ಬೆಂಗಳೂರು: ವಾಧ್ವಾನಿ ಫೌಂಡೇಶನ್ ಬೆಂಗಳೂರಿನಲ್ಲಿ ಒಂದು ಮುಚ್ಚಿದ ಬಾಗಿಲಿನ CHRO ರೌಂಡ್‌ಟೇಬಲ್ ಸಭೆಯನ್ನು ಆಯೋಜಿಸಿತು, ಇದರಲ್ಲಿ ಹಿರಿಯ ಮಾನವ ಸಂಪನ್ಮೂಲ ನಾಯಕರು ಭಾಗವಹಿಸಿ ಭಾರತದ ಅಭಿವೃದ್ಧಿಯ ಕಥೆಯಲ್ಲಿ ಇರುವ ಒಂದು ಪ್ರಮುಖ ಅಂತರವನ್ನು ಚರ್ಚಿಸಿದರು: ಉದ್ಯೋಗಗಳು ಸೃಷ್ಟಿಯಾಗುತ್ತಿದೆಯಾದರೂ, ಸ್ಥಳೀಯ ಪ್ರತಿಭೆಗಳು ಅವನ್ನು ಭರ್ತಿಮಾಡಲು ಅಗತ್ಯವಾದ ಉದ್ಯೋಗ ಸಿದ್ಧತೆಯನ್ನು ಹೊಂದಿಲ್ಲ.
ಅಮೆರಿಕನ್ ಮ್ಯಾನೇಜ್ಮೆಂಟ್ ಅಸೋಸಿಯೇಶನ್ (AMA) ದಕ್ಷಿಣ ಏಷ್ಯಾ CHRO ಫೋರಂನ ಭಾಗವಾಗಿ, ದಿ ಚಾನ್ಸರಿ ಹೋಟೆಲ್‌ನಲ್ಲಿ ಈ ಸಭೆ ನಡೆಯಿತು. ಈ ಸೆಷನ್‌ಗೆ ವಾಧ್ವಾನಿ ಫೌಂಡೇಶನ್‌ನ ಗ್ಲೋಬಲ್ ಸ್ಕಿಲ್ಲಿಂಗ್ ಅಧ್ಯಕ್ಷ ಗೋಪಾಲ್ ದೇವನಹಳ್ಳಿ ಮತ್ತು ಎಂಟರ್ ಪ್ರೈಸ್ ಎಂಪ್ಲಾಯರ್ ರಿಲೇಶನ್‌ಶಿಪ್ ನಿರ್ದೇಶಕ ಕೌಶಲ್ ಮಹಾಮಿಯಾ ನೇತೃತ್ವ ನೀಡಿದರು.
SKF ಇಂಡಿಯಾ, ಬಯೋಕಾನ್, ಸಿಂಜೀನ್ ಇಂಟರ್‌ನ್ಯಾಷನಲ್, ಏಸರ್, ಇನ್‌ಬ್ರ್ಯೂ ಬೆವರೆಜಸ್ ಮತ್ತು ಹೆಲ್ತ್‌ಅಸಿಸ್ಟ್ ಸಂಸ್ಥೆಗಳ ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿದರು.
ಇದನ್ನೂ ಓದಿ: Bangalore News: ಸೈಬರ್ ಸುರಕ್ಷತೆಗೆ ಸಂಬಂಧಿಸಿದ ಶ್ರೇಷ್ಠತಾ ಕೇಂದ್ರದ (ಸೈಸೆಕ್) ವಾರ್ಷಿಕ ವರದಿಯಲ್ಲಿ ನೀಡಿರುವ ಎಚ್ಚರಿಕೆ
HR ನಾಯಕರು ಉದ್ಯೋಗ ಸೃಷ್ಟಿ ಮತ್ತು ಉದ್ಯೋಗಕ್ಕೆ ಅಗತ್ಯವಾದ ಸಿದ್ಧತೆ ನಡುವಿನ ಸ್ಪಷ್ಟ ಅಂತರವನ್ನು ಸೂಚಿಸಿದರು. ಹೊಸ ಪದವೀಧರರು ಸಂವಹನ ಮತ್ತು ಜವಾಬ್ದಾರಿ ತನದಂತಹ ಮೂಲಭೂತ ಕಾರ್ಯಸ್ಥಳ ಕೌಶಲ್ಯಗಳನ್ನು ಹೊಂದಿಲ್ಲ, ಜೊತೆಗೆ ಪ್ರಮಾಣ ಪತ್ರಗಳು ಕೋರ್ಸ್ ಪೂರ್ಣಗೊಳಿಸಿರುವುದನ್ನು ಮಾತ್ರ ಸೂಚಿಸುತ್ತವೆ—ನಿರ್ದಿಷ್ಟ ಕೆಲಸ ಗಳಿಗೆ ಸಿದ್ಧತೆ ಎನ್ನುವುದನ್ನು ಅಲ್ಲ.
ಮೊದಲ 12 ತಿಂಗಳಲ್ಲಿ ಉದ್ಯೋಗ ತೊರೆಯುವ ಪ್ರಮಾಣ ಹೆಚ್ಚಾಗಿದ್ದು, ಬದಲಾವಣೆ ವೆಚ್ಚವು ವಾರ್ಷಿಕ ವೇತನದ 1–2 ಪಟ್ಟು ಇದೆ. ಉದ್ಯೋಗದಾತರು ಪ್ರತಿಯೊಂದು ನೇಮ ಕಾತಿಗೆ ₹20,000 ಕ್ಕಿಂತ ಹೆಚ್ಚು ಹಣವನ್ನು ಪುನಃ ತರಬೇತಿಗೆ ಖರ್ಚು ಮಾಡುತ್ತಿದ್ದಾರೆ. ಇದರ ಮೂಲ ಕಾರಣವೆಂದರೆ ಸಂಸ್ಥೆಗಳು ಮತ್ತು ಉದ್ಯೋಗದಾತರು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ವಿಭಜಿತ ವ್ಯವಸ್ಥೆ; ವಿದ್ಯಾರ್ಥಿಗಳು ಉದ್ಯೋಗ ಕ್ಷೇತ್ರಕ್ಕೆ ಪ್ರವೇಶಿಸುವ ಮೊದಲು ಬೇಡಿಕೆಯ ಸೂಚನೆ ನೀಡಲು ಯಾವುದೇ ಸಂರಚಿತ ವ್ಯವಸ್ಥೆ ಇಲ್ಲ.
ಈ ಚರ್ಚೆ ಒಂದು ಬಲವಾದ ಪರಿಸರ ವ್ಯವಸ್ಥೆ (ecosystem) ಎಂದರೆ ಕೇವಲ ಉದ್ಯೋಗ ಗಳನ್ನು ಸೃಷ್ಟಿಸುವುದಷ್ಟೇ ಅಲ್ಲ, ಅವುಗಳನ್ನು ಸ್ಥಳೀಯವಾಗಿ ಭರ್ತಿ ಮಾಡುವುದೂ ಅಷ್ಟೇ ಮುಖ್ಯವೆಂಬುದನ್ನು ಒತ್ತಿಹೇಳಿತು. ಸ್ಥಳೀಯ ಪ್ರತಿಭೆಗಳು ಸ್ಥಳೀಯ ಬೇಡಿಕೆಗೆ ಹೊಂದಿಕೊಂಡಾಗ, ವ್ಯವಹಾರಗಳು ವೇಗವಾಗಿ ವಿಸ್ತರಿಸುತ್ತವೆ, ವೆಚ್ಚಗಳು ಕಡಿಮೆ ಯಾಗುತ್ತವೆ, ಉದ್ಯೋಗ ತೊರೆಯುವ ಪ್ರಮಾಣ ಇಳಿಕೆಯಾಗುತ್ತದೆ, ಮತ್ತು ಆರ್ಥಿಕ ಮೌಲ್ಯವು ಅದೇ ಪರಿಸರ ವ್ಯವಸ್ಥೆಯೊಳಗೆ ಉಳಿಯುತ್ತದೆ.
ವಾಧ್ವಾನಿ ಫೌಂಡೇಶನ್ ತನ್ನ ಹೈಪರ್-ಲೋಕಲ್ ಟಾಲೆಂಟ್ ಎಕೋಸಿಸ್ಟಂ ಮಾದರಿ ಯನ್ನು ಪರಿಚಯಿಸಿತು. ಇದು ಬೇಡಿಕೆ ಆಧಾರಿತ (demand-first) ವಿಧಾನವಾಗಿದ್ದು, ಉದ್ಯೋಗದಾತರು ತಮ್ಮ ನೇಮಕಾತಿ ಅಗತ್ಯಗಳನ್ನು ಮುಂಚಿತವಾಗಿ ನಿರ್ಧರಿಸುತ್ತಾರೆ, ತರಬೇತಿ ನೈಜ ಉದ್ಯೋಗ ಪಾತ್ರಗಳಿಗೆ ಹೊಂದಿಕೊಳ್ಳುತ್ತದೆ, ಮತ್ತು ಅಭ್ಯರ್ಥಿಗಳನ್ನು “ಸ್ಕಿಲ್ ಸ್ಕೋರ್‌ಕಾರ್ಡ್” ಮೂಲಕ ಪೂರ್ವ ಮೌಲ್ಯಮಾಪನ ಮಾಡಲಾಗುತ್ತದೆ.
ನೇಮಕಾತಿಯ ನಂತರ JobRise ಮೂಲಕ ನೀಡುವ ಬೆಂಬಲವು ಉದ್ಯೋಗದಲ್ಲಿ ಉಳಿಕೆ (retention) ಮತ್ತು ಉತ್ಪಾದಕತೆಯನ್ನು ಹೆಚ್ಚಿಸುತ್ತದೆ. ಈ ಮಾದರಿ, ಉದ್ಯೋಗದಾತರ ಬೇಡಿಕೆಗೆ ನೇರವಾಗಿ ಹೊಂದಿಕೊಳ್ಳುವಂತೆ ಸ್ಥಳೀಯವಾಗಿ ಸಿದ್ಧವಾಗಿರುವ ಉದ್ಯೋಗ ಯೋಗ್ಯ ಪ್ರತಿಭೆಗಳ ಪೈಪ್‌ಲೈನ್ ಅನ್ನು ನಿರ್ಮಿಸುತ್ತದೆ. ಈ ಎಲ್ಲಾ ಕಾರ್ಯಕ್ರಮಗಳು ಉದ್ಯೋಗದಾತರು, ಶಿಕ್ಷಣ ಸಂಸ್ಥೆಗಳು ಮತ್ತು ಕಲಿಯುವವರಿಗಾಗಿ ಉಚಿತವಾಗಿವೆ.