#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Winter Fringe Jacket Fashion: ಚಳಿಗಾಲದಲ್ಲಿ ಟ್ರೆಂಡಿಯಾದ ಫ್ರಿಂಜ್ ಜಾಕೆಟ್ಸ್ & ಕೋಟ್ಸ್

ಈ ಚಳಿಗಾಲದಲ್ಲಿ ಲೇಯರ್ ಲುಕ್ ನೀಡುವ ಫ್ರಿಂಜ್ ಶೈಲಿಯ ಜಾಕೆಟ್ ಹಾಗೂ ಕೋಟ್‌ಗಳು ಟ್ರೆಂಡಿಯಾಗಿವೆ. ಏನಿದು ಫ್ರಿಂಜ್ ಫ್ಯಾಷನ್? ಇಲ್ಲಿದೆ ಡಿಟೇಲ್ಸ್.

Winter Fringe Jacket Fashion: ಚಳಿಗಾಲದಲ್ಲಿ ಟ್ರೆಂಡಿಯಾದ ಫ್ರಿಂಜ್ ಜಾಕೆಟ್ಸ್ & ಕೋಟ್ಸ್

ಸಾಂದರ್ಭಿಕ ಚಿತ್ರ.

- ಶೀಲಾ ಸಿ. ಶೆಟ್ಟಿ, ಬೆಂಗಳೂರು

ಚಳಿಗಾಲದಲ್ಲಿನ ಲೇಯರ್ ಲುಕ್‌ನಲ್ಲಿ ಇದೀಗ ಫ್ರಿಂಜ್ ವಿನ್ಯಾಸ (Winter Fringe Jacket Fashion) ಟ್ರೆಂಡಿಯಾಗಿದೆ. ಮನಮೋಹಕ ವಿನ್ಯಾಸದ ಜಾಕೆಟ್ ಹಾಗೂ ಕೋಟ್ ಶೈಲಿಯ ಲೇಯರ್ ಲುಕ್ ಡಿಸೈನರ್‌ವೇರ್‌ಗಳಲ್ಲಿ ಕಾಣಿಸಿಕೊಂಡಿದೆ. ಜಾಕೆಟ್‌ನ ಕೊನೆಯಲ್ಲಿ ಹಾಗೂ ಜಾಕೆಟ್‌ನ ಕಾಲರ್ ಭಾಗದಲ್ಲಿ ಫ್ರಿಂಜ್ ವಿನ್ಯಾಸವಿರುವ ಔಟ್‌ಫಿಟ್‌ಗಳಿವು. ಈ ಫ್ರಿಂಜ್ ವಿನ್ಯಾಸದ ಬಾರ್ಡರ್‌ಗಳು ಬಹುತೇಕ ಜಾಕೆಟ್ ಹಾಗೂ ಕೋಟ್‌ಗಳಲ್ಲಿ ಕಂಡುಬರುತ್ತಿವೆ ಎನ್ನುತ್ತಾರೆ ಸ್ಟೈಲಿಸ್ಟ್ ಜೆನ್.

ಇದೀಗ ಈ ವಿನ್ಯಾಸವನ್ನು, ಪ್ರಯೋಗಾತ್ಮಕವಾಗಿ ಚಳಿಗಾಲದ ಉಡುಪುಗಳಲ್ಲಿ ಪರಿಚಯಿಸಲಾಗಿದ್ದು, ಸಿಂಪಲ್ ಲೇಯರ್ ಲುಕ್‌ಗೆ ಹೊಸ ಲುಕ್ ನೀಡುತ್ತಿವೆ ಎನ್ನುತ್ತಾರೆ ಅವರು.

1

ಫ್ರಿಂಜ್ ಜಾಕೆಟ್ & ಕೋಟ್

ಮಂಡಿಗಿಂತ ಮೇಲೆ ಇಲ್ಲವೇ ಕೆಳಗಿನ ತನಕ ಬರುವ ಲಾಂಗ್ ಫ್ರಿಂಜ್ ಜಾಕೆಟ್‌ಗಳು ಈ ಸೀಸನ್‌ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ. ಇವು, ಸ್ಲಿಮ್ ಇರುವವರಿಗೆ ಆಕರ್ಷಕವಾಗಿ ಕಾಣುತ್ತವೆ. ಪ್ಲಂಪಿಯಾಗಿರುವವರಿಗೆ ನಾಟ್ ಓಕೆ.

ಫರ್ ಫ್ರಿಂಜ್ ಲೇಯರ್ ಲುಕ್

ಫರ್ ಫ್ರಿಂಜ್ ಜಾಕೆಟ್ ಹಾಗೂ ಕೋಟ್‌ಗಳು ಇದೀಗ ನಾನಾ ವಿನ್ಯಾಸದಲ್ಲಿ ಬಿಡುಗಡೆಗೊಂಡಿವೆ. ಇವು ಸೆಲೆಬ್ರಿಟಿ ಲುಕ್ ನೀಡುತ್ತವೆ ಎಂಬ ಕಾರಣಕ್ಕಾಗಿ ಕಾರ್ಪೋರೇಟ್ ಕ್ಷೇತ್ರದವರು ಧರಿಸತೊಡಗಿದ್ದಾರೆ. ಫರ್ ಫ್ರಿಂಜ್ ಕೋಟ್‌ಗಳು ಕಂಪ್ಲೀಟ್ ವಿಂಟರ್ ಲುಕ್ ನೀಡುತ್ತವೆ ಎನ್ನುತ್ತಾರೆ ಡಿಸೈನರ್ಸ್.

2

ಫ್ರಿಂಜ್ ಸ್ಟೈಲ್ ಪ್ರಯೋಗಿಸುವ ಮುನ್ನ...

ಫ್ರಿಂಜ್ ಲೇಯರ್ ಲುಕ್ ಪ್ರಯೋಗಿಸುವ ಮುನ್ನ, ಆದಷ್ಟೂ ಈ ಸ್ಟೈಲ್ ಸ್ಟೇಟ್‌ಮೆಂಟ್ ಹೊಂದುತ್ತದೆಯೇ ಎಂಬುದನ್ನು ನೋಡಿಕೊಳ್ಳಬೇಕು. ಎಲ್ಲರಿಗೂ ಇದು ಸೂಟ್ ಆಗದು. ಇದು ಏನಿದ್ದರೂ ಪ್ರಯೋಗ ಮಾಡುವವರ ಸ್ಟೈಲ್ ಸ್ಟೇಟ್‌ಮೆಂಟ್ ಎನ್ನುತ್ತಾರೆ ಸ್ಟೈಲಿಸ್ಟ್ ಜೆನ್.

ತಾರೆಯರ ಫ್ರಿಂಜ್ ಪ್ರೇಮ

ಮೊದಲೆಲ್ಲಈ ಡಿಸೈನ್ ಜಾಕೆಟ್ ಹಾಗೂ ಕೋಟ್‌ಗಳು, ಕೇವಲ ವಿದೇಶಿ ಮಾಡೆಲ್‌ಗಳಿಗೆ ಹಾಗೂ ಹಾಲಿವುಡ್ ಮಂದಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇದೀಗ ಬಾಲಿವುಡ್ ವಿಂಟರ್ ಲೇಯರ್ ಲುಕ್ ಫ್ಯಾಷನ್ ಲಿಸ್ಟ್‌ಗೆ ಸೇರಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

ಈ ಸುದ್ದಿಯನ್ನೂ ಓದಿ | Travel Fashion: ಬಿಗ್ ಬಾಸ್ ಮಾಜಿ ಸ್ಪರ್ಧಿ ಚೈತ್ರಾ ವಾಸುದೇವನ್ ಪ್ಯಾರಿಸ್ ಟ್ರಾವೆಲ್ ಫ್ಯಾಷನ್

ಹೀಗಿರಲಿ ಫ್ರಿಂಜ್ ನಿರ್ವಹಣೆ

ಫ್ರಿಂಜ್ ಲೇಯರ್ ಲುಕ್ ನೀಡುವ ಜಾಕೆಟ್ ಹಾಗೂ ಕೋಟ್‌ಗಳ ನಿರ್ವಹಣೆ ಕೊಂಚ ಕಷ್ಟ. ಅವುಗಳ ಫ್ಯಾಬ್ರಿಕ್‌ಗೆ ತಕ್ಕಂತೆ ನಿರ್ವಹಣೆ ಮಾಡಬೇಕಾಗುತ್ತದೆ.

* ಫ್ರಿಂಜ್ ಜಾಕೆಟ್‌ಗಳನ್ನು ಮನೆಯಲ್ಲಿ ವಾಶ್ ಮಾಡಕೂಡದು.

* ಅತಿ ಹೆಚ್ಚು ರಫ್ ಬಳಕೆ ಮಾಡುವುದಾದರೆ ಆದಷ್ಟೂ ಡಾರ್ಕ್ ವರ್ಣದ್ದು ಆಯ್ಮೆ ಮಾಡಬೇಕು.

* ಲಾಂಗ್ ಲೆಂಥ್ ಇರುವಂತಹ ಫ್ರಿಂಜ್ ಜಾಕೆಟ್, ಸ್ಕರ್ಟ್ಸ್ ಹಾಗೂ ಜೀನ್ಸ್‌ಗೆ ಮ್ಯಾಚ್ ಆಗುತ್ತವೆ.

* ಪರ್ಸನಾಲಿಟಿಗೆ ಹೊಂದುವಂತಿದ್ದಲ್ಲಿ ಮಾತ್ರ ಫಾಲೋ ಮಾಡಿ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)