ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Davanagere Byelection: ಟಿಕೆಟ್ ಹಂಚಿಕೆ ಹಿಂದೆ ಸ್ವಯಂ ಲಾಭಗಳ ತಂತ್ರ

ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಪಕ್ಷದ ‘ಬಿ’ ಫಾರಂ ಸಿಗುವ ಮುನ್ನವೇ ನಾಮಪತ್ರ ಸಲ್ಲಿಸಿ ಪಕ್ಷದ ನಾಯಕರನ್ನು ಒಂದು ರೀತಿಯಲ್ಲಿ ಬಲೆಗೆ ಸಿಲುಕಿಸಿಕೊಂಡಂತೆ ತಂತ್ರ ರೂಪಿಸಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ಪಕ್ಷದ ಹಿರಿಯ ನಾಯಕರೊಬ್ಬರ ಸಲಹೆ ಯೂ ಇತ್ತು ಎನ್ನಲಾಗಿದೆ.

ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು

ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿಗೆ ಅನುಕಂಪ ಬಿಸಿ, ಬಾಗಲಕೋಟೆಯಲ್ಲಿ ಒಳಮೀಸಲು ಒಳಸುಳಿ ಆತಂಕ

ಕಿರು ಕುರುಕ್ಷೇತ್ರ ಎನ್ನಲಾಗುತ್ತಿರುವ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳ ಉಪ ಚುನಾವಣೆಗಳ ಸ್ಪರ್ಧಿಗಳಿಗೆ ಪಕ್ಷಗಳ ಟಿಕೆಟ್ ರಾಜಕಾರಣ ಭಾರೀ ಚರ್ಚೆಗೆ ಗ್ರಾಸ ವಾಗುತ್ತಿದೆ. ಇಲ್ಲಿ ಅಭ್ಯರ್ಥಿಗಳ ಸೋಲು, ಗೆಲುವಿಗಿಂತ ಯಾರಿಗೆ ಟಿಕೆಟ್ ನೀಡಿದರೆ ತಮಗೆ ಹೇಗೆ ಲಾಭ ಎನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಕೈಚಳಕ ನಡೆದಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ದಾವಣಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಪಕ್ಷದ ‘ಬಿ’ ಫಾರಂ ಸಿಗುವ ಮುನ್ನವೇ ನಾಮಪತ್ರ ಸಲ್ಲಿಸಿ ಪಕ್ಷದ ನಾಯಕರನ್ನು ಒಂದು ರೀತಿಯಲ್ಲಿ ಬಲೆಗೆ ಸಿಲುಕಿಸಿಕೊಂಡಂತೆ ತಂತ್ರ ರೂಪಿಸಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ಪಕ್ಷದ ಹಿರಿಯ ನಾಯಕ ರೊಬ್ಬರ ಸಲಹೆಯೂ ಇತ್ತು ಎನ್ನಲಾಗಿದೆ.

ಇನ್ನು ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೆಲವು ನಾಯಕರು ಮಲ್ಲಿಕಾರ್ಜುನ ಮೇಟಿ ಅವರಿಗೆ ಪಕ್ಷದ ಟಿಕೆಟ್ ನೀಡಿ ಆಗಿದೆ ಎನ್ನುವಷ್ಟರಲ್ಲಿ ಅವರ ಸಹೋದರ ಉಮೇಶ್ ಮೇಟಿ ಅವರಿಗೆ ಟಿಕೆಟ್ ಲಭಿಸಿತು. ಅಂದರೆ ಈ ಕೊನೆ ಕ್ಷಣದ ಬದಲಾವಣೆಗಳು ಕಾಂಗ್ರೆಸ್‌ನ ಕೆಲವು ನಾಯಕರಿಗೂ ತಿಳಿಯಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: West Bengal Election: ಭವಾನಿಪುರ ಚಕ್ರವ್ಯೂಹ: ಮಮತಾ ಬ್ಯಾನರ್ಜಿ ಕಟ್ಟಿಹಾಕಲು ಬಿಜೆಪಿ ರಣತಂತ್ರ!

ಅಂದರೆ ಇಲ್ಲಿ ಕೊನೆ ಕ್ಷಣದವರೆಗೂ ಟಿಕೆಟ್ ನೀಡುವಲ್ಲಿ ನಾಯಕರು ತಮ್ಮ ಅಧಿಕಾರದ ಲಾಭ, ನಷ್ಟದ ಕೈಚಳಕ ತೋರಿಸಿದ್ದಾರೆ ಎನ್ನಲಾಗಿದೆ. ಈ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಿದರೆ ಪಕ್ಷಕ್ಕೆ ಅನುಕೂಲ ಎನ್ನುವುದಕ್ಕಿಂತಕೊಳ್ಳಲು ಮತ್ತು ಗಳಿಸಿಕೊಳ್ಳಲು ಅನುಕೂಲ ಎನ್ನುವುದು ಲೆಕ್ಕಾಚಾರ ಹೆಚ್ಚು ಕೆಲಸ ಮಾಡಿದೆ.

ಪ್ರತಿಪಕ್ಷ ಬಿಜೆಪಿಯಲ್ಲೂ ಇದೇ ತಂತ್ರಗಾರಿಕೆಯಲ್ಲಿ ಟಿಕೆಟ್ ನೀಡಲಾಗಿದೆ ಎಂದು ಪಕ್ಷದ ಹಿರಿಯ ನಾಯಕರು ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಕುರುಬ ಸಮಾಜದ ಜತೆಗೆ ದಲಿತ ಮತಗಳು ಕೈ ತಪ್ಪದಂತೆ ಮಾಡಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಸಿದ್ದರಾಮಯ್ಯ ನಾಯಕತ್ವ ಮುಂದುವರಿಸಬೇಕೆಂದು ಸಚಿವ ಸತೀಶ್ ಜಾರಕಿಹೊಳಿ ಈಗಾಗಲೇ ಅಖಾಡಕ್ಕೆ ಇಳಿದಿದ್ದಾರೆ. ಹೀಗಾಗಿ ಈ ಉಪ ಚುವಾವಣೆಗಳು ಬರೀ ಮುಂದಿನ ರಾಜಕೀಯ ಭವಿಷ್ಯದ ದಿಕ್ಸೂಚಿ ಎನ್ನುವುದಕ್ಕಿಂತ ನಾಯಕತ್ವ ಬದಲಾವಣೆಗಳ ಮೇಲೆ ಪರಿಣಾಮ ಉಂಟು ಮಾಡುವ ಸಾಧ್ಯತೆಯನ್ನು ಕಾಂಗ್ರೆಸ್ ನಾಯಕರು ವಿಶ್ಲೇಷಿಸುತ್ತಿದ್ದಾರೆ.

BY Vijayendra

ಪಕ್ಷದೊಳಗೆ ಕಂಪನ-ಅನುಕಂಪ

ದಾವಣಗೆರೆಯಲ್ಲಿ ಶಾಮನೂರು ಅವರ ನಿಧನದ ನಂತರ ಉಂಟಾಗಿರುವ ಅನುಕಂಪ ಕಾಂಗ್ರೆಸ್ ಮಾತ್ರವಲ್ಲದೆ ಬಿಜೆಪಿಯಲ್ಲೂ ಕೆಲಸ ಮಾಡಿದೆ ಎನ್ನುವ ಅನುಮಾನಗಳಿದ್ದು, ಇದಕ್ಕೆ ಮಾಜಿ ಸಚಿವ ರವೀಂದ್ರನಾಥ್ ಹಾಗೂ ಜಿಲ್ಲೆಯ ಅನೇಕ ಬಿಜೆಪಿ ನಾಯಕರ ತಟಸ್ಥ ನಿಲುವೇ ಸಾಕ್ಷಿಯಾಗುತ್ತಿದೆ ಎನ್ನಲಾಗಿದೆ. ಇನ್ನು ಕಾಂಗ್ರೆಸ್‌ನಿಂದ ಪ್ರಭಾವಿ ಕುಟುಂಬದ ಸದಸ್ಯ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಿದ ಮಾತ್ರಕ್ಕೆ ಗೆಲುವು ಸುಲಭ ಎನ್ನಲಾಗದು. ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಂ ಸಮುದಾಯದ ಸಾದಿಕ ಪೈಲ್ವಾನ್ ಪಕ್ಷೇತರವಾಗಿ ಸ್ಪರ್ಧಿಸಿದ್ದಾರೆ. ಅವರನ್ನು ಎಸ್‌ಡಿಪಿಐ ಹಾಗೂ ದಲಿತ ಸಮಾಜ ಗಳು ಬೆಂಬಲಿಸಿದರೆ ಕಾಂಗ್ರೆಸ್ ಗೆಲುವಿನ ಹಾದಿ ಕಷ್ಟವಾದರೂ ಅಚ್ಚರಿ ಇಲ್ಲ. ಹಾಗೆಯೇ ಬಾಲಕೋಟೆಯಲ್ಲಿ ಒಳಮೀಸಲಾತಿ ಬಿಸಿ ಏನಾದರೂ ಕಾಂಗ್ರೆಸ್‌ಗೆ ತಟ್ಟಿದ್ದೇ ಆದರೆ ಕಾಂಗ್ರೆಸ್ ಗೆಲವು ಕಷ್ಟವಾಗಬಹುದು. ಅದು ಮುಂದೆ ಸರಕಾರದ ಮೇಲೆ ಗಂಭೀರ ಪರಿಣಾಮ ಬೀರಬಹುದು ಎನ್ನುವ ಆತಂಕ ಪಕ್ಷದ ನಾಯಕರಲ್ಲಿದೆ.

ಬಿಜೆಪಿ ಹೀಗೆ ಮಾಡಿದ್ದೇಕೆ?

ಬಿಜೆಪಿ ವಿಚಾರಕ್ಕೆ ಬಂದರೆ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಬಿಜೆಪಿ ತೆಗೆದುಕೊಂಡಿರುವ ತೀರ್ಮಾನವನ್ನು ಗಮನಿಸಿದರೆ ಕಳೆದ ಲೋಕಸಭಾ ಚುನಾ ವಣೆ ವೇಳೆ ಶಿವಮೊಗ್ಗದ ಬೆಕ್ಕಿನ ಕಲ್ಮಟದಲ್ಲಿ ಆಯೋಜಿಸಿದ್ದ ಗುರು ಬಸವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು, ಬಿಜೆಪಿಯ ರಾಘವೇಂದ್ರ ಅವರನ್ನೇ ಗೆಲ್ಲಿಸಬೇಕು ಎಂದು ಬಹಿರಂಗವಾಗಿ ಕರೆ ನೀಡಿದ್ದಕ್ಕೂ, ದಾವಣಗೆರೆಯಲ್ಲಿ ಟಿಕೆಟ್ ನೀಡಿರುವುದಕ್ಕೂ ಏನಾದರೂ ತಾಳೆ ಆಗುವುದೇ ಎನ್ನುವ ಚರ್ಚೆ ಪಕ್ಷದಲ್ಲಿದೆ. ಹಾಗೆಯೇ ಇದಕ್ಕೆ ಉತ್ತರವಾಗಿ ಬಾಗಲಕೋಟೆಯಲ್ಲಿ ಲಿಂಗಾಯತ ನಾಯಕತ್ವ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದ ಕಾರಣ ದಾವಣಗೆರೆಯಲ್ಲಿ ಅನಿವಾರ್ಯವಾಗಿ ನಾಯಕ ಸಮಾಜದ ಶ್ರೀನಿವಾಸ್ ದಾಸಕರಿಯಪ್ಪ ಅವರಿಗೆ ಅವಕಾಶ ಕಲ್ಪಿಸಲಾಗಿದೆ ಎನ್ನುವ ಸಮರ್ಥನೆಯೂ ಇದೆ. ಇದೇ ರೀತಿ ಬಾಗಲಕೋಟೆ ವಿಧಾನ ಪರಿಷತ್ ಸದಸ್ಯ ಪಿ.ಎಸ್.ಪೂಜಾರ ಅವರು ಆಕಾಂಕ್ಷಿಯಾಗಿ ದ್ದರೂ ಬಿಜೆಪಿ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರಿಗೆ ಅವಕಾಶ ನೀಡಿದೆ. ಆದರೆ ಇಲ್ಲಿ ಬಿಜೆಪಿ ಗೆಲ್ಲಬೇಕು ಎನ್ನುವುದಕ್ಕಿಂತ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಿ ನಾಯಕತ್ವ ಬದಲಾವಣೆಗೆ ಇಂಬು ನೀಡಬೇಕೆನ್ನುವ ಬಿಜೆಪಿ ತಂತ್ರವೂ ಕೆಲಸ ಮಾಡಿದೆ ಎನ್ನಲಾಗಿದೆ. ಒಟ್ಟಾರೆ ಈ ಎರಡೂ ಕ್ಷೇತ್ರ ಗಳಲ್ಲೂ ಚುನಾವಣಾ ಜಿದ್ದಾಜಿದ್ದಿಗಿಂತ ಟಿಕೆಟ್‌ಗಾಗಿ ನಡೆದ ಜಿದ್ದಾಜಿದ್ದಿಯೇ ತೀವ್ರಗೊಂಡಿದ್ದರಿಂದ ಕೆಲವು ನಾಯಕರು ಮುಂದಿನ ಹಣಾಹಣಿ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.