ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಕ್ರಮದಲ್ಲಿ ಪಾತ್ರವಿದ್ದರೆ ರಾಜಕೀಯ ನಿವೃತ್ತಿ, ಬಿಜೆಪಿ-ಜೆಡಿಎಸ್‌ ಪಾತ್ರವಿದ್ದರೆ ಎಚ್‌ʼಡಿಕೆ ನಿವೃತ್ತಿ ಘೋಷಿಸುವರೇ ?: ಖರ್ಗೆ

ಪಟ್ಟಿ ರದ್ದು ಅಧಿಕಾರ ಕೆಪಿಎಸ್‌ಸಿ ನೀಡಿದ ಅಂತಿಮ ಆಯ್ಕೆ ಪಟ್ಟಿಯ ಆಧಾರದ ಮೇಲೆ 2025ರ ಜನವರಿ 22ರಂದು ವಿಶ್ವನಾಥ್ ಎಂಬುವರಿಗೆ ಕೊನೆಯ ನೇಮಕಾತಿ ಆದೇಶ ನೀಡಲಾಯಿತು. ಇದರ ಮರುದಿನವೇ ಐದು ಸದಸ್ಯರ ಸಮಿತಿ ಅಂದಿನ ಮುಖ್ಯಮಂತ್ರಿಗೆ ವರದಿ ಸಲ್ಲಿಸಿತ್ತು. ನೇಮಕಾತಿಯಲ್ಲಿ ಲೋಪಗಳಾಗಿದ್ದರೆ ಆಯ್ಕೆ ಪಟ್ಟಿಯನ್ನು ತಡೆ ಹಿಡಿಯಲು ಅಥವಾ ರದ್ದುಗೊಳಿಸಲು ಕೆಪಿಎಸ್‌ಸಿಗೆ ಅಧಿಕಾರವಿದೆ. ಆದರೆ, ಅಂತಹ ಕ್ರಮ ಕೈಗೊಂಡಿರಲಿಲ್ಲ

ಬೆಂಗಳೂರು: ಕೆಪಿಎಸ್‌ಸಿ ನೇಮಕ ಹಗರಣದಲ್ಲಿ ತಮ್ಮ ನೇರ ಅಥವಾ ಪರೋಕ್ಷ ಪಾತ್ರ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಎಂಆರ್ ಶೀಟ್ ತಿದ್ದುಪಡಿ ವಿಚಾರ ದಲ್ಲಿ ತಮ್ಮ ವಿರುದ್ಧ ಆರೋಪ ಮಾಡಲಾಗುತ್ತಿದೆ. ಒಎಂಆರ್ ಶೀಟ್‌ಗಳು ಸಚಿವರು ಅಥವಾ ಸರಕಾರದ ಇಲಾಖಾ ಕಾರ್ಯದರ್ಶಿಗಳ ಅಧೀನದಲ್ಲಿರುತ್ತವೆಯೇ ಎಂಬುದು ಮಾಜಿ ಸಿಎಂಗೆ ಗೊತ್ತಿಲ್ಲವೇ? ಕೆಪಿಎಸ್‌ಸಿಯ ಅಧೀನದಲ್ಲಿರುವ ಒಎಂಆರ್ ಶೀಟ್‌ಗಳಲ್ಲಿ ಅಕ್ರಮ ನಡೆದಿದ್ದರೆ ಅದಕ್ಕೆ ಸಚಿವರು ಹೇಗೆ ಹೊಣೆಯಾಗುತ್ತಾರೆ? ಎಂಜಿನಿಯರ್ ನೇಮಕಾತಿಯಲ್ಲಿ ನಡೆದಿರುವ ಲೋಪಗಳೇನು ಎಂಬುದನ್ನು ಕುಮಾರಸ್ವಾಮಿ ಅವರು ದಾಖಲೆಗಳ ಸಹಿತ ಹೇಳದೆ ಮನಸೋ ಇಚ್ಛೆ ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಕೇಂದ್ರ ಸಚಿವರ ಘನತೆಗೆ ಇದು ತಕ್ಕದ್ದಲ್ಲ. ನಮಗೂ ಮಾತನಾಡಲು ಬರುತ್ತದೆ. ರಾಜಕೀಯವಾಗಿ ದೊಡ್ಡ ಇತಿಹಾಸವಿರುವ ಕುಟುಂಬದ ಹಿನ್ನೆಲೆಯಿದ್ದಾರೆ ಎಂಬ ಕಾರಣಕ್ಕೆ ನಾವು ಸುಮ್ಮನಿದ್ದೇವೆ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: Priyank Kharge: ಪ್ರೇಕ್ಷಕರು ಬದಲಾದಾಗ ಭಾಷೆಯಲ್ಲೂ ಬದಲಾವಣೆ; ಮೋಹನ್ ಭಾಗವತ್ ಅಮೆರಿಕ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಸರಕಾರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸುವುದು, ಪರೀಕ್ಷೆ ನಡೆಸುವುದು, ತಾತ್ಕಾಲಿಕ ಹಾಗೂ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸುವುದು ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಕೆಪಿಎಸ್‌ಸಿ ನಿರ್ವ ಹಿಸುತ್ತದೆ. ಈ ಹಿಂದೆ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಿದಾಗ ಆನಂದ ಸಿದ್ದರೆಡ್ಡಿ ಎಂಬುವರು ಆಕ್ಷೇಪಣೆ ಸಲ್ಲಿಸಿದ್ದರು. ಈ ಕುರಿತು ತನಿಖೆ ನಡೆಸಲು ಕೆಪಿಎಸ್‌ಸಿ ಡಾ. ಶಾಂತ ಹೊಸಮನಿ, ಗೀತಾ ಹಾಗೂ ಮುಸ್ತಾಫ್ ಹುಸೈನ್ ಅವರನ್ನೊಳಗೊಂಡ ಮೂರು ಸದಸ್ಯರ ಸಮಿತಿ ರಚಿಸಿತ್ತು.

ಉಪ ಸಮಿತಿಯ ತನಿಖೆ ನಡೆಯುತ್ತಿರುವಾಗಲೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಅಂತಿಮ ಆಯ್ಕೆ ಪಟ್ಟಿಯನ್ನು ಕಳುಹಿಸಲಾಗಿತ್ತು. ನಂತರ ಮೂರು ಸದಸ್ಯರ ಸಮಿತಿ ಯನ್ನು ರದ್ದುಪಡಿಸಿ, ಡಾ. ವಿಜಯ್‌ಕುಮಾರ್ ಕೋಚನೂರು ನೇತೃತ್ವದಲ್ಲಿ 5 ಸದಸ್ಯರ ಸಮಿತಿ ಯನ್ನು ಕೆಪಿಎಸ್‌ಸಿ ರಚಿಸಿತು. ಈ ಸಮಿತಿ 40 ಸಭೆಗಳನ್ನು ನಡೆಸಿದೆ. ಆದರೆ ತನಿಖಾ ವರದಿಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ನೀಡಿಲ್ಲ. ಈ ಕುರಿತು ಹಲವು ಬಾರಿ ಪತ್ರ ಬರೆದರೂ ಕೆಪಿಎಸ್‌ಸಿಯಿಂದ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ ಎಂದು ಹೇಳಿದರು.

ಪಟ್ಟಿ ರದ್ದು ಅಧಿಕಾರ ಕೆಪಿಎಸ್‌ಸಿ ನೀಡಿದ ಅಂತಿಮ ಆಯ್ಕೆ ಪಟ್ಟಿಯ ಆಧಾರದ ಮೇಲೆ 2025ರ ಜನವರಿ 22ರಂದು ವಿಶ್ವನಾಥ್ ಎಂಬುವರಿಗೆ ಕೊನೆಯ ನೇಮಕಾತಿ ಆದೇಶ ನೀಡಲಾಯಿತು. ಇದರ ಮರುದಿನವೇ ಐದು ಸದಸ್ಯರ ಸಮಿತಿ ಅಂದಿನ ಮುಖ್ಯಮಂತ್ರಿಗೆ ವರದಿ ಸಲ್ಲಿಸಿತ್ತು. ನೇಮಕಾತಿ ಯಲ್ಲಿ ಲೋಪಗಳಾಗಿದ್ದರೆ ಆಯ್ಕೆ ಪಟ್ಟಿಯನ್ನು ತಡೆ ಹಿಡಿಯಲು ಅಥವಾ ರದ್ದುಗೊಳಿಸಲು ಕೆಪಿಎಸ್‌ಸಿಗೆ ಅಧಿಕಾರವಿದೆ. ಆದರೆ, ಅಂತಹ ಕ್ರಮ ಕೈಗೊಂಡಿರಲಿಲ್ಲ. ಅಂತಿಮವಾಗಿ ನೇಮಕಾತಿ ಆದೇಶಗಳನ್ನು ನೀಡಿದ ಬಳಿಕ ಆಯ್ಕೆ ಪಟ್ಟಿಯನ್ನು ತಡೆಹಿಡಿಯುವಂತೆ ಇಲಾಖೆಗೆ ಪತ್ರ ಬರೆಯ ಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

image

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 24 ಸಹಾಯಕ ಎಂಜಿನಿಯರ್‌ಗಳ ನೇಮಕ ವಿಷಯದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಕುಮಾರಸ್ವಾಮಿ ಅವರು ಯಾವುದೇ ದಾಖಲೆ ಅಥವಾ ಆಧಾರಗಳಿಲ್ಲದೆ ಹಿಟ್ ಅಂಡ್ ರನ್ ಆರೋಪ ಮಾಡುತ್ತಿದ್ದಾರೆ. ಈ ಪ್ರಕರಣದಲ್ಲಿ ನನ್ನ ಪಾತ್ರ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಘೋಷಿಸುವೆ. ಒಂದು ವೇಳೆ ಹಗರಣದಲ್ಲಿ ಜೆಡಿಎಸ್ ಅಥವಾ ಬಿಜೆಪಿಯವರ ಪಾತ್ರ ಸಾಬೀತಾದರೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜಕೀಯ ನಿವೃತ್ತಿ ಪಡೆಯುತ್ತಾರೆಯೇ ?

-ಪ್ರಿಯಾಂಕ್ ಖರ್ಗೆ, ಸಚಿವ