ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಆಗಸ್ಟ್‌ 8ರಂದು ವಿಪ್ರ ವ್ಯವಹಾರ ವೇದಿಕೆಯಿಂದ "ವಿಪ್ರ ಸಮ್ಮಿಲನ–2026"

Vipra Sammilana 2026: ವಿಪ್ರ ವ್ಯವಹಾರ ವೇದಿಕೆ ವತಿಯಿಂದ ಆಗಸ್ಟ್ 8ರಂದು ಶನಿವಾರ ಮಧ್ಯಾಹ್ನ 3.30 ರಿಂದ ರಾತ್ರಿ 8.00 ಗಂಟೆಯವರೆಗೆ ಬೆಂಗಳೂರು ನಗರದ ಕೆಜಿ ರಸ್ತೆಯಲ್ಲಿರುವ ಎಫ್‌ಕೆಸಿಸಿಐ ಸಂಸ್ಥೆಯ ಸರ್‌ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ "ವಿಪ್ರ ಸಮ್ಮಿಲನ–2026" ಹಮ್ಮಿಕೊಳ್ಳಲಾಗಿದೆ.

ಸಂಗ್ರಹ ಚಿತ್ರ

ಬೆಂಗಳೂರು, ಆ.6: ವಿಪ್ರ ವ್ಯವಹಾರ ವೇದಿಕೆ (VIPRA Business Forum – VBF) ವತಿಯಿಂದ ಆಗಸ್ಟ್ 8ರಂದು ಶನಿವಾರ ಮಧ್ಯಾಹ್ನ 3.30 ರಿಂದ ರಾತ್ರಿ 8.00 ಗಂಟೆಯವರೆಗೆ ಬೆಂಗಳೂರು ನಗರದ ಕೆಜಿ ರಸ್ತೆಯಲ್ಲಿರುವ ಎಫ್‌ಕೆಸಿಸಿಐ ಸಂಸ್ಥೆಯ ಸರ್‌ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ "ವಿಪ್ರ ಸಮ್ಮಿಲನ–2026" ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ. ಕಳೆದ 8 ವರ್ಷಗಳಿಂದ ವಿಪ್ರ ವ್ಯವಹಾರ ವೇದಿಕೆ (VBF) ಕರ್ನಾಟಕದಾದ್ಯಂತ ಬ್ರಾಹ್ಮಣ ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ವ್ಯಾಪಾರಸ್ಥರು, ವಿವಿಧ ವೃತ್ತಿಪರರು, ಸ್ಟಾರ್ಟ್‌ಅಪ್ ಸಂಸ್ಥಾಪಕರು, ಸ್ವಯಂ ಉದ್ಯೋಗಿಗಳು ಹಾಗೂ ಸೇವಾ ವಲಯದ ಪ್ರತಿನಿಧಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಉದ್ಯಮಶೀಲತೆ, ವ್ಯವಹಾರ ಅಭಿವೃದ್ಧಿ, ಪರಸ್ಪರ ಸಹಕಾರ ಹಾಗೂ ಆರ್ಥಿಕ ಸಬಲೀಕರಣದ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಭಾರತದ ಒಟ್ಟು ಜನಸಂಖ್ಯೆಯಲ್ಲಿ ಬ್ರಾಹ್ಮಣ ಸಮುದಾಯದ ಪ್ರಮಾಣ ಸುಮಾರು 4–5%, ಕರ್ನಾಟಕದಲ್ಲಿ ಸುಮಾರು 3–5% ಎಂದು ಅಂದಾಜಿಸಲಾಗಿದೆ. ಸಂಖ್ಯೆಯಲ್ಲಿ ಸಣ್ಣ ಸಮುದಾಯವಾಗಿದ್ದರೂ ಶಿಕ್ಷಣ, ವಿಜ್ಞಾನ, ಸಂಶೋಧನೆ, ವೈದ್ಯಕೀಯ, ಇಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ನ್ಯಾಯಾಂಗ, ಆಡಳಿತ, ಸಾಹಿತ್ಯ, ಕಲೆ, ಸಂಸ್ಕೃತಿ, ರಕ್ಷಣಾ ಕ್ಷೇತ್ರ ಹಾಗೂ ಕೈಗಾರಿಕಾ ಅಭಿವೃದ್ಧಿಯಲ್ಲಿ ಬ್ರಾಹ್ಮಣ ಸಮುದಾಯದ ಕೊಡುಗೆ ಅಪಾರವಾಗಿದೆ. ಇಂದು ಸಾವಿರಾರು ಬ್ರಾಹ್ಮಣ ಉದ್ಯಮಿಗಳು ದೇಶ-ವಿದೇಶಗಳಲ್ಲಿ ಯಶಸ್ವಿಯಾಗಿ ಉದ್ಯಮಗಳನ್ನು ನಡೆಸುತ್ತಿದ್ದು ಲಕ್ಷಾಂತರ ಜನರಿಗೆ ನೇರ ಮತ್ತು ಪರೋಕ್ಷವಾಗಿ ಉದ್ಯೋಗ ನೀಡುತ್ತಿದ್ದಾರೆ.

ವಿಪ್ರ ಸಮ್ಮಿಲನ–2026ರ ಪ್ರಮುಖ ಉದ್ದೇಶ ಬ್ರಾಹ್ಮಣ ಉದ್ಯಮಿಗಳನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸಿ, ಪರಸ್ಪರ ವ್ಯವಹಾರ ವೃದ್ಧಿ, ಹೂಡಿಕೆ, ತಂತ್ರಜ್ಞಾನ, ಮಾರ್ಗದರ್ಶನ ಹಾಗೂ ಸಹಭಾಗಿತ್ವಕ್ಕೆ ಉತ್ತೇಜನ ನೀಡುವುದಾಗಿದೆ.

ಸಮ್ಮಿಲನದ ಪ್ರಮುಖ ಆಕರ್ಷಣೆಗಳು

V-BIZZ – Digital Business Networking Platform

ಬ್ರಾಹ್ಮಣ ಉದ್ಯಮಿಗಳು, ತಯಾರಕರು, ವ್ಯಾಪಾರಿಗಳು, ವೃತ್ತಿಪರರು, ಸ್ಟಾರ್ಟ್‌ಅಪ್‌ಗಳು ಹಾಗೂ ಸೇವಾ ಪೂರೈಕೆದಾರರನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಸಂಪರ್ಕಿಸುವ ವ್ಯವಸ್ಥೆ. ಸದಸ್ಯರಿಗೆ B2B ಸಂಪರ್ಕ, ಉತ್ಪನ್ನ ಮತ್ತು ಸೇವೆಗಳ ಪ್ರಚಾರ, ವ್ಯವಹಾರ ವಿಸ್ತರಣೆ ಹಾಗೂ ಹೊಸ ಮಾರುಕಟ್ಟೆ ಅವಕಾಶಗಳನ್ನು ಒದಗಿಸಲಾಗುತ್ತದೆ.

VIPRA Golden Souvenir

ಸದಸ್ಯರ ಉದ್ಯಮ, ಉತ್ಪನ್ನಗಳು, ಸೇವೆಗಳು, ಯಶೋಗಾಥೆಗಳು ಹಾಗೂ ಸಾಧನೆಗಳನ್ನು ಪರಿಚಯಿಸುವ ವಿಶೇಷ ಸುವರ್ಣ ಸ್ಮರಣ ಸಂಚಿಕೆ. ಮುದ್ರಿತ ಹಾಗೂ ಡಿಜಿಟಲ್ ರೂಪದಲ್ಲಿ ಪ್ರಕಟವಾಗುವ ಈ ಸಂಚಿಕೆಯ ಮೂಲಕ ಸದಸ್ಯರ ಉದ್ಯಮಗಳಿಗೆ ಕರ್ನಾಟಕ, ಭಾರತ ಹಾಗೂ ಜಾಗತಿಕ ಮಟ್ಟದಲ್ಲಿ ಪ್ರಚಾರ ದೊರೆಯಲಿದೆ.

VEDIKA Women's Wing

ಮಹಿಳಾ ಉದ್ಯಮಿಗಳಿಗೆ ನಾಯಕತ್ವ, ನೆಟ್‌ವರ್ಕಿಂಗ್, ಮಾರ್ಗದರ್ಶನ, ಬ್ರ್ಯಾಂಡಿಂಗ್, ಕೌಶಲ್ಯಾಭಿವೃದ್ಧಿ, ಉದ್ಯಮ ವಿಸ್ತರಣೆ ಹಾಗೂ ಮಾರುಕಟ್ಟೆ ಸಂಪರ್ಕ ಕಲ್ಪಿಸುವ ವಿಶೇಷ ಮಹಿಳಾ ವಿಭಾಗ.

VBFಯ ಉದ್ದೇಶಗಳು

  • ಉದ್ಯಮಶೀಲತೆಯನ್ನು ಉತ್ತೇಜಿಸುವುದು.
  • ಹೊಸ ಉದ್ಯಮ ಆರಂಭಿಸಲು ಪ್ರೋತ್ಸಾಹ ನೀಡುವುದು.
  • Business-to-Business (B2B) ಸಹಭಾಗಿತ್ವವನ್ನು ವೃದ್ಧಿಸುವುದು.
  • Supply Chain ಸಹಕಾರವನ್ನು ಬಲಪಡಿಸುವುದು.
  • ಸ್ಟಾರ್ಟ್‌ಅಪ್‌ಗಳಿಗೆ ಮಾರ್ಗದರ್ಶನ ಹಾಗೂ ಹೂಡಿಕೆ ಅವಕಾಶಗಳನ್ನು ಕಲ್ಪಿಸುವುದು.
  • ಹಿರಿಯ ಉದ್ಯಮಿಗಳು ಮತ್ತು ಯುವ ಉದ್ಯಮಿಗಳ ನಡುವೆ ಮಾರ್ಗದರ್ಶನ (Mentorship) ವ್ಯವಸ್ಥೆ ನಿರ್ಮಿಸುವುದು.
  • ಮಹಿಳಾ ಉದ್ಯಮಿಗಳನ್ನು ಆರ್ಥಿಕವಾಗಿ ಸಬಲಗೊಳಿಸುವುದು.
  • ವಿದ್ಯಾರ್ಥಿಗಳು ಮತ್ತು ಯುವಜನರನ್ನು "ಉದ್ಯೋಗ ಅರಸುವವರಿಗಿಂತ ಉದ್ಯೋಗ ಸೃಷ್ಟಿಸುವವರಾಗಿ" ರೂಪಿಸುವುದು.

ಸದಸ್ಯರ ಉದ್ಯಮ ಕ್ಷೇತ್ರಗಳು

VBF ಸದಸ್ಯರು ಉತ್ಪಾದನೆ, ವ್ಯಾಪಾರ, ಆರೋಗ್ಯ, ಆಸ್ಪತ್ರೆಗಳು, ಔಷಧೋದ್ಯಮ, ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ಟ್ರಾವೆಲ್, ಆತಿಥ್ಯ, ಬ್ಯಾಂಕಿಂಗ್, ಹಣಕಾಸು, ವಿಮೆ, ತೆರಿಗೆ, ಕಾನೂನು, ನಿರ್ಮಾಣ, ಕೃಷಿ, ಸಾವಯವ ಉತ್ಪನ್ನಗಳು, ವಾಹನೋದ್ಯಮ, ನವೀಕರಿಸಬಹುದಾದ ಇಂಧನ, ಸಲಹಾ ಸೇವೆಗಳು, ಗೃಹೋದ್ಯಮ, ಇ-ಕಾಮರ್ಸ್ ಹಾಗೂ ಸ್ಟಾರ್ಟ್‌ಅಪ್ ಸೇರಿದಂತೆ 20ಕ್ಕೂ ಹೆಚ್ಚು ಉದ್ಯಮ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಮ್ಮಿಲನದಲ್ಲಿ ಏನಿರಲಿದೆ?

  • V-BIZZ ಡಿಜಿಟಲ್ ವೇದಿಕೆಯ ಅನಾವರಣ.
  • VIPRA Golden Souvenir ಬಿಡುಗಡೆ.
  • VEDIKA Women's Wing ಉದ್ಘಾಟನೆ.
  • ಹಿರಿಯ ಉದ್ಯಮಿಗಳು ಹಾಗೂ ಸಾಧಕರಿಗೆ ಗೌರವ ಸಮರ್ಪಣೆ.
  • ಉದ್ಯಮಾಭಿವೃದ್ಧಿ ಕುರಿತ ವಿಶೇಷ ಉಪನ್ಯಾಸಗಳು.
  • B2B Networking Session.
  • ಹೊಸ ಸದಸ್ಯರ ಪರಿಚಯ.
  • ಯುವ ಉದ್ಯಮಿಗಳಿಗೆ ಮಾರ್ಗದರ್ಶನ.
  • ಮಹಿಳಾ ಉದ್ಯಮಿಗಳಿಗೆ ವಿಶೇಷ ಸಂವಾದ.
  • ವ್ಯವಹಾರ ವಿಸ್ತರಣೆಗೆ ಸಹಭಾಗಿತ್ವದ ಅವಕಾಶಗಳು.‌

Utthana Katha Spardhe 2026: ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ-2026ಕ್ಕೆ ಕಥೆಗಳ ಆಹ್ವಾನ; ಅ.10 ಕೊನೆಯ ದಿನ

ವಿಪ್ರ ವ್ಯವಹಾರ ವೇದಿಕೆ ಕೇವಲ ಒಂದು ಸಂಘಟನೆಯಲ್ಲ; ಇದು ಉದ್ಯಮ, ನಾಯಕತ್ವ, ಜ್ಞಾನ, ಸೇವೆ ಮತ್ತು ಸಮುದಾಯದ ಆರ್ಥಿಕ ಸಬಲೀಕರಣದ ಚಳವಳಿಯಾಗಿದೆ. ಕರ್ನಾಟಕದ ಎಲ್ಲಾ ಬ್ರಾಹ್ಮಣ ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ವ್ಯಾಪಾರಸ್ಥರು, ವೈದ್ಯರು, ಇಂಜಿನಿಯರ್‌ಗಳು, ಚಾರ್ಟರ್ಡ್ ಅಕೌಂಟೆಂಟ್‌ಗಳು, ವಕೀಲರು, ಬ್ಯಾಂಕರ್‌ಗಳು, ಐಟಿ ವೃತ್ತಿಪರರು, ಶಿಕ್ಷಕರು, ಸ್ಟಾರ್ಟ್‌ಅಪ್ ಸಂಸ್ಥಾಪಕರು, ಮಹಿಳಾ ಉದ್ಯಮಿಗಳು, ಸ್ವಯಂ ಉದ್ಯೋಗಿಗಳು ಹಾಗೂ ಯುವ ಉದ್ಯಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಐತಿಹಾಸಿಕ ಸಮ್ಮಿಲನವನ್ನು ಯಶಸ್ವಿಗೊಳಿಸುವಂತೆ ವಿಪ್ರ ವ್ಯವಹಾರ ವೇದಿಕೆ ಆತ್ಮೀಯವಾಗಿ ಆಹ್ವಾನಿಸುತ್ತದೆ.