ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jatin Hukkeri: ರನ್ಯಾ ರಾವ್ ಪತಿ ಜತಿನ್‌ ಹುಕ್ಕೇರಿ ವಿರುದ್ಧವೂ ತನಿಖೆ; ಯಾರೀತ? ಏನಿವರ ಪಾತ್ರ?

ದುಬೈನಿಂದ ಬೆಂಗಳೂರಿಗೆ ಬರೋಬ್ಬರಿ 14 ಕೆಜಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್‌ ಬಂಧನಕ್ಕೊಳಗಾಗಿದ್ದು, ಇದೀಗ ತನಿಖೆಯನ್ನು ಅವರ ಪತಿ ಜತಿನ್‌ ಹುಕ್ಕೇರಿ ಕಡೆಗೆ ವಿಸ್ತರಿಸಲಾಗಿದೆ. ಇವರು ಕೂಡ ರನ್ಯಾ ಜತೆಗೆ ಪದೇ ಪದೆ ದುಬೈಗೆ ತೆರಳಿರುವುದು ಕಂಡು ಬಂದಿದ್ದು ಅನುಮಾನಕ್ಕೆ ಕಾರಣವಾಗಿದೆ.

ರನ್ಯಾ ರಾವ್ ಪತಿ ಜತಿನ್‌ ಹುಕ್ಕೇರಿ ವಿರುದ್ಧವೂ ತನಿಖೆ

ಜತಿನ್‌ ಹುಕ್ಕೇರಿ ಮತ್ತು ರನ್ಯಾ ರಾವ್‌.

Profile Ramesh B Mar 6, 2025 5:29 PM

ಬೆಂಗಳೂರು: ದುಬೈನಿಂದ ಬೆಂಗಳೂರಿಗೆ ಬರೋಬ್ಬರಿ 14 ಕೆಜಿ ಚಿನ್ನ ಕಳ್ಳಸಾಗಣೆ (Gold Smuggling) ಮಾಡುತ್ತಿದ್ದ ಸ್ಯಾಂಡಲ್‌ವುಡ್‌ ನಟಿ ರನ್ಯಾ ರಾವ್‌ (Ranya Rao) ಬಂಧನಕ್ಕೊಳಗಾಗಿದ್ದು, ಈಗಾಗಲೇ 14 ದಿನಗಳ ನ್ಯಾಯಾಂಗ ಬಂಧನ (Judicial Custody) ವಿಧಿಸಲಾಗಿದೆ. ರಾಜ್ಯದಲ್ಲಿ ಬೆಳಕಿಗೆ ಬಂದ ಅತೀ ದೊಡ್ಡ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಇದೂ ಕೂಡ ಒಂದಾಗಿದ್ದು, ತನಿಖೆಯನ್ನು ಸದ್ಯ ಪೊಲೀಸರು ರನ್ಯಾ ಪತಿ ಜತಿನ್‌ ಹುಕ್ಕೇರಿ (Jatin Hukkeri) ಕಡೆಗೆ ವಿಸ್ತರಿಸಿದ್ದಾರೆ. ಇವರು ಕೂಡ ರನ್ಯಾ ಜತೆಗೆ ಪದೇ ಪದೆ ದುಬೈಗೆ ತೆರಳಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಇವರ ಪಾತ್ರವೇನು ಎನ್ನುವ ಬಗ್ಗೆ ಪರಿಶೀಲಿಸಲಾಗುತ್ತಿದೆ. ಹಾಗಾದರೆ ಯಾರು ಈ ಜತಿನ್‌ ಹುಕ್ಕೇರಿ? ಈತನ ಹಿನ್ನೆಲೆ ಏನು? ಇಲ್ಲಿದೆ ವಿವರ.

4 ತಿಂಗಳ ಹಿಂದೆ ರನ್ಯಾ ಮತ್ತು ಜತಿನ್‌ ವಿವಾಹ ಅದ್ಧೂರಿಯಾಗಿ ಬೆಂಗಳೂರಿನ ತಾಜ್‌ ವೆಸ್ಟ್‌ ಎಂಡ್‌ ಹೋಟೆಲ್‌ನಲ್ಲಿ ನಡೆದಿತ್ತು. ಬಳಿಕ ಇವರು ಬೆಂಗಳೂರಿನ ಐಷರಾಮಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು.

ಯಾರು ಈ ಜತಿನ್‌ ಹುಕ್ಕೇರಿ?

ಬೆಂಗಳೂರು ಮೂಲದ ಜತಿನ್‌ ವೃತ್ತಿಯಲ್ಲಿ ವಾಸ್ತುಶಿಲ್ಪಿ (Architect). ಬೆಂಗಳೂರಿನ ಆರ್‌.ವಿ. ಎಂಜಿನಿಯರಿಂಗ್‌ ಕಾಲೇಜಿನಿಂದ ವಾಸ್ತುಶಿಲ್ಪ ಮತ್ತು ಒಳಾಂಗಣ ವಿನ್ಯಾಸದಲ್ಲಿ ಬ್ಯಾಚುಲರ್‌ ಆಫ್‌ ಆರ್ಕಿಟೆಕ್ಟರ್‌ ಪದವಿ ಪಡೆದಿದ್ದಾರೆ. ನಂತರ ಲಂಡನ್‌ನ ರಾಯಲ್‌ ಕಾಲೇಜ್‌ ಆಫ್‌ ಆರ್ಟ್‌ನಲ್ಲಿ ಎಕ್ಸಿಕ್ಯುಟಿವ್‌ ಎಜುಕೇಶನ್‌ನಲ್ಲಿ ಶಿಕ್ಷಣ ಹೊಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Ranya Rao: ಆಕೆ ನಮ್ಮ ಜೊತೆಗಿಲ್ಲ, ನನ್ನ ಕೆರಿಯರ್‌ನಲ್ಲಿ ಕಪ್ಪು ಚುಕ್ಕಿ ಇಲ್ಲ: ರನ್ಯಾ ರಾವ್‌ ತಂದೆ

ಜತಿನ್‌ ಆರಂಭದಲ್ಲಿ ಬೆಂಗಳೂರಿನ ರೆಸ್ಟೋರೆಂಟ್‌ ಉದ್ಯಮದಲ್ಲಿ ತೊಡಗಿಸಿಕೊಂಡು ನಾವಿನ್ಯ ವಿನ್ಯಾಸದ ಮೂಲಕ ಗಮನ ಸೆಳೆದರು. ಬಳಿಕ ಭಾರತಾದ್ಯಂತ ಮತ್ತು ಲಂಡನ್‌ನಲ್ಲಿಯೂ ಪ್ರಭಾವ ಬೀರಿದ್ದಾರೆ.

"ಜತಿನ್‌ ಹಾಸ್ಪಿಟಾಲಿಟಿ, ಆರ್ಕಿಟೆಕ್ಚರ್ ಮತ್ತು ಯೋಜನಾ ಉದ್ಯಮದಲ್ಲಿ ಅನುಭವ ಹೊಂದಿರುವ ವಾಸ್ತುಶಿಲ್ಪಿ. ಒಳಾಂಗಣ, ಕಸ್ಟಮ್ ಒಳಾಂಗಣದಲ್ಲಿ ಪರಿಣತಿ ಹೊಂದಿದ್ದಾರೆ. ಲಂಡನ್‌ನ ರಾಯಲ್ ಕಾಲೇಜ್ ಆಫ್ ಆರ್ಟ್‌ನಿಂದ ಪದವಿ ಪಡೆದಿದ್ದಾರೆ" ಎಂದು ಅವರ ಲಿಂಕ್ಡ್ಇನ್ ಪೇಜ್‌ನಲ್ಲಿ ವಿವರಿಸಲಾಗಿದೆ. ಬೆಂಗಳೂರಿನ ಕಾಕ್‌ಟೇಲ್‌ ಬಾರ್ ಮತ್ತು ಡೈನರ್ ಹ್ಯಾಂಗೋವರ್ ಅವರ ಪ್ರಮುಖ ಯೋಜನೆಗಳಲ್ಲಿ ಒಂದು. ಅದರ ಸರಳ ಮತ್ತು ನವೀನ ವಿನ್ಯಾಸ ಗಮನ ಸೆಳೆಯುವಂತಿದೆ. ಮುಂಬೈ, ದಿಲ್ಲಿಯಲ್ಲಿಯೂ ಇವರು ಪ್ರಾಜೆಕ್ಟ್‌ ಕೈಗೊಂಡಿದ್ದಾರೆ. ರನ್ಯಾ ಜತೆಗೆ ಇವರು ಯಾವ ರೀತಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಬಗ್ಗೆ ಸದ್ಯ ತನಿಖೆ ನಡೆಸಲಾಗುತ್ತಿದೆ.

ರನ್ಯಾ 15 ದಿನಗಳಲ್ಲಿ 4 ಬಾರಿ ಗಲ್ಫ್ ದೇಶಕ್ಕೆ ಹೋಗಿ ಬಂದಿರುವುದನ್ನು ಗಮನಿಸಿದ ಡಿಆರ್‌ಐ ಅಧಿಕಾರಿಗಳು ಈ ಬಗ್ಗೆ ತನಿಖೆ ಕೈಗೊಂಡ ವೇಳೆ ಚಿನ್ನದ ಅಕ್ರಮ ಸಾಗಾಣೆ ಬೆಳಕಿಗೆ ಬಂದಿತ್ತು. ಪರಿಶೀಲನೆ ವೇಳೆ ಅವರ ಮನೆಯಿಂದ ಅಧಿಕಾರಿಗಳು 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು 2.67 ಕೋಟಿ ರೂ. ನಗದು ವಶಪಡಿಸಿಕೊಂಡಿದ್ದಾರೆ. ಇನ್ನು ಈ ಪ್ರಕರಣದಲ್ಲಿ ಒಟ್ಟು 17.29 ಕೋಟಿ ರೂ. ಜಪ್ತಿ ಮಾಡಲಾಗಿದೆ.