ಬೆಂಗಳೂರು: ಮಳೆ ನೀರಿನ ಇಂಗು ಗುಂಡಿ ಸ್ವಚ್ಛತೆ ವೇಳೆ ಉಸಿರುಗಟ್ಟಿ ಮೂವರು ಮೃತಪಟ್ಟಿರುವ ದುರ್ಘಟನೆ ನಗರದ ( (Bengaluru News) ವೈಟ್‌ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮುನಿಶಾಮಪ್ಪ(67), ರುದ್ರಕುಮಾರ್(40) ಮತ್ತು ವಿಶ್ವನಾಥ್ ಆಚಾರಿ(24) ಮೃತರು.
ಮಾಲೀಕ ಮುನಿಶಾಮಪ್ಪ 12 ವರ್ಷಗಳ ಹಿಂದೆಯೇ ಇಂಗು ಗುಂಡಿ ನಿರ್ಮಿಸಿದ್ದರೂ ಬಳಸುತ್ತಿರಲಿಲ್ಲ. ಹೀಗಾಗಿ ನೀರಿನಲ್ಲಿ ಬಿದ್ದ ವಸ್ತುಗಳು ಕೊಳೆತು ನಾರುತ್ತಿದ್ದವು. ಕೆಮಿಕಲ್ ಹಾಕಿ ಕ್ಲೀನ್ ಮಾಡಲು ಮುಂದಾಗಿದ್ದರು. ಈ ವೇಳೆ ಉಸಿರಾಟದ ತೊಂದರೆಯಾಗಿ ಮುನಿಶಾಮಪ್ಪ ಮೂರ್ಛೆ ಹೋಗಿದ್ದಾರೆ. ಮಾಲೀಕನನ್ನು ರಕ್ಷಿಸಲು ಹೋದ ಪ್ಲಂಬರ್ ರುದ್ರಕುಮಾರ್ ಕೂಡ ಮೂರ್ಛೆ ಹೋಗಿದ್ದಾರೆ. ಇವರಿಬ್ಬರನ್ನು ನೋಡಲು ಹೋದ ವಿಶ್ವನಾಥ್ ಆಚಾರಿ ಎಂಬ ಯುವಕ ಕೂಡ ಪ್ರಜ್ಞೆತಪ್ಪಿದ್ದಾನೆ. ವಿಶ್ವನಾಥ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಮೂವರನ್ನೂ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಮೃತರ ಪಾರ್ಥೀವ ಶರೀರವನ್ನು ವೈದೇಹಿ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗಾಗಿ ಇರಿಸಲಾಗಿದೆ. ಈ ಸಂಬಂಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಲಮಂಗಲದ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ
ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯೆ (murder case) ನಡೆದಿದ್ದು, ನೆಲಮಂಗಲದ (Nelamangala) ಮನೆಯೊಂದರಲ್ಲಿ ವ್ಯಕ್ತಿಯ ಗುರುತು ಸಿಗದಂತೆ ಪಾತಕಿಗಳು ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ. ನೆಲಮಂಗಲದ ವಿಜಯಲಕ್ಷ್ಮೀ ಬಡಾವಣೆಯ ಮನೆಯೊಂದರಲ್ಲಿ ವ್ಯಕ್ತಿಯ ಕೊಳೆತ ಶವ ಪತ್ತೆಯಾಗಿದೆ.
ನಾಗರಾಜ್ ಎಂಬವರಿಗೆ ಸೇರಿದ ಮನೆಯಲ್ಲಿ ಶವ ಪತ್ತೆಯಾಗಿದೆ. 4 ದಿನದ ಹಿಂದೆ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಮನೆಗೆ ಬೀಗ ಹಾಕಲಾಗಿತ್ತು ಹಾಗೂ ಸುತ್ತಮುತ್ತ ಕೆಟ್ಟ ವಾಸನೆ ಬರುತ್ತಿತ್ತು. ಮನೆ ಮಾಲೀಕ ನಾಗರಾಜ್‌ಗೆ ಸ್ಥಳೀಯರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಾಗಲಗುಂಟೆ ಪೊಲೀಸರು ಬಂದಿದ್ದು, ಈ ವೇಳೆ ಗುರುತು ಸಿಗದ ಬೆತ್ತಲೆ ಕೊಳೆತ ಮೃತದೇಹ ಕಂಡು ಶಾಕ್ ಆಗಿದ್ದಾರೆ.
ಜ್ಯೋತಿಷಿ ಹೇಳಿದ ಭವಿಷ್ಯಕ್ಕೆ ಹೆದರಿ ಮದುವೆ ನಿಶ್ಚಯವಾಗಿದ್ದ ಟೆಕ್ಕಿ ಯುವತಿ ಆತ್ಮಹತ್ಯೆ!
2 ತಿಂಗಳ ಹಿಂದೆ ಮೋಹನ್ ಕೃಷ್ಣ-ಊರ್ವಶಿ ಎಂಬವರಿಗೆ ನಾಗರಾಜ್ ಮನೆ ಬಾಡಿಗೆ ನೀಡಿದ್ದರು. ಕೊಲೆಯಾಗಿದ್ದು ಮೋಹನ್ ಕೃಷ್ಣನಾ ಅಥವಾ ಬೇರೆ ವ್ಯಕ್ತಿಯಾ ಎಂಬ ಅನುಮಾನ ಮೂಡಿದೆ. ಮೋಹನ್ ಜೊತೆಗಿದ್ದ ಊರ್ವಶಿ ಈವರೆಗೂ ಪತ್ತೆ ಆಗಿಲ್ಲ. ಕೊಲೆ ಮಾಡಿದ ಬಳಿಕ ಪಾಪಿಗಳು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಅಕ್ರಮ ಸಂಬಂಧದಿಂದಾಗಿ ಹತ್ಯೆಯಾಗಿದೆ ಎಂದು ಶಂಕಿಸಲಾಗಿದೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.