ಬೆಂಗಳೂರು: ಸಾಕ್ಷಿಯೊಬ್ಬರನ್ನು ಕಾನೂನುಬಾಹಿರವಾಗಿ ಬಂಧಿಸಿದ್ದಕ್ಕೆ ವೈಟ್‌ಫೀಲ್ಡ್ ಪೊಲೀಸ ರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಆಸ್ತಿ ಉಯಿಲಿನ ಸಾಕ್ಷಿಯಾಗಿದ್ದ ಕೆ.ಎನ್.ಮೋಹನ್ ರೆಡ್ಡಿ ಎನ್ನುವವರಿಗೆ ಆಗ 27ಕ್ಕೆ ಹಾಜರಾಗಲು ನೋಟಿಸ್ ಕೊಟ್ಟು ಆಗ 25ಕ್ಕೆ ಬಂಧನ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಯಾವುದೇ ಕಾರಣಗಳಿಲ್ಲದಿದ್ದರೂ ಬಂಧಿಸುವ ಚಾಳಿ ಶುರುವಾಗಿದೆ.
ಬಂಧಿಸುವುದು ಪೊಲೀಸರಿಗೆ ತಮಾಷೆಯಾಗಿದೆಯಾ? ದೂರುದಾರ ಪ್ರಭಾವಿಯಾಗಿದ್ದರೆ ಸಾಕು ಬಂಧಿಸುತ್ತೀರಾ ಎಂದು ವೈಟ್ ಫೀಲ್ಡ್ ತನಿಖಾಧಿಕಾರಿ ಸುನೀಲ್ ಕುಮಾರ್, ಎಸಿಪಿ, ಡಿಸಿಪಿಗೆ ಕ್ಲಾಸ್ ತೆಗೆದುಕೊಂಡಿದ್ದು, ಕೂಡಲೇ ಕಾನೂನುಬಾಹಿರ ಬಂಧನಗಳನ್ನು ನಿಲ್ಲಿಸಲು ಸೂಚನೆ ನೀಡಿದೆ. ಅಲ್ಲದೇ ಇದನ್ನು ಈ ಬಂಧನವನ್ನು ಕಾನೂನು ಬಾಹಿರವೆಂದು ಘೋಷಿಸಿ ತನಿಖಾಧಿಕಾರಿ, ಉನ್ನತಾಧಿಕಾರಿಗಳ ಜೇಬಿನಿಂದ 3 ಲಕ್ಷ ರು. ದಂಡ ಭರಿಸಲು ಆದೇಶ ಹೊರಡಿಸಿದೆ.