ಬೆಂಗಳೂರು: ದೇಶದ 825 ವೈದ್ಯಕೀಯ ಕಾಲೇಜುಗಳ ಮೂಲಕ ಪ್ರತಿವರ್ಷ 1.20 ಲಕ್ಷ ವೈದ್ಯರು, 90 ಸಾವಿರ ಸ್ನಾತಕೋತ್ತರ ವೈದ್ಯರನ್ನು ತಯಾರಿಸುತ್ತಿದ್ದು, ಅಗಾಧ ಪ್ರಮಾಣದಲ್ಲಿ ವೈದ್ಯಕೀಯ ಶಿಕ್ಷಣ ನೀಡುತ್ತಿರುವ ಹಿನ್ನೆಲೆಯಲ್ಲಿ ಬರುವ 2030ರ ವೇಳೆಗೆ ವೈದ್ಯರು ಕೂಡ ನಿರುದ್ಯೋಗಿಗಳಾಗ ಲಿದ್ದಾರೆ ಎಂದು ಹೃದ್ರೋಗ ತಜ್ಞ ಹಾಗೂ ಸಂಸದ ಡಾ. ಸಿ.ಎನ್. ಮಂಜುನಾಥ್(Dr C N Manjunath) ತಿಳಿಸಿದರು.
ನಗರದ ಖಾಸಗಿ ಹೊಟೇಲ್‌ನಲ್ಲಿ ರೋಗಿಗಳ ಆರೈಕೆ ಮತ್ತು ಕ್ಲಿನಿಕಲ್ ಪರ್ಪೂಷಿಯನ್ ವೃತ್ತಿ ಬಲಪಡಿಸುವ ನಿಟ್ಟಿನಲ್ಲಿ ಕರ್ನಾಟಕ ಕ್ಲಿನಿಕಲ್ ಪರ್ಪೂಷನಿ ಗಳ ಸಂಘ ಉದ್ಘಾಟಿಸಿ, ಕರ್ನಾಟಕ ಕ್ಲಿನಿಕಲ್ ಪರ್ಪೂಷನಿಸ್ಟ್ ಅಸೋಸಿಯೇಶನ್ ನ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ವ್ಯಾಪಕ ಬದಲಾವಣೆಯಾಗುತ್ತಿದ್ದು, ಭಾರತ ಔಷಧಿ ಉತ್ಪಾದನೆಯ ಜಗತ್ತಿನ ರಾಜಧಾನಿಯಾಗಿ ಬೆಳೆಯುತ್ತಿದೆ.
ಪ್ರಪಂಚದಲ್ಲಿ ಬಳಸುವ ಪ್ರತಿ ನಾಲ್ಕನೇ ಜನರಿಕ್ ಮಾತ್ರೆ ಭಾರತದಲ್ಲಿ ಉತ್ಪಾದನೆ ಮಾಡಲಾಗು ತ್ತಿದೆ. ಎಂ.ಆರ್.ಐ, ಸಿಟಿ ಸ್ಕ್ಯಾನ್, ವೆಂಟಿಲೇಟರ್‌ಗಳು ಸೇರಿ ಸಕಲ ಉತ್ಪನ್ನಗಳು ಭಾರತದಲ್ಲಿಯೇ ಉತ್ಪಾದನೆ ಯಾಗುತ್ತಿವೆ. ಲಕ್ಷಾಂತರ ವೈದ್ಯರನ್ನು ಸೃಷ್ಟಿಸಿದರೂ ಸೂಕ್ತವಾಗಿ ನೇಮಕಾತಿ ನಡೆಯದ ಕಾರಣ ಅರೆ ನಗರ, ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆ ಇದೆ. ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ದಿಮತ್ತೆ ಜತೆಗೆ ನಮ್ಮ ಬುದ್ದಿ ಸಹ ವಿವೇಚನೆಯಿಂದ ಬಳಸಿಕೊಳ್ಳಬೇಕಾಗುತ್ತದೆ.
ವೈದ್ಯಕೀಯ ಸಂಪನ್ಮೂಲ ಎಷ್ಟೇ ಬೆಳೆದರೂ ಮುಂದಿನ ನಾಲ್ಕು ವರ್ಷಗಳಲ್ಲಿ ವೈದ್ಯರು ಕೂಡ ಸ್ವಲ್ಪಮಟ್ಟಿಗೆ ನಿರುದ್ಯೋಗಿಗಳಾಗಲಿದ್ದಾರೆ ಎಂದರು. ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಬೇಕಾ ದಲ್ಲಿ ರಕ್ತಪರಿಚಲನೆ ಸಂಪೂರ್ಣವಾಗಿ ಯಂತ್ರದೊಳಗೆ ಹರಿಯುವಂತೆ ಮಾಡಬೇಕು. ಹೃದಯ ಬಡಿತ ನಿಲ್ಲಿಸಬೇಕು. ಕವಾಟ ಬದಲಾವಣೆ, ಹೃದಯದಲ್ಲಿನ ರಂಧ್ರದ ಶಸ್ತ್ರ ಚಿಕಿತ್ಸೆ ಮಾಡುವಾ ಗಲೂ ಪರ್ಪೂಷನಿಸ್ಟ್ʼಗಳು ಶಸ್ತ್ರಚಿಕಿತ್ಸೆ ನಡೆಸುವ ವೈದ್ಯರಿಗೆ ನೆರವಾಗುತ್ತಾರೆ ಎಂದರು.