ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಾಳೆ ರಾಜ್ಯಾದ್ಯಂತ ಸಾರಿಗೆ ನೌಕರರು ಮುಷ್ಕರ (KSRTC Strike) ಹಮ್ಮಿಕೊಂಡಿದ್ದರು. ಇದೀಗ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದ್ದು ಬಸ್ ಮುಷ್ಕರ ಮಾಡಬೇಡಿ ಎಂದು ರಾಜ್ಯದ ಸಾರಿಗೆ ನೌಕರರಿಗೆ ಹೈಕೋರ್ಟ್ ಮಹತ್ವದ ಸೂಚನೆ ನೀಡಿದೆ. ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ನೆನ್ನೆ ಪಿಐಎಲ್ ಸಲ್ಲಿಕೆಯಾಗಿತ್ತು. ಇಂದು ಹೈ ಕೋರ್ಟ್ ನಲ್ಲಿ ಈ ಒಂದು ಪಿಐಎಲ್ ವಿಚಾರಣೆ ನಡೆಯಿತು ನ್ಯಾ. ಗೋವಿಂದರಾಜ ಅವರು ವಿಚಾರಣೆ ನಡೆಸಿದರು.
ವೇದಾವತಿ ಮತ್ತು ಲೆಕ್ಕಸಂದ್ರದ ಶ್ರೀಧರ್ ಎಂಬುವವರು PIL ಸಲ್ಲಿಸಿದರು. ನಾಳೆಯ ಸಾರಿಗೆ ನೌಕರರ ಮುಷ್ಕರ ನಿರ್ಭಂಧಿಸಲು ಮನವಿ ಮಾಡಿದ್ದರು.ಮನೆ ಕೆಲಸದ ಮಹಿಳೆ ಹಾಗೂ ಕಟ್ಟಡ ಕಾರ್ಮಿಕ ಅರ್ಜಿ ಸಲ್ಲಿಸಿದ್ದಾರೆ. ಇವರ ಪರ ವಕೀಲ ವಿಕ್ರಂ ಹುಯಿಲಗೊಳ ವಾದಿಸಿದರು. ಪಿಐಎಲ್ ಅರ್ಜಿದಾರರ ಬಗ್ಗೆ ಹೈಕೋರ್ಟ್ ಇದೆ ವೇಳೆ ಅಚ್ಚರಿ ವ್ಯಕ್ತಪಡಿಸಿತು. ವಿಚಾರಣೆ ನಡೆಸಿದ ಬಳಿಕ ಬಸ್ ಮುಷ್ಕರ ಮಾಡಬೇಡಿ ಎಂದು ಹೇಳಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ಮುಷ್ಕರದಿಂದ ಹಿಂದೆ ಸರಿದಿದೆ. ಜಂಟಿ ಕ್ರಿಯಾ ಸಮಿತಿಯಿಂದ ಹೊರ ಬಂದಿದೆವೆಂದು ಪತ್ರ ಬರೆದಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಳ್ಳೋದು ಅನುಮಾನವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಸಂಘ ಮುಷ್ಕರದಿಂದ ಹಿಂದೆ ಸರಿದಿರೋದಾಗಿ KSRTC ಎಂಡಿಗೆ ಪತ್ರ ಬರೆದಿದೆ. ನಾವು ಮುಷ್ಕರಕ್ಕೆ ಬೆಂಬಲ ನೀಡುತ್ತಿಲ್ಲ, ಜಂಟಿ ಕ್ರಿಯಾ ಸಮಿತಿಯಿಂದ ಹೊರ ಬಂದಿದೆವೆಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.