ವಿಶ್ವವಾಣಿ ಕ್ಲಬ್‌ಹೌಸ್ 5 ವರ್ಷ ಪೂರ್ಣ
ಸಂಶೋಧನೆಗೆ ನೆರವಾಗುವಂತೆ ಶೀರ್ಷಿಕೆಗಳ
4 ಗಂಟೆ ಸುದೀರ್ಘವಾಗಿ ಮಾತನಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ನಡೆದ 1400ಕ್ಕೂ ಹೆಚ್ಚು ಕಾರ್ಯಕ್ರಮದಲ್ಲಿ 1300 ಕಾರ್ಯಕ್ರಮಗಳ ಶೀಷಿಕೆಗಳು ನೋಡಿದರೆ ತುಂಬಾ ಅದ್ಭುತವಾಗಿದೆ. ಕಾರ್ಯಕ್ರಮಗಳನ್ನು ನೋಡಿದರೆ ಜ್ಞಾನದ ಲೋಕಕ್ಕೆ ತೆರೆದುಕೊಳ್ಳುತ್ತದೆ. ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳು (ಪಿಎಚ್.ಡಿ) ನಡೆಯುತ್ತವೆ. ಸಂಶೋಧನಾ ಪ್ರಬಂಧದ ಶೀರ್ಷಿಕೆಗಳು ಸಾಮಾನ್ಯ ವಾಗಿ ಸಿಗುತ್ತದೆ. ವಿಶ್ವವಾಣಿ ಕ್ಲಬ್‌ಹೌಸ್‌ನ ಶೀರ್ಷಿಕೆಗಳು ಸಂಶೋಧನೆಗೆ ನೆರವಾಗುವ ರೀತಿಯಿವೆ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅಭಿಪ್ರಾಯಪಟ್ಟರು.
ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ವಿಶ್ವವಾಣಿ ಕ್ಲಬ್‌ಹೌಸ್ 5 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವವಾಣಿ ಕ್ಲಬ್‌ಹೌಸ್ ಐದು ವರ್ಷ ಪೂರೈಸಿದೆ. ಈ ಮಾಧ್ಯಮದ ಮೂಲಕ ಸುದೀರ್ಘ ಪಯಣ ತೃಪ್ತಿದಾಯಕವಾಗಿದೆ.
ಎರಡನೇ ಕರೋನಾ ಅಲೆ (2020ರಲ್ಲಿ) ಸಂದರ್ಭದಲ್ಲಿ ಕ್ಲಬ್‌ಹೌಸ್ ಹುಟ್ಟುಕೊಂಡಿತ್ತು. ಜಗತ್ತಿ ನೆಲ್ಲೆಡೆ ಇದ್ದ ಕನ್ನಡಿಗರನ್ನು ನಮ್ಮ ವಿಶ್ವವಾಣಿ ಕ್ಲಬ್‌ಹೌಸ್ ಸೆಳೆದಿದೆ. ಕ್ಲಬ್‌ಹೌಸ್ ಕರ್ನಾಟಕದಲ್ಲಿ ಮನೆಮಾತಾಗಿದೆ. ಕ್ಲಬ್ʼಹೌಸ್ ಇಷ್ಟೊಂದು ಜನಪ್ರಿಯವಾಗುತ್ತದೆ ಎಂಬುದು ನನಗೆ ತಿಳಿದಿರಲಿಲ್ಲ. ನಮಗೆ ಆರಂಭದಲ್ಲಿ ಮಾತಿನ ಮಂಟಪ, ನಿತ್ಯ ಕಾರ್ಯಕ್ರಮ ಮಾಡುವ ಪರಿಕಲ್ಪನೆ ಹಾಗೂ ರಚನೆ ಇರಲಿಲ್ಲ. ಹಂತ ಹಂತವಾಗಿ ಅದ್ಭುತವಾಗಿ ನಮ್ಮ ಕ್ಲಬ್‌ಹೌಸ್‌ನಲ್ಲಿ ಕಾರ್ಯಕ್ರಮಗಳು ಮೂಡಿಬಂದಿವೆ ಎಂದರು.
ಇದನ್ನೂ ಓದಿ: Vishwavani Club House Completes 5 Years: ಮಾತಿನ ಮಂಟಪ ವಿಶ್ವವಾಣಿ ಕ್ಲಬ್ʼಹೌಸ್ʼಗೆ 5 ವರ್ಷ
ಸಮಾಜದಲ್ಲಿ ಉತ್ತಮ ವ್ಯಕ್ತಿಗಳೊಂದಿಗೆ ಸಂವಾದ ಕಾರ್ಯಕ್ರಮ ಮಾಡಿದ್ದೇವೆ. ಸಿಎಂ ಇಬ್ರಾಹಿಂ, ರೇಣುಕಾಚಾರ್ಯ, ಅಡಗೂರು ಶ್ರೀನಾಥ್, ಬಿಟಿಎಸ್ ಬಸ್ ಚಾಲಕಿ ಪ್ರೇಮಕ್ಕ ಅವರು ಸೇರಿದಂತೆ ಹಲವು ಮರೆಯಲಾಗದ ಕ್ಲಬ್‌ಹೌಸ್‌ಗಳು ನಡೆದಿವೆ.
ನಮ್ಮ ಕ್ಲಬ್‌ಹೌಸ್‌ನಿಂದ ಸಿಕ್ಕ ಕೊಡುಗೆ ಏನೆಂದರೆ ಕುಟುಂಬದ ಪರಿಕಲ್ಪನೆ. ಇದರ ನಡುವೆ ಅದ್ಭುತವಾದ ಸಂಬಂಧ ಬೆಸೆದಿದೆ. ಅನೇಕ ಸ್ನೇಹಿತರು ಕ್ಲಬ್‌ಹೌಸ್‌ನಲ್ಲಿ ಪರಿಚಿತರಾಗಿದ್ದಾರೆ. ಹಾವು ಹಿಡಿಯುವಿಕೆ, ಹುಲ್ಲನ್ನು ಬೆಳೆಸುವಿಕೆ ಸೊಪ್ಪು ಸೇವಿಸುವಿಕೆ, ಗೂಬೆ, ಆನೆ ಮುಂತಾದ ಕಾರ್ಯ ಕ್ರಮಗಳು ಜನ ಮನ ಸೆಳೆದಿದೆ.
ಸಣ್ಣ ಸಣ್ಣ ವಿಷಯಗಳನ್ನೊಗೊಂಡಂತೆ ಅಂತಾರಾಷ್ಟ್ರೀಯ ವಿಚಾರಗಳು ಚರ್ಚೆಯಾಗಿವೆ. ವಿಶ್ವವಾಣಿ ಕ್ಲಬ್ ಹೌಸ್ ಐದು ವರ್ಷ ಪಯಣ ಇದು ಶಿಸ್ತಿನ ಮಾತಿನ ಮಂಟಪವಾಗಿದೆ. ಸುಮಾರು ೫೦೦ ಕಾರ್ಯಕ್ರಮಗಳು ಶಿಸ್ತುಬದ್ಧವಾಗಿ ನಡೆದಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಸುದೀರ್ಘ ಮಾತಿನ ಐತಿಹಾಸಿಕ
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ನಾಲ್ಕು ಗಂಟೆ ಸುದೀರ್ಘವಾಗಿ ವಿಶ್ವವಾಣಿ ಕ್ಲಬ್‌ಹೌಸ್ನಲ್ಲಿ ಮಾತನಾಡಿದ್ದು ಐತಿಹಾಸಿಕ. ಸಾಮಾನ್ಯ ವಾಗಿ ಅವರು ಯಾವುದೇ ದೃಶ್ಯ ಮಾಧ್ಯಮ ಹಾಗೂ ಕಾರ್ಯಕ್ರಮಗಳಲ್ಲಿ ಕಡಿಮೆ ಮಾತು. ನಮ್ಮ ವಿಶ್ವವಾಣಿ ಕ್ಲಬ್‌ಹೌಸ್‌ಗೆ ಬಂದು ತಮ್ಮ ರಾಜಕೀಯ ಜೀವನದ ಚಿತ್ರಣವನ್ನು ಶೋತೃಗಳ ಜತೆ ಹಂಚಿಕೊಂಡಿದ್ದು ಅಪರೂಪದ ದಾಖಲೆ. ಅದೇ ರೀತಿ ಲೇಖಕ ದಿ.ಎಸ್.ಎಲ್.ಬೈರಪ್ಪ ಹಾಗೂ ಸುಧಾಮೂರ್ತಿ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಸುದೀರ್ಘವಾಗಿ ನಡೆದಿದೆ ಎಂದು ಎಂದು ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ನುಡಿದರು.
ಸೋಷಿಯಲ್ ಮೀಡಿಯಾ ಎಂಬುದು ಟಾಕ್ಸಿಕ್!
ಇಂದು ಸಾಮಾಜಿಕ ಜಾಲತಾಣ ಅತ್ಯಂತ ವಿಷಕಾರಿ ತಾಣವಾಗಿ ಮಾರ್ಪಟ್ಟಿದೆ. ಮನಸ್ಸಿಗೆ ಖುಷಿ ಸಿಗುವುದಿಲ್ಲ. ಅನಗತ್ಯವಾಗಿ ನಮಗೆ ಬೇಡವಾದ ಪೋಸ್ಟ್‌ಗಳು ಬರುತ್ತದೆ. ನಾವು ಹಾಕಿದ ಪೋಸ್ಟ್‌ಗೆ ಕೆಟ್ಟದಾದ ಕಮೆಂಟ್‌ಗಳು ಬಂದಿವೆ. ವಿಷದ ವಾತಾವರಣದ ರೀತಿ ಸಾಮಾಜಿಕ ಜಾಲತಾಣ ಹೊಂದಿದೆ. ಯಾವುದೇ ಒಂದು ವಿಷಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದಾಗ ಅದನ್ನು ಟೀಕೆ ಮಾಡುತ್ತಾರೆ. ಇದೇ ರೀತಿ ಮುಂದುವರಿದರೆ ಜಾಲತಾಣಗಳನ್ನು ನಿಷ್ಕ್ರಿಯಗೊಳಿಸುವ ದಿನಗಳು ಸನಿಹ ಎಂದು ವಿಶ್ವವಾಣಿ ಪತ್ರಿಕೆ ಸಂಪಾದಕರಾದ ವಿಶ್ವೇಶ್ವರ ಭಟ್ ಅವರು ತಿಳಿಸಿದರು.
ಮುಂದಿನ ಹೊಸತನ
ಸಂವಾದಗಳ ಬಗ್ಗೆ ಬಿಸಿ ಬಿಸಿಯಾದ ಚರ್ಚೆ
ನಮ್ಮನ್ನು ಕಾಡುವಂತಹ ಗಹನವಾದ ಚರ್ಚೆ
ತಾಜಾ ವಿಷಯ ತಲುಪಿಸುವುದು
ಬ್ರೇಕ್ ಆದ ಸುದ್ದಿಗಳಿಗೆ ವೇದಿಕೆ
ವಾರದಲ್ಲಿ ಒಂದು ದಿನ ಅಚ್ಚರಿಯ ಸಂಗತಿಗಳ ಚರ್ಚೆ
ನಮ್ಮ ಪ್ರವಾಸಿ ಪ್ರಪಂಚದಲ್ಲಿನ ಕುತೂಹಲ ಸಂಗತಿ ಹಾಗೂ ಪ್ರವಾಸಿ ಸಾಧಕರನ್ನು ಪರಿಚಯಿಸುವಿಕೆ
ವ್ಯಕ್ತಿಚಿತ್ರಗಳು ಹಾಗೂ ಹೊಸತನ ವೈವಿಧ್ಯಮಯ ಪ್ರಯೋಗಗಳು
![]()
ಸಾಮಾನ್ಯವಾಗಿ ಎಷ್ಟೋ ಕಂಪನಿಗಳು ಐದು ವರ್ಷ ನಡೆಯುವುದೇ ಸಾಹಸ. ಜತೆಗೆ ಕೆಲವೊಂದು ಸ್ನೇಹ ಐದು ವರ್ಷ ಉಳಿಯುವುದು ಕಷ್ಟ. ನಮ್ಮ ವಿಶ್ವವಾಣಿ ಕ್ಲಬ್‌ಹೌಸ್ ಐದು ವರ್ಷ ಸತತ ವಾಗಿ ಕಾರ್ಯಕ್ರಮ ಗಳನ್ನು ನಡೆಸಿಕೊಂಡು ಬಂದಿರುವುದು ಹೆಗ್ಗಳಿಕೆಗೆ ಪಾತ್ರವಾಗಿದೆ. ನಮ್ಮ ಕ್ಲಬ್‌ಹೌಸ್‌ನಲ್ಲಿರುವವರು ಶ್ರೋತೃಗಳು ಎನ್ನುವುದಕ್ಕಿಂತ ಕುಟುಂಬದ ಸದಸ್ಯರು. ರೀಲ್ಸ್ ಹಾವಳಿ ಗಳ ನಡುವೆಯೂ ನಮ್ಮ ಕ್ಲಬ್‌ಹೌಸ್ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
-ಕಿರಣ್ ಉಪಾಧ್ಯಾಯ
![]()
ಕ್ಲಬ್‌ಹೌಸ್‌ನಲ್ಲಿ ಭಾಗವಹಿಸುವವ ಅಪ್ಪಟ ಪ್ರೇಮಿಗಳಲ್ಲಿ ನಾನೊಬ್ಬ. ನನ್ನ ಜೀವನ ಇರುವ ತನಕ ವಿಶ್ವವಾಣಿ ಕ್ಲಬ್ʼಹೌಸ್‌ನಲ್ಲಿ ಭಾಗವಹಿಸುತ್ತೇನೆ. ಆಡುಮುಟ್ಟದ ಸೊಪ್ಪಿಲ್ಲ, ವಿಶ್ವವಾಣಿ ಕ್ಲಬ್ʼ ಹೌಸ್‌ನಲ್ಲಿ ಚರ್ಚೆಯಾಗದ ವಿಷಯಗಳಿಲ್ಲ. ಐದು ವರ್ಷ ವಿಶ್ವವಾಣಿ ಕ್ಲಬ್‌ಹೌಸ್ ಪೂರೈಸಿರುವುದು ನನಗೆ ಸಂತಸ ತಂದಿದೆ.
-ರವೀಂದ್ರ, ವಿಶ್ವವಾಣಿ ಕ್ಲಬ್‌ಹೌಸ್ ಶೋತೃ
![]()
ವಿಶ್ವವಾಣಿ ಕ್ಲಬ್ʼಹೌಸ್ ಐದು ವರ್ಷದ ಪಯಣ ಎಂಬುದು ಅದು ಬರೀ ಸಂಖ್ಯೆಯಲ್ಲ. ನಿರಂತರವಾಗಿ ನಡೆದ ಕಾರ್ಯಕ್ರಮಗಳ ಸಾಧನೆ. ದೇಶ ವಿದೇಶದಲ್ಲಿನ ಮೂಲೆ ಮೂಲೆಯಲ್ಲಿದ್ದ ಕನ್ನಡಿಗರನ್ನು ಪರಿಚಯಿಸುವ ಕೆಲಸ ವಿಶ್ವವಾಣಿ ಕ್ಲಬ್‌ಹೌಸ್ ಮಾಡಿದೆ. ಅರ್ಥಪೂರ್ಣ ಕಾರ್ಯಕ್ರಮಗಳು ನಡೆದಿವೆ. ಸಾಮಾಜಿಕ ಜಾಲತಾಣ ಎಂಬುದು ಮೀಡಿಯಾ ಬರ್ಗರ್. ವಿಶ್ವವಾಣಿ ಕ್ಲಬ್‌ಹೌಸ್ ಮೊಸರನ್ನ ರೀತಿ. ನಮ್ಮ ವಿಶ್ವವಾಣಿ ಕ್ಲಬ್‌ಹೌಸ್ ಮೌಲ್ಯದ ರೀತಿಯಾಗಿ ನಡೆದಿದೆ.
-ಶಿಶಿರ ಹೆಗಡೆ
![]()
5 ವರ್ಷದಲ್ಲಿ 1400ಕ್ಕೂ ಹೆಚ್ಚು ಯಶಸ್ವಿ ಕಾರ್ಯಕ್ರಮಗಳು ನಡೆದಿವೆ. ನಮ್ಮ ಕ್ಲಬ್‌ಹೌಸ್‌ನಲ್ಲಿ ಅನೇಕ ಮೊದಲುಗಳಿಗೆ ರುಜು ಹಾಕಲಾಗಿದೆ. ನಮ್ಮ ಕ್ಲಬ್‌ಹೌಸ್‌ನಲ್ಲಿ ಶೋತೃಗಳು ಪ್ರೀತಿಯಿಂದ ಆಲಿಸುತ್ತಾರೆ. ಮುಂದಿನ ದಿನಗಳಲ್ಲಿ ಹೊಸ ಹಾಗೂ ಕುತೂಹಲಕಾರಿ ವಿಷಯಗಳ ಬಗ್ಗೆ ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಚರ್ಚೆಯಾಗಲಿವೆ.
-ರೂಪಾ ಗುರುರಾಜ್