ಬೆಂಗಳೂರು: ಭಾರತದ ಅತ್ಯಂತ ಪ್ರತಿಷ್ಠಿತ ಐಷಾರಾಮಿ ಕಾರು ತಯಾರಿಕಾ ಸಂಸ್ಥೆಯಾದ ಮರ್ಸಿಡಿಸ್- ಬೆಂಜ್ ಇಂಡಿಯಾ, ಇಂದು ಕರ್ನಾಟಕದ ಬೆಂಗಳೂರಿನಲ್ಲಿ ಅತ್ಯಾಧುನಿಕ ವಾದ ಹೊಸ ಐಷಾರಾಮಿ ಮಾರಾಟ ಮತ್ತು ಸೇವಾ ಘಟಕ 'ವಿವಾ ಸ್ಟಾರ್' ಅನ್ನು ಉದ್ಘಾ ಟಿಸಿದೆ. ಈ ಹೊಸ ಡೀಲರ್ ಶಿಪ್ ಅನ್ನು ಮರ್ಸಿಡಿಸ್- ಬೆಂಜ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ ಸಂತೋಷ್ ಅಯ್ಯರ್ ಹಾಗೂ ಮರ್ಸಿಡಿಸ್- ಬೆಂಜ್ ವಿವಾ ಸ್ಟಾರ್ ನ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್ ದೇಶಪಾಂಡೆ ಅವರು ಉದ್ಘಾಟಿಸಿದರು.
ಈ ಹೊಸ ಡೀಲರ್ ಶಿಪ್ ಬೆಂಗಳೂರು ಮತ್ತು ಕರ್ನಾಟಕದಲ್ಲಿ ಮರ್ಸಿಡಿಸ್- ಬೆಂಜ್ ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿದೆ. ವಿವಾ ಸ್ಟಾರ್ ಮೂಲಕ ಕಾರ್ಯನಿರ್ವಹಿಸುವ ಈ ಹೊಸ ಐಷಾರಾಮಿ ಶೋರೂಮ್ ಸಂಸ್ಥೆಯ ‘ಗೋ ಟು ಕಸ್ಟಮರ್’ ಕಾರ್ಯತಂತ್ರಕ್ಕೆ ಅನುಗುಣವಾಗಿ ರೂಪುಗೊಂಡಿದ್ದು, ಘನತೆವೆತ್ತ ಗ್ರಾಹಕರಿಗೆ ಮರ್ಸಿಡಿಸ್- ಬೆಂಜ್ ಹೊಂದಿರುವ ಬದ್ಧತೆಯನ್ನು ತೋರಿಸುತ್ತದೆ.
ಕರ್ನಾಟಕದ ಮೊತ್ತ ಮೊದಲ ಎಕ್ಸ್ ಕ್ಲೂಸಿವ್ ಮೇಬ್ಯಾಕ್ ಲಾಂಜ್
ಬೆಂಗಳೂರಿನ ವಿವಾ ಸ್ಟಾರ್ ಕರ್ನಾಟಕದ ಮೊತ್ತ ಮೊದಲ ಎಕ್ಸ್ ಕ್ಲೂಸಿವ್ ‘ಮರ್ಸಿಡಿಸ್- ಮೇಬ್ಯಾಕ್ ಲಾಂಜ್’ ಅನ್ನು ಹೊಂದಿದ್ದು, ಇದು ಉನ್ನತ ದರ್ಜೆಯ ಗ್ರಾಹಕರಿಗೆ ಮತ್ತು ಐಷಾರಾಮಿ ಕಾರು ಪ್ರಿಯರಿಗೆ ವಿಶಿಷ್ಟವಾದ ಮೇಬ್ಯಾಕ್ ಬ್ರ್ಯಾಂಡ್ ಅನುಭವವನ್ನು ಒದಗಿಸುತ್ತದೆ. ಈ ‘ಮೇಬ್ಯಾಕ್ ಲಾಂಜ್’ ಕರ್ನಾಟಕದಲ್ಲಿ ಮೊದಲ ಬಾರಿಗೆ 'ಮೇಬ್ಯಾಕ್ ಶಾಪ್-ಇನ್- ಶಾಪ್' ಪರಿಕಲ್ಪನೆಯನ್ನು ಪರಿಚಯಿಸುತ್ತಿದ್ದು, ನವೀನವಾದ 'ಮೇಬ್ಯಾಕ್ ರಿಟೇಲ್ ಕಿಟ್' ಮೂಲಕ ವಿಶಿಷ್ಟವಾದ ರೀಟೇಲ್ ಅಂಶಗಳನ್ನು ಗ್ರಾಹಕರಿಗೆ ಪರಿಚಯಿಸುತ್ತಿದೆ. ಮೇಬ್ಯಾಕ್ ರಿಟೇಲ್ ಕಿಟ್ ಗ್ರಾಹಕರಿಗೆ ಕಾರನ್ನು ತಮ್ಮಿಚ್ಛೆಯಂತೆ ವಿನ್ಯಾಸಗೊಳಿಸಲು ವಿಶೇಷವಾದ ‘ಮ್ಯಾನುಫ್ಯಾಕ್ಟರ್’ ಸರಣಿಯ ಕಸ್ಟಮೈಸೇಷನ್ ಆಯ್ಕೆಯನ್ನು ಒದಗಿಸುತ್ತದೆ. ಈ ಮೇಬ್ಯಾಕ್ ರಿಟೇಲ್ ಕಿಟ್ ಗಳನ್ನು ಜರ್ಮನಿಯಲ್ಲಿ ವಿನ್ಯಾಸಗೊಳಿಸಿ, ಕೈಯಿಂದಲೇ ಸಿದ್ಧಪಡಿಸಿ ತಯಾರಿಸಲಾಗಿದೆ. ಐಷಾರಾಮಿ ಮಾದರಿಗಳ ಪ್ರದರ್ಶನದ ಜೊತೆಗೆ ಗ್ರಾಹಕರಿಗೆ ಉನ್ನತ ಮಟ್ಟದ ಸಮಾಲೋಚನಾ ಅನುಭವವನ್ನು ನೀಡಲಿವೆ.
ಇದನ್ನೂ ಓದಿ: Bangalore News: ಜ.29ರಿಂದ ಫೆಬ್ರವರಿ 1ವರೆಗೆ ವೀರಶೈವ ಲಿಂಗಾಯಿತ ಗ್ಲೋಬಲ್ ಬಿಸಿನಸ್ ಬೃಹತ್ ಸಮಾವೇಶ
*
ಬೆಂಗಳೂರು ನಗರವು ಭಾರತದಲ್ಲಿ ಮರ್ಸಿಡಿಸ್ ಬೆಂಜ್ ನ 'ಮೇಬ್ಯಾಕ್ ಲಾಂಜ್' ಮತ್ತು 'ಮೇಬ್ಯಾಕ್ ಐಕಾನ್ಸ್ ಆಫ್ ಲಕ್ಸುರಿ' ಎರಡೂ ಮಳಿಗೆ ಹೊಂದಿರುವ ಮೊದಲನೇ ನಗರ ವಾಗಿ ಹೊರಹೊಮ್ಮಿದೆ.
ಜಾಗತಿಕ ಮಟ್ಟದಲ್ಲಿ ಮರ್ಸಿಡಿಸ್- ಮೇಬ್ಯಾಕ್ ನ ಟಾಪ್- 5 ಮಾರುಕಟ್ಟೆಗಳಲ್ಲಿ ಭಾರತ ಈಗ ಸ್ಥಾನ ಪಡೆದಿದೆ.
ಮರ್ಸಿಡಿಸ್- ಬೆಂಜ್ ಇಂಡಿಯಾ ಸಂಸ್ಥೆಯು ಅತೀ ಐಷಾರಾಮಿ 'ಮರ್ಸಿಡಿಸ್- ಮೇಬ್ಯಾಕ್ ಜಿಎಲ್ಎಸ್ 600 ಎಸ್ ಯು ವಿ' ಅನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆ 2.75 ಕೋಟಿ ರೂ. ಆಗಿದೆ (ಭಾರತದಲ್ಲಿ ಎಕ್ಸ್ ಶೋ ರೂಮ್ ಬೆಲೆ). ವಿಶೇಷವೆಂದರೆ, ಅಮೆರಿ ಕಾದ ಹೊರಗೆ ಈ ಐಷಾರಾಮಿ ಎಸ್‌ಯುವಿ ಮೊದಲ ಬಾರಿಗೆ 'ಮೇಡ್ ಇನ್ ಇಂಡಿಯಾ' ಉತ್ಪನ್ನವಾಗಿ ಹೊರಬರುತ್ತಿದೆ.
***
"ಭಾರತದ ಇನ್ನೋವೇಷನ್ ಕ್ಯಾಪಿಟಲ್ ಎಂದೇ ಖ್ಯಾತಿ ಹೊಂದಿರುವ ಬೆಂಗಳೂರು, ಉನ್ನತ ದರ್ಜೆಯ ಐಷಾರಾಮಿ ವಾಹನಗಳಿಗೆ ಯುವ ಗ್ರಾಹಕರಿಂದ ಬೇಡಿಕೆ ಹೆಚ್ಚುತ್ತಿರುವು ದರಿಂದ ಮರ್ಸಿಡಿಸ್- ಬೆಂಜ್ ಗೆ ಪ್ರಮುಖ ಮಾರುಕಟ್ಟೆಯಾಗಿ ಮುಂದುವರಿದಿದೆ.
ಬೆಂಗಳೂರಿನಲ್ಲಿ ಭಾರತದ ಎರಡನೇ 'ಮೇಬ್ಯಾಕ್ ಲಾಂಜ್' ಅನ್ನು ಉದ್ಘಾಟಿಸಿರುವುದು ಮರ್ಸಿಡಿಸ್- ಮೇಬ್ಯಾಕ್ ನಂತಹ ಅತೀ ಐಷಾರಾಮಿ ವಾಹನಗಳಿಗೆ ಇಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಎತ್ತಿ ತೋರಿಸುತ್ತದೆ. ಭಾರತದಲ್ಲಿ ಅತಿ ಹೆಚ್ಚು ಬಿಲಿಯನೇರ್'ಗಳನ್ನು ಹೊಂದಿರುವ ಮೊದಲ 3 ನಗರಗಳಲ್ಲಿ ಬೆಂಗಳೂರು ಒಂದಾಗಿ ಹೊರಹೊಮ್ಮಿದ್ದು, ಇಲ್ಲಿ ಐಷಾರಾಮಿ ವಸ್ತುಗಳ ಬಳಕೆ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ಪೂರಕವಾಗಿ ಬೆಂಗಳೂರಿ ನಲ್ಲಿ ಭಾರತದ ಅತ್ಯಂತ ಐಷಾರಾಮಿ 'ಮೇಬ್ಯಾಕ್ ಲಾಂಜ್' ಉದ್ಘಾಟಿಸುತ್ತಿರುವುದು ಸಂತೋಷ ತಂದಿದೆ.
'ವಿವಾ ಸ್ಟಾರ್' ಸಿದ್ಧಪಡಿಸಿರುವ ವಿಶ್ವದರ್ಜೆಯ ಮೂಲಸೌಕರ್ಯ ಮತ್ತು ಉನ್ನತ ಮಟ್ಟದ ಗ್ರಾಹಕ ಅನುಭವದ ಮೂಲಕ ಬೆಂಗಳೂರಿನ ಈ ಅಗಾಧ ಸಾಮರ್ಥ್ಯವನ್ನು ಸದುಪಯೋಗ ಪಡಿಸಿಕೊಳ್ಳುವುದು ಮರ್ಸಿಡಿಸ್-ಬೆಂಜ್ ನ ಗುರಿಯಾಗಿದೆ. ಈ ಐಷಾರಾಮಿ ಶೋರೂಮ್ ಮೂಲಕ ನಾವು ನಗರದಲ್ಲಿ ನಮ್ಮ ಅಸ್ತಿತ್ವವನ್ನು ಬಲಪಡಿಸುತ್ತಿದ್ದೇವೆ ಮತ್ತು ನಮ್ಮ ಘನತೆವೆತ್ತ ಗ್ರಾಹಕರಿಗೆ ಅತ್ಯುತ್ತಮ ಐಷಾರಾಮಿ ಅನುಭವವನ್ನು ನೀಡುವ ವಿಶ್ವಾಸ ಹೊಂದಿದ್ದೇವೆ." - ಸಂತೋಷ್ ಅಯ್ಯರ್, ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಓ, ಮರ್ಸಿಡಿಸ್- ಬೆಂಜ್ ಇಂಡಿಯಾ
***
ವಿವಾ ಸ್ಟಾರ್ ಬೆಂಗಳೂರಿನಲ್ಲಿ ಹೊಸ ಅದ್ದೂರಿ, ಅತ್ಯಾಧುನಿಕ ಮಾರಾಟ ಮತ್ತು ಸೇವಾ ಘಟಕವನ್ನು ಉದ್ಘಾಟಿಸಿದ್ದು, ಇದು ಕರ್ನಾಟಕದಲ್ಲಿ ಮರ್ಸಿಡಿಸ್- ಬೆಂಜ್ ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸಿದೆ.
ಈ ಶೋರೂಮ್ ಕರ್ನಾಟಕದ ಮೊದಲ 'ಮೇಬ್ಯಾಕ್ ಲಾಂಜ್' ಆಗಿದ್ದು, ಇದರೊಂದಿಗೆ ಇಲ್ಲಿ ನವೀನವಾದ 'ಮೇಬ್ಯಾಕ್ ರಿಟೇಲ್ ಕಿಟ್' ಒದಗಿಸಲಾಗುತ್ತಿದೆ ಮತ್ತು ಐಷಾರಾಮಿ ಸಮಾಲೋಚನೆಗಾಗಿ ಪ್ರತ್ಯೇಕ ಸ್ಥಳಾವಕಾಶಗಳನ್ನು ಕಲ್ಪಿಸಲಾಗಿದೆ.
ಸುಮಾರು 200 ಮಿಲಿಯನ್ ರೂಪಾಯಿ (20 ಕೋಟಿ ರೂ.) ಹೂಡಿಕೆಯೊಂದಿಗೆ ನಿರ್ಮಾಣ ವಾಗಿರುವ ವಿವಾ ಸ್ಟಾರ್ ಶೋರೂಮ್ ಅನ್ನು ಕೇವಲ 5 ತಿಂಗಳ ದಾಖಲೆ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ. ಇದು ಗ್ರಾಹಕರಿಗೆ ಮರ್ಸಿಡಿಸ್- ಬೆಂಜ್ ನೀಡುವ ಸಂಸ್ಥೆಯ ಆದ್ಯತೆಯನ್ನು ತೋರಿಸುತ್ತದೆ.
ವಿವಾ ಸ್ಟಾರ್ ದಕ್ಷಿಣ ಬೆಂಗಳೂರಿನ ಅತ್ಯುತ್ತಮ ಬೇಡಿಕೆಯ ಪ್ರದೇಶದಲ್ಲಿ ನಿರ್ಮಾಣ ವಾಗಿದ್ದು, ಗ್ರಾಹಕರಿಗೆ ಉತ್ತಮ ಸಂಪರ್ಕ ವ್ಯವಸ್ಥೆ ಹೊಂದಿದೆ.
ಈ ಐಷಾರಾಮಿ ಮಾರಾಟ ಘಟಕವು ನಾಲ್ಕು ಅಂತಸ್ತುಗಳಲ್ಲಿ ಸಿದ್ಧಗೊಂಡಿದ್ದು, ಒಟ್ಟು 10,400 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.
ಹೊಸ ಮಾರಾಟ ಮಳಿಗೆಯಲ್ಲಿ 6 ಕಾರುಗಳ ಪ್ರದರ್ಶನಕ್ಕೆ ಅವಕಾಶವಿದ್ದು, 1 ಡೆಲಿವರಿ ಬೇ (ವಿತರಣಾ ಸ್ಥಳ) ವ್ಯವಸ್ಥೆ ಇದೆ.
ಮಾರಾಟ ನಂತರದ ಸೇವಾ ಘಟಕವು 16,600 ಚದರ ಅಡಿ ವಿಸ್ತೀರ್ಣ ಹೊಂದಿದ್ದು, 18 ವರ್ಕಿಂಗ್ ಬೇಗಳು ಮತ್ತು ಅತ್ಯಾಧುನಿಕ ಸೇವಾ ಮೂಲಸೌಕರ್ಯಗಳನ್ನು ಒಳಗೊಂಡಿದೆ.
ಮಾರಾಟ ವಿಭಾಗವು 60 ಕೆಡಬ್ಲೂ ಸಾಮರ್ಥ್ಯದ ಪಾಸ್ಟ್ ಚಾರ್ಜರ್ ಹೊಂದಿದ್ದರೆ, ವಿವಾ ಸ್ಟಾರ್ ನ ಸೇವಾ ವಿಭಾಗವು 180 ಕೆಡಬ್ಲ್ಯೂ ಸಾಮರ್ಥ್ಯದ ಫಾಸ್ಟ್ ಚಾರ್ಜರ್ ಅನ್ನು ಹೊಂದಿದೆ. ಇದು ಬಿಇವಿ ಗ್ರಾಹಕರಿಗೆ ಹೆಚ್ಚಿನ ಅನುಕೂಲ ನೀಡಲಿದೆ.
ಮುಖ್ಯಾಂಶಗಳು: ಪ್ರತ್ಯೇಕ ಗ್ರಾಹಕ ಲಾಂಜ್, ಖಾಸಗಿ ಮತ್ತು ಅರೆ- ಖಾಸಗಿ ಸಮಾ ಲೋಚನಾ ಸ್ಥಳಗಳು. ಆಕರ್ಷಕವಾದ ಹಾಸ್ಪಿಟಾಲಿಟಿ ಕೌಂಟರ್, ಅಕ್ಸೆಸರೀಸ್ ಮತ್ತು ಬೊಟಿಕ್ ವಸ್ತುಗಳ ಪ್ರದರ್ಶನಕ್ಕಾಗಿ 'ಶಾಪ್ ವಾಲ್' ಲಭ್ಯವಿದೆ. ವಿಶೇಷ ವಾಹನ ವಿತರಣೆ ಸಂದರ್ಭಗಳಿಗೆ 'ಕೀ ಪ್ರೆಸೆಂಟರ್' ಲಾಂಜ್ ಮತ್ತು ಚಾಲಕರಿಗಾಗಿ ಪ್ರತ್ಯೇಕ ಲಾಂಜ್ ವ್ಯವಸ್ಥೆ ಇದೆ.
ಮರ್ಸಿಡಿಸ್ ಬೆಂಜ್ 2026 ರಲ್ಲಿ 3 ನಗರಗಳಲ್ಲಿ 20 ಹೊಸ ಲಕ್ಸುರಿ ಟಚ್ ಪಾಯಿಂಟ್ ಗಳನ್ನು ಉದ್ಘಾಟಿಸಲಿದ್ದು, ಅದರಲ್ಲಿ ಹೊಸ ಡೀಲರ್ ಶಿಪ್ ಮತ್ತು ಈಗಾಗಲೇ ಇರುವ ಡೀಲರ್ ಶಿಪ್ ಗಳ ಆಧುನೀಕರಣ ಸೇರಿದೆ.