ಬೆಂಗಳೂರು: ಯೂನಿವರ್ಸಿಟಿ ಆಫ್ ಲಿವರ್‌ಪೂಲ್ 2026ರಲ್ಲಿ ಕಾರ್ಯಾರಂಭ ಮಾಡು ತ್ತಿರುವ ತನ್ನ ಹೊಸ ಬೆಂಗಳೂರು ಕ್ಯಾಂಪಸ್ ಅನ್ನು ಬೆಂಗಳೂರಿನ ಅಲೆಂಬಿಕ್ ಸಿಟಿಯಲ್ಲಿ ಆರಂಭಿಸುತ್ತಿರುವುದಾಗಿ ಘೋಷಿಸಿದೆ. ಅಲೆಂಬಿಕ್ ಸಿಟಿಯು ಬೆಂಗೂರು ನಗರದ ಅತ್ಯಂತ ಸೊಗಸಾದ ಶೈಕ್ಷಣಿಕ, ಸಂಶೋಧನಾ ಮತ್ತು ನಾವೀನ್ಯತಾ ಕೇಂದ್ರಗಳಲ್ಲಿ ಒಂದಾಗಿದೆ.
2026ರಲ್ಲಿ ತೆರೆಯಲಿರುವ ಈ ನೂತನ ಕ್ಯಾಂಪಸ್ ಬೆಂಗಳೂರಿನಲ್ಲಿ ವಿಶ್ವವಿದ್ಯಾಲಯ ಸೇರಲಿರುವ ಮೊದಲ ಬ್ಯಾಚ್ ನ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ, 360 ಡಿಗ್ರಿ ಕಲಿಕಾ ವಾತಾವರಣವನ್ನು ಒದಗಿಸಲಿದೆ. ಸ್ಮಾರ್ಟ್ ತರಗತಿಗಳು ಅನುಭವಾತ್ಮಕ ಕಲಿಕೆ ಒದಗಿಸ ಲಿದೆ, ವಿಶೇಷವಾಗಿ ಈ ಕ್ಯಾಂಪಸ್ ಕೇಸ್- ಆಧಾರಿತ ಬೋಧನೆ ಮತ್ತು ಫ್ಲಿಪ್ಡ್ ಕ್ಲಾಸ್ ರೂಮ್ ವಿಧಾನದ ಮೂಲಕ ಕಾರ್ಯ ನಿರ್ವಹಿಸಲಿದೆ. ಸಂಶೋಧನಾ- ನಾವೀನ್ಯತಾ ಕೇಂದ್ರಗಳು, ಸಹಭಾಗಿತ್ವದ ಕಲಿಕಾ ಹಬ್ ಗಳು ವಿದ್ಯಾರ್ಥಿಗಳಲ್ಲಿ ಅಂತರ್ಶಿಸ್ತೀಯ ಚಿಂತನೆ ಮತ್ತು ಉದ್ಯಮ ಸಂಪರ್ಕವನ್ನು ಬೆಳೆಸಲಿವೆ. ವಿಶೇಷ ಪ್ರಯೋಗಾಲಯಗಳು ಮತ್ತು ಬ್ಲೂಮ್ ಬರ್ಗ್ ಟರ್ಮಿನಲ್ ಗಳು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆಗೆ ಸಹಾಯ ಮಾಡಲಿವೆ.
ಈ ಕಲಿಕಾ ಸ್ನೇಹಿ ಸೌಲಭ್ಯಗಳ ಮೂಲಕ ವಿಶ್ವವಿದ್ಯಾಲಯವು ಸಂಪೂರ್ಣ ಸಮಗ್ರ ವಿದ್ಯಾರ್ಥಿ ಅನುಭವವನ್ನು ನೀಡುವ ಗುರಿ ಹೊಂದಿದೆ. ನಾವೀನ್ಯತಾ ಕೇಂದ್ರದಿಂದ ಕಮ್ಯುನಿಟಿ ಜೋನ್ ಗಳವರೆಗೆ ಕ್ಯಾಂಪಸ್ ನ ಪ್ರತಿಯೊಂದು ಭಾಗವನ್ನೂ ಸೃಜನಶೀಲತೆ, ಸಹಯೋಗ ಮತ್ತು ನಿರಂತರ ಬೆಳವಣಿಗೆ ಹೊಂದುವುದಕ್ಕೆ ನೆರವಾಗಲು ಎಚ್ಚರಿಕೆಯಿಂದ ಚಿಂತನಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ: Bangalore News: ಆರಂಭಿಕ ಪತ್ತೆ ಮತ್ತು ತಡೆಗಟ್ಟುವಿಕೆ ಉತ್ತೇಜಿಸಲು ಕ್ಯಾನ್ಸರ್ ಜಾಗೃತಿ ವಾಕಥಾನ್ ಆಯೋಜಿಸಿದ ನ್ಯೂಬರ್ಗ್ ಆನಂದ್
2026ರ ಮೊದಲ ಬ್ಯಾಚ್‌ಗೆ ಈಗಾಗಲೇ ಅಡ್ಮಿಷನ್ ಆರಂಭವಾಗಿದೆ. ಮೊದಲ ಹಂತದಲ್ಲಿ ಈ ಕೆಳಗಿನ ಕೋರ್ಸ್ ಗಳು ಲಭ್ಯವಿರುತ್ತವೆ:
- ಕಂಪ್ಯೂಟರ್ ಸೈನ್ಸ್
- ಬಿಸಿನೆಸ್ ಮ್ಯಾನೇಜ್‌ಮೆಂಟ್
- ಅಕೌಂಟಿಂಗ್ ಅಂಡ್ ಫೈನಾನ್ಸ್
- ಬಯೋಮೆಡಿಕಲ್ ಸೈನ್ಸಸ್
- ಭಾರತದಲ್ಲಿನ ಯುಕೆ ಕ್ಯಾಂಪಸ್ ಗಳಲ್ಲಿಯೇ ಇದೇ ಮೊದಲ ಬಾರಿಗೆ ಹೊಸ ಕೋರ್ಸ್ ಒದಗಿಸಲಾಗುತ್ತಿದ್ದು, ಅದರ ಹೆಸರು- ಗೇಮ್ ಡಿಸೈನ್
ಬೆಂಗಳೂರು ಕ್ಯಾಂಪಸ್ ಲಿವರ್‌ಪೂಲ್ ನ ವಿಶ್ವದರ್ಜೆಯ ಶೈಕ್ಷಣಿಕ ಮತ್ತು ಸಂಶೋಧನಾ ಶ್ರೇಷ್ಠತೆಯನ್ನು ಭಾರತಕ್ಕೆ ಪರಿಚಯಿಸಲಿದ್ದು, ಯುಕೆ- ಮಾನ್ಯತೆ ಪಡೆದ ಪದವಿ ಕೋರ್ಸ್ ಗಳನ್ನು ವಿಶ್ವದರ್ಜೆಯ ಗುಣಮಟ್ಟದಲ್ಲಿ ಭಾರತೀಯ ಸಂದರ್ಭಕ್ಕೆ ಸೂಕ್ತವಾಗಿ ನೀಡಲಿದೆ.
ಈ ಮಹತ್ವದ ಸಂದರ್ಭದಲ್ಲಿ ಲಿವರ್ ಪೂಲ್ ವಿಶ್ವವಿದ್ಯಾಲಯದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಲೂಸಿ ಎವರೆಸ್ಟ್ ಅವರು ನವೆಂಬರ್ 15- 19 ರವರೆಗೆ ಮುಂಬಯಿ ಮತ್ತು ಬೆಂಗಳೂರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಸ್ಥಳೀಯ ಶಿಕ್ಷಕರು, ಶಾಲಾ ನಾಯಕರು ಮತ್ತು ವಿದ್ಯಾರ್ಥಿಗಳನ್ನು ಭೇಟಿಯಾಗಿ ಮಾತನಾಡಿದರು.
ಮುಂಬಯಿಯಲ್ಲಿ ನಡೆದ ಶಾಲಾ ನಾಯಕರ ಸಮಾವೇಶದಲ್ಲಿ ಅವರು ಮುಖ್ಯ ಭಾಷಣ ಮಾಡಿ, ಲಿವರ್‌ಪೂಲ್ ನ ಭಾರತ ಕ್ಯಾಂಪಸ್ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ ಇ ಪಿ) 2020ಕ್ಕೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನು ವಿವರಿಸಿದರು. 2035ರೊಳಗೆ ಶೇ.50 ಯುವ ಜನರಿಗೆ ಉನ್ನತ ಶಿಕ್ಷಣ ಒದಗಿಸಿ ಭಾರತವನ್ನು ಜಾಗತಿಕ ಶಿಕ್ಷಣ ಕೇಂದ್ರವನ್ನಾಗಿ ಮಾಡುವ ಎನ್ ಇ ಪಿ 2020ರ ದೂರದೃಷ್ಟಿಗೆ ಪೂರಕವಾಗಿ ಲಿವರ್‌ಪೂಲ್ ನ ವಿಸ್ತರಣೆ ಮತ್ತು ಕಾರ್ಯ ನಿರ್ವಹಣೆ ನಡೆಯಲಿದೆ ಎಂದು ತಿಳಿಸಿದರು.
ಜಾಗತಿಕವಾಗಿ ಸಂಪರ್ಕ ಹೊಂದಿರುವ ಮತ್ತು ಪ್ರಾದೇಶಿಕವಾಗಿ ನೆಲೆಗೊಂಡಿರುವ ಸಂಸ್ಥೆಗಳನ್ನು ಸೃಷ್ಟಿಸುವ ಎನ್ ಇ ಪಿಯ ದೂರದೃಷ್ಟಿಗೆ ಈ ಲಿವರ್ ಪೂಲ್ ವಿಶ್ವ ವಿದ್ಯಾಲಯದ ಕ್ಯಾಂಪಸ್ ಆರಂಭ ಉತ್ತಮ ಉದಾಹರಣೆಯಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಲೂಸಿ ಎವರೆಸ್ಟ್ ಅವರು, “ಈ ವಾರ ಬೆಂಗಳೂರು ಮತ್ತು ಮುಂಬಯಿಯಲ್ಲಿ ಕಳೆದ ಸಮಯ ಅದ್ಭುತವಾಗಿತ್ತು. ಲಿವರ್‌ಪೂಲ್ ಭಾರತಕ್ಕೆ ಬರು ತ್ತಿರುವುದಕ್ಕೆ ಉತ್ಸಾಹ ತೋರಿದ ಶಿಕ್ಷಕರು, ಹಳೆಯ ವಿದ್ಯಾರ್ಥಿಗಳು ಮತ್ತು ಅರ್ಜಿದಾರ ರನ್ನು ಭೇಟಿಯಾಗಿ ಮಾತನಾಡಿದೆ, ತುಂಬಾ ಸಂತೋಷವಾಯಿತು.
2026ರಲ್ಲಿ ಕಾರ್ಯಾರಂಭ ಮಾಡುತ್ತಿರುವ ನಮ್ಮ ವಿಶ್ವವಿದ್ಯಾಲಯದ ಈ ಬೆಂಗಳೂರು ಕ್ಯಾಂಪಸ್ ನ ನಮ್ಮ ಮೊದಲ ಬ್ಯಾಚ್ ನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಕಾಯುತ್ತಿದ್ದೇವೆ. ಇಲ್ಲಿ ಅವರ ಕೌಶಲ್ಯ ಮತ್ತು ಉದ್ಯೋಗ ಸಾಧ್ಯತೆಗಳನ್ನು ಬಲಪಡಿಸುವ ಅತ್ಯುನ್ನತ ಅಸಾಧಾರಣ ಕಲಿಕಾ ಅನುಭವ ನೀಡಲಿದ್ದೇವೆ. ಅಲೆಂಬಿಕ್ ಸಿಟಿ ಈ ಕನಸನ್ನು ನನಸಾಗಿಸಲು ಅತ್ಯಂತ ಸೂಕ್ತವಾದ ಸ್ಥಳವಾಗಿದೆ. ನಮ್ಮ ಈ ಹೊಸ ಕ್ಯಾಂಪಸ್ ವಿದ್ಯಾರ್ಥಿ ಗಳಿಗೆ ನಾವು ಈ ಕ್ಯಾಂಪಸ್ ನಲ್ಲಿ ಅತ್ಯುತ್ತಮ ಸೌಲಭ್ಯಗಳನ್ನು ನೀಡಿ ಅವರ ಕಲಿಕಾ ಪಯಣಕ್ಕೆ ಗಟ್ಟಿ ಬೆಂಬಲವಾಗಿ ನಿಲ್ಲಲಿದೆ” ಎಂದು ಹೇಳಿದರು.
ಭಾರತದಲ್ಲಿ ಬಲಿಷ್ಠ ಸಂಶೋಧನಾ ವಿಭಾಗ ಸ್ಥಾಪಿಸುವ ಯೋಜನೆಯೂ ಯುನಿವರ್ಸಿಟಿ ಆಫ್ ಲಿವರ್ ಪೂಲ್ ಮುಂದೆ ಇದೆ. ಈ ಮೂಲಕ ಸುಸ್ಥಿರತೆ, ನಾವೀನ್ಯತೆ, ಡಿಜಿಟಲ್ ಬದಲಾವಣೆ ಮತ್ತು ಆರೋಗ್ಯ ವಿಜ್ಞಾನಗಳಂತಹ ಕ್ಷೇತ್ರಗಳಲ್ಲಿ ಎರಡೂ ದೇಶಗಳ ಸಾಮಾನ್ಯ ಸವಾಲುಗಳನ್ನು ಎದುರಿಸುವ ಮೂಲಭೂತ, ಅನ್ವಯಿಕ ಮತ್ತು ಉದ್ಯಮ-ಆಧಾರಿತ ಸಂಶೋಧನೆ ನಡೆಯಲಿದೆ.
ಶೈಕ್ಷಣಿಕ- ಸಂಶೋಧನಾ ವಿಭಾಗದ ಬಲ ಮತ್ತು ಪರಿಣತಿ ಜೊತೆಗೆ ಬೆಂಗಳೂರು ಕ್ಯಾಂಪಸ್ ತನ್ನ ವಾಸ್ತುಶಿಲ್ಪ ಮತ್ತು ವಿನ್ಯಾಸ ನಾವೀನ್ಯತೆಗಳಿಂದಲೂ ವಿಶೇಷವಾಗಿ ಕಾಣುತ್ತದೆ. ಈ ಹೊಸತನವು ವಿದ್ಯಾರ್ಥಿಗಳ ಕಲಿಕಾ ಅನುಭವವನ್ನು ಉನ್ನತಗೊಳಿಸಲಿದೆ. ಇಲ್ಲಿ ಶಿಕ್ಷಣ, ಉದ್ಯಮ ಮತ್ತು ಸ್ಥಳೀಯ ಸಮುದಾಯ ಒಟ್ಟಿಗೆ ಸೇರಿ ಸಂವಾದ ನಡೆಸಬಹುದಾದ ಒಂದು ಸೊಗಸಾದ, ಆಕರ್ಷಕ ಎಕ್ಸ್ ಪೀರಿಯನ್ಸ್ ಜೋನ್ ಇರುತ್ತದೆ. ವಿಶೇಷವಾಗಿ ಇಲ್ಲಿ ಮಾಡ್ಯುಲರ್ ಲರ್ನಿಂಗ್ ವಾತಾವರಣವನ್ನು ಕಲ್ಪಿಸಲಾಗಿದ್ದು, ಇಲ್ಲಿ ತರಗತಿಗಳ ಗುಂಪು ಚಟುವಟಿಕೆಯಿಂದ ಬದಲಿಗೆ ಸೆಮಿನಾರ್ ಶೈಲಿಯ ಬೋಧನೆ ನಡೆಯಲಿದೆ. ಈ ವಿಧಾನವು ಹೆಚ್ಚು ಪರಿಣಾಮಕಾರಿಯಾಗಿ ಮೂಡಿಬರಲಿದೆ. ಉಪನ್ಯಾಸಕರು, ಉದ್ಯಮಿಗಳು ಮತ್ತು ವಿದ್ಯಾರ್ಥಿ ತಂಡಗಳಿಗೆ ಒಂದೇ ಕಡೆ ಕಾರ್ಯ ನಿರ್ವಹಿಸಲು ಕ್ಯಾಂಪಸ್ ನಲ್ಲಿ ಕೋ-ವರ್ಕಿಂಗ್ ಹಬ್ ಲಭ್ಯವಿದ್ದು, ಇಲ್ಲಿ ವಿಶ್ವವಿದ್ಯಾಲಯ ಮತ್ತು ಉದ್ಯಮದ ಮಧ್ಯೆಯ ಜ್ಞಾನ ವಿನಿಮಯ ಸುಲಲಿತವಾಗಿ ನಡೆಯಲಿದೆ.
2026ನೇ ಶೈಕ್ಷಣಿಕ ವರ್ಷಕ್ಕೆ ಅಡ್ಮಿಷನ್ ಈಗ ಆರಂಭ ವಾಗಿವೆ. ಆಸಕ್ತರು ಕೋರ್ಸ್ ಗಳು, ಪ್ರವೇಶ ಅರ್ಹತೆ ಮತ್ತು ಅರ್ಜಿ ಪ್ರಕ್ರಿಯೆ ಇತ್ಯಾದಿ ವಿವರಗಳನ್ನು ತಿಳಿಯಲು ಇಲ್ಲಿ ನೀಡಿರುವ ವೆಬ್ ಸೈಟ್ ಅನ್ನು ನೋಡಬಹುದು.