ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಭಾನುವಾರ ವಿಠ್ಠಲ ಸಂಸ್ಮರಣ ಗ್ರಂಥ ಬಿಡುಗಡೆ, ‘ವಿಠ್ಠಲ ಪ್ರಶಸ್ತಿ’ ಪ್ರದಾನ

ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥ ಸಾರಥಿ ಗ್ರಂಥ ಲೋಕಾರ್ಪಣೆ ಮಾಡ ಲಿದ್ದು, ಡಾ. ಮುದ್ದು ಮೋಹನ ಅವರು ವಿಠ್ಠಲ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿಠ್ಠಲ ಪ್ರತಿಷ್ಠಾನ ಆರಂಭಿಸಿರುವ ಸಾಧಕರಿಗೆ ನೀಡುವ ವಿಠ್ಠಲ ಪ್ರಶಸ್ತಿಯನ್ನು ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಬೆಂಗಳೂರಿನ ಡಾ. ವೆಂಕಟೇಶರಾವ .ಪಿ ಅವರಿಗೆ ನೀಡಲಾಗುತ್ತಿದೆ.

ಬೆಂಗಳೂರು: ಬೆಂಗಳೂರಿನ ದೂರ ಸಂಪರ್ಕ ಇಲಾಖೆಯ ನಿವೃತ್ತ ಇಂಜಿನಿಯರ್, ಕವಿ, ಲೇಖಕ, ನಾಟಕಕಾರ, ಸಂಘಟಕ, ಪ್ರಕಾಶಕ ಮತ್ತು ಹೋರಾಟಗಾರರಾಗಿದ್ದ ದಿವಂಗತ ವಿಠ್ಠಲರಾವ ಕುಲಕರ್ಣಿ ಅವರ ಸಮಗ್ರ ಸಾಹಿತ್ಯ, ಬದುಕು, ವ್ಯಕ್ತಿತ್ವ ಮತ್ತು ಜನಪರ ಹೋರಾಟದ ಸಾಧನೆಯ ಕುರಿತಾದ ‘ವಿಠ್ಠಲ’ ಸಂಸ್ಮರಣ ಗ್ರಂಥದ ಬಿಡುಗಡೆ ಸಮಾರಂಭ ನ.23ರ ರವಿವಾರ 10.15 ಕ್ಕೆ ಬೆಂಗಳೂರಿನ ಎನ್ ಆರ್ ಕಾಲೋನಿಯ ಡಾ.ಸಿ.ಅಶ್ವತ್ಥ ಸಭಾ ಭವನದಲ್ಲಿ ಏರ್ಪಡಿಸಲಾಗಿದೆ.

ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥ ಸಾರಥಿ ಗ್ರಂಥ ಲೋಕಾರ್ಪಣೆ ಮಾಡ ಲಿದ್ದು, ಡಾ. ಮುದ್ದು ಮೋಹನ ಅವರು ವಿಠ್ಠಲ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿಠ್ಠಲ ಪ್ರತಿಷ್ಠಾನ ಆರಂಭಿಸಿರುವ ಸಾಧಕರಿಗೆ ನೀಡುವ ವಿಠ್ಠಲ ಪ್ರಶಸ್ತಿಯನ್ನು ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಬೆಂಗಳೂರಿನ ಡಾ. ವೆಂಕಟೇಶರಾವ .ಪಿ ಅವರಿಗೆ ನೀಡಲಾಗುತ್ತಿದೆ.

ಇದನ್ನೂ ಓದಿ: Bangalore Cabs KSP App: ಕ್ಯಾಬ್​ಗಳಲ್ಲಿ 112 ತುರ್ತು ಸಹಾಯವಾಣಿ ಸ್ಟಿಕ್ಕರ್​ ಅಂಟಿಸಲು ಸೂಚನೆ; ಪೊಲೀಸರಿಂದ ಹೊಸ ಮಾರ್ಗ ಸೂಚಿ ಬಿಡುಗಡೆ

ಹಿರಿಯ ಪತ್ರಕರ್ತ ಎಚ್ ಆರ್ ಶ್ರೀಶ, ಯೋಗರತ್ನ ಡಾ. ಎಸ್. ಎನ್. ಓಂಕಾರ ಅವರು ಅತಿಥಿಗಳಾಗಿ ಭಾಗವಹಿಸಲಿರುವರು. ಪ್ರತಿಷ್ಠಾನದ ಅಧ್ಯಕ್ಷ ಚಿತ್ರಾ ವಿಠ್ಠಲರಾವ ಸಮಾ ರಂಭದ ಅಧ್ಯಕ್ಷಗತೆ ವಹಿಸಲಿದ್ದಾರೆ. ಗ್ರಂಥದ ಪ್ರಧಾನ ಸಂಪಾದಕರು, ಸಾಹಿತಿ ಹಾಗು ಪ್ರಕಾಶಕರಾದ ಡಾ. ಸ್ವಾಮಿರಾವ ಕುಲಕರ್ಣಿ, ಸಂಪಾದಕರಾದ ಸಾಹಿತಿ, ರಂಗಕರ್ಮಿ ನಾರಾಯಣ ಕುಲಕರ್ಣಿ ಮತ್ತು ವಿಠ್ಠಲ ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀಪತಿ ವಿಠ್ಠಲರಾವ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಖ್ಯಾತ ಸಂಗೀತಗಾರ

ಡಾ. ಮುದ್ದುಮೋಹನ ಅವರ ಸಂಗೀತ ಕಾರ್ಯಕ್ರಮ, ಶುಭಾ ಗೋವಿಂದರಾವ ದೇಶಪಾಂಡೆ, ಭಾಗ್ಯಶ್ರೀ ವಿಠ್ಠಲರಾವ ಶೇಖರ, ನಿಹಾರಿಕಾ ಕೆಂದಟ್ಟಿ ಶೇಖರ, ಅರ್ಜುನ ದೇಶಪಾಂಡೆ ಭಾವಗೀತೆ ಪ್ರಸ್ತುತ ಪಡಿಸಲಿದ್ದಾರೆ. ಪ್ರವೀಣ ದೇಶಪಾಂಡೆ ಮತ್ತು ಪ್ರದೀಪ ದೇಶಪಾಂಡೆ ಅವರು ತಬಲ, ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ.