ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bangalore News: ದಲಿತ ಸಂರಕ್ಷಕ ಸಮಿತಿ ಕರ್ನಾಟಕ ವತಿಯಿಂದ ವಿವಿಧ ಸಾಮಾಜಿಕ ಕಾರ್ಯಕ್ರಮ

ಡಾ.ಅಂಬೇಡ್ಕರ್ ಅವರು ಕೇವಲ ಸಮಾಜ ಸುಧಾರಕರಷ್ಟೇ ಅಲ್ಲ, ಭಾರತದ ಮಹಾನ್ ರಾಜಕೀಯ ಚಿಂತಕರಲ್ಲಿ ಒಬ್ಬರಾಗಿದ್ದರು. ಅವರು ನಿಜವಾದ ಪ್ರಜಾಪ್ರಭುತ್ವ ಎಂದರೆ ಕೇವಲ ಮತದಾನವಲ್ಲ, ಅದು ಸಮಾನತೆ, ನ್ಯಾಯ ಮತ್ತು ಪ್ರತಿಯೊಬ್ಬ ನಾಗರಿಕನ ಗೌರವವನ್ನು ಒಳಗೊಂಡಿರಬೇಕು ಎಂದು ನಂಬಿದರು.

ಬೆಂಗಳೂರು: ಡಾ.ಬಿ. ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ದಲಿತ ಸಂರಕ್ಷಕ ಸಮಿತಿ ಕರ್ನಾಟಕ ವತಿಯಿಂದ ವಿವಿಧ ಸಾಮಾಜಿಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು. ಸಮಿತಿಯು ಬಿಬಿಎಂಪಿ ಕಾರ್ಮಿಕರಿಗೆ 100 ಸೀರೆ, ಕಟ್ಟದ ಕಾರ್ಮಿಕರಿಗೆ 50 ಸುರಕ್ಷಾ ಕಿಟ್‌ ಹಾಗೂ ಮಕ್ಕಳಿಗೆ 100 ನೋಟ್‌ ಬುಕ್‌ಗಳನ್ನು ವಿತರಿಸಲಾಯಿತು.

ಡಾ.ಅಂಬೇಡ್ಕರ್ ಅವರು ಕೇವಲ ಸಮಾಜ ಸುಧಾರಕರಷ್ಟೇ ಅಲ್ಲ, ಭಾರತದ ಮಹಾನ್ ರಾಜಕೀಯ ಚಿಂತಕರಲ್ಲಿ ಒಬ್ಬರಾಗಿದ್ದರು. ಅವರು ನಿಜವಾದ ಪ್ರಜಾಪ್ರಭುತ್ವ ಎಂದರೆ ಕೇವಲ ಮತದಾನವಲ್ಲ, ಅದು ಸಮಾನತೆ, ನ್ಯಾಯ ಮತ್ತು ಪ್ರತಿಯೊಬ್ಬ ನಾಗರಿಕನ ಗೌರವವನ್ನು ಒಳಗೊಂಡಿರಬೇಕು ಎಂದು ನಂಬಿದರು.

ಇದನ್ನೂ ಓದಿ: Bangalore News: ಬೆಂಗಳೂರಿನ ಇಗ್ಗಲೂರಿನಲ್ಲಿ ಪೆಪ್ಸ್ ಮ್ಯಾಟ್ರೆಸ್‌ ನ 91ನೇ ‘ಗ್ರೇಟ್ ಸ್ಲೀಪ್ ಸ್ಟೋರ್’ ಉದ್ಘಾಟನೆ

ಭಾರತ ಸಂವಿಧಾನದ ಮುಖ್ಯ ಶಿಲ್ಪಿಯಾಗಿದ್ದ ಅವರು, ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕು ಗಳನ್ನು ಒದಗಿಸುವ ದೇಶವಾಗಿ ಭಾರತವನ್ನು ರೂಪಿಸಿದರು. ಹಿಂದುಳಿದ ಮತ್ತು ಪೀಡಿತ ವರ್ಗ ಗಳಿಗೆ ರಾಜಕೀಯ ಪ್ರತಿನಿಧಿತ್ವ ಮತ್ತು ಶಕ್ತಿಯನ್ನು ನೀಡಲು ಅವರು ಶ್ರಮಿಸಿದರು.

WhatsApp Image 2026-04-14 at 10.24.47 ಒಕ

ಅವರ ಅಭಿಪ್ರಾಯದ ಪ್ರಕಾರ, ರಾಜಕೀಯ ಪ್ರಜಾಪ್ರಭುತ್ವವು ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯೊಂದಿಗೆ ಇರಬೇಕು. ಸಮಾಜದಲ್ಲಿ ಸಮಾನತೆ ಇಲ್ಲದಿದ್ದರೆ, ರಾಜಕೀಯ ಸ್ವಾತಂತ್ರ್ಯಕ್ಕೆ ಅರ್ಥವಿಲ್ಲ. ಅವರ ದೃಷ್ಟಿಕೋನ ನಮಗೆ ನ್ಯಾಯ, ಜವಾಬ್ದಾರಿ ಮತ್ತು ಸಮಾನತೆಯ ಆಧಾರದ ಮೇಲೆ ಸಮಾಜವನ್ನು ನಿರ್ಮಿಸಲು ಪ್ರೇರಣೆ ನೀಡುತ್ತದೆ.

ಕಾರ್ಯಕ್ರಮದಲ್ಲಿ ದಲಿತ ಸಂರಕ್ಷ ಸಮಿತಿಯ ರಾಜ್ಯಾಧ್ಯಕ್ಷ ಲಯನ್‌ ಬಾಲಕೃಷ್ಣ, ಮುಖ್ಯ ಜನರಲ್‌ ಸೆಕ್ರೆಟರಿ ಕೆ.ರಾಜೇಶ್‌, ಹಿರಿಯ ರಾಜ್ಯ ಉಪಾಧ್ಯಕ್ಷ ಎಸ್‌ ರಾಜಾ ಮತ್ತಿತರರು ಉಪಸ್ಥಿತರಿದ್ದರು.