ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ಈ ಸಲ ಕಪ್‌ ನಮ್ದೇ" ; ಜೈಲಿನೊಳಗಿಂದಲೇ ವಿಡಿಯೋ ಹರಿಬಿಟ್ಟ ವಿಚಾರಣಾಧೀನ ಕೈದಿಗಳು!

ಪರಪ್ಪನ ಅಗ್ರಹಾರ ಜೈಲಲ್ಲಿ ಕೈದಿಗಳಿಗೆ ಮೊಬೈಲ್‌ ಸಿಗುವ ಸೌಲಭ್ಯಕ್ಕೆ ಇನ್ನೂ ಬ್ರೇಕ್‌ ಬಿದ್ದಿಲ್ಲ. ಜೈಲಿನೊಳಗೆ ಮೊಬೈಲ್, ಟಿವಿ ಹಾಗೂ ನೆಟ್‌ ಫ್ಲಿಕ್ಸ್‌ ನಂತಹ ಐಷಾರಾಮಿ ಸೌಲಭ್ಯಗಳಿವೆ ಎಂದು ಬಿಂಬಿಸುವಂತಹ ವಿಡಿಯೋವನ್ನ ಕೈದಿಗಳೇ ಸೆರೆ ಹಿಡಿದು ವೈರಲ್ ಮಾಡಿದ್ದಾರೆ.

ಸಂಗ್ರಹ ಚಿತ್ರ

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಲ್ಲಿ ಕೈದಿಗಳಿಗೆ ಮೊಬೈಲ್‌ ಸಿಗುವ ಸೌಲಭ್ಯಕ್ಕೆ ಇನ್ನೂ ಬ್ರೇಕ್‌ ಬಿದ್ದಿಲ್ಲ. ಜೈಲಿನೊಳಗೆ ಮೊಬೈಲ್, ಟಿವಿ ಹಾಗೂ ನೆಟ್‌ ಫ್ಲಿಕ್ಸ್‌ ನಂತಹ ಐಷಾರಾಮಿ ಸೌಲಭ್ಯಗಳಿವೆ ಎಂದು ಬಿಂಬಿಸುವಂತಹ ವಿಡಿಯೋವನ್ನ ಕೈದಿಗಳೇ ಸೆರೆ ಹಿಡಿದು ವೈರಲ್ ಮಾಡಿದ್ದಾರೆ. ಈ ಸೌಲಭ್ಯಗಳನ್ನು ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರೇ ಒದಗಿಸಿದ್ದಾರೆ ಎಂದು ಕೈದಿಗಳು ವಿಡಿಯೋದಲ್ಲಿ ಹೇಳಿಕೆ ನೀಡಿದ್ದರು.

ಅಷ್ಟೇ ಅಲ್ಲದೇ ನಾಳೆ ಐಪಿಎಲ್ ಮ್ಯಾಚ್ ಇದೆ, ಈ ಸಲ ಕಪ್ ನಮ್ದೆ" ಎನ್ನುತ್ತಾ ವಿಡಿಯೋ ಹರಿಬಿಟ್ಟಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತು. ಇದೀಗ ಪೊಲೀಸರು ವಿಡಿಯೋ ಮೂಲವನ್ನು ಪತ್ತೆ ಹಚ್ಚಿದ್ದಾರೆ. ಸೆಂಟ್ರಲ್ ಜೈಲಿನ ಒಳಗೆ ನಿನ್ನೆಯೇ ಜೈಲಾಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಬಳಿಕ ಕೈದಿಗಳನ್ನ ಅಕ್ಷರಗಳ ಆಧಾರದ ಮೇಲೆ ಬ್ಯಾರಕ್ ಗೆ ಶಿಪ್ಟ್ ಮಾಡಲಾಗಿತ್ತು.

ಕೈದಿಗಳು ಉದ್ದೇಶ ಪೂರ್ವಕವಾಗಿ ವಿಡಿಯೋ ಬಿಟ್ಟಿದ್ದಾರೆ. ದರ್ಶನ್, ಅಭಿ ಹಾಗೂ ಎಂಡ್ರೋಸ್ ಎಂಬುವರು ಈ ಕೃತ್ಯವೆಸಗಿದ್ದಾರೆ ಎನ್ನಲಾಗ್ತಿದೆ. ಹೆಣ್ಣೂರು ಬಂಡೆ ಬಳಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳಾಗಿರೋ ದರ್ಶನ್ ಮತ್ತು ಅಭಿ ಸೇರಿಕೊಂಡು ಎಂಡ್ರೋಸ್ ಎಂಬಾತನಿಗೆ ಪ್ರಚೊದನೆ ಕೊಟ್ಟು ವಿಡಿಯೋ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ. ತನಿಖೆಯಲ್ಲಿ ಮಲ ಮೂತ್ರ ಹೋಗುವ ಪೈಪೊಳಗೆ ಮೊಬೈಲ್‌ಗೆ ನಾಲ್ಕೈದು ಕವರ್ ಸುತ್ತಿ ಮುಚ್ಚಿಟ್ಟು ಬೇಕಾದಾಗ ಮೊಬೈಲ್ ಬಳಕೆ ಮಾಡ್ತಿದ್ದು ಗೊತ್ತಾಗಿದೆ.

ಪ್ರಕರಣ ಸಂಬಂಧ ಕೂಡಲೇ ಎಚ್ಚೆತ್ತ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಮೂವರು ವಾರ್ಡರ್‌ಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಜೈಲು ಡಿಜಿಯಾಗಿ ಅಲೋಕ್ ಕುಮಾರ್ ಅಧಿಕಾರ ವಹಿಸಿಕೊಂಡ ಬಳಿಕ ಹಲವು ಅಕ್ರಮಕ್ಕೆ ಬ್ರೇಕ್‌ ಹಾಕಲು ಮುಂದಾಗಿದ್ದರು. ನಟೋರಿಯಸ್ ಕೈದಿಗಳ ಬ್ಯಾರಕ್ ಶಿಫ್ಟ್ ಮಾಡುವಂತೆ ಅಲೋಕ್ ಕುಮಾರ್ ಸೂಚಿಸಿದ್ದರು. ಸದ್ಯ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಮೂವರ ವಿರುದ್ದ ಕೇಸ್ ದಾಖಲಾಗಿದೆ. ಮೂವರನ್ನ ಕ್ವಾರಂಟೈನ್ ಸೆಲ್ ಗೆ ಶಿಫ್ಟ್ ಮಾಡಲಾಗಿದೆ.

Vishakha Bhat Heggar

View all posts by this author