ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Utthana Katha Spardhe 2026: ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆ-2026ಕ್ಕೆ ಕಥೆಗಳ ಆಹ್ವಾನ; ಅ.10 ಕೊನೆಯ ದಿನ

Utthana Katha Spardhe 2026: ಉತ್ಥಾನ ಮಾಸಪತ್ರಿಕೆಯು ಕಳೆದ 6 ದಶಕಗಳಿಂದ ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದೆ. ಈ ಬಾರಿಯ 2026ನೇ ಸಾಲಿನ ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಗೆ ಕಥೆಯನ್ನು ಆಹ್ವಾನಿಸಲಾಗಿದೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಗೆ ಕಥೆಗಳ ಆಹ್ವಾನ

-

Profile
Siddalinga Swamy Aug 4, 2026 3:39 PM

ಬೆಂಗಳೂರು, ಆ.04: ಉತ್ಥಾನ ಮಾಸಪತ್ರಿಕೆಯು ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು (Utthana Katha Spardhe 2026) ಆಯೋಜಿಸಿದೆ. ಉತ್ಥಾನ ಮಾಸಪತ್ರಿಕೆಯು ಕಳೆದ 6 ದಶಕಗಳಿಂದ ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದ್ದು, ಈ ಬಾರಿಯ 2026ನೇ ಸಾಲಿನ ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಗೆ ಕಥೆಯನ್ನು ಆಹ್ವಾನಿಸಲಾಗಿದೆ.

ಈ ಬಗ್ಗೆ ʼಉತ್ಥಾನʼ ಸಂಪಾದಕ ಅನಿಲ್‌ ಕುಮಾರ್‌ ಮೊಳಹಳ್ಳಿ ಮಾಹಿತಿ ನೀಡಿದ್ದಾರೆ. ಕಥೆ ತಲುಪಿಸಲು 2026ರ ಅಕ್ಟೋಬರ್‌ 10 ಕೊನೆಯ ದಿನಾಂಕವಾಗಿದೆ. ಕಥೆಗಳನ್ನು ಅಂಚೆ ಅಥವಾ ಪೋಸ್ಟ್‌ ಮೂಲಕ ಕಳುಹಿಸಬಹುದು. ವಿಳಾಸ: ಸಂಪಾದಕರು, ‘ಉತ್ಥಾನʼ ವಾರ್ಷಿಕ ಕಥಾ ಸ್ಪರ್ಧೆ– 2026, ‘ಕೇಶವ ಶಿಲ್ಪʼ, ಕೆಂಪೇಗೌಡ ನಗರ, ಬೆಂಗಳೂರು-560 004 ದೂರವಾಣಿ: 7795441894 ಇ-ಮೇಲ್ ವಿಳಾಸ: [email protected]ಗೆ ಕಳುಹಿಸಬೇಕು.

ಕಥಾ ಸ್ಪರ್ಧೆ ಬಹುಮಾನ

ಮೊದಲನೆಯ ಬಹುಮಾನ: 15,000 ರೂ.
ಎರಡನೇ ಬಹುಮಾನ: 12,000 ರೂ.
ಮೂರನೇ ಬಹುಮಾನ: 10,000 ರೂ
ಐದು ಮೆಚ್ಚುಗೆಯ ಬಹುಮಾನಗಳು: ತಲಾ 2,000 ರೂ.

ಕಥಾ ಸ್ಪರ್ಧೆಯ ನಿಯಮಗಳು

  • ಕಥೆಗಳು ಸ್ವತಂತ್ರವಾಗಿರಬೇಕು. ಭಾಷಾಂತರವಾಗಲಿ, ಅನುಕರಣೆಯಾಗಲಿ ಆಗಿರಕೂಡದು. ಎಲ್ಲೂ ಸ್ವೀಕೃತವಾಗಿರಬಾರದು; ಪರಿಶೀಲನೆಗಾಗಿಯೂ ಯಾವುದೇ ಅನ್ಯ ಪತ್ರಿಕೆ, ಸಂಸ್ಥೆಗೆ ಕಳುಹಿಸಿರಬಾರದು. ಸಾಮಾಜಿಕ ಜಾಲತಾಣಗಳಲ್ಲೂ ಪ್ರಕಟವಾಗಿರಬಾರದು.
  • ಒಬ್ಬರು ಒಂದು ಕಥೆಯನ್ನು ಮಾತ್ರ ಕಳುಹಿಸಬಹುದು.
  • ಬಹುಮಾನಿತ ಕಥೆ 'ಉತ್ಥಾನ'ದಲ್ಲಿ ಪ್ರಕಟವಾಗುವವರೆಗೂ ಬೇರೆ ಎಲ್ಲೂ ಗ್ರಂಥರೂಪದಲ್ಲಾಗಲಿ, ಸಾಮಾಜಿಕ ಜಾಲತಾಣಗಳಲ್ಲಾಗಲಿ, ಪತ್ರಿಕೆ, ಆಕಾಶವಾಣಿ ಅಥವಾ ದೂರದರ್ಶನದಲ್ಲಾಗಲಿ ಪ್ರಕಟಣೆಗೆ, ಪ್ರಸಾರಕ್ಕೆ ಅವಕಾಶವಿಲ್ಲ.
  • ಪೋಸ್ಟ್ ಮೂಲಕ ಕಳುಹಿಸುವವರು - ಕಾಗದದ ಒಂದೇ ಮಗ್ಗುಲಲ್ಲಿ ಸ್ಫುಟವಾಗಿ ಬರೆದಿರಬೇಕು ಅಥವಾ ವಿರಳವಾಗಿ ಬೆರಳಚ್ಚು ಮಾಡಿರಬೇಕು. ಕಾರ್ಬನ್/ಜೆರಾಕ್ಸ್ ಪ್ರತಿಗಳನ್ನು ಪರಿಶೀಲಿಸಲಾಗುವುದಿಲ್ಲ.
  • ಇಮೇಲ್ ಮೂಲಕ ಕಳುಹಿಸುವವರು - ಕಥೆಯನ್ನು ನುಡಿ, ಬರಹ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ಧಪಡಿಸಿ (ವರ್ಡ್ ಮತ್ತು ಪಿಡಿಎಫ್ 2 ರೂಪದಲ್ಲಿ) ಇ-ಮೇಲ್ : [email protected]ಗೆ ಕಳುಹಿಸಬೇಕು. ಜೆರಾಕ್ಸ್/ಪೋಟೋ ಪಿಡಿಎಫ್ ಪ್ರತಿಗಳನ್ನು ಪರಿಶೀಲಿಸಲಾಗುವುದಿಲ್ಲ.
  • ಕಥೆ 3000 ಪದಗಳ ಮಿತಿಯಲ್ಲಿ ಇರಬೇಕು.
  • ಹಸ್ತಪ್ರತಿಯನ್ನು ಹಿಂದಕ್ಕೆ ಕಳುಹಿಸುವ ಯಾವುದೇ ವ್ಯವಸ್ಥೆ ಇರುವುದಿಲ್ಲ.
  • ಲೇಖಕರು ತಮ್ಮ ಹೆಸರು, ವಿಳಾಸ, ದೂರವಾಣಿ, ಇ-ಮೇಲ್, ಕಿರುಪರಿಚಯ ಮುಂತಾದ ವಿವರಗಳನ್ನು ಕಥೆಯ ಜೊತೆಯಲ್ಲಿ ಬರೆಯದೆ, ಪ್ರತ್ಯೇಕ ಪುಟದಲ್ಲಿ ಬರೆದು ಕಳುಹಿಸಬೇಕು. ಜೊತೆಗೆ ಲೇಖಕರ ಭಾವಚಿತ್ರವೂ ಇರಬೇಕು.
  • ಬಹುಮಾನಿತ ಕಥೆಗಳನ್ನು ಯಾವುದೇ ರೂಪದಲ್ಲಿ, ಯಾವಾಗ ಬೇಕಾದರೂ ಬಳಸುವ ಸಂಪೂರ್ಣ ಹಕ್ಕು 'ಉತ್ಥಾನ'ದ್ದು.
  • ತೀರ್ಪುಗಾರರ ಮೌಲ್ಯನಿರ್ಣಯದ ನಂತರ ಫಲಿತಾಂಶವನ್ನು 'ಉತ್ಥಾನ'ದಲ್ಲಿ ಪ್ರಕಟಿಸಲಾಗುವುದು. ವಿಜೇತರಿಗೆ ಮಾತ್ರ ಪತ್ರ/ದೂರವಾಣಿ ಮೂಲಕ ತಿಳಿಸಲಾಗುವುದು. ಅದಕ್ಕೆ ಪೂರ್ವದಲ್ಲಿ ಯಾವುದೇ ಪತ್ರವ್ಯವಹಾರ ಸಾಧ್ಯವಾಗದು. ಸ್ಪರ್ಧೆಗೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲೂ ವ್ಯವಸ್ಥಾಪಕರದ್ದೇ ಅಂತಿಮ ತೀರ್ಮಾನ.