ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

2025-26ನೇ ಸಾಲಿನಲ್ಲಿ 19.44 ಕೋಟಿ ರೂ. ಲಾಭ ಗಳಿಸಿದ ದಿ ಮಲ್ಲೇಶ್ವರಂ ಕೋ-ಆಪರೇಟಿವ್ ಬ್ಯಾಂಕ್

ಬೆಂಗಳೂರು ನಗರದ ದಿ ಮಲ್ಲೇಶ್ವರಂ ಕೋ- ಆಪರೇಟಿವ್ ಬ್ಯಾಂಕ್ 2025-26ನೇ ಆರ್ಥಿಕ ಸಾಲಿನಲ್ಲಿ 19.44 ಕೋಟಿ ರೂ. ಲಾಭ ಗಳಿಸಿದೆ. ಶತಮಾನದ ಇತಿಹಾಸ ಇರುವ ಈ ಬ್ಯಾಂಕ್ ಬೆಂಗಳೂರಿನಲ್ಲಿ ಮುಖ್ಯ ಶಾಖೆ ಸೇರಿದಂತೆ ಒಟ್ಟು ಆರು ಶಾಖೆಗಳನ್ನು ಹೊಂದಿದೆ.

ದಿ ಮಲ್ಲೇಶ್ವರಂ ಕೋ- ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಎನ್.ಎಂ. ಸುರೇಶ್ (ಸಂಗ್ರಹ ಚಿತ್ರ)

ಬೆಂಗಳೂರು, ಏ.10: ನಗರದ ಪ್ರತಿಷ್ಠಿತ ಸಹಕಾರಿ ಬ್ಯಾಂಕ್‌ಗಳಲ್ಲಿ ಒಂದಾಗಿರುವ ದಿ ಮಲ್ಲೇಶ್ವರಂ ಕೋ- ಆಪರೇಟಿವ್ ಬ್ಯಾಂಕ್ (The Malleshwaram Co-operative Bank)‌ 2025-26ನೇ ಆರ್ಥಿಕ ಸಾಲಿನಲ್ಲಿ ರೂ.19.44 ಕೋಟಿ ಲಾಭ ಗಳಿಸಿದೆ. ಶತಮಾನದ ಇತಿಹಾಸ ಇರುವ ಈ ಬ್ಯಾಂಕ್ ಬೆಂಗಳೂರಿನಲ್ಲಿ ಮುಖ್ಯ ಶಾಖೆ ಸೇರಿದಂತೆ ಒಟ್ಟು ಆರು ಶಾಖೆಗಳನ್ನ ಹೊಂದಿದೆ. ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿ ಮುನ್ನಡೆಯುತ್ತಿರುವ ಬ್ಯಾಂಕ್‌ನ ನಿವ್ವಳ ಅನುತ್ಪಾದಕ ಆಸ್ತಿ ಶೂನ್ಯವಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಆಡಿಟ್‌ಗೂ ಮುನ್ನ 19.44 ಕೋಟಿ ರೂಪಾಯಿ ಗಳಿಸಿದ್ದು ಬ್ಯಾಂಕ್‌ನ ಸಮರ್ಥ ಆಡಳಿತ ವ್ಯವಸ್ಥೆಗೆ ಸಾಕ್ಷಿಯಾಗಿದೆ.

ಬ್ಯಾಂಕ್‌ನ ಷೇರು ಬಂಡವಾಳ 21.97 ಕೋಟಿ ರೂಪಾಯಿ, ಆಪದ್ಧನ ನಿಧಿ 25.02 ಕೋಟಿ ರೂಪಾಯಿ, ಇತರೆ ನಿಧಿಗಳು 80.17 ಕೋಟಿ ರೂಪಾಯಿ, ಠೇವಣಿ ಸಂಗ್ರಹಣೆ 813.28 ಕೋಟಿ ರೂಪಾಯಿ, ದುಡಿಯುವ ಬಂಡವಾಳ 978.81 ಕೋಟಿ ರೂಪಾಯಿ ಹಾಗೂ ಬ್ಯಾಂಕ್ ನೀಡಿರುವ ಸಾಲ ಹಾಗೂ ಮುಂಗಡಗಳು 495.03 ಕೋಟಿ ರೂಪಾಯಿ, ಸರ್ಕಾರಿ ಹೂಡಿಕೆಗಳಲ್ಲಿ 272.19 ಕೋಟಿ ರೂಪಾಯಿಗಳನ್ನು ತೊಡಗಿಸಲಾಗಿದೆ ಎಂದು ಮಲ್ಲೇಶ್ವರಂ ಕೋ- ಆಪರೇಟಿವ್ ಬ್ಯಾಂಕ್‌ನ ಅಧ್ಯಕ್ಷ ಎನ್.ಎಂ. ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Bengaluru Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಮೈಲುಗಲ್ಲು: ಅಂತಾರಾಷ್ಟ್ರೀಯ ಪ್ರಯಾಣಕ್ಕೂ ಸ್ಪರ್ಶರಹಿತ ತಂತ್ರಜ್ಞಾನ, ಪ್ರಯೋಗ ಯಶಸ್ವಿ!

ಸದ್ಯ ಬ್ಯಾಂಕ್ ಷೇರು ಸಂಗ್ರಹ, ಸ್ವಂತ ನಿಧಿ ಕ್ರೋಢಿಕರಣ, ಠೇವಣಿ ಸಂಗ್ರಹ, ಸಾಲ ನೀಡಿಕೆ ಮತ್ತು ಹೆಚ್ಚು ಲಾಭವನ್ನು ಗಳಿಸಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುತ್ತಾ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಬ್ಯಾಂಕ್‌ನ ಉಪಾಧ್ಯಕ್ಷ ವೈ.ಎಸ್. ಕೇಶವರಾಜು ಹೇಳಿದ್ದಾರೆ.