ಬೆಂಗಳೂರು: ರಾಜ್ಯದಲ್ಲಿನ ಸೈಬರ್ ಸುರಕ್ಷತೆ, ದಿನೇ ದಿನೇ ಎದುರಾಗುತ್ತಿರುವ ಹೊಸ ಬಗೆಯ ಸೈಬರ್ ಬೆದರಿಕೆಗಳು ಮತ್ತು ಡಿಜಿಟಲ್ ಚೇತರಿಕೆ ಸಾಮರ್ಥ್ಯ ಬಲಪಡಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗೆಗಿನ ಸಮಗ್ರ ವರದಿಯನ್ನು ಕರ್ನಾಟಕ ರಾಜ್ಯ ಸರ್ಕಾರವು ಇಂದು ಬಿಡುಗಡೆ ಮಾಡಿದೆ. ಸೈಬರ್ ಸುರಕ್ಷತೆಗೆ ಸಂಬಂಧಿಸಿದ ಶ್ರೇಷ್ಠತಾ ಕೇಂದ್ರವು (ಸೈಸೆಕ್- CySecK) 2025–26ರ ಈ ಸಮಗ್ರ ವರದಿಯನ್ನು ಸಿದ್ಧಪಡಿಸಿದೆ.
ಈ ವರದಿಯು ಸರ್ಕಾರ, ಉದ್ಯಮ, ಶೈಕ್ಷಣಿಕ ಸಂಸ್ಥೆಗಳು, ನವೋದ್ಯಮಗಳು ಮತ್ತು ಸೈಬರ್ ಸುರಕ್ಷತೆ ಸಮುದಾಯ ನೀಡಿರುವ ಒಳನೋಟದ ವಿವರಗಳನ್ನು ಒಳಗೊಂಡಿದೆ.
ಇದು ಭಾರತದ ಪ್ರಮುಖ ಡಿಜಿಟಲ್ ಮತ್ತು ನಾವೀನ್ಯತೆ ಕೇಂದ್ರವಾಗಿ ಬೆಳೆಯುತ್ತಿರುವ ಕರ್ನಾಟಕದ ಹೆಗ್ಗಳಿಕೆಯ ಮೇಲೆ ಬೆಳಕು ಚೆಲ್ಲಿದೆ. ವಿವಿಧ ಕ್ಷೇತ್ರಗಳಲ್ಲಿ ತ್ವರಿತ ಡಿಜಿಟಲ್ ಅಳವಡಿಕೆಯಿಂದ ಸಂಭವನೀಯ ಸೈಬರ್ ಅಪಾಯಗಳ ಸಾಧ್ಯತೆ ಹೆಚ್ಚಿದೆ ಎಂದು ಎಚ್ಚರಿಸಿದೆ.
ಕ್ಲೌಡ್ ಪ್ಲಾಟ್‌ಫಾರ್ಮ್, ಡಿಜಿಟಲ್ ಪಾವತಿ, ಪರಸ್ಪರ ಸಂಪರ್ಕಿತ ವ್ಯವಸ್ಥೆಗಳು ಮತ್ತು ದತ್ತಾಂಶ ಆಧಾರಿತ ಸೇವೆಗಳ ಮೇಲಿನ ಅವಲಂಬನೆಯು ಹೆಚ್ಚುತ್ತಿರುವಂತೆ, ರಾಜ್ಯದಾ ದ್ಯಂತ ಉದ್ಯಮಗಳು, ಮಹತ್ವದ ಮೂಲಸೌಲಭ್ಯ, ಸರ್ಕಾರಿ ಸಂಸ್ಥೆಗಳು ಮತ್ತು ನಾಗರಿಕರ ಮೇಲೆ ಪರಿಣಾಮ ಬೀರುವ ಸೈಬರ್ ಬೆದರಿಕೆಗಳೂ ಹೆಚ್ಚುತ್ತಿರುವುದನ್ನು ವರದಿಯು ಗುರುತಿಸಿದೆ.
ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಮುಖ ಉಪಕ್ರಮವಾಗಿರುವ ʼಸೈಸೆಕ್ʼ, ರಾಜ್ಯದ ಸೈಬರ್ ಸುರಕ್ಷತಾ ವ್ಯವಸ್ಥೆ ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಕೌಶಲ ಅಭಿವೃದ್ಧಿ, ಉದ್ಯಮ ಸಹಯೋಗ, ಸಂಶೋಧನೆ ಹಾಗೂ ನಾವೀನ್ಯತೆ ಮತ್ತು ಸರ್ಕಾರಿ ಸೈಬರ್ ಸಾಮರ್ಥ್ಯ ವೃದ್ಧಿ ಒಳಗೊಂಡ ರಚನಾತ್ಮಕ ವಿಧಾನದ ಮೂಲಕ, ಸುರಕ್ಷಿತ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಡಿಜಿಟಲ್ ವ್ಯವಸ್ಥೆ ನಿರ್ಮಿಸಲು ಕಾರ್ಯೋನ್ಮುಖವಾಗಿದೆ.
ಸಮಗ್ರ ವರದಿ ಬಿಡುಗಡೆ ಕುರಿತು ಪ್ರತಿಕ್ರಿಯಿಸಿರುವ, ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ. ಮಂಜುಳಾ ಎನ್. ಅವರು, "ರಾಜ್ಯದ ಡಿಜಿಟಲ್ ವ್ಯವಸ್ಥೆಯು ನಿರಂತರವಾಗಿ ಬೆಳವಣಿಗೆಯಾಗುತ್ತಲೇ ಇರುವುದರಿಂದ, ಸೈಬರ್ ಸುರಕ್ಷತೆಯು ನಮ್ಮ ಬೆಳವಣಿಗೆ ಮತ್ತು ಆಡಳಿತ ಚೌಕಟ್ಟಿನ ಮಹತ್ವದ ಆಧಾರ ಸ್ತಂಭವಾಗಿದೆ.
ಸಹಯೋಗ, ನಾವೀನ್ಯತೆ ಮತ್ತು ಸಾಮರ್ಥ್ಯ ವೃದ್ಧಿಯ ಮೂಲಕ ಸೈಬರ್ ಸುರಕ್ಷತೆ ಬಲಪಡಿಸುವ ನಮ್ಮ ಬದ್ಧತೆಯನ್ನು ʼಸೈಸೆಕ್ʼ ಸಿದ್ಧಪಡಿಸಿರುವ ವಾರ್ಷಿಕ ಅವಲೋಕನವು ಪ್ರತಿಬಿಂಬಿಸುತ್ತದೆ. ಇದು ಹೊಸದಾಗಿ ಎದುರಾಗಲಿರುವ ಬೆದರಿಕೆ ಗಳನ್ನು ಎದುರಿಸಲು ಮತ್ತು ರಾಜ್ಯದ ಡಿಜಿಟಲ್ ಭವಿಷ್ಯ ನಿರ್ಮಿಸುವಲ್ಲಿ ವಿವಿಧ ವಲಯಗಳಾದ್ಯಂತದ ಪಾಲು ದಾರರಿಗೆ ಮಾರ್ಗದರ್ಶನ ನೀಡುವ ಅಮೂಲ್ಯವಾದ ಒಳನೋಟಗಳನ್ನು ಒದಗಿಸುತ್ತದೆ" ಎಂದು ಹೇಳಿದ್ದಾರೆ.
ಜಾಗೃತಿ, ಕೌಶಲ ಅಭಿವೃದ್ಧಿ, ಸಂಶೋಧನೆ, ನಾವೀನ್ಯತೆ ಮತ್ತು ವ್ಯವಸ್ಥೆಯ ಪಾಲುದಾರಿಕೆ ಗಳಲ್ಲಿ ಹೆಚ್ಚಿನ ಹೂಡಿಕೆಗಳ ಮೂಲಕ ಕರ್ನಾಟಕವನ್ನು ಸೈಬರ್ ಸುರಕ್ಷತೆಯ ರಾಷ್ಟ್ರೀಯ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಿರುವ ಕರ್ನಾಟಕ ಸೈಬರ್ ಸುರಕ್ಷತಾ ನೀತಿ-2024 ರ ಅಡಿಯಲ್ಲಿ ರಾಜ್ಯದ ವಿಶಾಲ ದೃಷ್ಟಿಕೋನದ ಜೊತೆ ಈ ಸಮೀಕ್ಷಾ ವರದಿಯು ಸೂಕ್ತವಾಗಿ ಹೊಂದಿಕೆಯಾಗುತ್ತದೆ.
ಸಮೀಕ್ಷೆಯಲ್ಲಿ ಆದ್ಯತೆ ನೀಡಿರುವ ಪ್ರಮುಖ ಕ್ಷೇತ್ರಗಳು
- ಸೈಬರ್ ಸುರಕ್ಷತಾ ಪರಿಸರ ಮತ್ತು ಅಪಾಯ ಮೌಲ್ಯಮಾಪನ: ರಾಜ್ಯದಲ್ಲಿ ವ್ಯಾಪಕ ವಾಗಿ ವಿಸ್ತರಣೆಯಾಗುತ್ತಿರುವ ಡಿಜಿಟಲ್ ವ್ಯವಸ್ಥೆ ಮತ್ತು ವಿವಿಧ ವಲಯಗಳಲ್ಲಿ ಕಂಡುಬರುತ್ತಿರುವ ಸೈಬರ್ ಬೆದರಿಕೆಯ ವಿವರವಾದ ಪರಾಮರ್ಶೆ.
- ಕೌಶಲ ನಿರ್ಮಾಣ ಮತ್ತು ಪ್ರತಿಭಾ ವಿಕಾಸ: ಶೈಕ್ಷಣಿಕ ಮತ್ತು ಉದ್ಯಮದ ನಡುವಣ ಅಂತರ ಕಡಿಮೆ ಮಾಡಲು ಶಾಲಾ ಕಾರ್ಯಕ್ರಮಗಳು, ಅಧ್ಯಾಪಕರ ತರಬೇತಿ, ಸೈಬರ್ ಸುರಕ್ಷತಾ ತರಬೇತಿ ಶಿಬಿರಗಳು ಮತ್ತು ಬೃಹತ್ ಪ್ರಮಾಣದ ಆನ್‌ಲೈನ್ ಕಲಿಕಾ (ಎಂಒಒಸಿ) ಕಾರ್ಯಕ್ರಮಗಳು ಸೇರಿದಂತೆ ದೊಡ್ಡ ಪ್ರಮಾಣದ ಉಪಕ್ರಮಗಳು.
- ಕೈಗಾರಿಕೆ ಮತ್ತು ನವೋದ್ಯಮ ವ್ಯವಸ್ಥೆ: ಎಚ್.ಎ.ಸಿ.ಕೆ ನಂತಹ ವೇಗವರ್ಧಕ ಕಾರ್ಯಕ್ರಮಗಳು, ಉದ್ಯಮ ಪಾಲುದಾರಿಕೆಗಳು ಮತ್ತು ಕರ್ನಾಟಕ ಸಿಐಎಸ್‌ಒ ವೇದಿಕೆ (ಸಿಐಎಸ್‌ಒ-ಕೆಎ) ನಂತಹ ವೇದಿಕೆಗಳ ಮೂಲಕ ಸಹಯೋಗ ಬಲಪಡಿಸುವುದು.
- ಸಂಶೋಧನೆ ಮತ್ತು ನಾವೀನ್ಯತೆ: ಪ್ರತ್ಯೇಕ ಪ್ರಯೋಗಾಲಯಗಳು ಮತ್ತು ಸಂಶೋಧನಾ ಕಾರ್ಯಕ್ರಮಗಳ ಮೂಲಕ ಹಾರ್ಡ್‌ವೇರ್ ಸುರಕ್ಷತೆ, ಬೆದರಿಕೆಗಳ ಹೊರತಾಗಿಯೂ ಸುರಕ್ಷತೆ ಕಾಯ್ದುಕೊಳ್ಳುವುದು ಮತ್ತು ಪ್ರತಿಕೂಲ ಬೆದರಿಕೆ ವಿಶ್ಲೇಷಣೆಯಂತಹ ಕ್ಷೇತ್ರಗಳಲ್ಲಿನ ಪ್ರಗತಿಗಳು.
- ಸರ್ಕಾರಿ ಸಾಮರ್ಥ್ಯ ಅಭಿವೃದ್ಧಿ ಮತ್ತು ಸೈಬರ್ ಜಾಗೃತಿ: ಸೈಬರ್ ಸ್ವಚ್ಛತೆ ಹೆಚ್ಚಿಸು ವುದು, ಸಾಂಸ್ಥಿಕ ಸಾಮರ್ಥ್ಯಗಳನ್ನು ಬಲಪಡಿಸುವುದು ಮತ್ತು ಕಾನೂನು ಜಾರಿ ಸನ್ನದ್ಧತೆ ಬೆಂಬಲಿಸಲು ಗಮನಹರಿಸಿದ ಉಪಕ್ರಮಗಳು.
ಬೆಂಗಳೂರಿನಲ್ಲಿ ನಡೆದ ʼಸೈಸೆಕ್ʼʼ ವಾರ್ಷಿಕ ಸೈಬರ್ ಸುರಕ್ಷತಾ ಸಮ್ಮೇಳನ-2026 ರ ನಂತರ ಈ ಸಮೀಕ್ಷಾ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಇದು ಸರ್ಕಾರ, ಕಾನೂನು ಜಾರಿ, ಉದ್ಯಮ, ನವೋದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸೈಬರ್ ಸುರಕ್ಷತೆ ಸಮುದಾಯದ ಪಾಲುದಾರರನ್ನು ಒಂದೆಡೆ ಸೇರಿಸಿತ್ತು.
ಈ ಸಮ್ಮೇಳನದಲ್ಲಿ ಹೊಸದಾಗಿ ಕಂಡುಬರುತ್ತಿರುವ ಸೈಬರ್ ಬೆದರಿಕೆಗಳು, ನವೋದ್ಯಮ ಗಳ ಸಾಧನೆಗಳು ಮತ್ತು ಸಹಯೋಗದ ಉಪಕ್ರಮಗಳ ಕುರಿತು ವಿಸ್ತೃತವಾಗಿ ಚರ್ಚಿಸ ಲಾಯಿತು. ಕಾನೂನು ಜಾರಿ ಸಿಬ್ಬಂದಿಗೆ ಸುಧಾರಿತ ಸೈಬರ್ ಅಪರಾಧ ತನಿಖಾ ಕಾರ್ಯಾ ಗಾರಗಳಂತಹ ವಿಶೇಷ ಸಾಮರ್ಥ್ಯ-ನಿರ್ಮಾಣ ಕಾರ್ಯಕ್ರಮಗಳನ್ನು ಸಹ ಏರ್ಪಡಿಸ ಲಾಗಿತ್ತು.
ಈ ಪ್ರಯತ್ನಗಳು ಸಹಯೋಗ, ಜ್ಞಾನ ವಿನಿಮಯ ಮತ್ತು ನಾವೀನ್ಯತೆ ಮುಂದುವರೆಸಿ ಕೊಂಡು ಹೋಗುವ ಕಾರ್ಯತಂತ್ರದ ವೇದಿಕೆಯಾಗಿ ʼಸೈಸೆಕ್”ನ ಪಾತ್ರವನ್ನು ಹೆಚ್ಚಿಸಿವೆ. ಬದಲಾಗುತ್ತಿರುವ ಸೈಬರ್ ಸುರಕ್ಷತಾ ಸವಾಲುಗಳನ್ನು ಪರಿಹರಿಸಲು ಕರ್ನಾಟಕದ ಸನ್ನದ್ಧತೆಯನ್ನು ಬಲಪಡಿಸಿವೆ.
*
ಕರ್ನಾಟಕದಲ್ಲಿನ ಸೈಬರ್ ಸುರಕ್ಷತೆ, ಹೊಸದಾಗಿ ವರದಿಯಾಗುತ್ತಿರುವ ಬೆದರಿಕೆಗಳು ಮತ್ತು ಸುರಕ್ಷಿತ ಡಿಜಿಟಲ್ ಭವಿಷ್ಯದ ಮಾರ್ಗಸೂಚಿಗಳಿಗೆ ಸಂಬಂಧಿಸಿದ ಸಮಗ್ರ ವರದಿ ಬಿಡುಗಡೆ
- ರಾಜ್ಯದ ಸೈಬರ್ ಸುರಕ್ಷತಾ ವ್ಯವಸ್ಥೆ ಬಲಪಡಿಸುವಲ್ಲಿ ʼಸೈಸೆಕ್ʼ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ