ಬೆಂಗಳೂರು, ಡಿ.30: ಮನೆಯಲ್ಲಿ ಬೆತ್ತಲೆಯಾಗಿ ಓಡಾಡುವುದು, ಪೋನ್‌ನಲ್ಲಿ ಅಶ್ಲೀಲ ವಿಡಿಯೊ ತೋರಿಸಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಗಂಡನ ವಿರುದ್ಧ ಪತ್ನಿ ದೂರು ದಾಖಲಿಸಿರುವುದು ನಗರದಲ್ಲಿ (Bengaluru News) ನಡೆದಿದೆ. ಸೈಕೋ ಪತಿಯ ವಿಚಿತ್ರ ವರ್ತನೆ, ಕಿರುಕುಳಕ್ಕೆ ಬೇಸತ್ತು ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮಂಜುನಾಥ್ ಎಂಬಾತನ ವಿರುದ್ಧ ಪತ್ನಿ ದೂರು ನೀಡಿದ್ದಾಳೆ.
ಈ ದಂಪತಿ ಒಂದೇ ಖಾಸಗಿ ಕಂಪನಿಯಲ್ಲಿ ಸಹೋದ್ಯೋಗಿಗಳು. ಇಬ್ಬರ ಪರಿಚಯ ಬಳಿಕ ಪ್ರೀತಿಗೆ ತಿರುಗಿತ್ತು. ಯುವತಿಯನ್ನು ಪ್ರೀತಿಸಿದ್ದ ಆತ ಆಕೆಯ ಮನೆಯವರನ್ನೂ ಒಪ್ಪಿಸಿದ್ದ. ಬಳಿಕ 2025ರ ಸೆಪ್ಟೆಂಬರ್ 3ರಂದು ಚಿಂತಾಮಣಿಯಲ್ಲಿ ವಿವಾಹ ನಡೆದಿತ್ತು. ಮದುವೆಯಾಗಿ ಕೆಲ ದಿನಗಳು ಚೆನ್ನಾಗಿಯೇ ಇದ್ದ ಪತಿ ಮಂಜುನಾಥ್ ಈಗ ಸೈಕೋ ರೀತಿ ವರ್ತಿಸುತ್ತಿರುವುದನ್ನು ಕಂಡು ಪತ್ನಿ ಬೆಚ್ಚಿಬಿದ್ದಿದ್ದಾಳೆ.
ಫೋನ್‌ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಿಸಿ, ಅದೇ ರೀತಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡುತ್ತಾನೆ. ಮನೆಯಲ್ಲಿ ಎಲ್ಲರ ಮುಂದೆ ಬೆತ್ತಲೆಯಾಗಿ ಓಡಾಡುತ್ತಾನೆ. ಅತ್ತೆ ಮಾವನ ಮುಂದೆಯೇ ಬಟ್ಟೆಯಿಲ್ಲದೆ ಓಡಾಡುವುದಲ್ಲದೆ ಪ್ಯಾಸೇಜ್ಗೆ ಕೂಡ ಹೋಗಿ ಅಕ್ಕ ಪಕ್ಕದವರಿಗೂ ಮುಜುಗರ ಉಂಟುಮಾಡುತ್ತಾನೆ ಎಂದು ಪತ್ನಿ ಆರೋಪಿಸಿದ್ದಾಳೆ.
ತನಗೆ ಅವಾಚ್ಯ ಶಬ್ದಗಳಿಂದ ಬೈದು ದೈಹಿಕ ಮತ್ತು ಮಾನಸಿಕವಾಗಿ ಹಿಂಸೆಕೊಟ್ಟಿದ್ದ ಗಂಡ ಮಂಜುನಾಥ್ ಮನೆ ಬಿಟ್ಟು ಹೋಗಿದ್ದ. ಬಳಿಕ ಮತ್ತೆ ಮನೆ ಬಳಿ ಬಂದ ಆತ, ತನಗೆ ಮತ್ತು ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಹಲ್ಲೆಗೂ ಯತ್ನಿಸಿದ್ದಾನೆ. ಆತನ ಈ ಕೃತ್ಯಕ್ಕೆ ಅತ್ತೆ ಮತ್ತು ಮಾವ ಕೂಡ ಬೆಂಬಲ ನೀಡುತ್ತಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಈ ಬಗ್ಗೆ ಕೇಂದ್ರ ವಿಭಾಗದ ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಗ್ಯಾಸ್ ಗೀಸರ್ ಸೋರಿಕೆಯಿಂದ ಉಸಿರುಗಟ್ಟಿ ಯುವತಿ ಸಾವು
ಚಿತ್ರದುರ್ಗ: ಚಿತ್ರದುರ್ಗದಲ್ಲಿ ಘೋರ ದುರಂತವೊಂದು ನಡೆದಿದೆ. ಗ್ಯಾಸ್ ಗೀಸರ್ ಸೋರಿಕೆಯಿಂದ ಉಸಿರುಗಟ್ಟಿ ಯುವತಿ ಮೃತಪಟ್ಟಿರುವ ಘಟನೆ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಿಎಸ್‌ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ನೂತನ (20) ಮೃತ ವಿದ್ಯಾರ್ಥಿನಿ. ವೈದ್ಯರು ಸಾವು ಖಚಿತ ಪಡಿಸಿ ಶವಾಗಾರಕ್ಕೆ ಸ್ಥಳಾಂತರಿಸಲು ಯತ್ನಿಸಿದ್ದಾರೆ. ಆದರೆ, ಪೋಷಕರು ಪೋಸ್ಟ್ ಮಾರ್ಟಂ ಬೇಡ ಎಂದು ಮೃತದೇಹವನ್ನು ಅಂತ್ಯ ಸಂಸ್ಕಾರಕ್ಕೆ ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿದುಬಂದಿದೆ.