ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಟಿಕೆಟ್ ರಹಿತ ಪ್ರಯಾಣ: 6.43 ಲಕ್ಷ ರು. ದಂಡ ವಸೂಲಿ

ಜುಲೈ 2026ರ ಅವಧಿಯಲ್ಲಿ ನಗರದಾದ್ಯಂತ 19380 ಬಸ್ ಟ್ರಿಪ್‌ಗಳನ್ನು ತಪಾಸಣೆ ನಡೆಸಲಾಗಿದ್ದು, ಈ ವೇಳೆ 2748 ಟಿಕೆಟ್ ರಹಿತ ಪ್ರಯಾಣಿಕರು ಪತ್ತೆಯಾಗಿದ್ದಾರೆ. ಇವರಿಂದ ಒಟ್ಟು 6,23,435 ದಂಡ ವಸೂಲಿ ಮಾಡಲಾಗಿದೆ. ಇದೇ ವೇಳೆ, ಮಹಿಳಾ ಪ್ರಯಾಣಿಕರಿಗೆ ಮೀಸಲಾಗಿರುವ ಆಸನಗಳಲ್ಲಿ ಕುಳಿತು ಪ್ರಯಾಣಿ ಸುತ್ತಿದ್ದ 205 ಪುರುಷ ಪ್ರಯಾಣಿಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಮೋಟಾರು ವಾಹನ ಕಾಯ್ದೆ, 1988ರ ಕಲಂ 177 ಮತ್ತು 94ರ ಅಡಿಯಲ್ಲಿ ಇವರಿಗೆ ಒಟ್ಟು 20,500 ರು. ದಂಡ ವಿಧಿಸಲಾಗಿದೆ.

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳಲ್ಲಿ ಟಿಕೆಟ್ ಪಡೆಯದೆ ಪ್ರಯಾಣಿಸುವವರು ಹಾಗೂ ಮಹಿಳೆಯರಿಗೆ ಮೀಸಲಾದ ಆಸನಗಳನ್ನು ಬಳಸುವ ಪುರುಷ ಪ್ರಯಾಣಿಕರ ವಿರುದ್ಧ ಬಿಎಂಟಿಸಿ ತನಿಖಾ ತಂಡಗಳು ಜುಲೈ ತಿಂಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿವೆ.

ಜುಲೈ 2026ರ ಅವಧಿಯಲ್ಲಿ ನಗರದಾದ್ಯಂತ 19380 ಬಸ್ ಟ್ರಿಪ್‌ಗಳನ್ನು ತಪಾಸಣೆ ನಡೆಸಲಾ ಗಿದ್ದು, ಈ ವೇಳೆ 2748 ಟಿಕೆಟ್ ರಹಿತ ಪ್ರಯಾಣಿಕರು ಪತ್ತೆಯಾಗಿದ್ದಾರೆ. ಇವರಿಂದ ಒಟ್ಟು 6,23,435

ದಂಡ ವಸೂಲಿ ಮಾಡಲಾಗಿದೆ. ಇದೇ ವೇಳೆ ಮಹಿಳಾ ಪ್ರಯಾಣಿಕರಿಗೆ ಮೀಸಲಾಗಿರುವ ಆಸನ ಗಳಲ್ಲಿ ಕುಳಿತು ಪ್ರಯಾಣಿಸುತ್ತಿದ್ದ 205 ಪುರುಷ ಪ್ರಯಾಣಿಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ. ಮೋಟಾರು ವಾಹನ ಕಾಯ್ದೆ, 1988ರ ಕಲಂ 177 ಮತ್ತು 94ರ ಅಡಿಯಲ್ಲಿ ಇವರಿಗೆ ಒಟ್ಟು 20500 ರು. ದಂಡ ವಿಧಿಸಲಾಗಿದೆ.

ಇದನ್ನೂ ಓದಿ: BMTC reality check: ಬಿಎಂಟಿಸಿಯಲ್ಲಿ ಸಚಿವ ಬೈರತಿ ಸುರೇಶ್ ರಿಯಾಲಿಟಿ ಚೆಕ್; ಬಸ್‌ ನಿಲ್ಲಿಸದ ಡ್ರೈವರ್, ಕಂಡಕ್ಟರ್ ಅಮಾನತು

ತನಿಖಾ ಕಾರ್ಯಾಚರಣೆಯ ವೇಳೆ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಬಿಎಂಟಿಸಿ ನಿರ್ವಾಹಕರ ವಿರುದ್ಧವೂ 1559 ಪ್ರಕರಣ ದಾಖಲಿಸಲಾಗಿದೆ. ಇದರಲ್ಲಿ 1441 ಸಾಮಾನ್ಯ ಪ್ರಕರಣ ಸೇರಿದಂತೆ ಕೆಂಪು ಚುಕ್ಕೆ, ಗಂಭೀರ ಕೆಂಪು ಚುಕ್ಕೆ ಹಾಗೂ ವಿಶೇಷ ಪ್ರಕರಣಗಳು ಸೇರಿವೆ.

ಟಿಕೆಟ್ ರಹಿತ ಪ್ರಯಾಣ ಮತ್ತು ಮಹಿಳಾ ಮೀಸಲು ಆಸನಗಳ ದುರುಪಯೋಗ ಸೇರಿದಂತೆ ಒಟ್ಟು 2953 ಪ್ರಯಾಣಿಕರಿಗೆ ದಂಡ ವಿಧಿಸಿ 6,43,935 ವಸೂಲಿ ಮಾಡಲಾಗಿದೆ. ನಿಯಮ ಉಲ್ಲಂಘಿಸಿ ಪ್ರಯಾಣಿಸುವವರ ವಿರುದ್ಧ ಮುಂದಿನ ದಿನಗಳಲ್ಲಿಯೂ ತಪಾಸಣೆ ಮತ್ತು ದಂಡದ ಕ್ರಮ ಮುಂದುವರಿಸಲಾಗುವುದು ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ.