ಸಿದ್ದೇಶ್ವರ ಮಹಾಸ್ವಾಮಿಗಳ ಅಲ್ಲಮಪ್ರಭುದೇವರ ವಚನ-ನಿರ್ವಚನ ಕೃತಿಯ ಭಾಷಾಂತರ 'ವಚನಾಸ್ ಆಫ್ ಅಲ್ಲಮಪ್ರಭು-ಕಾಮೆಂಟರಿ' ಸಂಪುಟಗಳ ಲೋಕಾ ರ್ಪಣೆ
ಬೆಂಗಳೂರು: ನಾಡಿನ ಶರಣರ ವಚನಗಳನ್ನು ಜಗತ್ತಿಗೆ ತಲುಪಿಸುವ ಕೆಲಸ ನಡೆಯು ತ್ತಿದ್ದು, ಇದನ್ನು ನಿರಂತರವಾಗಿ ಮುಂದುವರೆಸಿಕೊಂಡು ಹೋಗುವ ಕೆಲಸ ನಡೆಯಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ(Minister for Large and Medium Industries M. B. Patil )ಹೇಳಿದ್ದಾರೆ.
ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಅಲ್ಲಮ ಪ್ರಭುದೇವರ ವಚನ-ನಿರ್ವಚನ ಕೃತಿಯ ಭಾಷಾಂತರ 'ವಚನಾಸ್ ಆಫ್ ಅಲ್ಲಮಪ್ರಭು-ಕಾಮೆಂಟರಿ' ಸಂಪುಟಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಚನದಲ್ಲಿ ಗೂಡಾರ್ಥಗಳನ್ನು ಅರ್ಥೈಸಿಕೊಳ್ಳುವುದು ಕಷ್ಟ. ಶರಣ ವಚನಗಳು ಜಗತ್ತಿನ ಚಿಂತಕರು, ದಾರ್ಶನಿಕರಿಗೆ ತಲುಪಬೇಕು. ಅಂತಹ ಮಹತ್ಕಾರ್ಯ ರಚನಾತ್ಮಕವಾಗಿ ನಡೆಯಬೇಕು ಎಂದು ಹೇಳಿದರು.
ಇದನ್ನೂ ಓದಿ: Bangalore News: ಐಸಿಎಫ್ಐ ಲಾ ಸ್ಕೂಲ್. ನಲ್ಲಿ ಅಣಕು ನ್ಯಾಯಾಲಯ ಸ್ಪರ್ಧೆಗೆ ಹೈಕೋರ್ಟ್ ನ್ಯಾಯಮೂರ್ತಿ ರವಿ ಹೊಸಮನಿ ಚಾಲನೆ
ಅಲ್ಲಮ ಪ್ರಭು ಶ್ರೇಷ್ಠ ವಚನಕಾರರು. ಅವರು ಎಲ್ಲಿಯೂ ನಿಲ್ಲದೇ, ಯಾವುದೇ ಪ್ರಭಾವಕ್ಕೂ ಒಳಗಾದೇ ದೇಶ ಸಂಚಾರ ಮಾಡಿದವರು. ಇಂತಹದ್ದನ್ನು ವಿಜಯಪುರದ ಸಿದ್ದೇಶ್ವರ ಮಹಾಸ್ವಾಮಿಗಳಲ್ಲಿ ಕಾಣಬಹುದಾಗಿದ್ದು, ಇವರು ಶತಮಾನದ ಸಂತರು. ಜಗತ್ತಿನ ಎಲ್ಲಾ ಚಿಂತಕರು, ಎಲ್ಲಾ ನಾಯಕರ ಬಗ್ಗೆ ತಿಳಿವಳಿಕೆ ಪಡೆದುಕೊಂಡವರು. ಅಲ್ಲಮ ಪ್ರಭುಗಳ ವಚನ ಸಂಕೀರ್ಣವಾದದ್ದು. ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಅಲ್ಲಮನ ಬಗ್ಗೆ ಅಪಾರ ಗೌರವ, ಸಿದ್ಧಪ್ಪಾಜಿ ಅವರ ಅಂತಿಮ ಪತ್ರದಲ್ಲಿ ಅಲ್ಲಮ ಪ್ರಭುಗಳ ವಚನವನ್ನು ಉಲ್ಲೇಖಿಸಿದ್ದಾರೆ. ವಚನಗಳನ್ನು ಜಗತ್ತಿಗೆ ತಲುಪಿಸುವ ನಿಟ್ಟಿನಲ್ಲಿ ಸುತ್ತೂರು ಮಠದ ದೇಶೀಕೇಂದ್ರ ಸ್ವಾಮೀಜಿ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಶರಣರ ವಚನಗಳನ್ನು ಜಾಗತಿಕ ಮಟ್ಟಕ್ಕೆ ತಲುಪಿಸುವ ಪ್ರಯತ್ನವನ್ನು ನಾವೆಲ್ಲರೂ ಮಾಡುತ್ತೇವೆ ಎಂದರು.
ಸಿದ್ದೇಶ್ವರ ಸ್ವಾಮೀಜಿ ಅವರು ಮೈಸೂರು ಮಾತ್ರವಲ್ಲ ದೇಶ, ವಿದೇಶಗಳಿಗೆ ತಲುಪುವಂತೆ ಸುತ್ತೂರು ಸ್ವಾಮೀಜಿ ಅವರು ಮಾಡಿದ್ದಾರೆ. ಭಗವಂತ ಒಳ್ಳೆಯ ಭೂಮಿ, ಒಳ್ಳೆಯ ಬಿಸಿಲು ಕೊಟ್ಟಿದ್ದಾರೆ. ಇಲ್ಲಿ ಒಂದು ಬೊಗಸೆ ನೀರು ಕೊಡುವಂತೆ ಹೇಳಿದ್ದರು. ಸಿದ್ದೇಶ್ವರ ಸ್ವಾಮೀಜಿ ಅವರಿಂದ ಪ್ರೇರಣೆ ಪಡೆದ ತಾವು ಮೊದಲ ಬಾರಿಗೆ ಶಾಸಕರಾಗಿದ್ದಾಗ ಜಲ ಕ್ರಾಂತಿಗೆ ಚಾಲನೆ ನೀಡಿದೆ. ಇದರ ಪರಿಣಾಮ ವಿಜಯಪುರ ನೀರಾವರಿ ಕ್ಷೇತ್ರದಲ್ಲಿ ಹೊಸ ಆಯಾಮ ಸೃಷ್ಟಿಸಿದೆ. ಸಿದ್ದೇಶ್ವರ ಸ್ವಾಮೀಜಿ ಅವರು ಯಾವುದೇ ಸ್ಥಾವರಕ್ಕೂ ನನ್ನ ಹೆಸರು ಇಡಬಾ ರದು ಎಂದು ಹೇಳಿದ್ದರು. ಅದನ್ನು ನಾವೆಲ್ಲರೂ ಪಾಲಿಸಿ ಅವರ ತತ್ವ ಚಿಂತನೆಗಳನ್ನು ಪರಿಪಾಲಿಸೋಣ ಎಂದರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಒರಿಸ್ಸಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಕ್ಷಿತ್ ಶ್ರೀಪಾದ್, ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೆಂಪುರ ಜಿ.ವೆಂಕಟೇಶ, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಡಿ.ಆರ್.ಪಾಟೀಲ್. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರರಾದ ಗೊ.ರು.ಚೆನ್ನಬಸಪ್ಪ, ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್. ಷಡಕ್ಷರಿ ಮತ್ತಿತರರು ಉಪಸ್ಥಿತರಿದ್ದರು.