ಕಸದ ಸಮಸ್ಯೆಗೆ ವೈಜ್ಞಾನಿಕ ಮುಕ್ತಿ: ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ದೇಶದ ಮೊದಲ 'ತ್ಯಾಜ್ಯ ಮರುಬಳಕೆ ಮತ್ತು ಇಂಧನ ಪಾರ್ಕ್'
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(Deputy Chief Minister D.K. Shivakumar) ಅವರು ಬೆಂಗಳೂರು ಪಶ್ಚಿಮ ಭಾಗದ ಕನ್ನಹಳ್ಳಿಯಲ್ಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತ್ಯಾಜ್ಯ ಸಂಸ್ಕರಣಾ ಕೇಂದ್ರದಲ್ಲಿ ಸಮಗ್ರ 'ತ್ಯಾಜ್ಯ ಮರುಬಳಕೆ ಮತ್ತು ಮೌಲ್ಯವರ್ಧನೆ ಯೋಜನೆ'ಗೆ (Integrated Waste-to-Value Project) ಭೂಮಿ ಪೂಜೆ ನೆರವೇರಿಸಿದ್ದಾರೆ.
ಈ ಶಂಕುಸ್ಥಾಪನೆ ಸಮಾರಂಭವು ಕನ್ನಹಳ್ಳಿ ಮುನ್ಸಿಪಲ್ ತ್ಯಾಜ್ಯ ಘಟಕದಲ್ಲಿ ನಡೆಯಿತು. ಕಾರ್ಯ ಕ್ರಮದಲ್ಲಿ ಬೆಂಗಳೂರು ಉತ್ತರ ಸಂಸದೆ ಶೋಭಾ ಕರಂದ್ಲಾಜೆ(Bengaluru North MP Shobha Karandlaje), ರಾಜ್ಯ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಜಿಬಿಎ ಆಡಳಿತಾಧಿಕಾರಿ ತುಷಾರ್ ಗಿರಿನಾಥ್(GBA Administrator Tushar Girinath), ಬಿಎಸ್‌ಡ ಬ್ಲ್ಯೂಎಂಎಲ್ ಸಿಇಒ ಕರೀ ಗೌಡ, ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್( Yeshwantpur MLA S.T. Somashekar), ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಎಂ. ಮತ್ತು ಕೊಡಿಗೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿನೋದೊರೆಯಲಿದೆ. ನರಸಿಂಹಮೂರ್ತಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಬಿಬಿಎಂಪಿಯ ಒಡೆತನದಲ್ಲಿರುವ ಈ ಘಟಕವು ಸದ್ಯ ದಿನಕ್ಕೆ 1,000 ಟನ್ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ ಮೂಲದಲ್ಲೇ ವಿಂಗಡಿಸಿದ 350 ಟನ್ ಹಸಿ ತ್ಯಾಜ್ಯವನ್ನು ಕಾಂಪೋಸ್ಟ್ (ಗೊಬ್ಬರ) ಆಗಿ ಪರಿವರ್ತಿಸುತ್ತಿದೆ. ಇದೀಗ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ, ಬಿಬಿಎಂಪಿ ಮತ್ತು ಸಾತರೆಮ್ ಆಲ್ಟರ್ನೇಟಿವ್ ಫ್ಯುಯೆಲ್ ಅಂಡ್ ಎನರ್ಜಿ ಪ್ರೈವೇಟ್ ಲಿಮಿಟೆಡ್ (SAAFE) ಸಂಸ್ಥೆಯು, ಕಾರ್ಬನ್ ಮಾಸ್ಟರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಇತರ ತಂತ್ರಜ್ಞಾನ ಪಾಲುದಾರರ ಜೊತೆಗೂಡಿ, ಈ ತಾಣವನ್ನು ಭಾರತದ ಮೊಟ್ಟಮೊದಲ 'ಸಮಗ್ರ ತ್ಯಾಜ್ಯ ಮರು ಬಳಕೆ ಮತ್ತು ಇಂಧನ ಪಾರ್ಕ್' ಆಗಿ ಅಭಿವೃದ್ಧಿಪಡಿಸುತ್ತಿವೆ.
ಈ ಮಹತ್ವಾಕಾಂಕ್ಷಿ ಯೋಜನೆ ಪೂರ್ಣಗೊಂಡಾಗ, ಪ್ರತಿದಿನ ಸುಮಾರು 900 ಟನ್ ಮೂಲದಲ್ಲಿ ವಿಂಗಡಿಸಿದ ಹಸಿ ಕಸವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿರಲಿದೆ. ಇದರಿಂದ ದಿನಕ್ಕೆ 30 ಟನ್ 'ಕಾರ್ಬನ್‌ಲೈಟ್ಸ್ ಬಯೋಮೀಥೇನ್' (ಸಂಕುಚಿತ ಜೈವಿಕ ಅನಿಲ - CBG) ಮತ್ತು 750 ಟನ್ ಸಾವಯವ ಗೊಬ್ಬರ ಉತ್ಪಾದನೆಯಾಗಲಿದೆ. ಯೋಜನೆಯ ಮೊದಲ ಹಂತದಲ್ಲಿ, ಸಿಬಿಜಿ ಘಟಕವು 300 ಟನ್ ತ್ಯಾಜ್ಯವನ್ನು ಸಂಸ್ಕರಿಸಿ, 10 ಟನ್ ಬಯೋಮೀಥೇನ್ ಮತ್ತು 250 ಟನ್ ಸಾವಯವ ಗೊಬ್ಬರವನ್ನು ಉತ್ಪಾದಿಸಲಿದೆ.
ಸಮಾರಂಭದಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, "ಬೆಂಗಳೂರು ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಜನಸಂಖ್ಯೆಯ ಜೊತೆಗೆ ತ್ಯಾಜ್ಯದ ಪ್ರಮಾಣವೂ ಹೆಚ್ಚಾಗುತ್ತಿರು ವುದು ದೊಡ್ಡ ಸವಾಲಾಗಿದೆ. ಕನ್ನಹಳ್ಳಿಯ ಈ ಯೋಜನೆಯ ಮೂಲಕ, ತ್ಯಾಜ್ಯವು ಕೇವಲ ಹೊರೆಯಲ್ಲ, ಅದೊಂದು ಸಂಪನ್ಮೂಲ ಎಂಬುದನ್ನು ಸಾಬೀತುಪಡಿಸುತ್ತಿದ್ದೇವೆ.
ನಗರದ ಕಸವನ್ನು ಶುದ್ಧ ಇಂಧನ, ವಿದ್ಯುತ್ ಮತ್ತು ಗೊಬ್ಬರವನ್ನಾಗಿ ಪರಿವರ್ತಿಸುವ ಮೂಲಕ ಲ್ಯಾಂಡ್‌ಫಿಲ್ ಮೇಲಿನ ಒತ್ತಡ ತಗ್ಗಿಸುವುದು, ಮಾಲಿನ್ಯ ತಡೆಯುವುದು ಮತ್ತು ಹಸಿರು ಉದ್ಯೋಗ ಗಳನ್ನು ಸೃಷ್ಟಿಸುವುದು ನಮ್ಮ ಗುರಿ. ಈ ಯೋಜನೆ ಇಡೀ ಕರ್ನಾಟಕ ಹಾಗೂ ಭಾರತದ ಇತರ ನಗರಗಳಿಗೆ ಮಾದರಿಯಾಗಲಿದೆ," ಎಂದು ತಿಳಿಸಿದರು.
"ಬೆಂಗಳೂರಿನ ತ್ಯಾಜ್ಯ ಸಮಸ್ಯೆಗೆ ಸುಸ್ಥಿರ ಪರಿಹಾರ ಕಂಡುಕೊಳ್ಳಲು ಸಾತರೆಮ್ (SAAFE) ಬದ್ಧ ವಾಗಿದೆ," ಎಂದು ಸಾತರೆಮ್ ಆಲ್ಟರ್ನೇಟಿವ್ ಫ್ಯುಯೆಲ್ ಸಂಸ್ಥೆಯ ಅಭಿಷೇಕ್ ಗೌಡ ಹೇಳಿದರು. "ಕೇವಲ ಕಾಂಪೋಸ್ಟ್ ತಯಾರಿಕೆಯಿಂದಾಚೆಗೆ ಬೆಳೆದು, ನಗರಕ್ಕೆ, ಪರಿಸರಕ್ಕೆ ಹಾಗೂ ಸ್ಥಳೀಯ ಸಮುದಾಯಗಳಿಗೆ ಲಾಭದಾಯಕವಾಗುವಂತಹ ನೈಜ ಮೌಲ್ಯವರ್ಧಿತ ಮಾದರಿಯನ್ನು ರೂಪಿ ಸಲು ಈ ಪಾಲುದಾರಿಕೆ ನೆರವಾಗಲಿದೆ," ಎಂದು ಅವರು ಅಭಿಪ್ರಾಯಪಟ್ಟರು.
"ಒಂದೇ ಸೂರಿನಡಿ ಬಯೋಮೀಥೇನ್, ಸಾವಯವ ಗೊಬ್ಬರ, ವಿದ್ಯುತ್ ಉತ್ಪಾದನೆ ಮತ್ತು ಆರ್‌ಡಿಎಫ್ (RDF) ತಯಾರಿಕೆಯನ್ನು ಒಗ್ಗೂಡಿಸುವ ಮೂಲಕ, ಕನ್ನಹಳ್ಳಿಯು ಭಾರತದ ಮೊದಲ 'ವರ್ತುಲ ಆರ್ಥಿಕತೆ' (Circular Economy) ಆಧಾರಿತ ಪಾರ್ಕ್ ಆಗಿ ಹೊರಹೊಮ್ಮಲಿದೆ," ಎಂದು ಕಾರ್ಬನ್ ಮಾಸ್ಟರ್ಸ್ ಸಹ-ಸಂಸ್ಥಾಪಕ ಸೋಮ್ ನಾರಾಯಣ್ ಹೇಳಿದರು. "ಸಮಸ್ಯೆಯಾಗಿ ಕಾಡುವ ನಗರದ ತ್ಯಾಜ್ಯವನ್ನು ಮೌಲ್ಯಯುತ ಉತ್ಪನ್ನಗಳನ್ನಾಗಿ ಬದಲಿಸುವ ಮೂಲಕ, ವೆಚ್ಚ ಮತ್ತು ಇಂಗಾಲದ ಹೊರಸೂಸುವಿಕೆ ಎರಡನ್ನೂ ಹೇಗೆ ತಗ್ಗಿಸಬಹುದು ಎಂಬುದನ್ನು ನಾವು ಇಲ್ಲಿ ತೋರಿಸಿಕೊಡಲಿದ್ದೇವೆ," ಎಂದರು.
ಈ ತ್ಯಾಜ್ಯ ಪಾರ್ಕ್ ಅನ್ನು ಸಂಪೂರ್ಣವಾಗಿ ಸಮಗ್ರವಾಗಿಸಲು, ಕನ್ಸೋರ್ಟಿಯಂಗೆ ಇನ್ನೂ ಇಬ್ಬರು ತಂತ್ರಜ್ಞಾನ ಪಾಲುದಾರರು ಕೈಜೋಡಿಸಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯ (IISc) ಸುಸ್ಥಿರ ತಂತ್ರಜ್ಞಾನ ಕೇಂದ್ರದ ಪ್ರೊಫೆಸರ್ ದಾಸಪ್ಪ ಅವರು, ವ್ಯರ್ಥ ತ್ಯಾಜ್ಯದಿಂದ 1 ಮೆಗಾವ್ಯಾಟ್ ನವೀಕರಿಸಬಹುದಾದ ವಿದ್ಯುತ್ ಉತ್ಪಾದಿಸುವ ತಂತ್ರಜ್ಞಾನದ ನೇತೃತ್ವ ವಹಿಸಲಿದ್ದಾರೆ.
ಈ ವಿದ್ಯುತ್ ಅನ್ನು ಘಟಕದ ಬಳಕೆ ಮತ್ತು ಗ್ರಿಡ್‌ಗೆ ಪೂರೈಸಲು ಬಳಸಲಾಗುವುದು. ಜೊತೆಗೆ ಮುನ್ಸಿಪಲ್ ಘನ ತ್ಯಾಜ್ಯವನ್ನು 'ಗ್ರೀನ್ ಹೈಡ್ರೋಜನ್' ಆಗಿ ಪರಿವರ್ತಿಸುವ ಗ್ಯಾಸಿಫಿಕೇಶನ್ ತಂತ್ರಜ್ಞಾನವನ್ನೂ ಬಳಸಲಿದ್ದಾರೆ. ಮತ್ತೊಂದೆಡೆ, ಹಸಿರುದ ಇನ್ನೋವೇಶನ್ಸ್‌ನ ಸಿಇಒ ಶೇಖರ್ ಪ್ರಭಾಕರ್ ಅವರು ಹೊಸ ಮೆಟೀರಿಯಲ್ ರಿಕವರಿ ಫೆಸಿಲಿಟಿ (MRF) ಅಭಿವೃದ್ಧಿಪಡಿಸಲಿದ್ದು, ಇದು ದಿನಕ್ಕೆ 100 ಟನ್ ಒಣ ತ್ಯಾಜ್ಯವನ್ನು ಸಂಸ್ಕರಿಸಿ, ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಬೇರ್ಪಡಿಸಿ, ಆರ್‌ಡಿಎಫ್ (Refuse-Derived Fuel) ಉತ್ಪಾದಿಸಲಿದೆ.
ಕನ್ನಹಳ್ಳಿ ಯೋಜನೆಯು 'ಸ್ವಚ್ಛ ಭಾರತ ಮಿಷನ್' ಮತ್ತು 'ಘನ ತ್ಯಾಜ್ಯ ನಿರ್ವಹಣೆ ನಿಯಮಗಳು- 2016'ರ ಆಶಯಗಳಿಗೆ ಪೂರಕವಾಗಿದೆ. ಮೂಲದಲ್ಲೇ ಕಸ ವಿಂಗಡಣೆ, ಸಂಪನ್ಮೂಲ ಚೇತರಿಕೆ ಮತ್ತು ವೈಜ್ಞಾನಿಕ ವಿಲೇವಾರಿಯನ್ನು ಇದು ಪ್ರೋತ್ಸಾಹಿಸುತ್ತದೆ. ಈ ಯೋಜನೆಯಿಂದ ಲ್ಯಾಂಡ್ ಫಿಲ್‌ಗಳಿಗೆ ಹೋಗುವ ಕಸದ ಪ್ರಮಾಣ ಗಣನೀಯವಾಗಿ ತಗ್ಗಲಿದ್ದು, ಹಸಿರುಮನೆ ಅನಿಲಗಳ ಬಿಡುಗಡೆ ಕಡಿಮೆಯಾಗಲಿದೆ. ಅಷ್ಟೇ ಅಲ್ಲದೆ, ರೈತರಿಗೆ ಮಣ್ಣಿನ ಆರೋಗ್ಯ ಸುಧಾರಿಸಲು ಉತ್ತಮ ಗುಣಮಟ್ಟದ ಸಾವಯವ ಗೊಬ್ಬರ ದೊರೆಯಲಿ