ಬೆಂಗಳೂರು: ಟೈಟಾನ್ ಸಂಸ್ಥೆಯು ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಟ ವಿಕ್ರಾಂತ್ ಮಾಸ್ಸಿ ಅಭಿನಯಿಸಿರುವ ‘ವೇರ್ ಯುವರ್ ಸ್ಟೋರಿ’ ಎಂಬ ಜಾಹೀರಾತು ಅಭಿಯಾನವನ್ನು ಬಿಡುಗಡೆ ಮಾಡಿದೆ.
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಹೇಳಲಿಕ್ಕೆ ಒಂದು ಕಥೆ ಇರುತ್ತದೆ. ಆ ಕಥೆ ಅವರು ಯಾರು ಎಂಬುದರಿಂದ, ಅವರು ಹೊಂದಿರುವ ನಂಬಿಕೆಗಳಿಂದ ಮತ್ತು ಅವರು ಮಾಡುವ ಆಯ್ಕೆಗಳಿಂದ ಹುಟ್ಟಿಕೊಳ್ಳುತ್ತದೆ. ಅದು ಅವರ ಸತ್ಯ ಮತ್ತು ಅವರ ನಿಜ ವ್ಯಕ್ತಿತ್ವ, ಆ ವ್ಯಕ್ತಿತ್ವವೇ ಅವರ ಸ್ಟೈಲ್ ಅನ್ನು ರೂಪಿಸುತ್ತದೆ. ‘ಆಂತರ್ಯವೇ ತೀವ್ರವಾದ ಶೈಲಿಯನ್ನು ರೂಪಿಸುತ್ತದೆ’ ಎಂಬ ನಂಬಿಕೆಯ ಆಧಾರದ ಮೇಲೆ ನಿರ್ಮಿತವಾದ ಈ ಅಭಿಯಾನವು, ಹೊಸ ತಲೆಮಾರಿನವರನ್ನು ಉದ್ದೇಶ ಪೂರ್ವಕವಾಗಿ ಮತ್ತು ಆತ್ಮವಿಶ್ವಾಸದೊಂದಿಗೆ ತಮ್ಮ ಸತ್ಯವನ್ನು ಅಥವಾ ವ್ಯಕ್ತಿತ್ವವನ್ನು ಹೊಂದಲು ಆಹ್ವಾನಿಸುತ್ತದೆ.
ಈ ಅಭಿಯಾನದಲ್ಲಿ ಕಾಣಿಸಿಕೊಂಡಿರುವ ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮತ್ತು ರಾಷ್ಟ್ ಪ್ರಶಸ್ತಿ ವಿಜೇತ ನಟರಾದ ವಿಕ್ರಾಂತ್ ಮಾಸ್ಸಿ ಅವರ ಬದುಕು ತುಂಬಾ ಗಾಢವಾ ಗಿದ್ದು, ಧೈರ್ಯದಿಂದ ಕೂಡಿದೆ ಮತ್ತು ಅವರ ನಂಬಿಕೆಗಳು ಹಾಗೂ ಆಯ್ಕೆಗಳನ್ನು ಅಧಿಕೃತವಾಗಿ ಪ್ರತಿಬಿಂಬಿಸುತ್ತದೆ. ಇವರ ಕಥೆಗಳು ಅನುಕರಣೆಗಿಂತ ತಮ್ಮ ಅಸ್ಮಿತೆಯನ್ನು ಹೆಚ್ಚು ನೆಚ್ಚಿಕೊಳ್ಳುವ, ಆಡಂಬರಕ್ಕಿಂತ ಅರ್ಥಕ್ಕೆ ಆದ್ಯತೆ ನೀಡುವ ಇಂದಿನ ತಲೆಮಾರಿನ ಮನೋಭಾವವನ್ನು ಪ್ರತಿಧ್ವನಿ ಸುತ್ತವೆ.
ಇದನ್ನೂ ಓದಿ: Titan: ಟೈಟಾನ್ ತನ್ನ 40ನೇ ವಾರ್ಷಿಕೋತ್ಸವ: ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಅವರಿಗೆ ‘ಯೂನಿಟಿ ವಾಚ್’ ಮೂಲಕ ಗೌರವ
ಇಂದಿನ ತಲೆಮಾರು ನೈಜತೆ ಮತ್ತು ವಾಸ್ತವಿಕ ಕತೆಗಳ ಜೊತೆ ತಮ್ಮನ್ನು ಗುರುತಿಸಿಕೊಳ್ಳಲು ಬಯಸುತ್ತದೆ ಎಂಬ ಸರಳ ಒಳನೋಟದ ಆಧಾರದಲ್ಲಿ ಈ ಐಡಿಯಾ ರೂಪಿಸಲಾಗಿದೆ. ಸಿಂಧು ಮತ್ತು ಮಾಸ್ಸಿ ಅವರ ತೀವ್ರತೆ, ಸಹನೆ ಮತ್ತು ಘನತೆಯ ವ್ಯಕ್ತಿತ್ವಗಳ ಮೂಲಕ ಈ ಐಡಿಯಾವನ್ನು ದೃಶ್ಯರೂಪಕ್ಕೆ ತಂದಿದ್ದು, ಮೇಲ್ಮೈ ಮತ್ತು ಆಡಂಬರಕ್ಕಿಂತ ಮೀರಿದ ಆಧುನಿಕ ಶೈಲಿಯನ್ನು ಸಾರುತ್ತದೆ.
ಈ ಕುರಿತು ಮಾತನಾಡಿದ ಟೈಟಾನ್ ಕಂಪನಿ ಲಿಮಿಟೆಡ್ ನ ಅನಲಾಗ್ ವಾಚ್‌ಗಳ ಸಿಎಂಓ ರಂಜನಿ ಕೃಷ್ಣಸ್ವಾಮಿ ಅವರು, “ಟೈಟಾನ್ ನಲ್ಲಿ ನಾವು ವಾಚ್ ಕೇವಲ ಒಂದು ವಸ್ತು ಮಾತ್ರವೇ ಅಲ್ಲ, ಅದು ನೀವು ಯಾರು ಮತ್ತು ನಿಮ್ಮನ್ನು ರೂಪಿಸಿದ ಪಯಣಗಳನ್ನು ಸಾರುವ ಒಂದು ಹೆಗ್ಗುರುತು ಎಂಬ ನಂಬಿಕೆ ಹೊಂದಿದ್ದೇವೆ. ಅಧಿಕೃತತೆಗೆ, ನೈಜತೆಗೆ ಹೆಚ್ಚು ಬೆಲೆ ಬಂದಿರುವ ಈ ಜಗತ್ತಿನಲ್ಲಿ ಜನರು ತಮ್ಮ ಶೈಲಿಯು ತಮ್ಮ ಬದುಕಿನ ಸತ್ಯವನ್ನು ಪ್ರತಿಬಿಂಬಿಸಬೇಕು ಎಂದು ಬಯಸುತ್ತಾರೆ. ಪಿವಿ ಸಿಂಧು ಮತ್ತು ವಿಕ್ರಾಂತ್ ಈ ಪರಿಕಲ್ಪನೆಯನ್ನು ಅಭಿಯಾನದಲ್ಲಿ ಪ್ರಾಮಾ ಣಿಕವಾಗಿ ದಾಟಿಸಲಿದ್ದಾರೆ. ಅವರ ಕಥೆಗಳು ನಾವು ಬ್ರ್ಯಾಂಡ್ ಆಗಿ ಯಾವುದನ್ನು ಸಾರುತ್ತೇವೆಯೋ ಅದರ ಜೊತೆ ಹೊಂದಿಕೊಳ್ಳುತ್ತವೆ. ಟೈಟಾನ್ ತನ್ನ ವಾಚ್ ತಯಾರಿಕಾ ಕಲೆಯ ಪಯಣದಲ್ಲಿ ಮುಂದುವರಿಯುತ್ತಿರುವಂತೆ ಅದು ಪ್ರತಿನಿಧಿಸುವ ಹುಮ್ಮಸ್ಸು ಮತ್ತು ಧೈರ್ಯವನ್ನು ಈ ಅಭಿಯಾನವು ಪ್ರತಿನಿಧಿಸುತ್ತದೆ” ಎಂದು ಹೇಳಿದರು.
ಪಿ.ವಿ.ಸಿಂಧು ಅವರ ಜಾಹೀರಾತು ಚಿತ್ರವು ಬೆವರು ಮತ್ತು ಉಕ್ಕಿನ ಶಕ್ತಿಯ ಸಂಕೇತವಾಗಿ ಮೂಡಿ ಬಂದಿದೆ. ಈ ಚಿತ್ರವು ಅವರ ಸಹನಾಶೀಲತೆ ಮತ್ತು ಕ್ರೀಡೆಯ ಮೇಲಿನ ಪ್ರೀತಿಯನ್ನು ಸುಂದರವಾಗಿ ಕಾಣಿಸುತ್ತದೆ. ಅವರ ಶಕ್ತಿಯು ಸಹನೆಯನ್ನು ಸ್ವ-ಅಭಿವ್ಯಕ್ತಿಯ ರೂಪವಾಗಿ ನೋಡುವ ಮತ್ತು ತಾವು ರೂಪುಗೊಳ್ಳುವ ಪಯಣವನ್ನು ಆನಂದಿಸುವ ಈ ಕಾಲದ ಯುವ ಭಾರತೀಯರ ತಲೆಮಾರಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ.
ಈ ಕುರಿತು ಪಿ.ವಿ. ಸಿಂಧು ಅವರು, “ಈ ಜಾಹೀರಾತು ಚಿತ್ರ ನನ್ನನ್ನು ಕೋರ್ಟ್ ನಲ್ಲಿ ಮತ್ತು ಹೊರಗೆ ನನ್ನನ್ನು ರೂಪಿಸಿದ ಕ್ಷಣಗಳ ಬಳಿಗೆ ಕೊಂಡೊಯ್ದಿತು. ನಿರ್ಧಾರ ಮತ್ತು ಉದ್ದೇಶ ಎರಡೂ ನಮ್ಮದೇ ಆದ ಶೈಲಿಯನ್ನು ಸೃಷ್ಟಿಸುತ್ತದೆ ಎಂಬ ನಂಬಿಕೆಯನ್ನು ಈ ಅಭಿಯಾನ ಪ್ರತಿಬಿಂಬಿಸು ತ್ತದೆ. ಬ್ರ್ಯಾಂಡ್ ನನ್ನ ಪಯಣದ ಹಿಂದಿನ ಭಾವನೆಯನ್ನು ಅರ್ಥಮಾಡಿಕೊಂಡು ಅದನ್ನು ನಿಜವಾದ ರೂಪದಲ್ಲಿ ಹೊರತಂದಿದ್ದರಿಂದ ಈ ಸಹಯೋಗ ವಿಶೇಷವಾಗಿದೆ” ಎಂದು ಹೇಳಿದರು.
ವಿಕ್ರಾಂತ್ ಅಭಿನಯದ ಜಾಹೀರಾತು ಚಿತ್ರವು ಕೆಲಸದ ನಿಜವಾದ ಅಳತೆ ಇರುವುದು ಪ್ರಮಾಣದಲ್ಲಿ ಅಲ್ಲ, ನೀವು ಕಲೆಯ ಕುರಿತು ಹೊಂದಿರುವ ಪ್ಯಾಷನ್ ನಲ್ಲಿ ಎಂಬ ಅವರ ಫಿಲಾಸಫಿಯನ್ನು ಪ್ರತಿಬಿಂಬಿಸುತ್ತದೆ. ಅವರ ಪಯಣವು ಒಂದು ಘನ ಉದ್ದೇಶದೊಂದಿಗೆ ಮುಂದುವರಿಯುವ ಮತ್ತು ನಿಜವನ್ನು ಕಾಯ್ದುಕೊಳ್ಳುವ ಧೈರ್ಯ ತೋರುವ ವ್ಯಕ್ತಿತ್ವವನ್ನು ಸಾರುತ್ತದೆ.
ಈ ಕುರಿತು ವಿಕ್ರಾಂತ್ ಮಾಸ್ಸಿ ಅವರು, “ನನ್ನ ಪಯಣದಲ್ಲಿ ಯಾವತ್ತೂ ವೇಗವಾಗಿ ಸಾಗುವುದರ ಕಡೆಗೆ ಗಮನ ಹರಿಸಿಲ್ಲ, ಬದಲಿಗೆ ಸತ್ಯದೊಂದಿಗೆ ಸಾಗುವುದರ ಕಡೆಗೆ ಗಮನ ಹರಿಸಿದ್ದೇನೆ. ನನ್ನ ಶೈಲಿ ಯಾವಾಗಲೂ ಸರಳತೆ ಮತ್ತು ಪ್ರಾಮಾಣಿಕತೆಯಿಂದ ಬಂದಿದೆ. ಅದಕ್ಕಾಗಿಯೇ ಟೈಟಾನ್ ನ ‘ವೇರ್ ಯುವರ್ ಸ್ಟೋರಿ’ ನನಗೆ ವೈಯಕ್ತಿಕವಾಗಿ ಕನೆಕ್ಟ್ ಆಗುತ್ತದೆ. ವಾಚ್ ಯಾವಾಗಲೂ ನಾನು ಎಲ್ಲಿಂದ ಬಂದಿದ್ದೇನೆ ಮತ್ತು ಎಲ್ಲಿಗೆ ಹೋಗಲು ಬಯಸುತ್ತೇನೆ ಎಂಬುದನ್ನು ನೆನಪಿಸುತ್ತದೆ” ಎಂದು ಹೇಳಿದರು.
ಒಟ್ಟಿನಲ್ಲಿ ಈ ಜಾಹೀರಾತು ಚಿತ್ರಗಳು ಟೈಟಾನ್ ನ ಅಭಿವೃದ್ಧಿ ಹೊಂದಿದ ವಿನ್ಯಾಸ ಭಾಷೆ, ಸಮಕಾಲೀನ ಕಥನ ಕಲೆ ಮತ್ತು ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವದಿಂದ ಪ್ರೇರಿತವಾದ ಕಲಾತ್ಮಕತೆ ಯನ್ನು ಪ್ರತಿಬಿಂಬಿಸುತ್ತವೆ. ಇಲ್ಲಿ ವಾಚ್ ಪ್ರತಿಯೊಬ್ಬರ ಪಯಣದ ಗುರುತಾಗಿ ಹೊರಹೊಮ್ಮಿದ್ದು, ಅದು ಅವರ ವೈಯಕ್ತಿಕ ಶೈಲಿಯನ್ನು ಸೂಕ್ಷ್ಮವಾಗಿ ಪ್ರತಿಬಿಂಬಿಸುತ್ತದೆ.
ಈ ಜಾಹೀರಾತು ಅಭಿಯಾನವನ್ನು ರೂಪಿಸಿರುವ ಓಗಿಲ್ವಿ ಸೌತ್‌ನ ಚೀಫ್ ಕ್ರಿಯೇಟಿವ್ ಆಫೀಸರ್ ಪುನೀತ್ ಕಪೂರ್ ಅವರು, “ಈ ಪರಿಕಲ್ಪನೆಯು ಮಹಾನ್ ಬ್ರ್ಯಾಂಡ್ ಗಳು ಜನರನ್ನು, ಅವರ ಸ್ಫೂರ್ತಿ ಮತ್ತು ಧೈರ್ಯವನ್ನು ನಿಜವಾಗಿ ಪ್ರತಿಬಿಂಬಿಸುತ್ತವೆ ಎಂಬ ಸರಳ ಸತ್ಯದಿಂದ ಹುಟ್ಟಿದೆ. ನಾವು ಏನನ್ನು ಧರಿಸಿಕೊಂಡಿರುತ್ತೇವೆ ಎಂಬುದೂ ಸೇರಿದಂತೆ ಜೀವನದಲ್ಲಿ ನಾವು ಮಾಡುವ ಆಯ್ಕೆಗಳು ಪ್ರತಿ ಸಣ್ಣ ವಿವರದಲ್ಲೂ ಪ್ರತಿಫಲಿಸುತ್ತವೆ. ಭಾರತದಲ್ಲಿ ಲಕ್ಷಾಂತರ ನಿಜವಾದ ಕಥೆಗಳು ಪ್ರಕಟಗೊಳ್ಳಲು ಕಾಯುತ್ತಿವೆ.
ನಾವು ಪಿವಿ ಸಿಂಧು ಮತ್ತು ವಿಕ್ರಾಂತ್ ಮಾಸ್ಸಿ ಅವರೊಂದಿಗೆ ಅವರ ಕನಸುಗಳ ಹಿಂದೆ ಅವರು ಎದುರಿಸಿದ ಪರೀಕ್ಷೆಗಳು ಮತ್ತು ಕಷ್ಟಗಳನ್ನು ಗೌರವಿಸುತ್ತಾ ಈ ಪಯಣವನ್ನು ಆರಂಭಿಸಿದ್ದೇವೆ. ಅವರಿಗೆ ನಿಜವಾಗಿರುವುದು ನಮಗೂ ಸತ್ಯವೇ. ಆದ್ದರಿಂದ, ಭಾರತದ ಓಜಿ ವಾಚ್ ಬ್ರ್ಯಾಂಡ್ ಆಗಿರುವ ಟೈಟಾನ್ ಮತ್ತು ಅದರ ಇಂಜಿನಿಯರಿಂಗ್ ನೊಳಗೆ ಅಡಕವಾದ ಕಲಾತ್ಮಕತೆಯ ವಿನ್ಯಾಸ ತತ್ತ್ವಶಾಸ್ತ್ರದೊಂದಿಗೆ, ಭಾರತೀಯರ ಜೀವನ ಮತ್ತು ಆಕಾಂಕ್ಷೆಗಳಿಂದ ಕೂಡಿದ ಕಥೆ ಯನ್ನು ಸಾರುವುದೇ ನಮ್ಮ ಗುರಿಯಾಗಿದೆ” ಎಂದು ಹೇಳಿದರು.
ಈ ಜಾಹೀರಾತು ಅಭಿಯಾನ ಈಗ ಎಲ್ಲಾ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರ ಆಗುತ್ತಿದೆ. ಟೈಟಾನ್ ತಮ್ಮ ಕಥೆಯನ್ನು ಏನು ರೂಪಿಸುತ್ತದೆ ಮತ್ತು ಅದನ್ನು ಹೆಮ್ಮೆಯಿಂದ ಧರಿಸಲು ಭಾರತವನ್ನು ಆಹ್ವಾನಿಸುತ್ತದೆ.