ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಶ್ಲೀಲ ವಿಡಿಯೊ ತೋರಿಸಿ ಲೈಂಗಿಕ ಕ್ರಿಯೆಗೆ ಒತ್ತಡ ಹಾಕುವ ಸೈಕೋ ಪತಿಯ ಪ್ರಕರಣಕ್ಕೆ ಟ್ವಿಸ್ಟ್‌; ಪತ್ನಿಯಿಂದಲೇ ಹಣಕ್ಕಾಗಿ ಬ್ಲ್ಯಾಕ್‌ಮೇಲ್‌

Bengaluru News: ಮನೆಯಲ್ಲಿ ಬೆತ್ತಲೆಯಾಗಿ ಓಡಾಡುವುದು, ಪೋನ್‌ನಲ್ಲಿ ಅಶ್ಲೀಲ ವಿಡಿಯೊ ತೋರಿಸಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿರುವುದಾಗಿ ಪತಿಯ ವಿರುದ್ಧ ದೂರಿದ ಪತ್ನಿಯ ಮೇಲೆ ಇದೀಗ ಆರೋಪ ಕೇಳಿ ಬಂದಿದೆ. ಪತ್ನಿ ಮೇಘಾಶ್ರೀ ವಿರುದ್ಧವೇ ಇದೀಗ ಪತಿ ಮಂಜುನಾಥ್‌ ದೂರು ನೀಡಲು ಮುಂದಾಗಿದ್ದಾನೆ.

ಪತ್ನಿಯಿಂದಲೇ ಹಣಕ್ಕಾಗಿ ಪತಿಯ ಬ್ಲ್ಯಾಕ್‌ಮೇಲ್‌

ಮಂಜುನಾಥ್‌ ಮತ್ತು ಮೇಘಶ್ರೀ -

Ramesh B
Ramesh B Jan 11, 2026 6:37 PM

ಬೆಂಗಳೂರು, ಜ. 11: ಮನೆಯಲ್ಲಿ ಬೆತ್ತಲೆಯಾಗಿ ಓಡಾಡುವುದು, ಪೋನ್‌ನಲ್ಲಿ ಅಶ್ಲೀಲ ವಿಡಿಯೊ ತೋರಿಸಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿರುವುದಾಗಿ ಪತಿಯ ವಿರುದ್ಧ ದೂರಿ ಪತ್ನಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಪತ್ನಿ ಮೇಘಾಶ್ರೀ ವಿರುದ್ಧವೇ ಇದೀಗ ಪತಿ ಮಂಜುನಾಥ್‌ ದೂರು ನೀಡಲು ಮುಂದಾಗಿದ್ದಾನೆ (Bengaluru News). ಪತ್ನಿಯೇ ವಿಡಿಯೊ ಮಾಡಿ ಹಣಕ್ಕಾಗಿ ಬೆದರಿಕೆ ಹಾಕುತ್ತಿದ್ದಾಳೆ ಎಂದು ಆರೋಪಿಸಿದ್ದಾನೆ. ಅಂದ ಹಾಗೆ ಮೇಘಾಶ್ರೀಗೆ ಇದು 3ನೇ ಮದುವೆ. ಹಿಂದೆಯೂ ಆಕೆ ಪತಿಯಂದಿರನ್ನು ಹಣಕ್ಕಾಗಿ ಪೀಡಿಸಿದ್ದಳು ಎಂದು ಮಂಜುನಾಥ್‌ ಹೇಳಿದ್ದಾನೆ.

ಮಂಜುನಾಥ್‌ ಮತ್ತು ಮೇಘಾಶ್ರೀ ಒಂದೇ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ಪರಿಚಯ ಬಳಿಕ ಪ್ರೀತಿಗೆ ತಿರುಗಿತ್ತು. 2025ರ ಸೆಪ್ಟೆಂಬರ್​​ 3ರಂದು ಚಿಂತಾಮಣಿಯಲ್ಲಿ ಇವರ ವಿವಾಹ ನಡೆದಿತ್ತು. ಮದುವೆಯಾಗಿ ಕೆಲ ದಿನಗಳು ಚೆನ್ನಾಗಿಯೇ ಇದ್ದ ಪತಿ ಮಂಜುನಾಥ್ ಬಳಿಕ​ ಸೈಕೋ ರೀತಿ ವರ್ತಿಸುತ್ತಿರುವುದಾಗಿ ಮೇಘಶ್ರೀ ದೂರು ನೀಡಿದ್ದಳು.

ಅಶ್ಲೀಲ ವಿಡಿಯೊ ತೋರಿಸಿ ಲೈಂಗಿಕ ಕ್ರಿಯೆಗೆ ಒತ್ತಡ; ಸೈಕೋ ಪತಿ ವಿರುದ್ಧ ಪತ್ನಿ ದೂರು

ಮಂಜುನಾಥ್‌ ಹೇಳಿದ್ದೇನು?

ಇದೀಗ ಮಂಜುನಾಥ್‌ ಪ್ರತಿಕ್ರಿಯಿಸಿ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾನೆ. ಮೇಘಶ್ರೀ ತನ್ನ ಖಾಸಗಿ ವಿಡಿಯೊ ಮಾಡಿಕೊಂಡು ಹಣ ಮತ್ತು ಚಿನ್ನಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ ಎಂದು ಮಂಜುನಾಥ್‌ ಹೇಳಿದ್ದಾನೆ. ಹಣ ಮತ್ತು ಚಿನ್ನ ನೀಡುವಂತೆ ಬ್ಲ್ಯಾಕ್‌ಮೇಲ್‌ ಮಾಡುತ್ತಿರುವುದಾಗಿ ದೂರಿದ್ದಾನೆ.

ʼʼಮೇಘಶ್ರೀ ಈ ಮೊದಲೇ 2 ಮದುವೆಯಾಗಿತ್ತು. ಇಬ್ಬರಿಗೆ ವಿಚ್ಛೇಧನ ನೀಡಿ ನನ್ನ ಮದುವೆಯಾಗಿದ್ದಳು. ಮದುವೆಯಾದ ಮೂರೇ ತಿಂಗಳಿಗೆ ನನ್ನ ವಿರುದ್ಧವೂ ದೂರು ನೀಡಿದ್ದಾಳೆ. ಶೋಕಿಗೆ ಗಂಡಂದಿರ ಹಣ ಬಳಸಿಕೊಂಡು ಹೀಗೆ ಮಾಡುತ್ತಿದ್ದಾಳೆ. ಈಗಾಗಲೇ 30 ಲಕ್ಷ ರುಪಾಯಿ, 50 ಗ್ರಾಂ ಚಿನ್ನಾಭರಣ, ಐಪೋನ್, ಐಪ್ಯಾಡ್ ಮತ್ತು ಟ್ಯಾಬ್​​ಗಳನ್ನು ನನ್ನಿಂದ ಪಡೆದಿದ್ದಾಳೆ. ಆಕೆಯ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆʼʼ ಎಂದು ಮಂಜುನಾಥ್​​ ಗುಡುಗಿದ್ದಾನೆ.

ನಕಲಿ ದಾಖಲೆ

ಇದರೊಂದಿಗೆ ಆಕೆ ಉದ್ಯೋಗಕ್ಕೆ ಸೇರುವಾಗ ನಕಲಿ ದಾಖಲೆ ನೀಡಿದ್ದಾಗಿಯೂ ಗಂಭೀರ ಆರೋಪ ಹೊರಿಸಿದ್ದಾನೆ. ʼʼಆಕೆಗೆ 12 ಲಕ್ಷ ರುಪಾಯಿ ನೀಡಿ ಮನೆ ಲೀಸ್​​ಗೆ ಕೊಡಿಸಿದ್ದೆ. ಮದುವೆಗೆ ಅಂತಾ ದಾಖಲಾತಿ ಕೇಳಿದಾಗ ಆಕೆ ನೀಡಿಲ್ಲ. ಮನೆಯಲ್ಲಿ ಬಟ್ಟೆ ಬದಲಿಸುವಾಗ ಕದ್ದು ಫೋಟೊ ತೆಗೆದಿದ್ದಾಳೆ. ಅದನ್ನು ಇಟ್ಟುಕೊಂಡು ಆಟವಾಡಿಸುತ್ತಿದ್ದಾಳೆ. ಆಕೆ ಕೆಲಸಕ್ಕೆ ಸೇರುವಾಗಲು ಕೂಡ ನಕಲಿ​​ ದಾಖಲೆಗಳನ್ನು ನೀಡಿದ್ದಾಳೆ. ಅಲ್ಲದೆ ರೌಡಿಶೀಟರ್‌ನಿಂದ ಧಮ್ಕಿ ಕೂಡ ಹಾಕಿಸಿದ್ದಾಳೆʼʼ ಎಂದಿದ್ದಾನೆ. ಸದ್ಯ ಈ ಪ್ರಕರಣ ಭಾರಿ ಕುತೂಹಲ ಕೆರಳಿಸಿದೆ.

ಮೇಘಶ್ರೀ ಆರೋಪಿಸಿದ್ದೇನು?

ಕೆಲವು ದಿನಗಳ ಹಿಂದೆ ಮೇಘಶ್ರೀ ಪತಿಯ ವಿರುದ್ಧ ನೀಡಿದ್ದ ದೂರು ಭಾರಿ ಸಂಚಲನ ಸೃಷ್ಟಿಸಿತ್ತು. ಫೋನ್‌ನಲ್ಲಿ ಅಶ್ಲೀಲ ವಿಡಿಯೊ ವೀಕ್ಷಿಸಿ, ಅದೇ ರೀತಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುತ್ತಾನೆ. ಮನೆಯಲ್ಲಿ ಎಲ್ಲರ ಮುಂದೆ ಬೆತ್ತಲೆಯಾಗಿ ಓಡಾಡುತ್ತಾನೆ. ಅತ್ತೆ ಮಾವನ ಮುಂದೆಯೇ ಬಟ್ಟೆಯಿಲ್ಲದೆ ಓಡಾಡುವುದಲ್ಲದೆ ಪ್ಯಾಸೇಜ್​​ಗೆ ಕೂಡ ಹೋಗಿ ಅಕ್ಕ ಪಕ್ಕದವರಿಗೂ ಮುಜುಗರ ಉಂಟುಮಾಡುತ್ತಾನೆ. ಜತೆಗೆ ತನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಿದ್ದಳು.