ಬೆಂಗಳೂರು: ಪೀಣ್ಯ, ಎಲೆಕ್ಟ್ರಾನಿಕ್ ಸಿಟಿ, ವಿಮಾನ ನಿಲ್ದಾಣ ಸೇರಿದಂತೆ ಬೆಂಗಳೂರಿನ ಪ್ರಮುಖ - ಓವರ್‌ಗಳ ಮೇಲೆ ದ್ವಿಚಕ್ರ ವಾಹನ ಸಂಚಾರವನ್ನು ನಿರ್ಬಂಧಿಸಿ ಬೆಂಗಳೂರು ಸಂಚಾರಿ ಪೊಲೀಸರು ಮಹತ್ವದ ಆದೇಶ ಹೊರಡಿಸಿದ್ದಾರೆ. ಮಾರ್ಕೆಟ್ ಫ್ಲೈ- ಓವರ್ ಸೇರಿದಂತೆ ಕೆಲ ಮಾರ್ಗಗಳಲ್ಲಿ ಕೆಲ ವಾಹನಗಳಿಗೂ ನಿರ್ಬಂಧ ಹೇರಲಾಗಿದೆ.
ಫ್ಲೈ -ಓವರ್ ಮೇಲೆ ವಾಹನಗಳ ವೇಗದ ವ್ಯತ್ಯಾಸದಿಂದ ಆಗುತ್ತಿರುವ ಅಪಘಾತ ನಿಯಂತ್ರಿಸಲು ಹಾಗೂ ಟ್ರಾಫಿಕ್ ದಟ್ಟಣೆ ಕಡಿಮೆ ಮಾಡಲು ಫ್ಲೈ -ಓವರ್ ಮಾರ್ಗದ ಮೇಲೆ ಕೆಲ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗುತ್ತಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಫ್ಲೈ -ಓವರ್, ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದ ಎಲಿವೇಟೆಡ್ ಕಾರಿಡಾರ್ ಫ್ಲೈ -ಓವರ್ ಮೇಲೆ ದ್ವಿಚಕ್ರ ವಾಹನ ಸಂಪೂರ್ಣ ನಿಷೇಧಿಸಲಾಗಿದೆ.
ಇದನ್ನೂ ಓದಿ: Peenya Flyover: ಲೋಡ್ ಟೆಸ್ಟ್ ಮುಂದೂಡಿಕೆ; ಪೀಣ್ಯ ಫ್ಲೈಓವರ್ ವಾಹನ ಸಂಚಾರ ಅಬಾಧಿತ
ದಿನದ 24 ಗಂಟೆ ಈ ಫ್ಲೈ -ಓವರ್ ಮೇಲೆ ಯಾವುದೇ ಕಾರಣಕ್ಕೂ ಬೈಕ್, ಸ್ಕೂಟರ್ ಸೇರಿದಂತೆ ದ್ವಿಚಕ್ರ ವಾಹನ ಸಂಟಚಾರ ಮಾಡುವಂತಿಲ್ಲ. ಆಟೋ, ದ್ವಿಚಕ್ರ ವಾಹನಗಳಿಗೆ ಬ್ರೇಕ್ ಭಾರಿ ಸಂಟಾರ ದಟ್ಟಣೆ ಇರುವ ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಫ್ಲೈ -ಓವರ್ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಲಿವೇಟೆಡ್ ಫ್ಲೈ- ಓವರ್ ಮೇಲೆ ಮೇಲೆ ದ್ವಿಚಕ್ರ ವಾಹನಗಳಲ್ಲದೆ ಆಟೋ ರಿಕ್ಷಾ, ಮೂರು ಚಕ್ರದ ಗೂಡ್ಸ್ ವಾಹನಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆ ತನಕ ಎಲ್ಲಾ ಮಾದರಿಯ ಸರಕು ವಾಹನಗಳಿಗೆ ನಿರ್ಬಂಧ ಹೇರಲಾಗಿದೆ.
ಮಾರ್ಕೆಟ್ ಫ್ಲೈ - ಓವರ್ : ಮೈಸೂರು ರಸ್ತೆಯ ಬಿಜಿಎಸ್ ಫ್ಲೈ-ಓವರ್ ಮೇಲೆ ಭಾರಿ ಸರಕು ವಾಹನಗಳಿಗೆ ದಿನದ 24 ಗಂಟೆಯೂ ಸಂಚಾರ ನಿರ್ಬಂಧಿಸಲಾಗಿದೆ. ಗೂಡ್ಸ್ ಆಟೋಗಳು, ಇತರೆ ಸರಕು ಸಾಗಾಣೆ ವಾಹನಗಳಿಗೆ ಬೆಳಗ್ಗೆ 7 ಗಂಟೆಯಿಂದ 11 ಗಂಟೆ ಹಾಗೂ ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ನಿರ್ಬಂಧ ಹೇರಲಾಗಿದೆ.
ಪೀಣ್ಯ -ಓವರ್ : ಪೀಣ್ಯ ಫ್ಲೈ-ಓವರ್ ನಲ್ಲಿ ಆಟೋ ಸಂಚಾರಕ್ಕೆ, ಗೂಡ್ಸ್ ಆಟೋಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಭಾರಿ ಹಾಗೂ ಮಧ್ಯಮ ಸರಕು ವಾಹನಗಳಿಗೆ ಬೆಳಗ್ಗೆ 7 ರಿಂದ 11 ಗಂಟೆ ಹಾಗೂ ಸಂಜೆ 4 ರಿಂದ ರಾತ್ರಿ 11 ಗಂಟೆ ವರೆಗೆ ನಿರ್ಬಂಧಿಸಲಾಗಿದೆ. ಇದೇ ವೇಳೆ ಡಬಲ್ ಡೆಕ್ಕರ್ ಫ್ಲೈ -ಓವರ್ ಮೇಲೆ ಭಾರಿ ಘನ ವಾಹನಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ.