿದ್ದು, 2-3 ತಿಂಗಳುಗಳವರೆಗೆ ವಿಳಂಬವಾಗಬಹುದು.

ರೈಲುಗಳು ಶೀಘ್ರವೇ ಬರಲಿರುವುದರಿಂದ ಕಾರ್ಮಿಕರ ಲಭ್ಯತೆಯನ್ನು ಅವಲಂಬಿಸಿ, ಕೆಲಸಕ್ಕೆ ವೇಗ ನೀಡಲಾಗುವುದು. ಜೂನ್-ಸೆಪ್ಟೆಂಬರ್ ವೇಳೆಗೆ ಮಾರ್ಗವನ್ನು ಸಂಚಾರಕ್ಕೆ ಮುಕ್ತವಾಗಿಸುವ ನಿರೀಕ್ಷೆಯಿದೆ ಎಂದು ಮೆಟ್ರೋದ ಹಿರಿಯ ಅಧಿಕಾರಿಗಳು ತಿಳಿಸಿದರು.

ಕೆಐಎ ಸಂಪರ್ಕಿಸುವ ನಮ್ಮ ಮೆಟ್ರೋದ 58.19 ಕಿ.ಮೀ ವಿಸ್ತೀರ್ಣದ ನೀಲಿ ಮಾರ್ಗವನ್ನು 2 ಹಂತದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮೊದಲನೇ ಹಂತ 2 ಎ ಇದು ಸಿಲ್ಕ್ ಬೋರ್ಡ್‌ನಿಂದ ಕೆ.ಆರ್ ಪುರಕ್ಕೆ ಮತ್ತು 2 ಬಿ ಕೆಆರ್ ಪುರದಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುತ್ತದೆ. ಒಟ್ಟು 31 ನಿಲ್ದಾಣ ಇದೆ.

ಇದನ್ನೂ ಓದಿ: Namma Metro: ನಮ್ಮ ಮೆಟ್ರೋದಲ್ಲಿ ಕನ್ನಡೇತರರ ನೇಮಕಾತಿ, ಸೂಚನೆ ಹಿಂಪಡೆದ ಬಿಎಂಆರ್‌ಸಿಎಲ್‌

ಕೆಐಎ ನಿಲ್ದಾಣ ಸುರಂಗ ಮಾರ್ಗದಲ್ಲಿ ಇರಲಿದೆ. ಕೆ.ಆರ್.ಪುರ - ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ 2ನೇ ಹಂತದ ಮಾರ್ಗಕ್ಕೆ ರೈಲು ವಿದ್ಯುದೀಕರಣ ತಂತ್ರeನ ಒದಗಿಸುವ ಆದೇಶವನ್ನು ಈಗಾಗಲೇ ನಮ್ಮ ಮೆಟ್ರೋ ಮುಂಬೈ ಮೂಲದ ಸೀಮೆ ಲಿಮಿಟೆಡ್ ಒಕ್ಕೂಟಕ್ಕೆ ನೀಡಿದೆ. ಕಾಮಗಾರಿ ಒಟ್ಟು 766 ಕೋಟಿ ರು.ಅಂದಾಜು ವೆಚ್ಚದಲ್ಲಿ ನಡೆಯಲಿದ್ದು,

ಸೀಮೆ ಲಿಮಿಟೆಟ್ ಅಂದಾಜು 558 ಕೋಟಿ ರು.ನ ಕಾಮಗಾರಿ ನಿರ್ವಹಿಸಲಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ - ಕೆ.ಆರ್.ಪುರ ಮೂಲಕ ವಿಮಾನ ನಿಲ್ದಾಣ ಸಂಪರ್ಕಿಸುವ ನೀಲಿ ಕಾರಿಡಾರ್ 58 ಕಿ.ಮೀ. ಮಾರ್ಗ ಇದಾಗಿದೆ. ಸಿವಿಲ್ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಈ ಯೋಜನೆಯಲ್ಲಿ 31 ನಿಲ್ದಾಣಗಳಿವೆ. ನೀಲಿ ಮಾರ್ಗದ ಎರಡೂ ಹಂತದ ಕಾಮಗಾರಿಯನ್ನು ಒಟ್ಟಾರೆ 10584 ಕೋಟಿ ರುಪಾಯಿ ವೆಚ್ಚದಲ್ಲಿ ನೀಲಿ ಮಾರ್ಗದ ಮೆಟ್ರೋ ನಿರ್ಮಾಣವಾಗುತ್ತಿದೆ.

ನೀಲಿ ಮಾರ್ಗದಲ್ಲಿ ನಿಲ್ದಾಣಗಳು: ಕೆ.ಆರ್. ಪುರ, ಕಸ್ತೂರಿ ನಗರ, ಹೊರಮಾವು, ಎಚ್.ಆರ್.ಬಿ.ಆರ್ ಲೇಔಟ್, ಕಲ್ಯಾಣ್ ನಗರ,‌ ಎಚ್.ಬಿ.ಆರ್ ಲೇಔಟ್, ನಾಗವಾರ, ವೀರಣ್ಣ ಪಾಳ್ಯ, ಕೆಂಪಾಪುರ, ಹೆಬ್ಬಾಳ, ಕೊಡಿಗೇಹಳ್ಳಿ, ಜಕ್ಕೂರು ಕ್ರಾಸ್, ಯಲಹಂಕ, ಬಾಗಲೂರು ಕ್ರಾಸ್,
ಬೆಟ್ಟಹಲಸೂರು, ದೊಡ್ಡಜಾಲ, ವಿಮಾನ ನಿಲ್ದಾಣ ನಗರ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್. ನೀಲಿ ಮಾರ್ಗ 2ಎ ನಲ್ಲಿ ಸೆಂಟ್ರಲ್ ಸಿಲ್ಕ್ ಬೋರ್ಡ್, ಎಚ್.ಎಸ್.ಆರ್ ಲೇಔಟ್, ಅಗರ, ಇಬ್ಬಲೂರು, ಬೆಳ್ಳಂದೂರು,‌ ಕಾಡುಬೀಸನಹಳ್ಳಿ, ಕೋಡಿ ಬೀಸನಹಳ್ಳಿ, ಮಾರತಹಳ್ಳಿ, ಇಸ್ರೋ, ದೊಡ್ಡನೆ ಕುಂದಿ, ಡಿ.ಆರ್.ಡಿ.ಓ ಕ್ರೀಡಾ ಸಂಕೀರ್ಣ, ಸರಸ್ವತಿ ನಗರ, ಕೆ.ಆರ್. ಪುರ.

ನಿಲ್ದಾಣದಲ್ಲಿ ಜನದಟ್ಟಣೆ: ಹೆಚ್ಚುವರಿ ನಾಲ್ಕು ರೈಲು ಸಂಚಾರ ಪ್ರಯಾಣ ದರದ ಹೆಚ್ಚಳದಿಂದ ಮೆಟ್ರೋದಿಂದ ವಿಮುಖರಾಗಿದ್ದ ಪ್ರಯಾಣಿಕರು ಈಗ ಮತ್ತೆ ಮೆಟ್ರೋ ಪ್ರಯಾಣದತ್ತ ಮುಖ ಮಾಡಿದ್ದು, ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆ ನಾಲ್ಕು ಹೆಚ್ಚುವರಿ ಮೆಟ್ರೋ ರೈಲು ಸಂಚಾರ ವನ್ನು ನಡೆಸಿದೆ. ಸೋಮವಾರ ಅಂಬೇಡ್ಕರ್ ಜಯಂತಿ ಅಂಗವಾಗಿ ಸಾರ್ವತ್ರಿಕ ರಜಾದಿನ ಆಗಿದ್ದರೂ, ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದರಿಂದ 4 ಹೆಚ್ಚುವರಿ ಮೆಟ್ರೋ ರೈಲು ಸೇವೆಯನ್ನು ಒದಗಿಸಲಾಗಿದೆ. ನಮ್ಮ ಮೆಟ್ರೋ ಬೆಲೆ ಏರಿಕೆಯಿಂದಾಗಿ ಮೆಟ್ರೋ ಸಂಚಾರವನ್ನು ಕಡಿಮೆ ಮಾಡಿದ್ದ ಪ್ರಯಾಣಿಕರು ಇದೀಗ ಮತ್ತೆ ಸಂಚಾರ ದಟ್ಟಣೆಯ ಸಲುವಾಗಿ ಮೆಟ್ರೋ ಮೊರೆ ಹೋಗಿದ್ದು, ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾದ ಹಿನ್ನೆಲೆ ಪ್ರಯಾ ಣಿಕರ ಅನುಕೂಲಕ್ಕಾಗಿ ಸಾರ್ವತ್ರಿಕ ರಜಾದಂದು 4 ಹೆಚ್ಚುವರಿ ಮೆಟ್ರೋ ರೈಲು ಸೇವೆಯನ್ನು ಒದಗಿಸಿದೆ.

ನಮ್ಮ ಮೆಟ್ರೋ ಈ ಕುರಿತು ಪ್ರಕಟಣೆ ಹೊರಡಿಸಿದ್ದು, ನಾಡಪ್ರಭು ಕೆಂಪೇಗೌಡ ನಿಲ್ದಾಣದಲ್ಲಿ (ಮೆಜೆಸ್ಟಿಕ್) ಜನಸಂದಣಿ ಹೆಚ್ಚಾದ ಹಿನ್ನೆಲೆ ಸಾರ್ವತ್ರಿಕ ರಜೆ ಇರುವುದರಿಂದ, ಸಾರ್ವಜನಿಕ ಅನುಕೂಲವನ್ನು ಹೆಚ್ಚಿಸಲು ನಮ್ಮ ಮೆಟ್ರೋ ಬೈಯಪಹನಹಳ್ಳಿಯಿಂದ ನಾಡಪ್ರಭು ಕೆಂಪೇಗೌಡ ನಿಲ್ದಾಣಕ್ಕೆ (ಮೆಜೆಸ್ಟಿಕ್) ನಾಲ್ಕು ಹೆಚ್ಚುವರಿ ರೈಲುಗಳನ್ನು ಓಡಿಸಿದೆ. ಹೆಚ್ಚುವರಿಯಾಗಿ, ಮೆಜೆಸ್ಟಿಕ್ ರೈಲಿನ ಸಂಚಾರವನ್ನು ಕಡಿಮೆ ಮಾಡಿ ಐಟಿಪಿಎಲ್‌ಗೆ ಹಿಂತಿರುಗಿಸಲಾಗಿದೆ. ಇದರೊಂದಿಗೆ, ಮೆಜೆಸ್ಟಿಕ್, ಗರುಡಾಚಾರ್‌ಪಾಳ್ಯ ಮತ್ತು ವೈಟ್ ಫೀಲ್ಡ್ ನಿಂದ 7 ಹೊಸ ಟ್ರಿಪ್‌ಗಳು ನಡೆಸಿದೆ.